ಕೋಮುವಾದಿ ಶಕ್ತಿಗಳು ಮತ್ತು ದೇವೇಗೌಡರು ಜೆ.ಡಿ.ಎಸ್. ರಾಜ್ಯದ ಮೂರನೇ ಪರ್ಯಾಯ ಇನ್ನೆಷ್ಟುದಿನ? ಎನ್ನುವ ಪ್ರಶ್ನೆ ಈಗ ಜನತಾ ಪರಿವಾರಿಗರಷ್ಟೇ ಅಲ್ಲದೆ ಸಾಮಾನ್ಯ ಮತದಾರರು, ಕಾರ್ಯಕರ್ತರಿಗೂ ಉತ್ತರ ದೊರೆಯದ ಪ್ರಶ್ನೆಯಾಗಿ ಕಾಡತೊಡಗಿದೆ.
ಹೌದು, ಎಚ್.ಡಿ.ದೇವೇಗೌಡರ ನೇತೃತ್ವದ ಜೆ.ಡಿ.ಎಸ್. ಇನ್ನೆಷ್ಟು ದಿವಸ ರಾಜಕೀಯ ಪಕ್ಷವಾಗಿಅಸ್ತಿತ್ವದಲ್ಲಿರುತ್ತದೆ ಎನ್ನುವುದೇ ಅನುಮಾನ, ಯಾಕೆಂದರೆ……..
ಕುಮಾರ ಸ್ವಾಮಿ ಈಗ ತಮ್ಮ ಎಂದಿನ ಹಳೆಶೈಲಿಯಂತೆ ಬಿ.ಜೆ.ಪಿ.ಯಾದರೆ ಬಿ.ಜೆ.ಪಿ., ಕಾಂಗ್ರೆಸ್ ಆದರೆ ಕಾಂಗ್ರೆಸ್ ಜೊತೆಗೆ ಮಿಲನಕ್ಕೆ ಸಿದ್ಧವಾಗಿದ್ದಾರೆ. ಹಾಗೆ ನೋಡಿದರೆ ಹಿಂದಿನ ಲೋಕಸಭಾ ಚುನಾವಣಾ ವೇಳೆ ಜೆ.ಡಿ.ಎಸ್., ಬಿ.ಜೆ.ಪಿ. ಯೊಂದಿಗೆ ಕೂಡಿಕೊಂಡು ಎನ್.ಡಿ.ಎ. ಮಿತ್ರಪಕ್ಷವಾಗಿ ದೋಸ್ತಿ ಮಾಡಲು ಪೂರ್ವಸಿದ್ಧತೆ ಮಾಡಿಕೊಂಡಿತು.್ತ ಆದರೆ, ಜೆ.ಡಿ.ಎಸ್. ಬೀಷ್ಮ ದೇವೇಗೌಡರು ಕುಮಾರಣ್ಣ, ರೇವಣ್ಣರನ್ನು ಗದರಿಸಿ ಕೋಮುವಾದಿ ಪಕ್ಷದೊಂದಿಗೆ ದೋಸ್ತಿ ಮಾಡಿದರೆ ನನಗಂತೂ ಉಳಿಗಾಲವಿಲ್ಲ, ಜನ ಮತ್ತೆ ನಿಮ್ಮನ್ನೂ 14 ವರ್ಷ ವನವಾಸಕ್ಕೆ ಕಳುಹಿಸುತ್ತಾರೆ. ಎಂದು ಹೆದರಿಸಿದ್ದರಂತೆ.
ಆದರೆ, ದೇಶದ ದೌರ್ಭಾಗ್ಯ ಮತಾಂಧ ಕೋಮುವಾದಿ ಧನದಾಹಿಗಳು ಮೋದಿಯೆಂಬ ಚಿತ್ರವನ್ನು ಮುಂದಿಟ್ಟುಕೊಂಡು ದೇಶವನ್ನೇ ಗೆದ್ದುಬಿಟ್ಟರು.
ಈ ಬಗ್ಗೆ ರೇವಣ್ಣ,ಕುಮಾರಣ್ಣ,ದೇವೇಗೌಡರಿಗೆಲ್ಲಾ ನೋವಿದೆ ಆದರೆ, ತಾವು ಎನ್.ಡಿ.ಎ. ಮಿತ್ರ ಕೂಟದಲ್ಲಿದ್ದರೆ ಲಾಭ ಜೊತೆಗೆ ಕೋಮುವಾದಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಬಹುದು ಎಂದುಕೊಂಡಿದ್ದು ವಿಫಲವಾದ ಹತಾಸೆಯಿದೆ.
ಈ ಹಿನ್ನೆಲೆಯಲ್ಲಿ ಕುಮಾರಣ್ಣ ರೇವಣ್ಣ ಅಪ್ಪ ದೇವೇಗೌಡರ ಬಳಿಗೆ ಸ್ಪೆಶಲ್ ಆಗಿ ಹೋಗಿ ‘ಅಪ್ಪಾ ….ನೀವು ದೃತರಾಷ್ಟ್ರ ಲಕ್ಷಣದವರು, ಆದರೆ ನಿಮ್ಮ ಹಠಬಿಡಿ. ನೀವು ಅವರು ಅಸ್ಫ್ರಶ್ಯ- ಇವರು ಕೋಮುವಾದಿ ಎಂದರೆ ಮುಂದೆ ಭವಿಷ್ಯವಿಲ್ಲ’ ಎಂದೆಲ್ಲಾ ಗೋಗರೆದಿದ್ದಾರಂತೆ.
ಈ ಪುತ್ರಾಲಾಪ ಕೇಳಿದ ದೇವೇಗೌಡರು ಮಕ್ಕಳಿಗೆ ‘ಪ್ರಪಂಚದ ಯಾವುದೇ ಪಕ್ಷದೊಂದಿಗೆ ಸೇರಿ ಆದರೆ, ನಯವಂಚಕರ ಪಕ್ಷ ಬಿ.ಜೆ.ಪಿ.ಯೊಂದನ್ನು ಬಿಟ್ಟು’. ಎಂದು ಮತ್ತೆ ಎಚ್ಚರಿಸಿದ್ದಾರಂತೆ.
ಹಾಗಾಗಿ, ದೇವೇಗೌಡರು ರಾಜಕೀಯದಿಂದ ನಿವೃತ್ತರಾಗುವ ಮೊದಲು ತಮ್ಮ ಮಕ್ಕಳನ್ನು ಸೋನಿಯಾ ಮಡಿಲಿನಲ್ಲಿ ಹಾಕಿ ಸುಮ್ಮನಿರುವ ತೀರ್ಮಾನಕ್ಕೆ ಬಂದಿದ್ದಾರಂತೆ!
ಈ ಕೌಟುಂಬಿಕ ಪ್ರಹಸನದ ನಂತರ ಕುಮಾರಸ್ವಾಮಿ ಸೋನಿಯಾಮೇಡಂ ಜೊತೆಗೆ ಮಾತುಕತೆ ನಡೆಸಿ, ಜೆ.ಡಿ.ಎಸ್.ನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಿ ಮತ್ತೆ ಅಕಾಲದಲ್ಲಿ ಮುಖ್ಯಮಂತ್ರಿ ಗಾದಿಗೇರಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರಂತೆ!
ಕಾಂಗ್ರೆಸ್ ನಲ್ಲಿ ಎಲ್ಲವೂ ನೆಟ್ಟಗಿಲ್ಲ ‘ಯೇತಿ ಎಂದರೆ ಪ್ರೇತಿ’ ಎನ್ನುವ ರಾಜ್ಯ ಕಾಂಗ್ರೆಸ್ ವಿದ್ಯಮಾನ ದಿಂದ ಕಂಗೆಟ್ಟಿರುವ ಕಾಂಗ್ರೆಸ್ ರಾಜ್ಯದಲ್ಲಿ ಮುಖಂಡರ ನಡುವಿನ ವಿರಸಕ್ಕೆ ಶಸ್ತ್ರಕ್ರೀಯೆ ನಡೆಸಿ ಎಲ್ಲವನ್ನೂ ಸುಧಾರಿಸುವ ಸ್ಕೆಚ್ ರೂಪಿಸಿದೆಯಂತೆ!
ಹಾಗೇನಾದರೂ ದೇಗೌ ಎಂಡ್ ಸೋನಿಯಾ ಮಾತುಕತೆಕಾರ್ಯರೂಪಕ್ಕೆ ಬಂದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ನಾಯಕತ್ವ ಕೊನೆಯಾಗಿ ಸಿದ್ಧು ಜಾಗಕ್ಕೆ ಕುಮಾರಸ್ವಾಮಿ, ಆರ್.ವಿ.ದೇಶಪಾಂಡೆ ಅಥವಾ ಪರಮೇಶ್ವರ್‍ಗಳಲ್ಲಿ ಯಾರಾದರೊಬ್ಬರು! ಅಥವಾ ಮತ್ಯಾವುದೇ ಸಮರ್ಥ ನಾಯಕ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎನ್ನಲಾಗುತ್ತಿದೆ.
ಜೆ.ಡಿ.ಎಸ್. ನ ದೇವೇಗೌಡರ ಕುಟುಂಬಕ್ಕೆ ತುರ್ತಾಗಿ ನೂರಾರು ಕೋಟಿ ಕಪ್ಪು ಹಣ ಬೇಕಾಗಿದೆಯಂತೆ ಸುಳ್ಳು-ದ್ರೋಹ, ನಾಟಕಗಳ ಕಂಪನಿಯಾಗಿರುವ ಬಿ.ಜೆ.ಪಿ. ಈ ಕ್ಷಣದಲ್ಲಿ ದೇಗೌ ಎಂಡ್ ಜೆ.ಡಿ.ಎಸ್. ಫೆಮಿಲಿಗೆ ಅಧಿಕಾರ, ಹಣ ಅಥವಾ ಮತ್ಯಾವುದೇ ಅನುಕೂಲ ಒದಗಿಸುವ ಸ್ಥಿತಿಯಲ್ಲಿಲ್ಲ. ಮೇಲಿಂದ ಬಿ.ಜೆ.ಪಿ.ಯ ಕೋಮುವಾದಿ ನೀತಿಯ ಪ್ರಮುಖ ಲಕ್ಷಣವೆಂದರೆ, ವಿರೋಧವನ್ನು ಶಮನ ಮಾಡಿ ಸರ್ವಾಧಿಕಾರಿತನ ಚಲಾಯಿಸುವುದು. ಈ ಪ್ರಕ್ರೀಯೆ ಯಾವ ಮಟ್ಟದಲ್ಲಿ ಬಿರುಸಾಗಿದೆಯೆಂದರೆ…
ನಾಡು, ನುಡಿ, ಪ್ರಾದೇಶಿಕತೆ, ಸಿದ್ಧಾಂತಗಳ ಜಿಗುಟುತನದ ನೈಜ ಜನಪರ ಶಕ್ತಿಗಳನ್ನೆಲ್ಲಾ ಮಟ್ಟ ಹಾಕಿ, ಮೋದಿಯಂಥ ಭಾರತೀಯ ಹಿಟ್ಲರನನ್ನು ವಿಜೃಂಬಿಸಿ ಲಾಭ ಮಾಡಿಕೊಳ್ಳುವುದು. ಜಾಗತೀಕರಣದ ಪೆಡಂಭೂತವಾಗಿರುವ ಈ ಸರ್ವಾಧಿಕಾರ, ಉದಾರೀಕರಣ ಕೋಮುವಾದಿಕರಣ, ಮೋದಿಕರಣಗಳ ಮೂಲಕ ಭಾರತವನ್ನು ವ್ಯಾಪಿಸುತ್ತಿದೆ.
ಇದು ಎಂಥಾ ಅಪಾಯ ಸೃಷ್ಟಿಸುತ್ತಿದೆಯೆಂದರೆ…… ಮನುವಾದ ಬಂಡವಾಳಶಾಹಿ ಪದ್ಧತಿ, ಮನೋಪಲಿ, ಖಾಸಗೀಕರಣಗಳ ಮೂಲಕ ಬಡವರು, ಬಡವರ ಪರ ಸಹಾನುಭೂತಿಯುಳ್ಳವರನ್ನು ವಿರೋಧಿಸುತ್ತದೆ.
ಕೆಲವೆಡೆ ಸ್ವತಂತ್ರ ಜನಪರ ಶಕ್ತಿಗಳನ್ನುನಾಶಮಾಡಿಯೋ ಅಥವಾ ಆಪೋಶನ ಮಾಡಿಯೋ ಪ್ರತಿರೋಧವನ್ನು ಇಲ್ಲವಾಗಿಸುತ್ತದೆ. ಅದಕ್ಕೆ ಆಸೆಬುರುಕರು, ಆಶಾಢಭೂತಿಗಳನ್ನುಬಳಸಿಕೊಳ್ಳುತ್ತದೆ. ಶ್ರೀಮಂತ ಉಧ್ಯಮಿಗಳೆಲ್ಲಾ ಸೇರಿ ಗುಜರಾತ್‍ನಲ್ಲಿ ಇದೇ ನೀತಿ ಪ್ರಯೋಗಿಸಿ, ಗುಜರಾತ್‍ನ ಪ್ರತಿರೋಧ, ಪ್ರಜಾಪ್ರಭುತ್ವೀಯ ಧ್ವನಿಗಳನ್ನು ದಮನಿಸಿತು. ಮೋದಿಮುಖವಾಡ ಅಲ್ಲಿ ಕಂಡ ಯಶಸ್ಸಿನಿಂದ ಶ್ರೀಮಂತರು ಕೋಮುವಾದಿ ಹಿಂದೂ ಪ್ರೇರಿತ ಶ್ರೀಮಂತ ಬೂಜ್ರ್ವಾಗಳು ಕೊಬ್ಬಿದರು. ಈಗ ಗುಜರಾತ್‍ನಲ್ಲಿ ಜನಾಸಾಮಾನ್ಯರ ಧ್ವನಿ ಇಲ್ಲ, ಕೋಮುವಾದ, ಜಾತಿವಾದ, ಖಾಸಗೀಕರಣ ದಬ್ಬಾಳಿಕೆ ವಿರೋಧಿ ಧ್ವನಿಗಳಿಗೆ ಶಿಕ್ಷೆ ಗಡಿಪಾರು. ಅಭಿವೃದ್ಧಿ ಹೆಸರಿನಲ್ಲಿ ಭ್ರಾಂತಿ ಸೃಷ್ಟಿಸುವ ಕೋಮುವಾದಿಶಕ್ತಿಗಳು ಅಲ್ಲಿ ಬಡವರು ದುರ್ಬಲರು, ಸ್ಥಳೀಯ ಮೂಲನಿವಾಸಿಗಳನ್ನು ಪಾತಾಳಕ್ಕೆತಳ್ಳಿವೆ. ಇದೇ ವ್ಯವಸ್ಥೆಯನ್ನು ಭಾರತದುದ್ದಕ್ಕೂ ಜಾರಿಮಾಡುವ ಉದ್ದೇಶ ಬಿ.ಜೆ.ಪಿ. ಪ್ರೇರಿತ ಕೋಮುವಾದಿಗಳದ್ದು.
ಈ ಕೋಮುವಾದಿ ಪಾಳೇಗಾರರು ಸ್ಥಳೀಯ ಎನ್ನುವ ಎಲ್ಲಾವಿಶೇಷಗಳನ್ನು ಕೊಲ್ಲುವ ಸುಪಾರಿ ಪಡೆದಿದ್ದಾರೆ. ಇದರ ಅಂಗವಾಗಿ ದೇಶದಾದ್ಯಂತ ಈಗ ಕೊಳಕು ಚೆಡ್ಡಿಗಳಿಗೆ ವಿಪರೀತ ಕೆಲಸ. ಶ್ರೀಮಂತರು ಸಾಕಿಕೊಂಡಿರುವ ಈ ಚೆಡ್ಡಿ ಗಳು ಈಗ ಸರಕಾರದ ಹಣ ಹೊಡೆದು ಠೇಕರಿಸುತ್ತಿವೆ.
ಇದಕ್ಕೆ ಆಸೆಬುರುಕರು ಅವಕಾಶವಾದಿಗಳು ಮಾರಿಕೊಳ್ಳುತಿದ್ದರೆ, ಗಟ್ಟಿಗರು ವಲಸೆ ಹೋಗುತಿದ್ದಾರೆ. ಇದರಿಂದಾಗಿ ಭಾರತೀಯಮೂಲನಿವಾಸಿಗಳು ಅಕ್ಷರಶಃ ಬೇವರ್ಸಿಗಳಾಗುತಿದ್ದಾರೆ. ಇಂಥ ವಸಾಹತುಶಾಹಿ,ಕಾರ್ಪೋರೇಟ್ ಶಕ್ತಿಗಳೇ ಇಂದು ದೇಶದಾದ್ಯಂತ ಪ್ರಾದೇಶಿಕಹಿತಾಸಕ್ತಿಗಳನ್ನುಖರೀದಿಸುತ್ತಿವೆ. ಬಿ.ಜೆ.ಪಿ. ಸೋಗಿನ ಎನ್.ಡಿ.ಎ.ಮುಖವಾಡ ಉತ್ತರಭಾರತದಲ್ಲಿ ಜಾತ್ಯಾತೀತ ‘ಸಮಾಜವಾದಿ’ ಶಕ್ತಿ, ಕೇಂದ್ರಗಳನ್ನು ಉರುಳಿಸುವ ಮಾಸ್ಟರ್ ಪ್ಲಾನ್ ತಯಾರಿಸಿ, ಕೆಲವರನ್ನು ತನ್ನ ತೆಕ್ಕೆಗೆ ಬಾಚಿಕೊಂಡಿತು. ತನ್ನ ಹಿಡಿತಕ್ಕೆ ಸಿಗದ ಶಕ್ತಿಗಳನ್ನು ಶ್ರೀಮಂತರ ಹಣದಿಂದ ಕೊಂದು ಹಾಕಿತು. ಈಗ ಈ ಬಿ.ಜೆ.ಪಿ. ಕೋಮುವಾದಿಗಳ ಕೆಂಗಣ್ಣು ದಕ್ಷಿಣ ಭಾರತದತ್ತ ತಿರುಗಿದೆ. ದ್ರಾವಿಡಶಕ್ತಿಗಳ ಅಖಾಡವಾಗಿರುವ ದಕ್ಷಿಣ ಭಾರತಕ್ಕೆ. ಆರ್ಯುಮೂಲದ ನಯವಂಚಕ ಶಕ್ತಿಗಳಿಗೆ ಕರ್ನಾಟಕವೇ ಹೆಬ್ಬಾಗಿಲು. ಕರ್ನಾಟಕದ ಜಾತ್ಯಾತೀತ ಪರಂಪರೆಯ ಮೂಲವಾದ ವೀರಶೈವ ಲಿಂಗಾಯತರಿಗೆ ಕೋಮುವಿಷದ ‘ಲಾಭದ ಮದ್ದು’ ಕಟ್ಟಿಬಿಟ್ಟರೆ ಕರ್ನಾಟಕವನ್ನು ವಿದೇಶಿ ಆರ್ಯ ಶಕ್ತಿಗಳ ಆಡೋಂಬಲ ಮಾಡಬಹುದು ಎನ್ನುವ ಅಂದಾಜಿಟ್ಟುಕೊಂಡೇ ಬಿ.ಜೆ.ಪಿ. ತನ್ನ ಶ್ರೀಮಂತ ಕಾರ್ಪೋರೇಟ್ ಕುಳಗಳ ಮೂಲಕ ಒಂದು ದಶಕದ ಹಿಂದೇ ಕರ್ನಾಟಕ ಪ್ರವೇಶಿಸಿ ಬಿಟ್ಟಿದೆ. ಪ್ರಾರಂಭದಲ್ಲಿ ಬಿ.ಜೆ.ಪಿ. ಹಿಂದುತ್ವಗಳ ಮುಖವಾಡದಲ್ಲಿ ಬರುವ ಲಾಭಕೋರ, ಬಂಡವಾಳ ಶಾಹಿಗಳು ಕ್ರಮೇಣ ಆಯಾ ಪ್ರದೇಶದ ನೆಲ-ಜಲ, ಜನಗಳನ್ನೆಲ್ಲಾ ನಿಯಂತ್ರಿಸುತ್ತವೆ. ಈ ಷಡ್ಯಂತ್ರ ಈಗ ಕರ್ನಾಟಕದಲ್ಲಿ ಫಲಕೊಡುತ್ತಿದೆ. ಗುಜರಾತ್‍ನಂತೆ ಕರ್ನಾಟಕವನ್ನು ಶ್ರೀಮಂತರು, ಬಿ.ಜೆ.ಪಿ.ಗಳು ಬಲಪಂಥೀಯರಿಗೆ ಕೊಟ್ಟುಬಿಟ್ಟರೆ ಕರ್ನಾಟಕವನ್ನು ದಕ್ಷಿಣ ಭಾರತದ ರಾಜಸ್ಥಾನವೋ, ಗುಜರಾತೋ ಮಾಡಬಹುದು. ಈ ಷಡ್ಯಂತ್ರ ವ್ಯಾಪಾರಿ ಮನೋಭಾವಗಳ ಸ್ಪಷ್ಟ ಅರಿವಿರುವ ದೇವೇಗೌಡರು ಕೈಲಾಗದಿದ್ದರೆ ಕೈ ಹಿಡಿಯಿರಿ,
ಕಮಲದ ಕಾಲು ಹಿಡಿದು ಕೆಸರು ಮೆತ್ತಿಸಿಕೊಳ್ಳಬೇಡಿ,ಕುಲಕಂಟಕರಾಗದಿರಿ ಎಂದು ಉಗ್ರವಾಗಿ ಎಚ್ಚರಿಸಿದ್ದಾರೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ದೇವೇಗೌಡರ ಗ್ರಹಿಕೆ ಅವಶ್ಯ.
ದೇವೇಗೌಡರು ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡಿದರು. ಪ್ರಧಾನಮಂತ್ರಿಯೂ ಆದರು, ಆದರೆ ಬಿ.ಜೆ.ಪಿ. ಪ್ರೇರಿತ ಸಾಮಾಜಿಕ, ರಾಜಕೀಯ ಕ್ಷುದ್ರ ಜಂತುಗಳೊಂದಿಗೆ ಕೂಡಲಿಲ್ಲ. ಅನಿವಾರ್ಯವಾದಾಗ ಮೆದುವಾದರು, ಬಿ.ಜೆ.ಪಿ.ಗಳೊಂದಿಗೂ ಸೇರಬಲ್ಲೆ ಎಂದು ತೋರ್ಗಾಣಿಕೆಗೆ ಪೋಜು ನೀಡಿದರು. ಆದರೆ, ರಾಮಕೃಷ್ಣ ಹೆಗಡೆ, ಪಟೇಲರು ಅಷ್ಟೇ ಏಕೆ ತಮ್ಮ ಸ್ವಂತ ಮಕ್ಕಳಂತಾಗದೆ ದೇವೇಗೌಡರು ಬಿ.ಜೆ.ಪಿ. ಗಳನ್ನು ಸುರಕ್ಷಿತ, ಆರೋಗ್ಯಕರ ಅಂತರದಲ್ಲಿಟ್ಟರು. ಈಗಲೂ ದೇವೇಗೌಡ ತಮ್ಮ ಮಕ್ಕಳಿಗೆ ಏನೇ ಮಾಡಿ. ಬಿ.ಜೆ.ಪಿ.ಹೊರಗಿಟ್ಟು ಮಾಡಿ. ಕೋಮುವಾದಿ ಬಿ.ಜೆ.ಪಿ.ಗಳಿಗೆ ಕೈ ಕೊಟ್ಟರೆ ಹಸ್ತ ನುಂಗುತ್ತವೆ ಎನ್ನುತ್ತಾರಂತೆ ದೇವೇಗೌಡರಿಗೆ ಕನ್ನಡ ಜನತೆ, ದ್ರಾವಿಡಸಂಕುಲ ಬೇಷ್ ಎನ್ನಬೇಕು. ಕೊನೆಗೂ ದೇವೇಗೌಡ ಬಿ.ಜೆ.ಪಿ. ಗಳನ್ನು ಒಪ್ಪಿಕೊಂಡಿಲ್ಲ. ಈಗ ದೇವೇಗೌಡರು ನಿವೃತ್ತರಾಗುವುದು ಗ್ಯಾರಂಟಿ, ನಿವೃತ್ತಿ ಅಥವಾ ನಿರ್ವಾಣದ ಮೊದಲು ದೇವೇಗೌಡರು.ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಪಟೇಲರಂತಾಗಲಿಲ್ಲ ಎಂಬುದೇ ಹೆಗ್ಗಳಿಕೆ.
… ಕೋಲ್‍ಶಿರ್ಸಿ ಕನ್ನೇಶ್ ( ಈ ಬರೆಹ 14-08-14 ರಲ್ಲಿ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಈಗಲೂ ಪ್ರಸ್ತುತ ಎನಿಸುತ್ತದೆಯೆ?)