ಸಾಹಿತ್ಯದ ಪ್ರೇಮ ಪತ್ರ

ಜಯಂತರ ಸಾಹಿತ್ಯದ ಪ್ರೇಮ ಪತ್ರ
(ಪ್ರೀತಿಯಷ್ಟೇ ಅಲ್ಲ)
ಗೆಳತಿ,
ಪುಣ್ಯ
ಮಂತ್ರಿ ಮಹಾಶಯರ ಕಾರಿನ
ಹಿಂದಿನ ಸೀಟಿನಲ್ಲಿ
ಮುದುಡಿ ಕೂತಿದ್ದವು
ಹಾರದ ಹೂ
ಕಲ್ಲು ದೇವರ ಗುಡಿಗೋ ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ ಸಲ್ಲಲೂ ಪುಣ್ಯ ಬೇಕು!
(ಕೋಟಿತೀರ್ಥ)
ಇದೊಂದು ಚಿಕ್ಕ ಕವಿತೆ.
ಚಿಕ್ಕ ಕವಿತೆಗಳನ್ನು ಬರೆಯುವುದನ್ನು ಸೇರದ ಪ್ರಸಿದ್ದ ಸಾಹಿತಿಯೊಬ್ಬರ ಇನ್ನೊಂದು ಚಿಕ್ಕ ಕವನ ಕೇಳು (ಓದು)
ಅರ್ಥ
ನಿನ್ನ
ಮೈ ತುಂಬ
ಶಬ್ಧಾಕ್ಷರ ಚಿನ್ಹ ಪ್ರಶ್ನಾರ್ಥಕಗಳ
ಮುಳ್ಳು ಚುಚ್ಚಿ,
ಅರ್ಥಕ್ಕಾಗಿ ಕಾದು ಕೂತೆ
ಏನೂ ಹೊರಡಲಿಲ.್ಲ
ತಾಳ್ಮೆಗೆಟ್ಟು ಎಲ್ಲ
ಕಿತ್ತೊಗೆದು
ನಿನ್ನ
ಬೋಳು ಮೈ ತೊಳೆದು
ಚೊಕ್ಕ ಒರೆಸಿ,
ಹಗುರಾಗಿ ಮೀಟಿದೆ
ಹೌದೆ ಕವಿತಾ !!
ಒಮ್ಮೆಗೇ ಹೊಳೆದು ಹೋಯಿತು
ನಿನ್ನದೆ
ಅಥವಾ ನನ್ನದೆ?
ಈ ಕವಿತೆ ಓದಿದ ಮೇಲೂ ಈ ಕವಿ, ಸಾಹಿತಿ ಯಾರೆಂದು ಅರ್ಥವಾಗಲಿಲ್ಲವಲ್ಲ!
ಹೋಗಲಿ, ಅವರ ‘ದಗಡೂ ಪರಬನ’ ಕಥೆ ಓದಿದ್ದೀಯಾ?
ಕನ್ನಡದ ರೋಮಾಂಚಕ ಕಥೆಗಳಲ್ಲಿ ಒಂದದು. ಇರಲಿ, ಈ ಹಾಡು ಕೇಳು, ನನ್ನ ಪ್ರೀತಿಯ ಹಾಡಿದು’
ತುಟಿಗಳಾ ಹೂವಲಿ, ಆಡದ
ಮಾತಿನ ಸಿಹಿ ಇದೆ.
ಮನಸಿನಾ ಪುಟದಲಿ,
ಕೇವಲ ನಿನ್ನದೆ ಸಹಿ ಇದೆ.
ಹಣÉಯಲಿ ಬರೆಯದ ನಿನ್ನಯ ಹೆಸರನು
ಹೃದಯದಿ ನಾನೇ ಕೊರೆದಿರುವೆ. ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ………
ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗೇ ಬಂದವಳೆಂದು.
ಆಹಾ.. ಎಂಥ ಮಧುರ ಯಾತನೆ, ಕೊಲ್ಲು ಹುಡುಗಿ ಒಮ್ಮೆ ನನ್ನಾ ಹಾಗೆ ಸುಮ್ಮನೆ……
ಸುರಿಯುವ ಸೋನೆಯು, ಸೂಸಿದೆ ನಿನ್ನದೆ ಪರಿಮಳ.
ಇನ್ಯಾರ ಕನಸಿಗೂ, ನೀನು ಹೋದರೆ ತಳಮಳ.
ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ.
ನಾ ಖೈದಿ ನೀನೇ ಸೆರೆಮನೆ
ತಪ್ಪಿ ನನ್ನ ಅಪಿÀ್ಪಕೊ ಒಮ್ಮೆ ಹಾಗೇ ಸುಮ್ಮನೆ…….
ಈ ಹಾಡು ಕೇಳದವರುಂಟೇನೆ?
ಸ್ವಪ್ನ ಸುಂದರಿ.
ನಾನು ಆಗತಾನೇ ಪತ್ರಿಕೋದ್ಯಮಕ್ಕೆ ಎಂಟ್ರಿಹೊಡೆದಿದ್ದೆ. ಜಯಂತರ ಮಾತು, ಕಥೆ – ಕವಿತೆಗಳೆಂದರೆ….. ನನಗೆ ಕುತೂಹಲ, ಪ್ರೀತಿ- ಸೆಳೆತ, ಅಸಂಖ್ಯ ಅಭಿಮಾನಿಗಳಂತೆ ನಾನೂ ಜಯಂತರನ್ನು ಪರಿಚಯಿಸಿಕೊಂಡೆ. ಸಭÉ ಸಮಾರಂಭದಲ್ಲಿ ಹೀಗೇ ಸಿಕ್ಕು ಹಾಗೇ (ಮಾಯವಾಗಿದೆ…. ಮನಸು ಹಾಗೆ ಸು..ಮ್ಮನೆ!) ಮರೆಯಾಗುತ್ತಿದ್ದ ಜಯಂತ್ ಈ ಟಿ.ವಿಯ ನನ್ನ ವರದಿಗಳನ್ನು ಗಮನಿಸಿದ್ದರು, ನಮ್ಮ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷರಾದ ರೋಹಿದಾಸ ನಾಯಕ, ಜಯಂತಣ್ಣ ಸೇರಿದಂತೆ ಬಹುತೇಕ ನನ್ನ ಹಿರಿಯ ಮಿತ್ರರಿಗೆ ಈ ಟಿ,ವಿಯೇ ನನ್ನನ್ನು ಪರಿಚಯಿಸಿದ್ದು.
ನಮ್ಮ ಪತ್ರಿಕೋದ್ಯಮದ ಆರಂಭಿಕ ಆಸಕ್ತಿಯ ದಿನಗಳಲ್ಲೇ ಗೌರೀಶ್ ಕಾಯ್ಕಿಣಿ, ಆರ್, ವಿ ಭಂಡಾರಿ, ಬಿ.ವಿ ನಾಯಕರೆಲ್ಲಾಕಾಲವಾದರು. ಈ ಎಲ್ಲರÀ ಬಗ್ಗೆ ಜಯಂತರಿಂದ ಕೇಳಿದೆ. ಅವರ ಕಥೆ- ಅಂಕಣ ಬರಹಗಳನ್ನು ಓದಿದೆ, ಅವರ ನಿರೂಪಣೆ-ಸಂದರ್ಶನಗಳ ಕಾರ್ಯಕ್ರಮಗಳನ್ನೆಲ್ಲಾ ನೋಡಿದೆ, ಜಯಂತ್ ಎಲ್ಲಾ ಕಡೆ ತಾಜಾತಾಜಾ
ನಾನು ಕೂಡಾ ಅವರ ಹಾಡು- ಕಥೆಗಳ ಹುಚ್ಚು ಅಭಿಮಾನಿ.
ಹೊನ್ನಾವರದ ಕಾರ್ಯಕ್ರಮದಲ್ಲಿ ಜಯಂತರಿಗೆ ಅಭಿಮಾನದಿಂದ ‘ಸರ್ ನೀವು 50+ಆದರೆ, ನಿಮ್ಮ ಪ್ರೇಮಗೀತೆ! ಅದ್ಹೇಗೆ ಸಾಧ್ಯ ಸಾರ್? ಎಂದು ಪೆದ್ದುಪೆದ್ದಾಗಿ ಪ್ರಶ್ನಿಸಿದ್ದೆ. ಅದಕ್ಕುತ್ತರಿಸಿದ ಜಯಂತ್ ಯಾರಿಗೂ ಹೇಳ್ಬೇಡ ಎನ್ನುವ ರೀತಿಯಲ್ಲಿ
‘ಪ್ರೇಮ, ಈಗೆಲ್ಲಾ ನೀವು ಅದನ್ನು ಮಾಡೋದು, ನಾವು ಬರಿಯೋದು…. ಕೊರೆಯೋದು’ ಎಂದು ಸಹಜವಾಗಿ ನಕ್ಕಿದ್ದರು.
ಪ್ರೀಯೆ,
ಜಯಂತರ ಅಸಂಖ್ಯ ಹಾಡುಗಳನ್ನು ಕೇಳಿರುವ ನಿನಗೆ ಏನೆನಿಸುತ್ತಿದೆ ಅವರ ಬU.É್ಗ ಮಳೆ ಬರುವ ಹಾಗಿದೆ….! ಈ ಸಂಜೆ ಯಾಕಾಗಿದೆ ಅಂತೂ ಇಂತೂ… ಪ್ರೀತಿ ಬಂತು,,,,,,,,,, !
ಹೀಗೆ ಅವರು ಬರೆದ ಹಾಡುಗಳಲ್ಲೆಲ್ಲಾ ಪ್ರೀತಿಯ ಝಲಕ್, ಪ್ರೇಮಾರಾಧನೆಯ ಸೊಗಸು ವಿಜೃಂಭಿಸುತ್ತದೆ, ಇಂಥ ಜಯಂತರ ಇನ್ನೊಂದು ಹಾಡು ಓದು,(ಕೇಳು)ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೆ ಮಾತೇ ಮರೆವೆನು.
ಕ್ಷಮಿಸು ನೀ ಕಿನ್ನರೀ…. ನುಡಿಸಲೆ ನಿನ್ನನು.
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು.
ನಿನ್ನ ಮನದ ಕವಿತೆ ಸಾಲ
ಪಡೆವ ನಾನು ಸಾಲಗಾರ. ಕನ್ನ ಕೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾg.À
ನನ್ನದೀ ವೇದನೆ, ನಿನಗೆ ನಾ ನೀಡೆನು.
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು.
ಮಿಂಚಾಗಿ ನೀನು ಬರಲು
ನಿಂತಲ್ಲಿಯೇ ಮಳೆಗಾಲ.
ಬೆಚ್ಚಗೆ ನೀ ಜೊತೆಗಿರಲು
ಕೂತಲ್ಲಿಯೇ ಚಳಿಗಾಲ.
ವಿರಹದಾ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ. ಇನ್ನೆಲ್ಲಿ ನನಗೆ ಉಳಿಗಾಲ?
ಕೇಳದ್ಯಾ ಎಂಥಾ ಕಲ್ಪನೆ, ಏನೇನು ಯೋಚನೆ. ಅಕ್ಷರ ವ್ಯವಹಾರದ ನನಗೆ ನಿನ್ನಂಥವರು ಬಹಳ ಜನ ಚಂದಾದಾರರು. ಆದರೆÀ ಚಂದಾ ಬಾಕಿ ನೀಡಲು ಬಂದೇ ಬರುವೆ ಎನ್ನುವ ಭರವಸೆ ನಿನ್ನದು ಮಾತ್ರ ! ನಾನಂತೂ ನೇರ (ಹೃದಯದ) ವರದಿಗಾರ. ನಿನ್ನ ಕಂಡ ಕ್ಷಣದಲ್ಲಂತೂ ಮಾತು-ಕತೆ ಎಲ್ಲವನ್ನೂ ಮರೆಯುತ್ತೇನೆ. ಇಂಥ ನನ್ನ ಅನುಭವಗಳನ್ನು ಜಯಂತ್ ಅದ್ಹೇಗೆ ಗ್ರಹಿಸಿದರೇ?
ಮುಂಗಾರು ಮಳೆಯ ವಿಚಾರದಲ್ಲೂ ಹಾಗೇ ಸುರಿಯುವ ಸೋನೆ ಮಳೆ ನಿನ್ನ ಪರಿಮಳವನ್ನೇ ಸೂಸುತ್ತೆ, ಹಾಗೇ ಪ್ರಪಂಚದಲ್ಲಿ ಅನುಮಾನವಿಲ್ಲದ
ಪ್ರೀತಿಯೇ ಇಲ್ಲವಂತೆ, ನೀನೂ ನನಗೆ ಅನುಮಾನದ ಪ್ರಾಣಿ, ದುಷ್ಟ! ಅಂದೆಲ್ಲಾ ಅದೆಷ್ಟು ಬಾರಿ ಬೈದು ಮುನಿಸಿ ಕೊಂಡಿದ್ದೀಯೋ?
ಕೇಳು, ಸಂಶಯ,ಅನುಮಾನ, ಪ್ರೀತಿಯ ರೋಗಗಳು, ಬಾಧೆಗಳು ಎಂಬುದನ್ನು ನಮ್ಮ ಕವಿ ಹೇಗೆ ಚಿತ್ರಿಸುತ್ತಾರೆ.
ಇನ್ನ್ಯಾರ ಕನಸಿಗೂ ನೀನು ಹೋದರೆ ತಳಮಳ. ಹಣೆಯಲಿ ಬರೆಯದ ನಿನ್ನಯ ಹೆಸರನು ಹೃದಯದಿ ನಾನೇ ಕೊರೆದಿರುವೆ…. ನನ್ನ ಹೆಸರ ಕೂಗೆ ಒಮ್ಮೆ ಹಾಗೆಸುಮ್ಮನೆ…..!
ಜಾನು,
ಜಯಂತಣ್ಣನ ಇನ್ನೊಂದು ಕವನ ಓದು.
ಅಣ್ಣಾ ನೆನಪಿದೆಯೆ ಅಂತ ಕೇಳಬೇಡ ತಾಯೀ ಪದವಿಲ್ಲದಾಗಲೇ ಕದವಿಲ್ಲದಾಗಲೇ ಒಂದಾಗಿದ್ದೇವೆ. ಎಲ್ಲ
ಮೌನ ಅಂದಾಕ್ಷಣ ಮೌನ ಇಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *