

ಸಿದ್ಧಾಪುರ ತಾಲೂಕಿನ ಬಿಳಗಿಯಲ್ಲಿರುವ ಜ್ಞಾನಸಾಗರ ಪದವಿಪೂರ್ವ ಕಾಲೇಜಿಗೆ ಬೀಗ ಜಡಿಯುವ ಉದ್ದೇಶದಿಂದ ಹಿಂದೆ ಸರಿದಿರುವ ಪ್ರತಿಭಟನಾಕಾರರು ತಹಸಿಲ್ಧಾರರ ಮಧ್ಯಸ್ಥಿತಿಕೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಇಲ್ಲಿಯ ವಿವಾದ ಇತ್ಯರ್ಥಪಡಿಸಿ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ.
ಬಿಳಗಿಯ ಜ್ಞಾನಸಾಗರ ಪದವಿಪೂರ್ವಕಾಲೇಜು ಚೌಡೇಶ್ವರಿ ಎಸ್.ಸಿ.ಎಸ್.ಟಿ.ಸಂಸ್ಥೆ ಯ ಹೆಸರಿನಲ್ಲಿ ನಡೆಯುತ್ತಿದೆ. ಈ ಕಾಲೇಜು ಪ್ರಾರಂಭವಾದ 1994 ರ ನಂತರ ಈವರೆಗೆ ಎರಡುಬಾರಿ ಆಡಳಿತ ಮಂಡಳಿ ಬದಲಾಗಿದೆ. ಅನುದಾನ ರಹಿತ ಸಮಯದಲ್ಲಿ ಶ್ರಮವಹಿಸಿದ್ದ ಕಾಲೇಜು ಆಡಳಿತ ಸಮೀತಿ ರದ್ದು ಮಾಡಿ, ಅಲ್ಲಿಯ ಪ್ರಾರಂಭಿಕ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಉಪನ್ಯಾಸಕರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಸ್ಥಳಿಯರನ್ನು ವಿಶ್ವಾಸಕ್ಕೆ ಪಡೆಯದೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ತೊಂದರೆಯನ್ನು ಆಡಳಿತಮಂಡಳಿ ಅಧ್ಯಕ್ಷರು, ಸದಸ್ಯರ ಉಪಸ್ಥಿತಿಯಲ್ಲಿ ಇತ್ಯರ್ಥ ಪಡಿಸಬೇಕು. ಈ ಕಾಲೇಜಿನ ಅಭಿವೃದ್ಧಿಗೆ ದುಡಿದ ಉಪನ್ಯಾಸಕ ಗಣೇಶ್ ನಾಯ್ಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಲು ಇಂದು ಪ್ರತಿಭಟನೆ ನಡೆಸಿದ ಕಾಲೇಜಿನ ಹಿತರಕ್ಷಣಾ ಸಮೀತಿ ಮತ್ತು ಹಳೆಯ ವಿದ್ಯಾರ್ಥಿಗಳ ಬಳಗ ಕಾಲೇಜಿಗೆ ಬೀಗ ಜಡಿದು ಲಾಕ್ ಔಟ್ ಮಾಡಲು ನಿರ್ಧರಿಸಿತ್ತು. ಆದರೆ ಈ ಪ್ರತಿಭಟನೆ, ಶಾಂತಿ-ಸುವ್ಯವಸ್ಥೆ ರಕ್ಷಣೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಿದ್ಧಾಪುರ ತಹಸಿಲ್ಧಾರರು ಪ್ರತಿಭಟನಾ ನಿರತರ ಮನವಿ ಪಡೆದು ಅವರ ಬೇಡಿಕೆಯಾದ ಆಡಳಿತ ಮಂಡಳಿ ಜೊತೆಗಿನ ಮೂಖಾಮುಖಿ ಚರ್ಚೆಗೆ ಈ ತಿಂಗಳ 25 ರ ವರೆಗೆ ಗಡುವು ನೀಡಿದ ಮೇಲೆ ಕಾಲೇಜಿಗೆ ಬೀಗ ಹಾಕುವ ನಿರ್ಧಾರದಿಂದ ಹಿಂದೆ ಸರಿದರು.
ಈ ಸಮಯದಲ್ಲಿ ಆಡಳಿತ ಮಂಡಳಿ ಪರವಾಗಿ ವಿಡಿಯೋ ಮಾಡಿ ನೇರ ಪ್ರಸಾರ ಮಾಡುತಿದ್ದ ವ್ಯಕ್ತಿಯೊಬ್ಬ ಪ್ರತಿಭಟನಾಕಾರರ ವಿರೋಧಕ್ಕೆ ತುತ್ತಾದ ಪ್ರಸಂಗವೂ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ ಚೌಡೇಶ್ವರಿ ಎಸ್,ಸಿ. ಎಸ್.ಟಿ. ಆಡಳಿತ ಸಮೀತಿ ಸರ್ಕಾರದ ಕಾನೂನು, ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಸ್ಥಳಿಯರು, ಸಂಸ್ಥಾಪಕ ಉಪನ್ಯಾಸಕ ವೃಂದಕ್ಕೆ ಕಿರುಕುಳ ಕೊಡುವುದರಿಂದ ಸಂಸ್ಥೆಯನ್ನು ಸರ್ಕಾರದ ವಶಕ್ಕೆ ಪಡೆದು ಈಗಿನ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಆಡಳಿತ ಮಂಡಳಿಯ ಅವ್ಯವಸ್ಥೆ, ದೌರ್ಜನ್ಯ ಅಂಧಾದರ್ಬಾರ್ ಮಿತಿಮೀರಿದೆ. ಈ ಬಗ್ಗೆ ವಿಚಾರಿಸಲು ಕರೆಮಾಡಿದರೆ ಪೊಲೀಸ್ ಅಧಿಕಾರಿಗಳಿಂದ ಪರಿಶಿಷ್ಟರ ದೌರ್ಜನ್ಯದ ಕಾನೂನಿನಡಿ ಬಂಧಿಸುವ ಧಮಕಿ ಹಾಕುತ್ತಾರೆ. ಇಂಥ ಅಧ್ಯಕ್ಷರು, ಆಡಳಿತಮಂಡಳಿ ಗಣೇಶ್ ನಾಯ್ಕರನ್ನು ನಡೆಸಿಕೊಂಡಿರುವ ರೀತಿ ಸರಿಇಲ್ಲ, ಈ ಬಗ್ಗೆ ಈ ತಿಂಗಳ ಅಂತ್ಯದೊಳಗೆ ತಹಸಿಲ್ಧಾರರ ಮಧ್ಯಸ್ಥಿಕೆಯಲ್ಲಿ ವಿವಾದ ಇತ್ಯರ್ಥವಾಗದಿದ್ದರೆ ಇಲ್ಲಿಯ ಆಡಳಿತ ಮಂಡಳಿ ಪರಿಣಾಮ ಕೆಟ್ಟದಾಗುವ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಡಳಿತ ಸಮೀತಿಯ ಪರವಾಗಿ ವಿವರಣೆ ನೀಡಿದ ಪ್ರಾಂಶುಪಾಲರು ಪೋರ್ಜರಿ ದಾಖಲೆ ಸೃಷ್ಟಿಸಿ, ಉಪನ್ಯಾಸಕರಾಗಿದ್ದಾರೆ. ಅವರ ವಿವರಣೆ ಅಕ್ರಮ ಆಡಳಿತ ಸಮೀತಿ ಪರವಾಗಿರುತ್ತದೆ ಎಂದು ವಿರೋಧಿಸಿದ ಪ್ರತಿಭಟನಾಕಾರರು ಕಳೆದ ಕೆಲವು ವರ್ಷಗಳಿಂದ ಸ್ಥಳಿಯರು,ಹಳೆಯ ವಿದ್ಯಾರ್ಥಿಗಳು, ಕಾಲೇಜು ಹಿತರಕ್ಷಣಾ ಸಮೀತಿ ಚರ್ಚೆಗೆ ಕರೆದರೆ ಆಡಳಿತ ಸಮೀತಿ ಬರುತ್ತಿಲ್ಲ. ಇಂಥ ಅವ್ಯವಸ್ಥೆಗಳ ಕಾಲೇಜು ಆಡಳಿತ ಸಮೀತಿ ಮಾನ್ಯತೆ ರದ್ದು ಮಾಡಿ ಈ ಆಡಳಿತ ಸಮೀತಿಯಿಂದ ನೊಂದ ಅನೇಕರಿಗೆ ನ್ಯಾಯ ಒದಗಿಸಿ ಈ ಪ.ಪೂ. ಮಹಾವಿದ್ಯಾಲಯವನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಲಾಯಿತು.
ಕಾಲೇಜಿನಸ್ಥಾಪನೆ ಧ್ಯೇಯ ಉದ್ದೇಶಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸ್ಥಳೀಯರು, ಕಾಲೇಜಿನ ಸಿಬ್ಬಂದಿಗಳಿಗೂ ವಿರೋಧವಿದೆ. ಈ ಬಗ್ಗೆ ನಿಯೋಗ ಒಯ್ದು ಬಸವರಾಜ್ ಹೊರಟ್ಟಿಯವರ ಗಮನ ಸೆಳೆಯುತ್ತೇವೆ. ಕಾನೂನು, ರೂಢಿ ಸ್ಥಳಿಯರ ಹಿತಾಸಕ್ತಿಗೆ ವಿರುದ್ಧವಾಗಿ ಇಲ್ಲಿ ನಡೆಯುತ್ತಿರುವ ಅನಪೇಕ್ಷಿತ ವಿದ್ಯಮಾನ ನಿಲ್ಲಬೇಕು, ಕೆಲಸದಿಂದ ವಜಾಮಾಡಿದ ಗಣೇಶ್ ನಾಯ್ಕರನ್ನು ಮರಳಿ ಸೇವೆಗೆ ನೇಮಿಸಿಕೊಳ್ಳಬೇಕು. ಇದಾಗದಿದ್ದರೆ ಶಾಸಕರು, ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ ಸರ್ಕಾರ ಆಡಳಿತ ಮಂಡಳಿ ರದ್ದುಮಾಡಿ ಕಾಲೇಜನ್ನು ಸರ್ಕಾರದ ನಿರ್ವಹಣೆಗೆ ನೀಡಬೇಕು
-ಬಿ.ಆರ್. ನಾಯ್ಕ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ


