ಜಾತಿ ಸೋಲುವ ಪ್ರೀತಿ ಗೆಲ್ಲುವ ʼಗುರುʼ ಮಾದರಿ ಕೆರೆಬೇಟೆ!

ಒಬ್ಬ ಗುಣಗ್ರಾಹಿ ಹುಡುಗ ಸೀದಾಸಾದಾ ಬದುಕಿರುತ್ತಾನೆ. ಆತನಿಗೆ ಮಲೆನಾಡ ಕ್ರೀಡೆ ಕೆರೆಬೇಟೆಯೆಂದರೆ ವಿಪರೀತ ಆಸಕ್ತಿ,ಉತ್ಸಾಹ. ಅಮ್ಮನ ಈ ಪ್ರೀತಿಯ ಮಗನಿಗೆ ಬೆರಕೆ ಎನ್ನುವ ಆರೋಪ. ಗ್ರಾಮೀಣ ಹುಡುಗಾಟದ ಈ ಹುಡುಗ ಸ್ಪಲ್ಪ ಅತಿ ಎನ್ನುವಷ್ಟು ಆಡುತ್ತಾನಾದರೂ ಆತ ದುಷ್ಟನಲ್ಲ. ಕಾನೂನು ಬಾಹೀರ ಕೆಲಸದ ಈ ವಿಚಿತ್ರ ಹುಡುಗನ ಲೈಫ್‌ ನಲ್ಲಿ ಏನಾಯ್ತು ಎನ್ನುವ ಸಾದಾ ಕತೆಗೆ ಸರಿಸುಮಾರು ಎರಡು ಗಂಟೆಗಳ ನಂತರ ಸಿಗುವ ತಿರುವಿನಲ್ಲಿ ಹುಟ್ಟು ಕಲಾವಿದ ಗುರು ಯಾನೆ ರಾಜ್‌ ಗುರು ಕೈಚಳಕವಿದೆ.

ಸೊರಬಾ ಭಾಷೆ ಉತ್ತರ ಕನ್ನಡ, ಶಿವಮೊಗ್ಗಗಳ ಪರಿಸರ ಅದಕ್ಕೆ ಗ್ರಾಮೀಣ ಸೊಗಡಿನ ದೇಶೀ ಆಚಾರ, ಆಟ,ಅನನ್ಯತೆಗಳ ಮೇಲೋಗರ ಎರಡು ಗಂಟೆಗಳ ವರೆಗೆ ಬೋರು ಹೊಡೆಸಿಬಿಟ್ಟ ಎನ್ನುವಷ್ಟರಲ್ಲಿ ಸಿಗುವ ಟ್ವಿಸ್ಟ್‌ ಇಡೀ ಸಿನೆಮಾದ ಜೀವಾಳ. ಕೊನೆಗೂ ಜಾತಿ ಸೋತು ಪ್ರೀತಿ ಗೆದ್ದಿತು ಎನ್ನುವಷ್ಟರಲ್ಲಿ ನಮ್ಮ ಯೋಚನೆ, ಊಹೆ ತಪ್ಪಾಗಿಬಿಡುತ್ತದೆ!.

ಟ್ರೆಂಡ್‌ ಸೆಟ್‌ ಮಾಡಬಲ್ಲ ವಿನೂತನ ಸಿನೆಮಾ ಎನ್ನುವ ಮುನ್ನ ಮಲೆನಾಡಿನ ಹಬ್ಬ- ಆಚರಣೆ, ಪರಿಸರವೈವಿಧ್ಯ,ಜನಾಂಗೀಯ ವೈವಿಧ್ಯ ನಿಧಾನ ನಿರೂಪಣೆ ಸಾಗುತ್ತಾ ಸಾಗುತ್ತಾ ಒಂದು ಹಂತದಲ್ಲಿ ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸಿ, ಕುತೂಹಲಕ್ಕೆ ನೂಕುವ ಕತೆ ಹೇಳುವ ಶೈಲಿ ಪ್ಲ್ಯಾಶ್‌ ಬ್ಯಾಕ್‌ ಮಾದರಿಯಾದರೂ ಅಲ್ಲಿ ಹೊಸತನವಿದೆ. ಕೊನೆಯ ಅರ್ಧಗಂಟೆಯ ಗಟ್ಟಿ ಕತೆಗೆ ಯಾವ ವಿಶೇಶ ವೈಚಿತ್ರ್ಯವಿಲ್ಲವಾದರೂ ನೋಡುಗ, ಪ್ರೇಕ್ಷಕ ಅಂದುಕೊಂಡಂತೆ ಆಗದಿರುವುದೇ ಈ ಚಿತ್ರದ ವಿಶೇಶ, ವೈಶಿಷ್ಟ್ಯ. ಮಾಮೂಲು ಕತೆಗೆ ಸಸ್ಪೆನ್ಸನ ಕೋಟು ತೊಡಿಸಿದಂತಿರುವ ಈ ಹೊಸತನ ಕನ್ನಡ ಚಿತ್ರರಂಗದ ಮಟ್ಟಿಗಂತೂ ವಿನೂತನವೇ.

ಮಲೆನಾಡಿನ ಸೊಬಗು, ಸೌಂದರ್ಯ ಅದಕ್ಕೊಂದಿಷ್ಟು ಮೆಲೊಡ್ರಾಮಾ ಎನ್ನುವ ಮಾಮೂಲು ತಂತ್ರವನ್ನು ಸುಳ್ಳುಮಾಡಿ ಪ್ರೇಕ್ಷಕನನ್ನು ದಂಗುಬಡಿಸುವ ರಾಜ್‌ ಗುರು ತನ್ನ ಚೊಚ್ಚಲ ನಿರ್ಧೇಶನದಲ್ಲೇ ಭರವಸೆ ಮೂಡಿಸಿದ್ದಂತೂ ಸತ್ಯ. ಎರಡೂ ವರೆ ತಾಸಿನ ಮನರಂಜನೆಗೆ ತನ್ನ ೧೬ ವರ್ಷಗಳ, ಅನುಭವ,ಆಸಕ್ತಿಯ ಅಂಶಗಳನ್ನು ಸಂಪೂರ್ಣ ಎರಕಹೊಯ್ಯುವಲ್ಲಿ ಯಶಸ್ವಿಯಾಗದ ಗುರು ತನ್ನಲ್ಲಿ ಇನ್ನಷ್ಟು, ಮತ್ತಷ್ಟು ಸ್ಟಫ್‌ ಉಂಟು ಎನ್ನುವ ಸತ್ಯ ಬಿಚ್ಚಿಡುವಲ್ಲಿ ರಾಜ್‌ ಗುರು ಸಿನಿಪಯಣದ ಆರಂಭ ಶುಭಕರವಾಗಿದೆ.

ಹೊಸತನಕ್ಕೆ, ಹೊಸಪ್ರಯೋಗಕ್ಕೆ ಕಾಯುತ್ತಿರುವ ಸ್ಯಾಂಡಲ್‌ ವುಡ್‌ ಒಬ್ಬ ಹೊಸ ಉದಯೋನ್ಮುಕನನ್ನು ಪರಿಚಯಿಸಿದೆ ಎನ್ನುವಲ್ಲಿ ಕೆರೆಬೇಟೆ ಗೆದ್ದಿದೆ.

ಉತ್ತರ ಕನ್ನಡ, ಶಿವಮೊಗ್ಗದ ಕೆರೆಬೇಟೆ ಬಲ್ಲವರಿಗೆ ಈ ಚಿತ್ರ ಎದೆಗೆ ಇಳಿಯುವುದೂ ಈ ಚಿತ್ರದ ಪ್ರಸ್ತುತತೆಗೆ ಸಾಕ್ಷಿ. ಬಹುತೇಕ ನಟರು ಪಾತ್ರಗಳನ್ನು ಜೀವಿಸಿರುವುದು ಕೂಡಾ ನಿರ್ಧೇಶಕರ ಪ್ರತಿಭೆಗೆ ಕನ್ನಡಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *