ಮಾದಕ ವಸ್ತು, ಭೂಗತ, ಸೈಬರ್ ಕ್ರೈಮ್ ಲೋಕ ಮತ್ತಷ್ಟು ಸಕ್ರಿಯ! & ಸಿದ್ಧಾಪುರ ಗ್ರಾ.ಪಂ.ವಿಜೇತರು

ಹಿನ್ನೋಟ 2020: ಪ್ರತಿವರ್ಷದಂತೆ 2020ಕೂಡ ಹೊಸ ನಿರೀಕ್ಷೆ, ಕನಸುಗಳೊಂದಿಗೆ ಆರಂಭವಾಗಿತ್ತು. ಹೊಸ ವರ್ಷ ಆರಂಭವಾಗಿ ಎರಡೇ ತಿಂಗಳಲ್ಲಿ ಕೊರೋನಾ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟು ಸಾಮಾನ್ಯ ಜನರ ಜೀವನವನ್ನು ಹಿಂಡಿಹಿಪ್ಪೆ ಮಾಡಿತ್ತು. 

https://www.youtube.com/channel/UCTvZUkLGbidUHKd8BHTMJbg

Ragini Dwivedi and Sanjana Galrani

ಸಿದ್ದಾಪುರ:ತಾಲೂಕಿನಲ್ಲಿ ನಡೆದಗ್ರಾಮ ಪಂಚಾಯತಚುನಾವಣೆ ಮತಏಣಿಕೆಯ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು. ಮುಂಜಾನೆ 8 ಗಂಟೆಯಿಂದಆರಂಭವಾದ ಮತಏಣಿಕೆ ಸಂಜೆ 7 ಆದರೂ ಪೂರ್ತಿ ಫಲಿತಾಂಶದೊರೆಯಲಿಲ್ಲ.23 ಪಂಚಾಯತಗಳಲ್ಲಿ 8 ಪಂಚಾಯಗಳ ಫಲಿತಾಂಶವೂ ಪೂರ್ತಿ ಪ್ರಮಾಣದಲ್ಲಿ ಲಭ್ಯವಾಗಲಿಲ್ಲ.

ಪಂಚಾಯತ ಹಾಗೂ ವಿಜೇತ ಸದಸ್ಯರಯಾದಿ;-
ಬೇಡ್ಕಣಿ:– ಕೃಷ್ಣಮೂರ್ತಿ ಟಿ ಮಡಿವಾಳ, ಈರಪ್ಪ ನಾಯ್ಕ, ಗೋವಿಂದ ಜಿ ನಾಯ್ಕ, ಬಾಬಜಾನ್ ಮಹಮದ್ ಸಾಬ್, ಉಲ್ಲಾಸ್‍ಗೌಡ, ಶರಾವತಿ ಹನುಮಂತ ನಾಯ್ಕ, ಹೇಮಾವತಿ ಜಿ ನಾಯ್ಕ, ವಾಸಂತಿ ಪಿ ಹಸ್ಲರ್, ಸರಸ್ವತಿ ನಾರಾಯಣ ಹಸ್ಲರ್, ಪದ್ಮಪ್ರಿಯಾ ನಾಯ್ಕ, ರೇಣುಕಾ ಪ್ರಕಾಶ ನಾಯ್ಕ,
ಕೋಲ್‍ಸಿರ್ಸಿ:_ ಕೆ ಆರ್ ವಿನಾಯಕ, ಗೋವಿಂದ ಬಿ ನಾಯ್ಕ, ಆನಂದ ಮಡಿವಾಳ, ವಿನಯ್‍ಎಸ್‍ಗೌಡರ್, ತಿಲಕಕುಮಾರ ನಾಯ್ಕ, ಮಹಾಬಲೇಶ್ವರ ನಾಯ್ಕ, ಗಣಪತಿಜಟ್ಟುಗೊಂಡ, ದುರ್ಗಮ್ಮ ವಿ ಮೇದಾರ್, ಉಮಾ ಪಿ ನಾಯ್ಕ. ಸುಮಾಎನ್ ನಾಯ್ಕ ,ಯಮುನಾಎಸ್ ಮಡಿವಾಳ, ಶ್ವೇತಾ ನಾಯ್ಕ, ವೀಣಾ ಕೆ ಕಾನಡೆ,
ಬಿದ್ರಕಾನ:- ಮಧುಕೇಶ್ವರ ಭಟ್‍ಜಯಂತ ಹೆಗಡೆ, ಮಂಜುನಾಥಗೌಡ, ಮಮತಾ ಸಿ ಹರಿಜನ್, ಸರೋಜಾ ಡಿ ನಾಯ್ಕ, ಬಾಬು ನಾಯ್ಕ, ಶ್ಯಾಮಲಾಗೌಡ, ಬಂಗಾರಿ ಸಿ ಹರಿಜನ್, ಸಾವಿತ್ರಿಗೌಡಾ,
ತಂಡಾಗುಂಡಿ;– ಪದ್ಮಾವತಿ ಎಂ ಗೌಡಾ, ಬೀರಾ ಕೆ ಗೌಡಾ, ಶಂಕುಂತಲಾ ಹರಿಜನ್ , ತಾರಾ ಹರಿಜನ್, ಮಂಜುನಾಥ ಬಿ ಹೆಗಡೆ, ಹುಲಿಯಾಆರ್‍ಗೌಡಾ, ರವೀಶಗೌಡಾ,
ಹೆಗ್ಗರಣೆ;- ನವೀನ್‍ಎನ್ ಹೆಗಡೆ, ಮಂಜುನಾಥ ಬಿ ಮಡಿವಾಳ ,ಸವಿತಾಗೌಡಾ, ಮಂಜುನಾಥ ಮಡಿವಾಳ, ಮಂಧುರಾ ಭಟ್, ರಾಘವೇಂದ್ರರಾಯ್ಕರ್, ಮಾರುತಿಚನ್ನಯ್ಯ, ಅಬ್ದುಲ್ ಸಾಬ್, ಸರೋಜಾರಾವ್,
ಕ್ಯಾದಗಿ;-ರಾಜಾರಾಮ ನಾಯ್ಕ, ರಾಮಕೃಷ್ಣ ಬಿ ನಾಯ್ಕ, ಶಾಂತಲಾ ನಾಯ್ಕ, ತ್ರೀವೆಣಿ ನಾಯ್ಕ, ರೇಣುಕಾಗೌಡಾ, ವೀಣಾ ಹಸ್ಲರ್, ಎಸ್‍ಎನ್ ಹೆಗಡೆ, ದತ್ತಾತ್ರೇಯ ಭಟ್, ಸರಸ್ವತಿ ಹಸ್ಲರ್,
ನಿಲ್ಕುಂದ;-ರಾಘವೇಂದ್ರಆರ್ ಹೆಗಡೆ, ರಾಜರಾಮ ಹೆಗಡೆ, ಮಂಗಲಾ ಮುಕ್ರಿ, ನೇತ್ರಾವತಿ ಮಡಿವಾಳ, ಪ್ರಭಾಕರ ಟಿ ಹೆಗಡೆ, ಸವಿತಾಚನ್ನಯ್ಯ,
ಅಣಲೇಬೈಲ್;-ರಾಜೀವ್ ಭಾಗ್ವತ್, ಪ್ರೇಮಾ ಹರಿಜನ್, ಮಂಗಲಾಹೆಗಡೆ, ಸುಜಾತಾ ನಾಯ್ಕ, ಯಶೋಧಾ ಮುಕ್ರಿ, ಮಹೇಶ ಗೌಡಾ, ಗೀತಾ ಹೆಗಡೆ, ಶ್ರೀಮತಿ ಭಟ್ಟ, ವೀಣಾಗೌಡಾ, ಚಣದ್ರಶೇಖರ್‍ಗೌಡಾ, ವೇದಾವತಿ ಶೇಟ್, ಯಂಕಾಗೌಡಾ, ದತ್ತಾತ್ರೇಯ ಹೆಗಡೆ,
ಇಟಗಿ;-ಮಹೇಶ ನಾಯ್ಕ, ಸಾವಿತ್ರಿ ತಳವಾರ, ಕನ್ನೆ ಮಂಜಾ ಹರಿಜನ್, ರಾಮಚಂದ್ರ ನಾಯ್ಕ, ಪಾರ್ವತಿ ಶಿವಕುಮಾರ, ಸುರೇಂದ್ರಜೆಗೌಡಾ, ವೆಂಕಟ್ರಮಣ ನಾರಾಯಣ ನಾಯ್ಕ, ಗೀರಿಜಾಎಲ್ ನಾಯ್ಕ,
ಸೋವಿನಕೊಪ್ಪಾ;-ರಾಧಾಗೌಡಾ, ಗೀರಿಶ ಶೇಟ್, ಕಲಾವತಿ ಹರಿಜನ್, ಮೋಹನ್‍ಗೌಡಾ, ಸುಮಾಗೌಡಾ, ಭವಾನಿ ಹಸ್ಲರ್, ರವಿ ಗೌರ್ಯಾ ನಾಯ್ಕ, ಗಣಪತಿಗೌಡಾ, ಸುರೇಖಾಎಸ್ ನಾಯ್ಕ,
ಇವರುಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಹಿನ್ನೋಟ 2020:

ಪ್ರತಿವರ್ಷದಂತೆ 2020ಕೂಡ ಹೊಸ ನಿರೀಕ್ಷೆ, ಕನಸುಗಳೊಂದಿಗೆ ಆರಂಭವಾಗಿತ್ತು. ಹೊಸ ವರ್ಷ ಆರಂಭವಾಗಿ ಎರಡೇ ತಿಂಗಳಲ್ಲಿ ಕೊರೋನಾ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟು ಸಾಮಾನ್ಯ ಜನರ ಜೀವನವನ್ನು ಹಿಂಡಿಹಿಪ್ಪೆ ಮಾಡಿತ್ತು. 

ಹಾಗೆ ಹೇಳಬೇಕೆಂದರೆ 2020 ಪ್ರತಿಭಟನೆಯಿಂದಲೇ ಆರಂಭವಾಯಿತು, ಡಿಸೆಂಬರ್ 12, 2019ರಿಂದ 2020 ಜನವರಿ 14ರವರೆಗೆ ಬೆಂಗಳೂರು ಸೇರಿದಂತೆ ಅಲ್ಲಲ್ಲಿ ಕೇಂದ್ರ ಸರ್ಕಾರದ ನಾಗರಿಕತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ನಾಗರಿಕತ್ವ ದಾಖಲಾತಿ(ಎನ್ ಆರ್ ಸಿ) ವಿರುದ್ಧ 82 ಪ್ರತಿಭಟನೆಗಳು ನಡೆದವು. 

ಬೆಂಗಳೂರಿನಲ್ಲಿ ನಾಗರಿಕತ್ವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ 19 ವರ್ಷದ ವಿದ್ಯಾರ್ಥಿನಿ ಅಮೂಲ್ಯ ಲಿಯೊನಾ ನೊರೊನ್ಹ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿ ಬಂಧನಕ್ಕೀಡಾಗಿ ಸುದ್ದಿಗೆ ಗ್ರಾಸವಾದಳು. ನಾಗರಿಕತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಡುವವರಿಗೆ ಅಮೂಲ್ಯ ಲಿಯೊನಾ ಮುಖವಾಣಿಯಂತಾದಳು.

ಭಾರತದಲ್ಲಿ ಕೊರೋನಾ ಮೊದಲ ಹಂತದ ಲಾಕ್ ಡೌನ್ ಆರಂಭವಾಗಿದ್ದು ಮಾರ್ಚ್ 25ರಂದು. ನಾಗರಿಕರು ಹೊರಗೆ ಓಡಾಡದಂತೆ ನೋಡಿಕೊಂಡು ಮನೆಯಲ್ಲಿಯೇ ಇರುವಂತೆ ಮಾಡುವುದು, ಅಗತ್ಯ ವಸ್ತುಗಳನ್ನು ನಾಗರಿಕರಿಗೆ ಪೂರೈಸುವುದು ಪೊಲೀಸರಿಗೆ ಸವಾಲಾಗಿತ್ತು. ಲಾಕ್ ಡೌನ್ ಸಮಯದಲ್ಲಿ ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾದವು. ಆದರೆ ಅಪರಾಧ ಕ್ರಮಗಳಲ್ಲಿ ಬದಲಾವಣೆ ಕಂಡವು. 

ಕುಖ್ಯಾತ ಭೂಗತದೊರೆ ರವಿ ಪೂಜಾರಿಯ ಗಡೀಪಾರು ಹೊಂದಿ ಬೆಂಗಳೂರಿಗೆ ಕಳೆದ ಫೆಬ್ರವರಿ 24ರಂದು ಕರೆತರಲಾಯಿತು. ಮತ್ತೊಬ್ಬ ಕರ್ನಾಟಕದ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಮೇ 15ರಂದು ಕ್ಯಾನ್ಸರ್ ನಿಂದ ನಿಧನ ಹೊಂದಿದರು.

ಬೆಂಗಳೂರಿನ ಡಿ ಜೆ ಹಳ್ಳಿ ಪ್ರಕರಣ: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ನಾಲ್ಕು ದಿನಗಳ ಮೊದಲು 2 ಸಾವಿರಕ್ಕೂ ಹೆಚ್ಚು ಮಂದಿ ಗಲಭೆಕೋರರು ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದವು. ಕಾಂಗ್ರೆಸ್ ಶಾಸಕ ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು ದುಷ್ಕರ್ಮಿಗಳು. ಅದೇ ದಿನ ರಾತ್ರಿ ನಡೆದ ಪೊಲೀಸ್ ಫೈರಿಂಗ್ ನಲ್ಲಿ ಮೂವರು ಪ್ರಾಣ ಕಳೆದುಕೊಂಡರು. ಈ ಸಂಬಂಧ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ತಂಡ ಪಿಎಫ್ಐ ಮತ್ತು ಎಸ್ ಡಿಪಿಐ ಸಂಘಟನೆಗಳ 17 ಮಂದಿಯನ್ನು ಬಂಧಿಸಿದರು.

ಡ್ರಗ್ಸ್ ಪ್ರಕರಣ: ನಂತರ ಕರ್ನಾಟಕದಲ್ಲಿ ತೆರೆದುಕೊಂಡಿದ್ದೇ ಮಾದಕದ್ರವ್ಯ ಜಾಲದ ನಂಟಿನ ಕರಾಳ ಮುಖ. ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿ ಹರಿದಾಡುತ್ತಿದೆ ಎಂಬ ಆರೋಪ ಕೇಳಿಬಂದು ಕೇಂದ್ರ ಅಪರಾಧ ನಿಗ್ರಹ ದಳ ಜಾಲ ಬೀಸಿತು, ತನಿಖೆ ಮಾಡುತ್ತಾ ಹೋದಂತೆ ಅದು ಸ್ಯಾಂಡಲ್ ವುಡ್ ವರೆಗೆ ಹಬ್ಬಿದೆ ಎಂದು ತಿಳಿದುಬಂತು.

ಆಗಸ್ಟ್ ತಿಂಗಳಲ್ಲಿ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ಮೊಹಮ್ಮದ್ ಅನೂಪ್, ರೆಜಿಶ್ ರವೀಂದ್ರನ್ ಮತ್ತು ಅನಿಖಾ ಎಂಬ ಆರೋಪಿಗಳನ್ನು ಬಂಧಿಸಿದರು. ಇವರು ಸೆಲೆಬ್ರಿಟಿಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದೆವು ಎಂದು ತನಿಖೆ ವೇಳೆ ಬಾಯಿಬಿಟ್ಟರು. ಆಗ ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ , ಸ್ಯಾಂಡಲ್ ವುಡ್ ನಲ್ಲಿ ಯಾರ್ಯಾರು ಮಾದಕ ವಸ್ತು ಸೇವಿಸುತ್ತಾರೆ, ಬಳಸುತ್ತಾರೆ, ಅಕ್ರಮ ದಂಧೆಯಲ್ಲಿ ಯಾರ್ಯಾರು ತೊಡಗಿದ್ದಾರೆ ಎಂದು ನಗರ ಅಪರಾಧ ದಳಕ್ಕೆ ಪಟ್ಟಿ ನೀಡುತ್ತೇನೆ ಎಂದು ಹೇಳಿ ಪೊಲೀಸರಿಗೆ ನೀಡಿದರು. 

ಆಗ ಬಂದ ಹೆಸರುಗಳೇ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ. ಸೆಪ್ಟೆಂಬರ್ ಆರಂಭದಲ್ಲಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದರೆ, ಕೆಲ ದಿನಗಳ ನಂತರ ಸಂಜನಾ ಕೂಡ ಬಂಧಿತರಾದರು. ನಂತರ ಅಕ್ಟೋಬರ್ 29ರಂದು, ಸಿಪಿಎಂ ಮಾಜಿ ನಾಯಕ ಕೊಡಿಯಾರಿ ಬಾಲಕೃಷ್ಣ ಅವರ ಪುತ್ರ ಬಿನೀಶ್ ಕೊಡಿಯಾರಿ ಬಂಧನವಾಯಿತು. ಈತ ಬಂಧನಕ್ಕೀಡಾಗಿದ್ದು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ. ಅನೂಪ್ ಡ್ರಗ್ ವಹಿವಾಟಿನಲ್ಲಿ ಬಿನೀಶ್ ಹಣ ಹೂಡಿಕೆ ಮಾಡಿದ್ದನು ಎಂಬ ಆರೋಪ.

ನಿಷೇಧಿತ ಡ್ರಗ್ಸ್ ಖರೀದಿಯಲ್ಲಿ ಕ್ರಿಪ್ಟೊಕರೆನ್ಸಿ ಮತ್ತು ಡಾರ್ಕ್ ನೆಟ್ ವ್ಯವಹಾರ ವ್ಯಾಪಕವಾಗಿ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂತು. ಇತ್ತೀಚೆಗೆ ಬಿಟ್ ಕಾಯಿನ್ ವಹಿವಾಟಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಉಜಿರೆಯ ಬಳಿಯಿಂದ ಬಾಲಕನೊಬ್ಬನ ಅಪಹರಣ ಕೂಡ ನಡೆಯಿತು. ಕೊನೆಗೆ ಆತ ಕೋಲಾರದಲ್ಲಿ ಸುರಕ್ಷಿತವಾಗಿ ಸಿಕ್ಕಿದನು,
ಕೊರೋನಾ ಆರ್ಥಿಕ ಸಂಕಷ್ಟದ ಮಧ್ಯೆ ತಕ್ಷಣವೇ ಸಾಲ ಪಡೆಯುವ ಆಪ್ ಹಗರಣ ನಡೆಯಿತು. ಇದರಡಿ ಸಾಕಷ್ಟು ಅಂಕಿಅಂಶಗಳ ಕಳ್ಳತನವಾಗಿದೆ. ಈ ಸಾಲ ಕೊಡುವ ಆಪ್ ನ್ನು ನಡೆಸುತ್ತಿದ್ದುದು ಚೀನಾ ಮೂಲದ ಕಂಪೆನಿಗಳು. 

2020ರಲ್ಲಿ ಮರೆಯಲಾಗದ ಅಪರಾಧ ಜಗತ್ತಿನ ದಿನಗಳು: 
ಫೆಬ್ರವರಿ 24: ಕಳೆದ ವರ್ಷ ಸೆನೆಗಲ್ ಗೆ ಗಡೀಪಾರು ಆಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಿ ನಂತರ ಕರ್ನಾಟಕ ಮೂಲದ ಅಧಿಕಾರಿಗಳು ಸೇರಿದಂತೆ ಭಾರತಕ್ಕೆ ಕರೆತರಲಾಯಿತು.

ಫೆಬ್ರವರಿ 22: ನಾಗರಿಕತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಉಪ್ಪಾರಪೇಟೆ ಪೊಲೀಸರಿಂದ ದೇಶದ್ರೋಹ ಕೇಸಿನಡಿ ಬಂಧನಕ್ಕೀಡಾದ 19 ವರ್ಷದ ವಿದ್ಯಾರ್ಥಿನಿ ಅಮೂಲ್ಯ ಲಿಯೊನಾ.

ಆಗಸ್ಟ್ 11: ದಕ್ಷಿಣ ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಬೆಂಕಿ ಗಲಭೆ ಪ್ರಕರಣ. ಸುಮಾರು 3 ಸಾವಿರ ಮಂದಿಯ ಉದ್ರಿಕ್ತ ಗುಂಪು ಪೊಲೀಸ್ ಠಾಣೆ ಮೇಲೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಬೆಂಕಿ ದಾಳಿ ಮಾಡಿ ಧ್ವಂಸಗೊಳಿಸಿತ್ತು. ರಾತ್ರಿ ನಡೆದ ಗಲಭೆಯಲ್ಲಿ ಮೂವರು ಮೃತಪಟ್ಟರು, ಶಾಸಕ ಶ್ರೀನಿವಾಸ ಮೂರ್ತಿಯವರ ಅಳಿಯ ನವೀನ್ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾದನು. 

ಸೆಪ್ಟೆಂಬರ್ 7: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲವನ್ನು ಬೇಧಿಸಿದ ಸಿಸಿಬಿ ಪೊಲೀಸರು ನಟಿಯರಾದ ಸಂಜನಾ ಗಲ್ರಾಣಿ ಮತ್ತು ರಾಗಿಣಿ ದ್ವಿವೇದಿಯನ್ನು ಬಂಧಿಸಿದರು. ನಂತರದ ದಿನಗಳಲ್ಲಿ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳ ಮಕ್ಕಳು, ಉದ್ಯಮಿಗಳ ಮಕ್ಕಳನ್ನು ತನಿಖೆ ನಡೆಸಲಾಯಿತು.

ಅಕ್ಟೋಬರ್ 15: ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸಾರ್ವಜನಿಕರ ಎದುರೇ ಅವರ ಬಾರ್ ಮುಂದೆ ಹತ್ಯೆ ಮಾಡಿದರು.

ಅಕ್ಟೋಬರ್ 17: ಐಎಂಎ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ಐಎಂಎಯಲ್ಲಿ ಹಣ ಕೂಡಿಟ್ಟು ಸಾವಿರಾರು ಮಂದಿ ಕೋಟಿಗಟ್ಟಲೆಯವರೆಗೆ ಹಣ ಕಳೆದುಕೊಂಡು ಬಂದಿದ್ದು ಪತ್ತೆಯಾಯಿತು. ಸಿಬಿಐ ಈ ಸಂಬಂಧ ನಾಲ್ಕು ಕೇಸುಗಳನ್ನು ದಾಖಲಿಸಿ ಹಲವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ಮಾಜಿ ಸಚಿವ ರೋಶನ್ ಬೇಗ್ ಬಂಧನಕ್ಕೀಡಾದರು. ಆರೋಪಪಟ್ಟಿಯಲ್ಲಿ ಹೆಸರು ಬಂದ ಬೆಂಗಳೂರು ನಗರ ಡಿಸಿ ವಿಜಯ್ ಶಂಕರ್ ಆತ್ಮಹತ್ಯೆ ಮಾಡಿಕೊಂಡರು.

ನವೆಂಬರ್ 9: 2019ರ ಆಗಸ್ಟ್ ನಲ್ಲಿ ಸರ್ಕಾರದ ಇ-ಪ್ರೊಕ್ಯೂರ್ ಮೆಂಟ್ ಮೂಲಕ 11 ಕೋಟಿ ರೂಪಾಯಿ ಕಳವು ಮಾಡಿದ ಆರೋಪದ ಮೇಲೆ 25 ವರ್ಷದ ಶ್ರೀಕೃಷ್ಣ ಅಲಿಯಾಸ್ ಶ್ರಿಕಿ ಬಂಧನಕ್ಕೀಡಾದನು. ಆನ್ ಲೈನ್ ಪೋಕರ್ ಸೈಟ್ ಗಳ ಮೂಲಕ ಬಿಟ್ ಕಾಯಿನ್ ಮತ್ತು ಹಣವನ್ನು ಎಗರಿಸುತ್ತಿದ್ದನು ಮತ್ತು ಡಾರ್ಕ್ ನೆಟ್ ಮೂಲಕ ಡ್ರಗ್ ಖರೀದಿಸುತ್ತಿದ್ದ ಎಂಬ ಆರೋಪ.

ನವೆಂಬರ್ 25: ಮಾಜಿ ಸಚಿವ ವರ್ತೂರು ಪ್ರಕಾಶ್ ಮತ್ತು ಅವರ ಚಾಲಕರ ಅಪಹರಣ. 30 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟ ಅಪಹರಣಕಾರರು, ನಂತರ ಸುರಕ್ಷಿತವಾಗಿ ಬಿಡುಗಡೆ.

ನವೆಂಬರ್ 28: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಸುರಕ್ಷಿತವಾಗಿ ಬಿಡುಗಡೆ.

ಡಿಸೆಂಬರ್ 29: ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *