ನೀನೇ ಕುಣಿಸುವೆ ಜೀವರನು……

ನೀನೇ ಕುಣಿಸುವೆ ಜೀವರನು
ಹೆಸರಿನ ಜೊತೆಗೇ ಭಾಗವತರಾಗಿದ್ದರು ನೆಬ್ಬೂರರು: ಕೆರೇಕೈ
(ಶಿರಸಿ:ಮೇ,20-) ನೆಬ್ಬೂರು ನಾರಾಯಣ ಭಾಗವತ್ ಅವರು ಹಾಡಿದ ಜನಪ್ರಿಯ ಪದ್ಯಗಳ ಪ್ರಸ್ತುತಿ, ಅವರ ಒಡನಾಟದ ಮೆಲಕು ಹಾಕುವ ಮೂಲಕ ನಗರದ ಯೋಗ ಮಂದಿರದಲ್ಲಿ ನೀನೆ ಕುಣಿಸುವೆ ಜೀವರನು ಗಾನ ಹಾಗೂ ವಚನ ನಮನ ಕಾರ್ಯಕ್ರಮ ಜರುಗಿತು.
ಅಗಲಿದ ಯಕ್ಷಗಾನದ ಮೇರು ಭಾಗವತ ನೆಬ್ಬೂರು ನಾರಾಯಣ ಭಾಗವತ ಅವರ ಸಂಸ್ಮರಣೆಯಲ್ಲಿ ರವಿವಾರ ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲೂಕಿನ ವಿವಿಧ ಸಂಘಟನೆಗಳಿಂದ ಕಲಾಭಿಮಾನಿಗಳು, ಒಡನಾಡಿಗಳು ಭಾವಪೂರ್ಣವಾಗಿ ನಮನ ಸಲ್ಲಿಸಿದರು.
ನುಡಿ ನಮನ ಸಲ್ಲಿಸಿದ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ನೆಬ್ಬೂರರ ಪ್ರೀತಿ, ಭಾಗವತರ ಕಲೆ ನಮಗೆ ಇಷ್ಟವಾಗಲು ಕಾರಣ. ಪ್ರೀತಿ ಇರಬೇಕು ಎಂಬ ನಿರ್ಬಂಧವಿಲ್ಲ. ನಿರ್ವಾಜ್ಯವಾಗಿ ಸಮಾಜವನ್ನು ಪ್ರೀತಿಸುವ ವಿಶಿಷ್ಟ ಅರ್ಹತೆ ಇತ್ತು. ಯಾವ ಕಾರಣಕ್ಕೆ ಒಡನಾಟಕ್ಕೆ ಬಂದರೂ ಪ್ರೀತಿಯಿಂದ ಕಟ್ಟು ಹಾಕುತ್ತಿತ್ತು. ಜಗಳ ಮಾಡಿದವರೂ ಭಾಗವತರನ್ನು ಮರೆಯಲು ಸಾಧ್ಯವಿಲ್ಲ. ಜೀವ ಕಲೆಯನ್ನು ತುಂಬಿಸುವ ಪ್ರೀತಿ ಅದು ಎಂದರು.
ಒಂದು ಮನೆಯ ಕೊರತೆಯನ್ನು ತೋರಿಸದೇ ಅದನ್ನು ದಾಟುವ ಇಂಥ ಆದರ್ಶ ಗೃಹಸ್ಥರನ್ನು ನಾನು ನೋಡಿಲ್ಲ. ಇದು ಅನುಕರಣೀಯ ಸಂಸ್ಕಾರ. ಜೀವನ ಮಾದರಿಯಾಗಿದ್ದವರು. ತುಂಬಾ ಜನರಿಗೆ ಅವರಾಗಿ ಸಹಾಯ ಮಾಡಿದ್ದರು ಎಂದ ಅವರು, ನೆಬ್ಬೂರು ಭಾಗವತರ ಭಾಗವತಿಕೆ ಬಗ್ಗೆ ಮಾತನಾಡಲು ಧೈರ್ಯ ಹಾಗೂ ಅನುಭವ ಬೇಕು. ಏಕೆಂದರೆ ಅವರು 2 ವರ್ಷ ಮಾತ್ರ ಸಂಗೀತ ಮಾಡಿ 63 ವರ್ಷ ಭಾಗವತಿಕೆ ಮಾಡಿದವರು. ಅವರ ಹೆಸರಿನ ಜೊತೆ ಭಾಗವತ ಎಂಬುದೂ ಸೇರುವಷ್ಟು ಒಂದಾಗಿದ್ದರು ಭಾಗವತಿಕೆಯಲ್ಲಿ. ಅವರ ಮಾದರಿ ಶ್ರೇಷ್ಠವಾದದ್ದು. ತೆರೆದ ಕಂಠದ ಭಾಗವತರು ಅವರು ಎಂದೂ ಬಣ್ಣಿಸಿದರು.
ಸಂಕಲ್ಪದ ಮುಖ್ಯಸ್ಥ ಪ್ರಮೋದ ಹೆಗಡೆ ಯಲ್ಲಾಪುರ ನೆಬ್ಬೂರರು ಸರಳ. ಭಾಗವತಿಕೆಯಲ್ಲಿ ಶ್ರೀಮಂತಿಕೆ ಇದ್ದವರು. ಅವರ ನೆನಪನ್ನು ಪ್ರತೀ ವರ್ಷ ಮಾಡಕೊಳ್ಳಬೇಕು. ನೆಬ್ಬೂರರು ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ನೆನಪಿಡುವ ಕಾರ್ಯ ಮಾಡಬೇಕು. ಅಗೋಚರ ಕುಟುಂಬ ಇದೆ. ಕಲಾವಿದರ, ಯಕ್ಷಗಾನ ಕುಟುಂಬ ಅದು. ನಮ್ಮ ಕುಟುಂಬದ ಹಬ್ಬ ಮಾಡಬೇಕು. ಜಬ್ದಾರಿಯುತವಾಗಿ ಯಕ್ಷಗಾನ ಕುಟುಂಬ ಒಂದಾಗಬೇಕು. ಹೊಸ ಸೃಷ್ಟಿ ಬಹಳ ಕಡಿಮೆ ಆಗಿದೆ. ಕಳೆದುಕೊಳ್ಳುವುದು ಹೆಚ್ಚಾಗಿದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಮಾತನಾಡಿ, ನೆಬ್ಬೂರರ ನೆನಪೇ ಇಲ್ಲಾಗಬೇಕು. ಅದಕ್ಕೇ ಕಟುವಾಗಿ ಹೇಳಬೇಕು. ನಾನು ಅಲ್ಲ, ನಮ್ಮಂತಹ ಹಲವಾರು ಜನರನ್ನು ಸಿದ್ಧಗೊಳಿಸಿದ ಅವಿಸ್ಮರಣೀಯ ಎಂಬ ರೀತಿಯಲ್ಲಿ ಪ್ರಭಾವ ಬೀರಿದ ನೆಬ್ಬೂರರಗೆ ಕುಸುಮ ಅರ್ಪಿಸಬೇಕು. ಔಚಿತ್ಯ ಬಂಧಕ್ಕೆ ಕಟ್ಟು ಬಿದ್ದವರು. ಪದ್ಯವನ್ನು ಅನಗತ್ಯ ವಿಸ್ತಾರ ಮಾಡಿಲ್ಲ. ಭಾಗವತರಲ್ಲಿ ಎರಡು ಮಾದರಿ. ಬುದ್ಧಿಯಿಂದ ಭಾಗವತರು. ಹೃದಯದಿಂದ ಭಾಗವತರು. ಹೃದಯದ ಭಾಗವತಿಕೆಯಲ್ಲಿ ಗೆದ್ದವರು ಎಂದರು.
ಉದ್ಯಮಿ ಆರ್.ಜಿ.ಭಟ್ಟ ವರ್ಗಾಸರ ಉಪಸ್ಥಿತರಿದ್ದರು. ಜಯರಾಮ ಹೆಗಡೆ, ಆರ್.ಎಂ.ಹೆಗಡೆ ಕಾನಗೋಡ, ನೇತ್ರಾವತಿ ಹೆಗಡೆ, ವಿ.ಆರ್.ಹೆಗಡೆ, ಹಿತ್ಲಕೈ ಗಣಪತಿ ಹೆಗಡೆ, ಜಿ.ಎನ್.ಹೆಗಡೆ ಹಾವಳಿಮನೆ, ಇತರರು ನುಡಿ ನಮನ ಸಲ್ಲಿಸಿದರು. ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ಸಂಘಟಕ ನಾಗರಾಜ್ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ದೀಕ್ಷಿತ ವಂದಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ವಂದಿಸಿದರು.
ಗಾನ ನಮನ:
ನೀನೇ ಕುಣಿಸುವೆ ಜೀವರನು, ನೋವು ನಲಿವಿನ ಜೀವನ ಕಂಡಾಯ್ತು, ಇಳಿದ ಪ್ರಶಾಂತದಲಿ.., ಚೆಲುವರನ್ನು ನೋಡಿದರೆ, ರಂಗ ನಾಯಕ ಸೇರಿದಂತೆ ನೆಬ್ಬೂರರ ಇಷ್ಟದ ಪದ್ಯಗಳನ್ನು ಹೆಸರಾಂತ ಭಾಗವತರಾದ ಕೇಶವ ಹೆಗಡೆ ಕೊಳಗಿ, ಶಂಕರ ಬ್ರಹ್ಮೂರು, ಶಂಕರ ಭಾಗವತ್, ಪ್ರಸನ್ನ ಹೆಗ್ಗಾರ ಸಹಕಾರ ನೀಡಿದರು.
ಯೋಗ ಮಂದಿರ, ಯಕ್ಷ ಶಾಲ್ಮಲಾ, ನೆಬ್ಬೂರು ಪ್ರತಿಷ್ಠಾನ, ವಿಶ್ವಶಾಂತಿ ಸೇವಾ ಟ್ರಸ್ಟ, ಹವ್ಯಕ ಕ್ಷೇಮಾಭಿವೃದ್ಧಿ ಟ್ರಸ್ಟ, ಸಂಕಲ್ಪ ಯಲ್ಲಾಪುರ, ಮಾತೃ ಮಂಡಳಿ ಸ್ವರ್ಣವಲ್ಲೀ, ಶಬರ ಸಂಸ್ಥೆ ಸೋಂದಾ, ಸಾಮ್ರಾಟ್ ಹೋಟೆಲ್, ಯಕ್ಷ ಸಂಭ್ರಮ, ನಾದ ಶಂಕರ, ಯಕ್ಷ ಭಾರತೀ, ಹೆಕ್ಷ ಗೆಜ್ಜೆ, ಅಂಕ ಸಂಸಾರ, ಯಕ್ಷ ಶುಭೋದಯ, ಗೆಳೆಯರ ಬಳಗ ಭೈರುಂಬೆ, ಯಕ್ಷಸಿರಿ ವಾನಳ್ಳಿ, ಯಕ್ಷ ಸಂಗಮ ಆದರ್ಶ ವನಿತಾ ಸಮಾಜ, ಯಕ್ಷ ಕಿರಣ ಕೋಳಿಗಾರ, ಅನಂತ ಯಕ್ಷಕಲಾ ಪ್ರತಿಷ್ಠಾನ ಸಿದ್ದಾಪುರ, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ ಕಲಗದ್ದೆ, ಒಡ್ಡೋಲಗ, ಯಕ್ಷ ಚಂದನ ದಂಟ್ಕಲ್, ರಾಯಸಂ ಮಂಚಿಕೇರೆ ಇನ್ನಿತರ ಸಂಘಟನೆಗಳು ಸಹಕಾರ ನೀಡಿದ್ದವು.

ಭಾವ ಅರಿತು, ಸಂಕೀರ್ಣ ಸ್ಥಿತಿ ಅರಿತು ಹಾಡಿದವರು ನೆಬ್ಬೂರರು. ಇಡೀ ಸನ್ನಿವೇಶ ತುಂಬಿಕೊಂಡು ಹಾಡಿ ಜನ ಮಾನಸದಲ್ಲಿ ನಿಂತವರು. ನೆಬ್ಬೂರರಂತೆ ಹಾಡಲು ಸಾಧ್ಯವಿಲ್ಲ.

  • ಪ್ರೋ. ಎಂ.ಎ.ಹೆಗಡೆ ದಂಟ್ಕಲ್, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ ಭಾಗವತಿಕೆಯಲ್ಲಿ ಪ್ರತ್ಯೇಕತೆ ಮನಸ್ಸೇ ಹೊರತು ಪಾತ್ರದ ಭಾವ ತೋರಿಸುವದಿಲ್ಲ. ಯಕ್ಷಗಾನದ ಪಾರಂಪರಿಕ ಆಕರ ವ್ಯಕ್ತಿ ಆಗಿದ್ದವರು ನೆಬ್ಬೂರರು.- ವಿ.ಉಮಾಕಾಂತ ಭಟ್ಟ ಕೆರೇಕೈ, ವಿದ್ವಾಂಸ

ಯಕ್ಷಗಾನ ಕಲಾವಿದರನ್ನೂ ಜೋಡಿಸುವ ಕಾರ್ಯ ನೆಬ್ಬೂರರು ಮಾಡಿದ್ದರು.

  • ಪ್ರಮೋದ ಹೆಗಡೆ ಯಲ್ಲಾಪುರ, ಸಂಕಲ್ಪ

ನೆಬ್ಬೂರು ಪ್ರತಿಷ್ಠಾನದಿಂದ ನೆಬ್ಬೂರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಯೋಜಿಸಿದ್ದೇವೆ.

  • ಜಿ.ಎನ್.ಹೆಗಡೆ ಹಾವಳಿಮನೆ, ಪ್ರತಿಷ್ಠಾನದ ಅಧ್ಯಕ್ಷರು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *