ಗುಜರಾತ್: ರಾಜ್ ಕೋಟ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡ, 5 ರೋಗಿಗಳು ಸಾವು, ತಲಾ 4 ಲಕ್ಷ ರೂ ಪರಿಹಾರ

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಗುಜರಾತ್ ರಾಜ್ಯದಲ್ಲಿ ಪುನರಾವರ್ತಿಸಿದೆ.

Hospital where fire break out

ರಾಜ್ ಕೋಟ್(ಗುಜರಾತ್): ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಗುಜರಾತ್ ರಾಜ್ಯದಲ್ಲಿ ಪುನರಾವರ್ತಿಸಿದೆ.

ಈ ಬಾರಿ ಗುಜರಾತ್ ನ ರಾಜ್ ಕೋಟ್ ನಗರದ ಮಾವ್ಡಿ ಪ್ರದೇಶದ ಉದಯ್ ಶಿವಾನಂದ್ ಕೋವಿಡ್-19 ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವ ಬೆಂಕಿ ಅವಘಡ ಉಂಟಾಗಿ ಐದು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಕೋವಿಡ್-19 ರೋಗಿಗಳಿಗೆ ಮೀಸಲಾಗಿದ್ದ ತೀವ್ರ ನಿಗಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ. 

ಮೂಲಗಳಿಂದ ಸಿಕ್ಕಿರುವ ಪ್ರಕಾರ, ದುರ್ಘಟನೆ ನಡೆಯುವ ವೇಳೆ ಐಸಿಯುನಲ್ಲಿ ಸುಮಾರು 11 ಮಂದಿ ರೋಗಿಗಳಿದ್ದರು. 6 ಮಂದಿಯನ್ನು ರಕ್ಷಿಸಲಾಗಿದ್ದು ಉಳಿದ ಐವರು ಮೃತಪಟ್ಟಿದ್ದಾರೆ.

ಕೋವಿಡ್-19 ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

ಘಟನೆ ನಡೆದ ತಕ್ಷಣ ರಾಜಕೋಟ್ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದು, ಎಲ್ಲಾ ರೋಗಿಗಳನ್ನು ಸದ್ಯ ಪಕ್ಕದ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. 

ಇಲ್ಲಿ 33 ಕೋವಿಡ್-19 ರೋಗಿಗಳು ದಾಖಲಾಗಿದ್ದರು. ನಾವು ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಿದ್ದೇವೆ. 30 ರೋಗಿಗಳನ್ನು ರಕ್ಷಿಸಿದೆವು. ಮೂರು ರೋಗಿಗಳು ಐಸಿಯು ಒಳಗೆಯೇ ಮ-ತಪಟ್ಟಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಜೆಬಿ ತೆವಸೈಡ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಪ್ರಧಾನಿ ಸಂತಾಪ: ರಾಜ್ ಕೋಟ್ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಐವರು ಮೃತಪಟ್ಟ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. 

ಆಸ್ಪತ್ರೆಯ ಆಡಳಿತ ಸಿಬ್ಬಂದಿ ಬೆಂಕಿ ಅವಘಡದಲ್ಲಿ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ. (kpc) 

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗ್ರಾಮ ಪಂಚಾಯತ್‌ ಗಳಿಗೆ ಖರ್ಗೆ ನಿರ್ಧೇಶನ ಏನು ಗೊತ್ತೆ?

ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ನಿರ್ದೇಶನ ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಮೇಲ್ಪಾವಣಿಗಳು ಮತ್ತು ಆವರಣಗಳಲ್ಲಿ...

ಅಪಘಾತಕ್ಕೊಳಗಾದ ಹಿರಿಯ ಪತ್ರಕರ್ತ ರಾ. ಸೋಮನಾಥ್‌

ಕನ್ನಡ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ದೊಡ್ಡ ಹೆಸರು ಉತ್ತರ ಕನ್ನಡ ಮೂಲದ ರಾ. ಸೋಮನಾಥ್‌ ಅಪಘಾತಕ್ಕೀಡಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳ ಅಪರಾಧ ಸುದ್ದಿ,...

ವಿಪರೀತ ಮಳೆ ವಾಸ್ತವ್ಯ & ನಿರ್ಮಾಣ ಹಂತದ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿ

ನಿರ್ಮಾಣ ಹಂತದ ಆಶ್ರಯ ಮನೆ ಮತ್ತು ವಾಸ್ತವ್ಯದ ಕಚ್ಚಾ ಮನೆ ಸೇರಿ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿಯಾಗಿರುವ ದುರ್ಘಟನೆ ಸಿದ್ಧಾಪುರ ತಾಲೂಕು ಕಂಸಲೆಯಿಂದ...

ಸುರಿಯುವ ಮಳೆ ಲೆಕ್ಕಿಸದೇ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಜನಸಮೂಹ!

ಕಾಲು ಶತಮಾನ ಒಂದೇ ಶಾಲೆಯಲ್ಲಿ ಸೇವೆಗೆ ಗ್ರಾಮಸ್ಥರ ಪ್ರೀತಿಯೇ ಕಾರಣ- ಉಮೇಶ ನಾಯ್ಕ.ಸಿದ್ದಾಪುರ:ಆದರ್ಶ ಶಿಕ್ಷಕ ಉಮೇಶ‌ ನಾಯ್ಕ 31 ರಂದು ಸೇವಾನಿವೃತ್ತರಾಗಿದ್ದು ಇಂದು ತಾಲೂಕಿನ...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *