ಕಾಡೆಮ್ಮೆ ಸಾವು- ನಾಟಕ, ಅಂಬಳಿಕೆಯಲ್ಲಿ ಈ ವರ್ಷ ವರ್ಷತೊಡಕಿನ ಪೂಜೆ ಇಲ್ಲ.

ಸಿದ್ಧಾಪುರ ತಾಲೂಕಿನ ಅರೆಂದೂರಿನಲ್ಲಿ ಕಾಡುಎಮ್ಮೆಯೊಂದರ ಶವ ಪತ್ತೆಯಾಗಿದ್ದು,ಸ್ಥಳಿಯ ಅರಣ್ಯಾಧಿಕಾರಿಗಳು ಅಂತಿಮವಿಧಿ ಪೂರೈಸಿದ್ದಾರೆ. 6 ವರ್ಷದ ಈ ಕಾಡೆಮ್ಮೆ ಸಹಜವಾಗಿ ಸಾವನ್ನಪ್ಪಿರುವ ಬಗ್ಗೆ ಸ್ಥಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ರಂಗ ಸೌಗಂಧ ಸಿದ್ದಾಪುರ ದಿಂದ ಗಳೆಯರ ಬಳಗ ಹಾಗೂ ಗಜಾನನೋತ್ಸವ ಸಮಿತಿ ಆಶ್ರಯದಲ್ಲಿ ದೇವಿಯ ದೀವಿಗೆ ಐತಿಹಾಸಿಕ ನಾಟಕ ಮಂಗಳವಾರ ಪ್ರದರ್ಶನಗೊಂಡಿತು.
ಟಿಎಸ್‍ಎಸ್‍ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಕಾರ್ಯಕ್ರಮ ಉದ್ಘಾಟಿಸಿ ಕರೊನಾ ಮಾರಕ ಸಾಂಕ್ರಮಿಕ ರೋಗ ವಿಶ್ವದ ಎಲ್ಲ ಕಡೆ ಹರಡಿದ್ದರಿಂದ ವಿವಿಧ ಕಲಾ ಸಂಘಟನೆಗಳು ಹಾಗೂ ಕಲಾವಿದರು ಸಂಕಷ್ಟ ಅನುಭವಿಸುವಂತಾಗಿ ಈಗ ಸ್ವಲ್ಪ ಮಟ್ಟಿಗೆ ಉಸಿರಾಡುವಂತಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಪಾಲ್ಗೊಳ್ಳುವುದಕ್ಕೆ ಅವಕಾಶ ಇಲ್ಲದ್ದರಿಂದ ಇಂದಿನ ತಾಂತ್ರಿಕ ದಿನದ ಉಪಯೋಗದ ಮೂಲಕ ನಾಟಕವನ್ನು ಲೈವ್ ಆಗಿ ನೋಡುವುದಕ್ಕೆ ಅವಕಾಶ ನೀಡಿರುವುದು ಪ್ರಸ್ತುತ ದಿನದಲ್ಲಿ ಅತ್ಯವಶ್ಯವಾಗಿದೆ.ರಂಗ ಸೌಗಂಧ ತಂಡ ಪ್ರತಿ ವರ್ಷ ಉತ್ತಮ ನಾಟಕ ಆಯ್ದುಕೊಂಡು ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಅಘನಾಶಿನಿ ಸಾಂಬಾರು ಮಂಡಳಿ ಅಧ್ಯಕ್ಷ ಎಸ್.ಆರ್.ಹೆಗಡೆ ಕುಂಬಾರಕುಳಿ,ವರ್ತಕ ಅನಂತ ಶಾನಭಾಗ ಉಪಸ್ಥಿತರಿದ್ದರು. ನಂತರ ರಂಗಸೌಗಂಧ ತಂಡದವರಿಂದ ಎಸ್.ವಿ.ಹೆಗಡೆ ಮಗೇಗಾರ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ದೇವಿಯ ದೀವಿಗೆ ನಾಟಕ ಪ್ರದರ್ಶನಗೊಂಡಿತು. ರಂಗದಲ್ಲಿ ಗಣಪತಿ ಹೆಗಡೆ ಗುಂಜಗೋಡ, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ನಾಗಪತಿ ಭಟ್ಟ ವಡ್ಡಿನಗದ್ದೆ, ಅಜಿತ್ ಭಟ್ಟ ಹೆಗ್ಗಾರಳ್ಳಿ, ರಾಮ ಅಂಕೋಲೇಕರ, ಪ್ರವೀಣಾ ಹೆಗಡೆ ಗುಂಜಗೋಡ, ಶಮಂತ ಶಿರಳಗಿ,ಐ.ಕೆ.ಸುಂಗೊಳ್ಳಿಮನೆ,ಕು.ಪ್ರಥಮ ರಾಜು ಭಟ್ಟ,ಕು.ದೀಕ್ಷಾ ಹೆಗಡೆ, ಕು.ಪಂಚಮಿ ಎನ್.ಭಟ್ಟ, ಕು.ಶಕ್ತಿಧರ ಯು.ಭಟ್ಟ, ಕು.ಮಾನಸ ಹೆಗಡೆ, ಕು.ಸಂಪತ್ ಡಿ.ಭಟ್ಟ ಇವರು ವಿವಿಧ ಪಾತ್ರ ನಿರ್ವಹಿಸಿದರು.
ಶ್ರೀಪಾದ ಹೆಗಡೆ ಕೋಡನಮನೆ ವಿನ್ಯಾಸ,ರಾಜೇಂದ್ರ ಕೊಳಗಿ,ಜಯರಾಮ ಭಟ್ಟ ಹೆಗ್ಗಾರಳ್ಳಿ ಸಂಗೀತ, ನಾಗರಾಜ ಭಂಡಾರಿ ಹಾಗೂ ಉದಯ ಶಿರಸಿ ಇವರು ಧ್ವನಿ ಹಾಗೂ ಬೆಳಕಿನಲ್ಲಿ ಸಹಕರಿಸಿದರು.
ಶ್ರೀಪಾದ ಹೆಗಡೆ ಹಾಗೂ ರಂಗನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ನಿರ್ವಹಿಸಿದರು.

ಅಂಬಳಕೆಯಲ್ಲಿ ಪೂಜೆ ಇಲ್ಲ- ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕ ಹುಕ್ಕಳಿ ಹಾಗೂ ಬೇಡ್ಕಣಿ ಗೌಡರ ಕುಟುಂಬದವರು ಸಾರ್ವಜನಿಕ ಭಕ್ತಾದಿಗಳಿಗೆ ತಿಳಿಸುವುದೇನೆಂದರೆ,
ಪ್ರತಿ ದೀಪಾವಳಿ ನಂತರ ವರುಷದೊಡಕು ಹಬ್ಬದ ದಿನ ಅಂಬಳಕೆ (ಮಿಣಸಿ ಕ್ರಾಸ್ ಹತ್ತಿರ) ಶ್ರೀ ಬಸವಣ್ಣ ದೇವಸ್ಥಾನದಲ್ಲಿ ಪ್ರತಿ ವರ್ಷ ಸದ್ರಿ ದಿವಸ ನಮ್ಮ ಕುಟುಂಬದವರು ಅನಾದಿ ಕಾಲದಿಂದ ಪೂಜೆ ಸಲ್ಲಿಸಿ ಪ್ರಸಾದ ವಿತರಿಸುವ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಪೂಜೆಗೆ ತಾಲೂಕಿನ ಭಕ್ತಾಧಿಗಳಲ್ಲದೆ ಹೊರ ಜಿಲ್ಲೆಯಿಂದ ಸಹ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಈ ವರ್ಷ ಎಲ್ಲೆಡೆ ಕರೋನಾ ಸೋಂಕು ಹಬ್ಬುತ್ತಿರುವುದರಿಂದ ಇಂತಹ ಜನ-ಜಾತ್ರೆ ಮಾಡುವುದು ಸರಿಯಲ್ಲ ಎಂತಾ ಸರ್ಕಾರದ ಆದೇಶ ಇರುವುದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಸಾಧ್ಯ ಎಂತಾ ತಿಳಿದು, ಹುಕ್ಕಳಿ ಹಾಗೂ ಬೇಡ್ಕಣಿ ಗೌಡರ ಕುಟುಂಬದಿಂದ ಆಚರಿಸುತ್ತಿದ್ದ ಈ ಪೂಜಾ ಕಾರ್ಯಕ್ರಮವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ರದ್ದುಪಡಿಸಿರುತ್ತೇವೆ. ಕಾರಣ ಭಕ್ತಾಧಿಗಳು ಸಹಕರಿಸಬೇಕಾಗಿ ವಿನಂತಿ.
ಮನುಕುಲಕ್ಕೆ ಕಂಟಕವಾಗಿರುವ ಈ ಮಹಾಮಾರಿಯಿಂದ ಜಗತ್ತಿನ ಸಕಲ ಜೀವಿಗಳಿಗೂ ಮುಕ್ತಿ ದೊರೆಯಲಿ. ಜನರ ಬದುಕು ಮೊದಲಿನಂತೆ ಹಸನಾಗಲಿ ಎಂದು ಶ್ರೀ ಬಸವಣ್ಣ ದೇವರಲ್ಲಿ ಪ್ರಾರ್ಥಿಸುತ್ತೇವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *