

ರಾಜ್ಯದಲ್ಲಿ ಆಡಳಿತಕ್ಕಾಗಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ನೆಗೆಯುವ ಚಾಳಿ ಈಗ ಹೆಚ್ಚುತ್ತಿದೆ. ಉತ್ತರ ಕನ್ನಡದಲ್ಲಿ ಗ್ರಾಮ ಪಂಚಾಯತ್ ಚುನಾವಣೆ, ಪಕ್ಷದ ಅಧ್ಯಕ್ಷತೆಯ ಹುದ್ದೆ ಬದಲು ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಬಿ.ಜೆ.ಪಿ.ಗೆ, ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಗಳಿಂದ ಕಾಂಗ್ರೆಸ್ ಗೆ ಮುಖಂಡರು, ಕಾರ್ಯಕರ್ತರ ವಲಸೆ ಶುರುವಾಗಿದೆ. ಹೀಗೆ ಪಕ್ಷ ಬದಲಾವಣೆ ಮಾಡಿದ ಕೆಲವರ ಚಿತ್ರಗಳು ಇಲ್ಲಿವೆ.






2024 ಚುನಾವಣೆಗೆ ತಯಾರಿ: ಬಿಜೆಪಿ ವಿಭಾಗಗಳ ಸಂಖ್ಯೆ 18 ರಿಂದ 28 ಕ್ಕೆ ಏರಿಕೆ; ವಿವರಗಳು ಹೀಗಿವೆ…
2024 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಆಂತರಿಕ ವಿಭಾಗಗಳನ್ನು 18-28 ಕ್ಕೆ ಏರಿಕೆ ಮಾಡಲು ನಿರ್ಧರಿಸಿದ್ದು, ಹೆಚ್ಚುವರಿ ಕಾರ್ಯಕರ್ತರನ್ನು ಒಳಗೊಳ್ಳಲಿದೆ.




Published: 07th December 2020 11:36 AM | Last Updated: 07th December 2020 12:23 PM | A+A A-

ನವದೆಹಲಿ: 2024 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಆಂತರಿಕ ವಿಭಾಗಗಳನ್ನು 18-28 ಕ್ಕೆ ಏರಿಕೆ ಮಾಡಲು ನಿರ್ಧರಿಸಿದ್ದು, ಹೆಚ್ಚುವರಿ ಕಾರ್ಯಕರ್ತರನ್ನು ಒಳಗೊಳ್ಳಲಿದೆ.
ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವುದಕ್ಕಾಗಿಯೇ ಪ್ರತ್ಯೇಕ ವಿಭಾಗಗಳನ್ನು ಬಿಜೆಪಿ ಒಳಗೊಳ್ಳಲಿದ್ದು, ಸಾಮಾಜಿಕ ಜಾಲತಾಣ ವಿಭಾಗವನ್ನು ಐಟಿ ವಿಭಾಗದಿದ ಬೇರ್ಪಡಿಸಿ ಪ್ರತ್ಯೇಕಗೊಳಿಸಲು ಯೋಜನೆ ರೂಪಿಸಲಾಗಿದ್ದು, ಈ ವಿಭಾಗ ತಂತ್ರಜ್ಞಾನ ಅಳವಡಿಕೆಯ ಬಗ್ಗೆಯೂ ಗಮನ ಹರಿಸಲಿದೆ.
ಸ್ವಚ್ಛ ಭಾರತ ಅಭಿಯಾನ, ಭೇಟಿ ಬಚಾವೋ-ಭೇಟಿ ಪಡಾವೋ ಹಾಗೂ ನಮಾಮಿ ಗಂಗೆ ವಿಭಾಗಗಳೂ ಅಸ್ತಿತ್ವಕ್ಕೆ ಬರಲಿದ್ದು, ಅದರದ್ದೇ ಆದ ಜವಾಬ್ದಾರಿಯನ್ನು ನಿರ್ವಹಿಸಲಿವೆ. ಹಿಂದೆಂದೂ ಈ ರೀತಿಯ ವಿಭಾಗಗಳು ಬಿಜೆಪಿಯಲ್ಲಿರಲಿಲ್ಲ ಎಂಬುದು ಗಮನಾರ್ಹ.
ಪ್ರತಿಯೊಂದು ಶಕ್ತಿ ಕೇಂದ್ರಗಳಲ್ಲಿಯೂ ಸ್ವಯಂ ಸೇವಕರ ತಂಡವನ್ನು ರಚಿಸಿ ಪ್ರಮುಖ ಸಂದರ್ಭಗಳಲ್ಲಿ ಹಾಗೂ ವಾರಕ್ಕೆ ಒಮ್ಮೆ ಸ್ವಚ್ಛ ಭಾರತ ಅಭಿಯಾನ ಕೈಗೊಳ್ಳುವಂತೆ ಮಾಡಬೇಕು, ಏಕ ಬಳಕೆ ಪ್ಲಾಸ್ಟಿಕ್ ನ್ನು ಬಳಕೆ ಮಾಡದಂತೆ ಸಮಾಜಿಕ ಅರಿವು ಮೂಡಿಸಬೇಕು, ಸಮಾನ ಮನಸ್ಕ ಸಂಘಟನೆಗಳನ್ನು ಒಗ್ಗೂಡಿಸುವ ವೇದಿಕೆಯನ್ನು ಸೃಷ್ಟಿಸಬೇಕು ಎಂದು ಬಿಜೆಪಿಯ ಕೈಪಿಡಿಯಲ್ಲಿ ತಿಳಿಸಲಾಗಿದೆ. (kpc)
