ವಿಧಾನಸಭಾ ಅಧ್ಯಕ್ಷರ ಆಪ್ತರ ಸೋಲು- ಸಿಎಂ ಯಡಿಯೂರಪ್ಪ ತವರಲ್ಲಿ ಲಾಟರಿ ಮೂಲಕ ಬಿಜೆಪಿಗೆ ಒಲಿದ ಜಯ

ಗ್ರಾಮ ಪಂಚಾಯ್ತಿ ಫಲಿತಾಂಶ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರೂರು ಬೂಕನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮೇಗೌಡನಕೊಪ್ಪಲು ಗ್ರಾಮದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಬೆಂಬಲಿತ ಮಂಜುಳಾಗೆ ಲಾಟರಿ ಹೊಡೆದಿದೆ.

ವಿಧಾನಸಭಾ ಅಧ್ಯಕ್ಷರ ಆಪ್ತರ ಸೋಲು-

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಲ್ಲಿ ಅವರ ಆಪ್ತರನ್ನೇ ಗುರಿಮಾಡಿ ಸೋಲಿಸುವ ಕೆಲಸದಲ್ಲಿ ಅವರ ಪಕ್ಷದವರೇ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಶಿರಸಿ ಕ್ಷೇತ್ರ ಶಿರಸಿ-ಸಿದ್ಧಾಪುರ ತಾಲೂಕುಗಳನ್ನು ಒಳಗೊಳ್ಳುತ್ತದೆ. ಒಂದೇ ತಾಲೂಕಿನವರಾಗಿರುವ ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕ ವಿಶ್ವೇಶ್ವರ ಹೆಗಡೆ ಉತ್ತಮ ಸಂಬಂಧ ಹೊಂದಿದವರಲ್ಲ. ಅನಂತಕುಮಾರ ಹೆಗಡೆ ಶಿರಸಿ ತಾಲೂಕಿನಲ್ಲಿ ತುಸು ಹಿಡಿತ ಹೊಂದಿದ್ದರೂ ಸಿದ್ಧಾಪುರ ತಾಲೂಕಿನಲ್ಲಿ ಅವರ ಶಿಷ್ಯರ ಸಾಮರ್ಥ್ಯ ಹೊಡಿ-ಬಡಿ ಕೆಲಸಕ್ಕೆ ಸೀಮಿತ. ವಿಶ್ವೇಶ್ವರ ಹೆಗಡೆ ಈ ಹಿಂದೆ ಸಿದ್ಧಾಪುರವನ್ನೇ ನಂಬಿ ಗೆಲ್ಲುತಿದ್ದರು. ಆದರೆ ಕಾಗೇರಿ, ಅನಂತಕುಮಾರ ಹೆಗಡೆಗಳ ಜಾತೀಯತೆ ಅರಿತ ಕ್ಷೇತ್ರದ ಜನತೆ ಅನಂತಕುಮಾರ ಹೆಗಡೆ ಶಿಷ್ಯರು ಮತ್ತು ಶಾಸಕ ವಿಶ್ವೇಶ್ವರ ಹೆಗಡೆ ಶಿಷ್ಯರನ್ನು ಹುಡುಕಿ ಸೋಲಿಸಿದ್ದಾರೆ. ಹೀಗೆ ವಿಧಾನಸಭಾ ಅಧ್ಯಕ್ಷ ಕಾಗೇರಿಯವರ ಸೋತ ಶಿಷ್ಯರ ಪಟ್ಟಿಯಲ್ಲಿ ಕೋಲಶಿರ್ಸಿಯ ನಾರಾಯಣ ನಾಯ್ಕ,ಇಟಗಿಯ ಗಣಪತಿ ಹೆಗಡೆ, ಬಿದ್ರಕಾನಿನ ಹಳದೋಟ ವಿ.ಎನ್. ಹೆಗಡೆ ಪ್ರಮುಖರು.

ಅನಂತಕುಮಾರ ಹೆಗಡೆಯವರ ಸೋತ ಶಿಷ್ಯರ ಪಟ್ಟಿಯಲ್ಲಿ ಮಾರುತಿ ನಾಯ್ಕ ಕಾನಗೋಡು ಸೇರಿದಂತೆ ಅನೇಕರಿದ್ದಾರೆ.

ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಬಣ ಅನಂತಕುಮಾರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರೂ ಶಾಸಕ ಕಾಗೇರಿ ಒಳಹೊಡೆತದಿಂದಾಗಿ ಕೆ.ಜಿ.ಬಣ ಪಟ್ಟಣದಲ್ಲಿ ಯಶಸ್ವಿಯಾದಂತೆ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿಲ್ಲ! ಮಾಜಿ ಜಿ.ಪಂ. ಸದಸ್ಯ ವಿ.ಎನ್. ನಾಯಕರ ಹಠದಿಂದಾಗಿ ಬೇಡ್ಕಣಿ ಸೇರಿದಂತೆ ದೊಡ್ಮನೆ ಪಂಚಾಯತ್ ನಲ್ಲಿ ಕಾಂಗ್ರೆಸ್ ಗೆ ತುಸು ಹಿನ್ನಡೆಯಾಗಿದ್ದರೂ ಬಿ.ಜೆ.ಪಿ. ನೆರವು ಪಡೆದಿರುವ ಕಾಂಗ್ರೆಸ್ಸಿಗರು, ಕೆಲವು ಕಾಂಗ್ರೆಸ್ ಬೆಂಬಲಿತರು ಗೆದ್ದು ಬಿ.ಜೆ.ಪಿ.ಗೇ ಹಿನ್ನಡೆ ಮಾಡಿದ್ದಾರೆ! ಈ ಮಧ್ಯೆ ಬೇಡ್ಕಣಿ ಗ್ರಾಮ ಪಂಚಾಯತ್ ನಲ್ಲಿ ಕೃಷ್ಣಮೂರ್ತಿ ಮಡಿವಾಳ ದಿಗ್ವಿಜಯ, ಹೊಸ ಹುಡುಗ ಉಲ್ಲಾಸ್ ಗೌಡರ್ ಗೆಲುವಿನ ಹಿಂದೆ ಕೆ.ಜಿ.ಬಣದ ಕೈವಾಡ ನಿಸಂಶಯ. ಕಾಂಗ್ರೆಸ್ ಅಧಿಕಾರದ ಕೋಲಶಿರ್ಸಿ ಕಾಂಗ್ರೆಸ್ ಬಂಡಾಯಗಾರರ ನೆರವಿನಿಂದ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ತಾಲೂಕಾ ಪಂಚಾಯತ್ ಅಧ್ಯಕ್ಷರು ಶಾಸಕರ ಜೊತೆಗಿನ ನಿಕಟ ಸಂಪರ್ಕ ಕೋಲಶಿರ್ಸಿಯಲ್ಲಿ ಬಿ.ಜೆ.ಪಿ. ಆಡಳಿತ ಮಾಡುವಂತಾದರೂ ಆಶ್ಚರ್ಯವಿಲ್ಲ ಎನ್ನುವ ಹೊಸ ಸಾಧ್ಯತೆಗೂ ಕಾರಣವಾಗಬಹುದು!

ಬಿದ್ರಕಾನ್ ನಲ್ಲಿ ಬಿ.ಜೆ.ಪಿ. ಆಡಳಿತದ ಗ್ರಾಮ ಪಂಚಾಯತ್ ಕೈ ತಪ್ಪಲು ಬಿ.ಜೆ.ಪಿ. ಬಣ ರಾಜಕೀಯ ಕಾರಣವಾದರೂ ಹೊಸ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳಿಯ ಘಟಕದ ಪ್ರಯತ್ನದಿಂದಾಗಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆಯಲು ಅನುಕೂಲವಾಗಿದೆ.

ಹೊಸ ಪಂಚಾಯತ್ ತಂಡಾಗುಂಡಿಯಲ್ಲಿ ಕಾಂಗ್ರೆಸ್ ಆಡಳಿತ ನಿಶ್ಚಿತವಾಗಿದೆ. ಬಿ.ಜೆ.ಪಿ. ಆಡಳಿತದಲ್ಲಿದ್ದ ಕಾನಸೂರು ಮತ್ತು ತ್ಯಾಗಲಿ ಪಂಚಾಯತ್ ಗಳು ಕಾಂಗ್ರೆಸ್ ತೆಕ್ಕೆಗೆ ಜಾರುವ ಸಾಧ್ಯತೆ ಇದೆ. ಇಲ್ಲೆಲ್ಲಾ ಹೊಸ ಬಿ.ಜೆ.ಪಿ.ಗರು ಅನಂತಕುಮಾರ ಹೆಗಡೆ, ಶಾಸಕ ಕಾಗೇರಿ, ಇವರ ನಡುವೆ ಕೆ.ಜಿ.ನಾಯ್ಕ ಬಣಗಳ ಪ್ರತಿಷ್ಠೆಯಿಂದಾಗಿ ಕಾಂಗ್ರೆಸ್ ಬೆಂಬಲಿತರಿಗೆ ಅನುಕೂಲವಾಗಿದೆ ಎನ್ನಲಾಗುತ್ತಿದೆ.

BJP

ಬೂಕನಕೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರೂರು ಬೂಕನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮೇಗೌಡನಕೊಪ್ಪಲು ಗ್ರಾಮದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಬೆಂಬಲಿತ ಮಂಜುಳಾಗೆ ಲಾಟರಿ ಹೊಡೆದಿದೆ.

ಇದೇ ರೀತಿ ರಾಜ್ಯದ ಹಲವು ಗ್ರಾಮ ಪಂಚಾಯತ್ ಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಂಜುಳಾ ಹಾಗೂ ಕಾಂಗ್ರೆಸ್‌ನ ವನಜಾಕ್ಷಿ ಅವರು ತಲಾ 301 ಮತಗಳನ್ನು ಸಮನಾಗಿ ಪಡೆದ ಕಾರಣ ಚುನಾವಣಾಧಿಕಾರಿಗಳು ಲಾಟರಿ ವಿಧಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಮಂಜುಳಾ ಅವರಿಗೆ ಅದೃಷ್ಠ ಒಲಿದು ಆಯ್ಕೆಯಾಗಿದ್ದಾರೆ. 

ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾ.ಪಂ.ನ ಮತಗಟ್ಟೆ 2ರಲ್ಲಿ ಇಬ್ಬರು ಅಭ್ಯರ್ಥಿಗಳ ಸಮಬಲದ ಹೋರಾಟ ನಡೆಯಿತು. ಇಬ್ಬರೂ ತಲಾ 316 ಮತಗಳನ್ನು ಪಡೆದರು. ಸ್ಪರ್ಧಿಸಿದ್ದ ಸತೀಶ್ ಹಾಗೂ ತ್ಯಾಗರಾಜು ಅವರ ನಡುವೆ ತೀವ್ರ ಪೈಪೋಟಿ ನಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಲಾಟರಿ ಮೊರೆ ಹೋದ ವೇಳೆ ಸತೀಶ್‌ಗೆ ಜಯ ಒಲಿದಿದೆ.

ಮಂಡ್ಯ ತಾಲ್ಲೂಕು ಶಿವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುನ್ನಾಯ್ಕನಹಳ್ಳಿ ಗ್ರಾಮದ ರಾಜೇಶ್ ಅವರು ತಮ್ಮ ಪ್ರತಿಸ್ಪರ್ಧಿ ದಿವ್ಯಶ್ರೀ ವಿರುದ್ಧ ಕೇವಲ 1 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಯ ಹೊಸೂರು ಗ್ರಾಮದಿಂದ ಸ್ಪರ್ಧಿಸಿದ್ದ ಎಪಿಎಂಸಿ ನಿರ್ದೇಶಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮಣ್ಣ ಅವರು ತಾಲ್ಲೂಕು ಕುರುಬ ಸಮಾಜದ ಯುವ ಘಟಕದ ಅಧ್ಯಕ್ಷ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಿಂಗರಾಜು ಅವರನ್ನು ಕೇವಲ 1 ಮತದ ಅಂತರದಿಂದ ಪರಾಭವಗೊಳಿಸಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *