

ಡಾ.ರಾಮಕೃಷ್ಣ ಗುಂದಿ ಕಥೆಗಾರರಾಗಿ, ಜನಪ್ರೀಯ ಉಪನ್ಯಾಸಕರಾಗಿ ಯಕ್ಷರಂಗದ ಹಿರಿಯ ನಟರಾಗಿ ಬಹುಪ್ರಸಿದ್ಧರು. ಆಗೇರ್ ಎನ್ನುವ ಉತ್ತರ ಕನ್ನಡದ ವಿಶಿಷ್ಟ ಪರಿಶಿಷ್ಟರ ಮೊದಲ ತಲೆಮಾರಿನ ವಿದ್ಯಾವಂತರಾಗಿ ಸಾಹಿತ್ಯ,ಶೈ ಕ್ಷಣಿಕ, ಸಾಂಸ್ಕೃತಿಕ ಲೋಕದ ಸಾಧಕರ ಪಟ್ಟಿಯಲ್ಲಿ ಸೇರಿದ ಪ್ರತಿಭಾವಂತರು. ಯಕ್ಷಗಾನ ಅಕಾಡೆಮಿಯ2019 ರ ಗೌರವ ಪುರಸ್ಕಾರಕ್ಕೆ ಭಾಜನರಾಗಿರುವ ಡಾ. ಗುಂದಿಯವರ ವ್ಯಕ್ತಿತ್ವ,ಸರಳತೆ,ಕಲಾಕ್ಷೇತ್ರದ ಅನನ್ಯ ಸಾಧನೆಗಳ ಹಿನ್ನೆಲೆಯಲ್ಲಿ ಅವರ ಕತೆ,ಸಾಧನೆಗಳನ್ನು ಪರಿಚಯಿಸುವ ಫೋಟೊ ಸಂಪುಟವನ್ನು ಸಮಾಜಮುಖಿ ಪ್ರಕಟಿಸಿ, ಅವರಿಗೆ ಅಭಿನಂದಿಸುತ್ತದೆ.







