

ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರು ಮಂಗಳವಾರ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಮೈಸೂರು: ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರು ಮಂಗಳವಾರ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಮೈಸೂರು ಹುಣಸಲೂರು ರಸ್ತೆಯಲ್ಲಿರುವ ಕೃಷಿ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಯು ಮಂಗಳವಾರ ಆಯೋಜಿಸಿದ್ದ ಸ್ವರಾಜ್ ಇಂಡಿಯಾ, ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಬೆಂಬಲಿತ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಗ್ರಾಮ ಅಭಿವೃದ್ಧಿಯಲ್ಲಿ ಸದಸ್ಯರ ಪಾತ್ರ ಕುರಿತು ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ಭೈರಪ್ಪ ವಿರುದ್ಧ ಕಿಡಿಕಾರಿದ ಅವರು, ದೆಹಲಿ ರೈತರ ಹೋರಾಟದಲ್ಲಿ ಪಂಜಾಬ್ ನವರು ಮಾತ್ರ ಭಾಗಿಯಾಗುತ್ತಿರುವುದಾಗಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಪಂಜಾಬ್ ಮಾತ್ರವಲ್ಲದೆ, ಉತ್ತರಾಖಂಡ, ಹರಿಯಾಣ ಸೇರಿದಂತೆ ಹಲವು ರಾಜ್ಯದ ಜನರು ಭಾಗಿಯಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಅವರಿಗೇಕೆ ತಿಳಿದಿಲ್ಲ? ಅವರಿಗೆ ಕಿವಿ ಕೇಳುತ್ತಿಲ್ಲವೇ? ಕಣ್ಣು ಕಾಣುತ್ತಿಲ್ಲವೇ? ಸಂವೇದನೆ ಇಲ್ಲವೇ? ಇದನ್ನೆಲಲಾ ಮಾಧ್ಯಮದವರು ಅವರಿಗೆ ತಿಳಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ರೈತರ ಪ್ರತಿಭಟನೆ ಪರಿಣಾಮಕಾರಿಯಾಗದೇ ಇರಬಹುದು. ಆದರೆ, ರೈತರೊಂದಿಗೆ ಕಾರ್ಮಿಕರು, ದಲಿತರು ಹಾಗೂ ಮಹಿಳೆಯರು ಕೈಜೋಡಿಸಿ ಪ್ರತಿಭಟನೆ ನಡೆಸುತ್ತಿರುವುದು ಹೆಚ್ಚಿನ ಮೌಲ್ಯವನ್ನು ನೀಡಿದೆ. ಈ ಪ್ರತಿಭಟನೆಯ ಸುಳ್ಳು, ದ್ವೇಶ ಹಾಗೂ ಅಸಹಿಷ್ಣುತೆಯ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಆಪರೇಷನ್ ಕಮಲದ ಮೂಲಕ ಬಿಜೆಪಿಯವರು ನೈತಿಕ ರಾಜಕಾರಣವನ್ನು ಅನೈತಿಕ ಮಾಡಿದ್ದಾರೆ. ರಾಜಕಾರಣದ ನೈತಿಕತೆಗೆ ವಿಷ ಹಾಕಿದ್ದಾರೆಂದ ಕಿಡಿಕಾರಿದ್ದಾರೆ.
ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ, ರೈತ ಸಂಘದ ಬೆಂಬಲ ಹೊಂದಿದ್ದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣಯಲ್ಲಿ ಗೆದ್ದಿರುವುದು ನಮಗೇ ಅನಿರೀಕ್ಷಿತ. ಇದು ಬದಲಾವಣೆಯ ಕಡಗೆ ನಮ್ಮ ಮೊದಲ ಹೆಜ್ಜೆಯಾಗಿದೆ. ಇದು ಸ್ವರಾಜ್ ಇಂಡಿಯಾ ಪಕ್ಷದ ಸಮತಾವಾದ, ಮೌಲ್ಯಗಳು, ಸಮಾಜಮುಖಿ ಆಶಗಳಿಗೆ ಸಂದ ಜಯ ಎಂದಿದ್ದಾರೆ.
ಈಗ ನೀವು ಸಾಧಿಸಿರುವ ಗೆಲುವು ಬಹಿರಂಗದ ಗೆಲುವು. ಇದರಿಂದ ನೀವು ಜವಾಬ್ದಾರಿಯ ನೊಗ ಹೊತ್ತಂತಾಗಿದೆ. ಮುಂದೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಯೋಚನೆ ಮಾಡಿ. ಇನ್ನು ಬೇರೆ ಪಕ್ಷಗಳು ನೀಡುವ ಆಮಿಷದ ಎದುರು ನೀವು ಗೆಲ್ಲಬೇಕ. ಅದು ನಿಜವಾದ ಗೆಲುವು. ನಿಷ್ಟೆಯಿಂದ ಒಳ್ಳೆಯ ಕೆಲಸ ಮಾಡಬೇಕು. ಗೆದ್ದವರು ಸೋತವರೊಂದಿಗೆ ವಿಶ್ವಾಸದಿಂದ ಇರಬೇಕೆಂದು ಕಿವಿಮಾತು ಹೇಳಿದ್ದಾರೆ. (kpc)

