ಎಸ್. ಬಂಗಾರಪ್ಪ ವಿರಳ ಛಲದಂಕಮಲ್ಲ

ಕಲರ್ ಪುಲ್ ರಾಜಕಾರಣ, ಧೈರ್ಯ ಮತ್ತು ದರ್ಪಕ್ಕೆ ಎಸ್ ಬಂಗಾರಪ್ಪಸಾಕ್ಷಿ .ಹಾಗೊಂದು ವೇಳೆ ಅವರಿಗೆ ಸಹನೆ ಒಲಿದಿದ್ದರೆ ನೊ ಡೌಟ್ ಅವರು ಕರ್ನಾಟಕ ಗಡಿಗೋಡೆಯನ್ನು ಒಡೆದು ದೇಶದ ಮೂಂಚೂಣಿ ರಾಜಕಿಯ ನಾಯಕರಾಗಿರುತ್ತಿದ್ದರು.. ಆದರೆ ರಾಜಕಾರಣದಲ್ಲಿ ಇರಬೇಕಾದ ಸಹನೆಯೆ ಅವರಿಗಿರಲಿಲ್ಲ..ನಾ ಹೇಳುತ್ತಿರುವುದು ಎಸ್ ಬಂಗಾರಪ್ಪನವರ ಬಗ್ಗೆ, ನೀವೇನೆ ತಿಳಿದುಕೊಳ್ಳಿ ಎಸ್, ಬಂಗಾರಪ್ಪ ಅತ್ಯಂತ ಸಾಮಾಜಿಕ ಕಳಕಳಿಯ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ… ಅವರು ಹುಟ್ಟಿದ್ದು ಇದೇ ಸೊರಬ ತಾಲುಕಿನ ಕೂಬಟೂ ರಿನಲ್ಲಿ, ಅತ್ಯಂತ ಕನಿಷ್ಠ ಸೌಲಭ್ಯಗಳಿರುವ ಹಳ್ಳಿಯ ಕಡುಬಡತನದ ಕುಟುಂಬದ ಎಲೆ ಮರೆಯ ಕಾಯಿ ಇವರು….

ಮೈಸೂರಿನಲ್ಲಿ ಬಿ.ಎ.ಆನರ್ಸ.ಓದಿದ ಮೇಲೆ ಎಲ್.ಎಲ್.ಬಿ. ಮುಗಿಸಿ ಸಮಾಜವಾದ ಸಿದ್ಧಾಂತಕ್ಕೆ ಮನಸೋತವರು..ಆಗೆಲ್ಲ ಶಿವಮೊಗ್ಗವೆಂದರೆ ಕರ್ನಾಟಕದ ಚಿಂತಕರ ಚಾವಡಿ ಅಂತ ಹೆಸರಿತ್ತು. ರಾಮಮನೋಹರಲೋಹಿಯಾರವರ ಸಮಾಜವಾದಿ ಸಿದ್ಧಾಂತ ರಂಗೇರುವ ಘಳಿಗೆ, ಇಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಹೋರಾಟದ ಮೂಂಚೂಣಿಯಲ್ಲಿ ನಿಂತಾಗ, ಈ ಬಂಗಾರಪ್ಫ, ಕಾಗೋಡು ತಿಮ್ಮಪ್ಪ ಕೋಣಂದೂರು ಲಿಂಗಪ್ಪರಂತಹ ಅನೇಕ ಯುವ ಚಿಂತಕರು ಅವರ ಜೊತೆಗೂಡಿ ಹೊಸ ವೈಚಾರಿಕ ಕ್ರಾಂತಿಗೆ ವೇದಿಕೆಯಾಗಿ ಬಿಟ್ಟರು..ಎಸ್.ಬಂಗಾರಪ್ಪನವರು 1967ರಲ್ಲಿ ಸಮಾಜವಾದಿ ಸಿದ್ಧಾಂತದ ಆಕರ್ಷಣೆಯೊಂದಿಗೆ ರಾಜಕಾರಣದ ಪರೀಕ್ಷೆಯಲ್ಲಿ ಪಾಸಾ ಗಿದ್ದರು…ಸೊರಬದಲ್ಲಿ ಗೆದ್ದು ವಿಧಾನ ಸಭೆ ಪ್ರವೇಶ ಮಾಡಿದ್ದರು.ಅದೆಂತಾ ಆಕ್ರೋಶ ಆವೇಶವಿತ್ತೆಂದರೆ, ಅವರ ಘನ ಗಾಂಭೀರ್ಯದ ಎದುರು ನಿಲ್ಲುವುದೆ ಸಾಮಾನ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ಬಂಗಾರಪ್ಪ ಮಾತಾಡುವಾಗ ವಿಧಾನ ಸಭೆ ಪಿನ್ ಡ್ರಾಪ್ ಸೈಲೆನ್ಸ ಆಗುವಷ್ಟು ಉತ್ತಮ ವಾಗ್ಮೀಯತೆ ಅವರಿಗಿತ್ತು..

ಹುಟ್ಟು ಬಡತನ ಶೋಷಣೆಯ ಜೀವನ, ಶಿಕ್ಷಣಕ್ಕಾಗಿ ಕೆಳವರ್ಗದವರ ಪರಿಶ್ರಮ, ದೇವಾಲಯಗಳಲ್ಲಿ ಜಾತಿ ಆಧರಿತ ಬಹಿಷ್ಕಾರ ಬಂಗಾರಪ್ಪರನ್ನು ವೈಚಾರಿಕತೆಗಿಂತ ಕ್ರಾಂತಿಕಾರಿ ವಿಚಾರಧಾರೆಯತ್ತ ಎಳೆದೊಯ್ದ ಘಳಿಗೆ ಅದು…ತನ್ನೊಡಲ ತುಂಬಾ, ಶೋಷಿತ ಸಮಾಜದ ಧ್ವನಿಯನ್ನು ತುಂಬಿಕೊಂಡ ಬಂಗಾರಪ್ಪ ತಮ್ಮ ಸಿಡುಕು ಅಸಹನೆಯಿಂದ ರಾಜಕಾರಣದಲ್ಲಿ ಪ್ರಜ್ವಲಿಸುವ ಸೂರ್ಯನಂತೆ ಬೆಳಗಿಬಿಟ್ಟರು..ಯಾರೆಂದರೆ ಯಾರಿಗೂ ಕ್ಯಾರೆ ಎನ್ನದ ಮನಸ್ಥಿತಿಗೆ ಅವರು ಅನುಭವಿಸಿದ ಶೋಷಣಾ ನೀತಿಗಳೆ ಕಾರಣವಾಗಿತ್ತು..ಅವರು ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ, ಅತಿ ಉತ್ತಮ ವಾಗ್ಮೀ, ಸಾಹಿತ್ಯ , ಕಲೆ ಸಂಗೀತ ಪ್ರೇಮಿ,.ಅವರು ಸಂಗೀತದಲ್ಲಿ ಆಸಕ್ತರಾದಾಗ ಇರುವ ಸಹನೆ ರಾಜಕಾರಣದಲ್ಲಿ ಇರಬೇಕಿತ್ತು….ಅವರೊಬ್ಬ ಭಾರತಿಯ ಬಹು ಎತ್ತರದ ರಾಜಕಾರಣಿಯಾಗಿರುತ್ತಿದ್ದರು….

ಆದರೆ ಆವರ ಸಿಡುಕು ,ದರ್ಪ, ಅವರ ವ್ಯಕ್ತಿತ್ವದ ಪ್ರಕಾಶನಕ್ಕೆ ಅಡ್ಡಗಾಲಾಗಿದ್ದು ಅವರಿಗೆ ತಿಳಿಯಲಿಲ್ಲ್ಲ.ಕರ್ನಾಟಕದ ರಾಜಕಾರಣದ ಮಜಲುಗಳನ್ನು ಅವರು ಬದಲಿಸಿದಷ್ಟು ಲೀಲಾಜಾಲವಾಗಿ ಯಾರಿಂದಲು ಬದಲಿಸಲು ಸಾಧ್ಯವಾಗಿಲ್ಲ….ಭಾರತದ ಉಕ್ಕಿನ ಮಹಿಳೆ ಇಂದಿರಾಗಾಂಧಿಗೆ ಕಪ್ಪು ಬಾವುಟ ತೋರಿಸಿ ದಿಕ್ಕರಿಸಿದ ಅವರು ಅದೇ ಇಂದಿರಾಗಾಂಧಿಯಿಂದ ಕೆಪಿಸಿಸಿ ಅಧ್ಯಕ್ಷರೆಂದು ಘೋಷಿಸಿಕೊಂಡು ಬಂದ ಧೀರ ವ್ಯಕ್ತಿತ್ವ….ಅವರೇನು ಸಾಮಾನ್ಯರೇ, ಗುಡುಗುವ ರಭಸಕ್ಕೆ ಭಾರತವೆ ಅಲ್ಲಾಡುವಂತೆ ಮಾಡುವ ಒಂಟಿಸಲಗ,… ಇಟ್ಟೆ ಹೆಜ್ದೆಗಳೆಲ್ಲ ಹೆಗ್ಗುರುತು…ಅಂತೂ ಮುಖ್ಯಮಂತ್ರಿಯಾಗಿಯೆ ಬಿಟ್ಟರು,.ಆಮೇಲಿನ ರಾಜಕಿಯ ಪರ್ವ ಕೂತೂಹಲಕಾರಿ, ಆಶ್ರಯ, ಅಕ್ಷ ಯ, ಆರಾಧನಾ, ಶಶ್ರೂಷ,, ವಿಶ್ವ, ಕೃಪಾಂಕ, ಉಚಿತ ವಿದ್ಯುತ್, ಏಕಲವ್ಯ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕನ್ನಡ ಪ್ರಾಧಿಕಾರ ರಚನೆ, ಬ್ಯಾಟ್ಮಿಂಟನ್ ಅಶೋಸಿಯೇಶನ್, ಹೀಗೆ ನವಯುಗದ ಅಭಿವೃದ್ಧಿಯ ನವ ಹೆಜ್ಜೆಗಳು ಅವರ ಸಾಮಾಜಿಕ ಜನಪರ ನಿಲುವಿಗೆ ಸಾಕ್ಷಿ ಒದಗಿಸುತ್ತವೆ…‌‌‌ಕ್ರಾಂತಿರಂಗ ಕಟ್ಟಿ ಕಾಂಗ್ರೆಸ್ಸೇತರ ಸರಕಾರ.ರಚನೆಯಲ್ಲಿ ಬಂಗಾರಪ್ಪನವರದ್ದು ಸಿಂಹ ಪಾಲು, ಉಪಮುಖ್ಯಮಂತ್ರಿ ಹುದ್ದೆಯನ್ನು ತಿರಸ್ಕರಿಸಿ ರಾಜಕಾರಣದ ದಿಕ್ಕನ್ನೆ ಬದಲಾಯಿಸಿದ ಛಲಗಾರ….. ಆದೇ ಸೇಡಿಗೆ ಭಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಚುನಾವಣೆಗೆ ಸ್ಪರ್ಧಿಸಿದಾಗ ಆನಾಮಧೇಯ ಸಿದ್ದು ನ್ಯಾಮೆಗೌಡರನ್ನು ಪ್ರತಿಯಾಳಾಗಿ ನಿಲ್ಲಿಸಿ ಗೆಲ್ಲಿಸಿಕೊಂ ಡು ಬಂದ ರಾಜಕೇಸರಿ……ಪಕ್ಷಾಂತರದ ಪರ್ವದಲ್ಲಿ ನಂಬರ್ 1 ಇವರೆ….ಎಂ ಎಲ್ ಎಗಳ ಸೃಷ್ಟಿಸುವ ಫ್ಯಾಕ್ಟರಿ, ಅವರೇನೇ ಆದರೂ ಅವರಲ್ಲಿರುವ ಸಾಮಾಜಿಕ ಕಳಕಳಿ ಮಾತ್ರ ನಿತ್ಯಗೋಚರ…ಬಂಗಾರಪ್ಪನವರ ಮಾವನ ಮನೆ ನನ್ನೂರಿನ ಸಮೀಪದ ಮಳಲಗಾಂವ, ನಾವು ಪಿ.ಯೂ.ಸಿ ವಿದ್ಯಾರ್ಥಿಯಾಗಿರುವಾಗಲೆ ಅವರೊಂದಿಗೆ ಮಾತಾಡಿದ ನೆನಪು ಹಸಿರಾಗಿದೆ… ಬಂಗಾರಪ್ಪರ.ಕೃಪೆಯಿಲ್ಲದೆ ಉತ್ತರ ಕನ್ನಡದ ರಾಜಕಾರಣ ಸಂಪೂರ್ಣವಾಗುತ್ತಿರಲಿಲ್ಲ….ಅವರೊಂದು ಶಕ್ತಿ, ಅವರ ಹೆಸರೆ ಶಕ್ತಿಯಾದಂತೆ ಬದುಕಿದ್ದರು …ಆದರೆ ಅವರ ಕುಟುಂಬದ ವಿರೋಧಭಾಸ ನಡೆಯಿಂದ ಬಂಗಾರಪ್ಪ ಅಕ್ಷರಶಃ ನಲುಗಿಹೋದರು ಅದೇ ನೋವಿನಲ್ಲಿ ಯಾತ್ರೆ ಮುಗಿಸಿಬಿಟ್ಟರು… ಧೀರೋದ್ಧಾತ ನಾಯಕನ ಜೀವನ ಕೊನೆಗಾಲದಲ್ಲಿ ಸ್ವ ಕುಟುಂಬದ ವಿಲಕ್ಷಣೆ ನಡೆಯಿಂದ ನಲುಗಿ ನರಳಿ ಯಾತ್ರೆ ಮುಗಿಸಿತ್ತು..ಅದೊಂದು ವಿಷಾಧ ಗೀತೆಯಂತೆ…

-.‌‌‌ರಾಜು ನಾಯಕ, ಬಿಸಲಕೊಪ್ಪ….

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *