
ಧರ್ಮಾಧಿಕಾರಿಗಳು, ಪಾದ್ರಿಗಳು, ಪ್ರೀಸ್ಟ್ ಗಳಿಗೆ ಕೆಲವು ನಿರ್ಬಂಧಗಳಿವೆ. ಸಾಮಾನ್ಯ ಜನರಂತೆ ವರ್ತಿಸಬಾರದು. ಬಂಧಗಳು, ಬಾಹ್ಯ ಸುಖಗಳಿಂದ ದೂರವಿರಬೇಕು. ಯಾವುದೇ ವಾಂಛೆಗಳಿಲ್ಲದೆ ಬದುಕಬೇಕು. ಒಂದೊಮ್ಮೆ ಈ ಲಕ್ಷ್ಮಣ ರೇಖೆಗಳನ್ನು ದಾಟಿದರೆ, ತೀವ್ರರೀತಿಯ ಟೀಕೆಗಳನ್ನು ಎದುರಿಸಬೇಕಾಗುತ್ತದೆ.










ಪ್ರಸ್ತುತ ಇಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನು ಪೋಪ್ ಫ್ರಾನ್ಸಿಸ್ ಎದುರಿಸುತ್ತಿದ್ದಾರೆ. ‘ನಿಮಗಿದು ಯೋಗ್ಯವೇ ? ಇದಕ್ಕೆ ನಿಮ್ಮ ಉತ್ತರವೇನು?’ ಎಂದು ನೆಟಿಜನ್‌ಗಳು ಪೋಪ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಈ ಪ್ರಮಾಣದ ಆಕ್ರೋಶಕ್ಕೆ ಕಾರಣ ಏನೆಂದರೆ? ಪೋಪ್ ಫ್ರಾನ್ಸಿಸ್ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ… ಬಿಕಿನಿ ಧರಿಸಿದ ಬ್ರೆಜಿಲ್ ರೂಪದರ್ಶಿ ಪೋಟೋ ಮೆಚ್ಚಿ ಲೈಕ್ ಮಾಡಿರುವುದು.
ಈ ‘ಮೆಚ್ಚುಗೆ’ ಗೆ ಈ ಟೀಕೆಗಳು ವ್ಯಕ್ತವಾಗಿವೆ. ರೂಪದರ್ಶಿ ನಟಾಲಿಯೊ ಗಾರಿಬೊಟ್ಟೊ ಕಳೆದ ತಿಂಗಳು ಐದರಂದು ಬಿಕಿನಿ ಧರಿಸಿ ಶಾಲೆಯೊಂದರ ಲಾಕರ್ ಬಳಿ ನಿಂತಿರುವ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ‘ನಾನು ನಿಮಗೆ ಒಂದೆರೆಡು ಎರಡು ವಿಷಯಗಳ ಕಲಿಸಬಲ್ಲೆ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ಪೋಟೋ 1.5 ದಶಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದುಕೊಂಡಿದೆ.
ಈ ಪೋಟೋವನ್ನು ಪೋಪ್ ಫ್ರಾನ್ಸಿಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ತಿಂಗಳ 13 ರಂದು ‘ಲೈಕ್’ ಮಾಡಿದ್ದರು ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮರುದಿನ ಅನಿರೀಕ್ಷಿತವಾಗಿ ‘ಡಿಸ್ ಲೈಕ್’ ಎಂದು ಕಾಣಿಸಿಕೊಂಡು ಮತ್ತಷ್ಟು ಗೊಂದಲ ಮೂಡಿಸಿದೆ.
ಈ ಮಧ್ಯೆ, ನಟಾಲಿಯಾ ಮ್ಯಾನೇಜ್ಮೆಂಟ್ ಕಂಪನಿ ಸಿಓವೈ.ಕೋ ಈ ವಿಷಯವನ್ನು ತನ್ನ ಪ್ರಚಾರಕ್ಕಾಗಿ ಬಳಸಲು ಉದ್ದೇಶಿಸಿದೆ. ಪೋಪ್ ಫ್ರಾನ್ಸಿಸ್ ಲೈಕ್ ಮಾಡಿರುವ ಸ್ಕ್ರೀನ್‌ಶಾಟ್ ಅನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಸಿಓವೈ. ಕೋಗೆ ‘ಪೋಪ್‌ನಿಂದ ಆಶೀರ್ವಾದ ಲಭಿಸಿದೆ. (kpc)
