

https://www.youtube.com/watch?v=2-9LXILPatQ&t=9s
https://www.youtube.com/watch?v=2-9LXILPatQ&t=9s
ಸಿದ್ದಾಪುರ
ಕಳೆದ ಹಲವು ವರ್ಷಗಳಿಂದ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ, ಈಗ ಶಿರಸಿಯ ಡಿ.ಎಪ್.ಓ. ಎಸ್.ಜಿ.ಹೆಗಡೆಯವರ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಝಡ್.ಎ.ಸಾಧಿಕ್ ಅವರಿಗೆ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿ ದೊರಕಿದ್ದು ಸೋಮವಾರ ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ಅವರು ಪದಕ ಸ್ವೀಕರಿಸಿದರು.
ಸಿದ್ದಾಪುರ ತಾಲೂಕಿನಲ್ಲಿ ಝಡ್.ಎ.ಸಾಧಿಕ್ ಅವರು ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ಅಕ್ರಮ ಮರಗಳ್ಳತನ,ಇನ್ನಿತರ ಅಕ್ರಮ ಚಟುವಟಿಕೆಗಳ ವ್ಯಕ್ತಿಗಳನ್ನು ಹಿಡಿಯಲು ಹೆಚ್ಚಿನ ಸಹಾಯ ಮಾಡುವದರ ಜೊತೆಗೆ ಶ್ರೀಗಂಧದ ಕಳ್ಳಸಾಗಾಣಿಕೆದಾರರಿಗೆ ಸಿಂಹಸ್ವಪ್ನವಾಗಿದ್ದರು.
ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸುಮಾರು 4000 ಕೆ.ಜಿ.ಶ್ರೀಗಂಧವನ್ನು ಅವರು ಕೊಲೆ ಬೆದರಿಕೆ, ಜೀವ ಭಯ ತೊರೆದು ಹಿಡಿದು ಸರಕಾರಕ್ಕೆ ಒಪ್ಪಿಸಿದ್ದರು. ಅವರ ಕಾರ್ಯದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲದೇ ಸಾರ್ವಜನಿಕರು ಕೂಡ ಪ್ರಶಂಸಿಸಿದ್ದು ಈಗಲೂ ಕೂಡ ಅವರು ತಾಲೂಕಿನಲ್ಲಿ ಮನೆ ಮಾತಾಗಿದ್ದಾರೆ. ಮೂಲತ: ದ.ಕ.ಜಿಲ್ಲೆಯ ಸುಳ್ಯದವರಾದ ಸಾಧಿಕ್ ಅವರ ಸಿದ್ದಾಪುರ ತಾಲೂಕಿನಲ್ಲಿ ಮಾಡಿದ ಮಹತ್ತರ ಕಾರ್ಯವನ್ನು ಗುರುತಿಸಿ, ಸರಕಾರ ಈ ಪದಕವನ್ನು ನೀಡಿದ್ದು ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಪ್ರಾಯಶ: ಅರಣ್ಯ ಇಲಾಖೆಯ ಚಾಲಕರೊರ್ವರಿಗೆ ಇಂಥ ಗೌರವ ದೊರೆಯುತ್ತಿರುವದು ಇದೇ ಮೊದಲು ಎನ್ನಲಾಗುತ್ತಿದೆ.
ಮಂಡಲ ಪೂಜೆ-
ದಿನಾಂಕ 15-11-2020ರ ಸಾಯಂಕಾಲ 6:30 ಘಂಟೆಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆಯನ್ನು 18 ಮೆಟ್ಟಿಲುಗಳ (ಪಡಿಪೂಜೆ) ಪೂಜೆಯನ್ನು ಮಾಡುವ ಮೂಲಕ ವಿದ್ಯುಕ್ತವಾಗಿ ಆರಂಭಿಸಲಾಯಿತು. ಈ ಸಮಯದಲ್ಲಿ ನೂರಾರು ಭಕ್ತರು ಭಾಗವಹಿಸಿ ಅಚ್ಚುಕಟ್ಟಾಗಿ ಪೂಜೆಯು ನೆರವೇರುವಂತೆ ನೋಡಿಕೊಂಡರು.
ಕರೋನಾ ಮಹಾಮಾರಿಯಿರುವ ಈ ಸಂಕಷ್ಟ ಕಾಲದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತರು ಶಭರಿಮಲೈಗೆ ಹೋಗಿಬರಲು ಅನಾನುಕೂಲವಾಗುವುದರಿಂದ ಹಾಗೂ ಮಾಲಾಧಾರಿಗಳು ಪ್ರತಿವರ್ಷ ನಡೆಸುವ ವೃತಾಚರಣೆಗೆ ಭಂಗವಾಗದಂತೆ ನೋಡಿಕೊಳ್ಳಲು ತಮ್ಮ ಸನ್ನಿದಿ ವತಿಯಿಂದ ಇರುಮುಡಿ ಹೊತ್ತು ಬರುವ ಭಕ್ತಾಧಿಗಳಿಗೆ ಶಾಸ್ತ್ರೋಕ್ತವಾಗಿ 18 ಮೆಟ್ಟಿಲುಗಳನ್ನು ಏರಿ ಕಲಿಯುಗವರದನ ದರ್ಶನ, ತುಪ್ಪಾಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ದಿನಾಂಕ 15-11-2020 ರಿಂದ 30-12-2020 ರವರೆಗೆ ಮಂಡಲ ಪೂಜೆ ಮಹೋತ್ಸವ ಹಾಗೂ ದಿನಾಂಕ 01-01-2021 ರಿಂದ 15-01-2021 ರವರೆಗೆ ಮಕರಜ್ಯೋತಿ ಉತ್ಸವವು ನೆರವೇರುತ್ತಿದ್ದು ಮಾಲಾಧಾರಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುಲು ಅಯ್ಯಪ್ಪ ಸ್ವಾಮಿಯ ಆಡಳಿತ ಸಮಿತಿಯವರು ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಲು ಮೊಬೈಲ್ ಸಂಖ್ಯೆ:
1) 7892771470 2) 9731413487 3) 7259555400
4) 9008883466 5) 9901573633
ಅರಣ್ಯ ಇಲಾಖೆಯಲ್ಲಿ
ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದಾಪುರ ತಾಲೂಕಿನ,
ಕಾನಗೋಡ ಗ್ರಾಮದ
ಮೋಹನ್ ಗಣಪತಿ ನಾಯ್ಕ,ಘಂಟೆ ಇವರಿಗೆ ಕರ್ನಾಟಕ ಸರ್ಕಾರವು ಕೊಡಮಾಡುವ “ಮುಖ್ಯಮಂತ್ರಿ ಪದಕ” ಲಭಿಸಿದೆ.


