
ವಿಡಂಬಾರಿ ಚುಟುಕುಗಳು-
ಹಸು ಮುಖದ ವ್ಯಾಘ್ರರು
ಹಿಟ್ಲರನಂತಹವಗೆ ಹುಡುಕಿ ಹುಡುಕಿ ನೋಡಿ
ಈ ವರ್ಷ ಸಿಕ್ಕಿಹುದು ಸರಿಯಾದ ಜೋಡಿ
ಹೇಳುತ್ತ ಬರೆ ದೇವರು ಧರ್ಮಗಳ ಹೆಸರು
ವಂಚಿಸುವ ಹಸುಮುಖದ ವ್ಯಾಘ್ರರು ಇವರು.
ಅಂದು ಯಡಿಯೂರಪ್ಪ ಹೇಳಿದ್ದು
ಗಣಿ ಧಣಿಗಳ ಕೈಯ ನಾ ಬಿಡಲು ಉಂಟೇ?
ಅಪವಾದಗಳು ಎಲ್ಲ ಬರೆ ಅಂತೆ ಕಂತೆ
ಶಾಸಕರುಗಳನ್ನೇ ಖರೀದಿ ಮಾಡಿ
ಈ ನಮ್ಮ ಸರಕಾರ ಉಳಿಸಿಹರು ನೋಡಿ
ಅರಿತು ಮತ ಹಾಕು
ತಾವು ತಮ್ಮವರ ಹಿತಕೆ ಕೆಲವು ಜನ ಕೂಡಿ
ರಾಜಕೀಯ ಪಕ್ಷವನು ಕಟ್ಟಿಹರು ನೋಡಿ
ಗಣಿಗಳ್ಳ ಮರಗಳ್ಳ ಈ ಕರಗಳ್ಳ
ಮಣ್ಣುಗಳ್ಳರು ಕೂಡ ಇದ್ದಾರೆ ಸುಳ್ಳ?.
……ವಿಡಂಬಾರಿ
