

https://www.youtube.com/watch?v=kssqnq4xWu4&t=24s
ಮೆಕಾಲೆ ಶಿಕ್ಷಣದಿಂದಲೆ ಇಂದಿನ ಸಾಮಾಜಿಕ ಅವಾಂತರ, ಅನಿಷ್ಟಗಳಿಗೆ ಕಾರಣವಾಯಿತೆಂಬ ತಮ್ಮ ಹೇಳಿಕೆ ಕೇಳಿ ಮೆ(ಬೆ)ಚ್ಚಿದೆ..ಶಿಕ್ಷಣ ಮಂತ್ರಿಯಾಗಿ ಘನ ಸಭಾಪತಿ ಹುದ್ದೆಯೇರಿ,ಜಿಲ್ಲೆಯ ಹೆಮ್ಮೆಗೆ, ಸಮಾಜದ ಭಾಂಧವ್ಯಕ್ಕೆ ಕಾರಣವಾಗಬೇಕಿದ್ದ ತಾವು ವ್ಯಕ್ತಿತ್ವಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದು ನಮ್ಮಂತವರ ತಬ್ಬಿಬ್ಬುಗೊಳಿಸಿದೆ..

ನಮ್ಮನ್ನಾಳುವ ನಿಮ್ಮಿಂದ ಇಂತಹ ಅಜಾಗ ರೂಕತೆಯ ಹೇಳಿಕೆ ನಿರೀಕ್ಷಿಸಿರಲಿಲ್ಲ…ಅಬ್ಬಾ ನಾನಂದುಕೊಂಡಂತೆ ಖಂಡಿತ ನೀವಿಲ್ಲ.ನಿಮ್ಮ ಅಂತರ ಮುಖದ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದ ಅರ್ಪಿತವಾಗಲೇಬೇಕು, ಮಾನ್ಯ ಕಾಗೇರಿಯವರೆ…ತಾವೇನು ಕಡಿಮೆಯೆ ನಿರಂತರ ಚನಾವಣಾ ಗೆಲುವಿನಲ್ಲಿ ನಗು ಬೀರಿದವರು.ನಿಮ್ಮ ಆ ನಗುವಿಗೆ ಕಾರಣವಾಗಿ ದುಡಿದವರು ನಾವು..ಮುಂದೆ ನೀವು ಕರ್ನಾಟಕ ಸರಕಾರದ ಶಿಕ್ಷಣ ಮಂತ್ರಿಯ ಪದವಿಗೆರುವಲ್ಲಿ ನಮ್ಮಂತ ಅನೇಕ ಯುವಕರ ಶ್ರಮ ಬೆವರ ಹನಿಗಳ ಮಿಳಿತವಿದೆ…ಉತ್ತರ ಕನ್ನಡದ ರಾಜಕಾರಣದಲ್ಲಿ ರಾಮಕೃಷ್ಣ ಹೆಗ್ಗಡೆಯಂತ (ಸಿದ್ದಾಪುರದಲ್ಲಿ ಹುಟ್ಟಿದಷ್ಟೆ ಅಭಿವೃದ್ಧಿ ಮಾತ್ರ ಶೂನ್ಯ, ಅದಕ್ಕಾಗಿ ಇಂದು ಸಿದ್ಧಾಪುರ ಕರ್ನಾಟಕದಲ್ಲಿಯೆ ಅತ್ಯಂತ ಹಿಂದುಳಿದ ಅಭಿವೃದ್ಧಿಯ ಪಥಕ್ಕೆ ಬರದ ತಾಲುಕ್ಕಾಗಿಯೆ ಇದೆ) ಪ್ರಭುದ್ಧ ರಾಜಕಾರಣಿಯ ಬಿಟ್ಟಸ್ಥಳ ತುಂಬಲು ನೀವು ಬಂದ್ದಿದ್ದಿರಿ ಎಂಬ ಹೆಮ್ಮ ಇತ್ತು…ಆದರೆ, ನಿಮ್ಮ ಅಂತರ್ ಮುಖದ ದರ್ಶನವಾಯಿತಲ್ಲ.. ಮೆಚ್ಚಿದ ಹೃದಯಗಳು ಬೆಚ್ಚಿಬಿದ್ದಿವೆ… ನಮ್ಮ ಪುರಾತನ ಪಾಠಶಾಲಾ ಪದ್ಧತಿ ನಮ್ಮ ದೇಶವನ್ನು ಸಾಮಾಜಿಕವಾಗಿ ಒಗ್ಗೂಡಿಸಿ,ಅಭಿವೃದ್ಧಿಯಾಗಿಸುವಂತಹುದೆ? ಎಷ್ಟು ಜನಕ್ಕೆ ಪುರಾತನ ಪಾಠಶಾಲ ಪದ್ಧತಿಯಿಂದ ಶಿಕ್ಷಣ ಸಿಕ್ಕಿದೆ ಹೇಳಿ..ಕೇವಲ 3/-ಪರ್ಸಂಟ್ ಜನರಿಗೆ ವೇಧಾಧ್ಯಾಯನ, ಒಂದಿಷ್ಟು ಕ್ಷತ್ರಿಯರಿಗೆ ಬಿಲ್ವಿದ್ಯೆ ಇವಿಷ್ಟೆ ಶಿಕ್ಷಣವಾಯಿತೆ ? ತಮ್ಮ ವಿಚಾರದಲ್ಲಿ. ಶಿಕ್ಷಣದ ವ್ಯಾಖ್ಯನವೇನು? ಹಾಗಾದರೆ ಬಹುಸಂಖ್ಯಾತರಾದ ಭಾರತದ ದುಡಿವವರ್ಗವನ್ನು ಶೋಷಿತ ಸಮುದಾಯಗಳನ್ನು ಶಿಕ್ಷಣದಿಂದ ವಂಚಿಸುವ, ಅವರ ಬದುಕುವ ಹಕ್ಕುಗಳ ಧಮನಮಾಡುವ ಶಿಕ್ಷಣ ಪದ್ಧತಿಯ ಪುನಃ ಆರಂಭದ ತಮ್ಮ ಹಪಹಪಿಕೆಯ ಹಿಂದೆ ಯಾವ ಉದ್ದೇಶವಿದೆ?
ಸಾರ್ವಜನಿಕವಾಗಿ ನಾವಾಡುವ ಮಾತು ಸಮಾಜವನ್ನು ಸಾಮರಸ್ಯದಿಂದ ಬೆಸೆಯುವಂತಿರಬೇಕೆ ಹೊರತು ಅಸಂತುಷ್ಟತೆ, ಅಸಹಿಷ್ಣುತೆಗಳ ಹೆಚ್ಚಳಕ್ಕೆ ಕಾರಣವಾಗಬೇಕೆ? ಅಲಕ್ಷ ಮಾಡಿದರೆ ಸಣ್ಣ ಬೆಂಕಿಕಿಡಿಯು ಊರನ್ನೆ ಸುಡುತ್ತದೆ ನಿಮ್ಮ ಅಂತರಾಳದ ಮಾತನ್ನು ಅಲಕ್ಷಿಸುವಂತಿಲ್ಲ.ದೇಶ ಮತ್ತು ಸಮಾಜದ ಒಳಿತನ್ನು ಯೋಚಿಸುವ ಜಾಗ್ರತ ಮನಸ್ಸುಗಳು ಇಂತಹ ಮಾತುಗಳನ್ನು ಖಂಡಿಸಲೇಬೇಕು…ಮೆಕಾಲೆ ಶಿಕ್ಷಣ ಬೇಡವೆಂಬ ನೀವೇ ಆ ಶಿಕ್ಷಣ ಪಡೆದು ಮಂತ್ರಿಗಿರಿ ಪಡೆದುದ್ದಲ್ಲವೆ? ಸಭಾಪತಿ ಸ್ಥಾನಕ್ಕೆರಿಸಿದ್ದು ಅದೇ ಶಿಕ್ಷಣ….ಏಕೆ ತಮಗೆ ಗೊಂದಲದ ನಿಲುವು? ಸಮಾಜದ ಅನೇಕರ ಮಕ್ಕಳು ಅದೇ ಶಿಕ್ಷಣದಿಂದ ವಿಜ್ಞಾನಿಯಾಗಿ, ಡಾಕ್ಟರ್, ಇಂಜಿನಿಯರ್, ಉನ್ನತ ಸಂಶೋಧಕರಾಗಿ ಹೆಸರು ಗಳಿಸಿ ಬದುಕುತ್ತಿಲ್ಲವೆ? ಅವರಿಂದ ಈ ಸಮಾಜ ಹಾಳಾಗಿದೆ ಎಂದು ನೀವು ಭಾವಿಸುವಿರಾ? ಸರ್ವರ ಶಿಕ್ಷಣದ ಹಕ್ಕನ್ನು ವಂಚಿಸಲು ಹವಣಿಸುವ ವಿತರ್ಕಿಗಳ ವಿತಂಡಿಗಳ ಮನ ತಣಿಸಲು ಅವರ ಮೆಚ್ಚಿಸಲು ಈ ಮಾತು ಹೇಳಿ ಬಹುಫರಾಕು ಪಡೆಯಬೇಕಿತ್ತೆ? ವಿಧಾನ ಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ಹುಟ್ಟು ಹಾಕಿ ಮೇಲ್ಪಂಕ್ತಿಯ ರಾಜಕಾರಣಿಯಾಗುವ ಲಕ್ಷಣ ತೋರಿಸಿದ ನೀವು.ಯಾರ ಒತ್ತಡಕ್ಕೆ ಮಣಿದು ಇಂತಹ ಹೇಳಿಕೆಯನ್ನು ಸಾರ್ವಜನಿಕ ವೇದಿಕೆ ಮೇಲೆ ಹೇಳಿದ್ದಿರಿ..
ಘನವ್ಯಕ್ತಿತ್ವವನ್ನು ಯಾರದೊ ಖುಷಿಗೆ, ಮರ್ಜಿಗೆ ಅಡವಿಡಬೇಕಿತ್ತೆ? ರಾಜಕಾರಣ ಕೂಡ ಧರ್ಮದ ಹಾಗೆ ಲೋಕ ಕಲ್ಯಾಣದ ಗುರಿ ಸಾಧಿಸಲು ನಮ್ಮ ಆಯ್ಕೆಯ ಒಂದು ಮಾರ್ಗ, ಅಲ್ಲಿಯು ಉತ್ತಮವಾಗಿ ಕೆಲಸ ಮಾಡಿದವರಿದ್ದಾರೆ..ಉದಾ:- ದೇವೆಗೌಡರನ್ನೆ ನೋಡಿ ಹಾಸನ ಕ್ಕೆ ಅಭಿವೃದ್ದಿಯೆ ಅಜೀರ್ಣವಾಗುವಷ್ಟು ಕೆಲಸ ಮಾಡಿದ್ದಾರೆ ಬೆಂಗಳೂರಿಗೆ ಸರಿಸಮವಾಗಿ ಹಾಸನವನ್ನು ಅಭಿವೃದ್ಧಿಗೊಳಿಸಿದ್ದಾರೆ..ಮತ್ತೆ ಮಲ್ಲಿಕಾರ್ಜುನ ಖರ್ಗೆಯವರ ಗುರುಮಿಠ್ಠಕ್ಕಲ್ ಕ್ಷೇತ್ರ ನೋಡಿ ಬನ್ನಿ ಅಭಿವೃದ್ಧಿಯ ಪಾಠ ಅನುಭವಕ್ಕೆ ಬಂದೀತು….ಮೆಕಾಲೆ ಶಿಕ್ಷಣದ ಅರಿವು ಆದೀತು…… ರಾಜು ನಾಯಕ, ಬಿಸಿಲಕೊಪ್ಪ,ಶಿರಸಿ.
Comments
