ಈವರೆಗೆ ಸೆರೆ ಸಿಕ್ಕವರು…೫ ಉಳಿದವರು ೨.. ಹುಡುಗಾಟದ ಪುಂಡರ ತಂಡ ಆರೆಸ್ಟ್, ಸಮಾಜಸೇವಕರಿಗೆ ನಡುಕ!

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ ….

ಸೊರಬಾ ತೌಡತ್ತಿ ಆತ್ಮಹತ್ಯೆ ಪ್ರಕರಣದ ಸುರುಳಿ ಮುಂದುವರಿಯುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳಾ ಗಿ ತಲೆಮರೆಸಿಕೊಂಡಿದ್ದ ಒಟ್ಟೂ 7 ಜನರಲ್ಲಿ ಇಬ್ಬರು ಬಂಧನ ಕ್ಕೊಳಗಾಗಿ 24 ಗಂಟೆಯೊಳಗೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟೂ 5 ಜನರ ಬಂಧನವಾದಂತಾಗಿದೆ. ಇದೇ ಪ್ರಕರಣದಲ್ಲಿ ಕನಿಷ್ಠ ಇನ್ನಿಬ್ಬರು ಸೇರಿದಂತೆ ಮತ್ತಷ್ಟು ಜನರು ಸೆರೆಯಾದರೆ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ. ಎರಡು ಜನ ವಕೀಲರು, ಇಬ್ಬರು ಪೊಲೀಸ್ ಸೇರಿದಂತೆ ಒಟ್ಟೂ ಒಂದು ಡಜನ್ ವ್ಯಕ್ತಿಗಳ ಹಿಂದೆ ಬಿದ್ದಿರುವ ಸರಣಿ ತನಿಖೆ ಪತ್ತೆಧಾರಿ ಕಥೆಯಂತೆ ದಿನದಿಂದ ದಿನಕ್ಕೆ ಕುತೂಹಲ ಪೇರಿ ಸುತ್ತಿದೆ.

ಕಳೆದ ವಾರದಿಂದ ಪ್ರಾರಂಭವಾಗಿದ್ದ ಈ ಪ್ರಕರಣದ ತನಿಖೆಯ ಹಲವು ಕೋನಗಳ ವಿದ್ಯಮಾನ ಮೊದಲು ಆತ್ಮಹತ್ಯೆ, ನಂತರ ರಾಜಕೀಯ ನಾಯಕರ ಮೇಲಾಟ, ಹಿರಿಯ ಅಧಿಕಾರಿಗಳ ಒತ್ತಡದ ನಂತರ ೩+೪ ಒಟ್ಟೂ ಏಳು ಜನರಿಗಾಗಿ ಹುಡುಕಾಟ, ಸುಲಭವಾಗಿ ಸಿಕ್ಕ ಇಬ್ಬರ ನಂತರ ತಮಿಳುನಾಡಿನಲ್ಲಿ ಮೂವರ ಬಂಧನ ಹೀಗೆ ಸಾಗಿದ ತನಿಖೆಯ ಜಾಡು ಈಗ ಮತ್ತಿಬ್ಬರಿಗಾಗಿ ಹುಡುಕಾಟದಲ್ಲಿ ತೊಡಗಿದೆ.

ಅಂದಹಾಗೆ… ಈ ವರೆಗೆ ಬಂಧಿತರಾದವರು ಲೋಕೇಶ್‌, ಚರಣ, ಮನೋಜ್‌, ಶಿವಕುಮಾರ್‌ ಮತ್ತು ಹೇಮಂತ್‌ ಇವರಲ್ಲಿ ಶಿವಕುಮಾರ ಮತ್ತು ಹೇಮಂತ್‌ ಸುಲಭವಾಗಿ ಪೊಲೀಸರಿಗೆ ಸೆರೆಯಾದರೆ, ಪರಾರಿಯಾದ ಮೂವರು ತಮಿಳುನಾಡಿನ ಗಡಿಯಿಂದ ಬೀದರ್‌ ತಲುಪಿ ಅಲ್ಲಿ ರೈಲು ನಿಲ್ಧಾಣದಲ್ಲಿ ಪೊಲೀಸರಿಗೆ ಸಿಕ್ಕಿದ್ದಾರೆ. ಇನ್ನಿಬ್ಬರ ಶೋಧಕ್ಕಾಗಿ ತನಿಖೆ ಪ್ರಾರಂಭಿಸಿರುವ ಪೊಲೀಸರು ಈವರೆಗೆ ಮೂವರು ರಾಜಕಾರಣಿಗಳನ್ನು ಒಬ್ಬರು ವಕೀಲರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ.

ಆರೋಪಿಗಳ ಪರ ವಕಾಲತ್ತು, ಜಾಮೀನಿಗೆ ಪ್ರಯತ್ನಿಸುತ್ತಿರುವ ವಕೀಲರೊಬ್ಬರು ಹಿರಿಯ ರಾಜಕಾರಣಿಗಳಿಗೆ ದುಂಬಾಲು ಬಿದ್ದು ʼಅರಿಯದೆ ಮಾಡಿದ ಹುಡುಗರ ಹುಡುಗಾಟ ಇದು ಈ ಬಾರಿ ಮನ್ನಿಸಿದರೆ ಮುಂದೆ ಇಂಥ ಘಟನೆ ನಡೆಯದಂತೆ ನಾವೇ ಮುಂಜಾಗ್ರತೆ ವಹಿಸುತ್ತೇವೆ ಎನ್ನುತಿದ್ದಾರಂತೆ! ವಕೀಲರು, ರಾಜಕಾರಣಿಗಳ ರಕ್ಷಣೆ ಪಡೆಯುವ ಈ ತಂಡ ಈ ಹಿಂದೆ ಹುಡುಗಾಟವೆಂದೇ ವಾಲಿಬಾಲ್‌ ಜಗಳ, ರಸ್ತೆ ಮೇಲೆ ಓಡಾಡುವ ವಾಹನ ಸವಾರರಿಗೆ ಧಮಕಿಹಾಕುವುದು ಸೇರಿದಂತೆ ಕೆಲವು ಪುಂಡಾಟ ಮಾಡಿ ಮರಿ ಪುಡಾರಿಗಳ ನೆರವು ಪಡೆದು ಬಚಾವಾಗಿತ್ತು ಎನ್ನಲಾಗಿದೆ. ಇವರಲ್ಲಿ ಕೆಲವರು ನಿರ್ಲಕ್ಷ, ಬೇಜವಾಬ್ಧಾರಿ ಕಾರಣಕ್ಕೆ ಸೇನಾ ನೇಮಕಾತಿ, ಪೊಲೀಸ್‌ ಭರ್ತಿಗಳಲ್ಲಿ ನಿರಾಕರಣೆಗೊಳಗಾದವರು ಎನ್ನುವುದು ವಿಶೇಶ!

ರಸ್ತೆ ಮೇಲೆ ಸಜ್ಜನ ವಾಹನ ಸವಾರರನ್ನು ಹೆದರಿಸುವುದು, ಕಾರ್ಯಕ್ರಮ, ಕ್ರೀಡಾಚಟುವಟಿಕೆಗಳಲ್ಲಿ ಖ್ಯಾತೆತೆಗೆದು ಗಲಾಟೆ ಮಾಡುವುದು, ಅರಣ್ಯ ಮಧ್ಯದಲ್ಲಿ ಅಡಗಿ ಒಬ್ಬಂಟಿಗಳನ್ನು ಹೊಡೆದು, ರಾಜಕೀಯ ನಾಯಕರ ನೆರವು ಪಡೆದು ಬಚಾವಾಗುವುದು ಮಾಡುತಿದ್ದ ಈ ಪುಂಡರಿಗೆ ಕೆಲಸ, ಉದ್ಯೋಗಗಳಿಲ್ಲ ಇವರ ಪುಂಡಾಟ ಈ ಹಿಂದೆ ಬೇರೆಯವರಿಗೆ ಕಿರಿಕಿರಿಯಾಗಿದ್ದರೆ ಈಗ ಇವರ ಮನೆಯವರಿಗೆ ಇವರಿಗಾಗಿ ಜಾಮೀನು ದೊರಕಿಸುವುದು, ಅದಕ್ಕಾಗಿ ಹಣ ಹೊಂದಿಸುವ ಕಿರಿಕಿರಿ, ತೊಂದರೆಗೆ ಕಾರಣವಾಗಿದೆ. ಜವಾಬ್ಧಾರಿ ಇಲ್ಲದ ಪಾಲಕರು, ಇಂಥ ಪುಂಡರನ್ನು ಬೆಳೆಸುವ ಮರಿ ಪುಡಾರಿಗಳು ಇವರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದರಿಂದ ಈ ಪ್ರಕರಣದಿಂದಲಾದರೂ ಈ ಅವ್ಯವಸ್ಥೆ ನಿಲ್ಲುವುದೇನೋ ಎನ್ನುವ ನಿರೀಕ್ಷೆ ಜನಸಾಮಾನ್ಯರದ್ದಾಗಿದೆ.

ಮಾಡಿದ ಅಪರಾಧ ಸಣ್ಣದಾದರೂ ಜೀವ ಕೊಟ್ಟ ಸಂತೋಷ್‌ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗವಹಿಸಿದ ಕೆಲವು ಸಮಾಜಸೇವಕರಿಗೆ ತಮ್ಮ ಸಾಮಾಜಿಕ ಕಾರ್ಯ ಈ ಮಟ್ಟದ ತೊಂದರೆ ತಂದಿಡಬಹುದು ಎನ್ನುವ ನಿರೀಕ್ಷೆಯೂ ಇರಲಿಲ್ಲ ಹಾಗಾಗಿ ಪುಂಡರ ನೆರವಿಗೆ ಹೋಗುವ ಮರಿಪುಡಾರಿಗಳು ಸೇರಿದಂತೆ ಕೆಲವು ಸಮಾಜಸೇವಕರು ತಾವು ಮಾಡದ ತಪ್ಪಿಗೆ ತಲೆ ಕೊಡುವಂತಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *