

ಶಿವಮೊಗ್ಗ ಈಡಿಗರ ಭವನದಲ್ಲಿ ಮುಖಂಡರೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ವಿ.ಪ. ಸದಸ್ಯ ಬಿ.ಕೆ.ಹರಿಪ್ರಸಾದ್ ಹಿಂದುತ್ವದ ಹೆಸರಲ್ಲಿ ಹಿಂದುಳಿದವರನ್ನು ಹೋರಾಟಕ್ಕೆ ಬಳಸಿಕೊಳ್ಳುವ ಬಿಜೆಪಿ, ಇಂದು ಹಿಂದುಳಿದವರ ಆಡಳಿತ ಮಂಡಳಿ ಇರುವ ದೇಗುಲಕ್ಕೆ ಮೇಲ್ವಿಚಾರಣಾ ಸಮಿತಿ ಮಾಡಿರುವುದು ತರವಲ್ಲ. ಸಿಗಂದೂರು ಹಿಂದುಳಿದವರ ಚೌಡಮ್ಮ ದೇವಿ ಅದನ್ನು ಚೌಡೇಶ್ವರಿ ಮಾಡಿರುವ ವೈದಿಕಶಾಹಿ ಅಲ್ಲಿ ಹಿಂದುಳಿದ ವರ್ಗಗಳ ಸಂಪ್ರದಾಯಕ್ಕೆ ತೀಲಾಂಜಲಿ ಹೇಳಿದೆ. ಇದು ಹಿಂದುಳಿದವರ ಮೇಲೆ ನಡೆಸಿದ ಧಾರ್ಮಿಕ ಪ್ರಹಾರ. ನನಗೆ ಯಾವುದೇ ಜಾತಿಯ ಬೇಧಭಾವ ಇಲ್ಲ. ಎಲ್ಲಿ ಶೋಷಣೆ ಆದರೂ ನೊಂದವರ ಪರ ನಿಲ್ಲುತ್ತೇನೆ. ಸಂವಿಧಾನದ ಆಶಯದಂತೆ ರಾಜಕಾರಣ ಮಾಡಿದವನು ನಾನು. ಈ ಕಾರಣದಿಂದಲೇ ಜಾತಿಯ ಬಲವೇ ಇಲ್ಲದ ಬೆಂಗಳೂರಿನಲ್ಲಿ ರಾಜಕೀಯ ಮಾಡಿದ್ದೇನೆ ಎಂದು ಹೇಳಿದರು.
ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ವಿದ್ಯೆಯಿಂದ ಈ ಎಲ್ಲ ಶೋಷಣೆಯಲ್ಲಿ ನಾವು ಗೆಲ್ಲಬಹುದು. ರಾಜ್ಯ ಸಭೆ ಸದಸ್ಯನಾಗಿದ್ದಾಗ ಸರ್ವಜಾತಿಯ ಸಂಘಟನೆಗಳಿಗೆ ನೆರವು ನೀಡಿದ್ದೇನೆ. ಸಮುದಾಯ ಭವನದಿಂದ ಬರುವ ಆದಾಯದಲ್ಲಿ ಆಯಾ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆಂಬುದು ನನ್ನ ಉದ್ದೇಶವಾಗಿತ್ತು ಎಂದ ಅವರು, ಸಿಗಂದೂರು ಚೌಡಮ್ಮ ದೇವಿ ದೇಗುಲಕ್ಕೆ ಭೇಟಿ ನೀಡುತ್ತೇನೆ. ಅಲ್ಲಿನ ಭಕ್ತರ ಭಾವನೆಗೆ ಧಕ್ಕೆಯಾಗುವಂತಹ ಯಾವುದೇ ಕ್ರಮಗಳಿಗೆ ನನ್ನ ಸ್ಪಷ್ಟ ವಿರೋಧ ಇದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುತ್ತೇನೆ. ಈ ವಿಚಾರದಲ್ಲಿ ಇಲ್ಲಿನ ಜನ ಮಾಡುವ ಯಾವುದೇ ಹೋರಾಟದಲ್ಲಿ ನಾನಿರುತ್ತೇನೆ. ನಮ್ಮ ಹೋರಾಟ ಶಾಂತಿಯುತವಾಗಿರಬೇಕು ಎಂದು ಹೇಳಿದರು.
ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಕೆ.ವೈ. ರಾಮಚಂದ್ರ, ಪ್ರೊ.ಕಲ್ಲನ, ತೇಕಲೆ ರಾಜಪ್ಪ, ಕಾಗೋಡು ರಾಮಪ್ಪ ಈಡಿಗರ ಮಹಿಳಾ ಸಂಘದ ವೀಣಾವೆಂಕಟೇಶ್,ಲಲಿತಾ ಹೊನ್ನಪ್ಪ ಮತ್ತಿತರರು ಭಾಗವಹಿಸಿದ್ದರು.
ಫೆವಾರ್ಡ್ ಯು.ಕೆ ಅಧ್ಯಕ್ಷರಾಗಿ ನಾಗರಾಜ ನಾಯ್ಕ ಮಾಳ್ಕೋಡ
ಯಲ್ಲಾಪುರ; ಉತ್ತರ ಕನ್ನಡ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್ ಉ.ಕ) ಅಧ್ಯಕ್ಷರಾಗಿ ಸಿದ್ದಾಪರ ಆಧಾರ ಸಂಸ್ಥೆಯ ನಾಗರಾಜ ನಾಯ್ಕ ಮಾಳ್ಕೋಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪಟ್ಟಣದ ಟೀಡ್ ಟ್ರಷ್ಟ್ ದಿ.ಶಿವಪ್ಪ ಪೂಜಾರಿ ಗ್ರಾಮೀಣ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಫೆವಾರ್ಡ್ ಉ.ಕ ದ ಸರ್ವಸಾಧರಣಾ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶಿರ್ಸಿಯ ಮನುವಿಕಾಸ ಸಂಸ್ಥೆಯ ಗಣಪತಿ ಭಟ್, ಕಾರ್ಯದರ್ಶಿಯಾಗಿ ಅಂಕೋಲಾ ಕೆ.ಎಲ್.ಇ ತಿಮ್ಮಣ್ಣ ಭಟ್.ಬಿ, ಖಜಾಂಚಿಯಾಗಿ ಶಿರ್ಸಿ ಪ್ರಕೃತಿ ಸಂಸ್ಥೆಯ ಪಾಂಡುರಂಗ ಹೆಗಡೆ, ಸಹ ಕಾರ್ಯದರ್ಶಿಯಾಗಿ ಮುಂಡಗೋಡ ಸಿ.ಸಿಎಫ್ ಲೋಯೋಲ ಜನಸ್ಪೂರ್ತಿ ಎಸ್.ಎಚ್.ಜಿ ಟ್ರಷ್ಟ್‍ನ ಶಶಿಕಲಾ ಡುಮಿಂಗ್ ಸಿದ್ಧಿ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿಯ ಸದಸ್ಯರುಗಳಾಗಿ ಹಳಿಯಾಳದ ಕ್ರಿಯೇಟಿವ್ ಟ್ರಷ್ಟ್ ಅಧ್ಯಕ್ಷ ಲುವಿಸ್ ಎಫ್.ಪಿರೇರಾ, ಯಲ್ಲಾಪುರ ಟೀಡ್ ಟ್ರಷ್ಟ್ ವ್ಯವಸ್ಥಾಪಕ ನಿರ್ದೇಶಕಿ ಮೋಹಿನಿ ಪೂಜಾರಿ, ಕುಮಟಾ ಎ.ವಿ.ಪಿ ಸೇವಾ ಸಂಸ್ಥೆಯ ಗಣಪತಿ ಎಸ್.ನಾಯ್ಕ, ಕಾರಾವಾರದ ಕೆ.ಆರ್.ಡಬ್ಲೂ.ಸಿ.ಡಿ.ಎಸ್ ವೆಂಕಟೇಶ್ ಬಿ.ನಾಯಕ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಫೆವಾರ್ಡ್ ಉ.ಕ ಪ್ರಕಟಣೆಯಲ್ಲಿ ತಿಳಿಸಿದೆ.





