ಸಮಾಜಮುಖಿ ತಂಡಕ್ಕೆ ಬನವಾಸಿಯ ಇತಿಹಾಸ ದರ್ಶನ
ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು. ಪತ್ರಕರ್ತರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಜನರ ‘ಚಿಂತನಶೀಲ ಸಮಾಜಮುಖಿ’ ತಂಡ ಉತ್ತರ ಕನ್ನಡದ ಬನವಾಸಿಗೆ ಶುಕ್ರವಾರ ಭೇಟಿ ನೀಡಿ ಇಲ್ಲಿನ ಕೃಷಿ, ಪರಿಸರ, ಬನವಾಸಿದ ಮಧುಕೇಶ್ವರ ದೇವಾಲಯ ಹಾಗೂ ಇತಿಹಾಸದ ದರ್ಶನ ಪಡೆದುಕೊಂಡಿತು.
ಕನ್ನಡದ ಪ್ರಥಮ ರಾಜಧಾನಿ ಬನವಾಸಿ ಪರಿಸರದಲ್ಲಿ ಮೂರು ದಿನಗಳ ನಡೆದು ನೋಡು ಕರ್ನಾಟಕ ಅಭಿಯಾನದ ಭಾಗವಾಗಿ ನಡಿಗೆಯ ತಂಡಕ್ಕೆ ಇತಿಹಾಸ ತಜ್ಞ ¯ಕ್ಷ್ಮೀಶ ಹೆಗಡೆ ಸೋಂದಾ ಮಾಹಿತಿ ನೀಡಿದರು.
ಬಳಿಕ ತಂಡವು ಗುಡ್ನಾಪುರದ ಬೃಹತ್ ಕೆರೆ, ರಾಣಿ ನಿವಾಸವನ್ನೂ ವೀಕ್ಷಿಸಿ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೂ ಭೇಟಿ ನೀಡಿತು.
ಪತ್ರಕರ್ತ ಚಂದ್ರಕಾಂತ ವಡ್ಡು ಸಂಯೋಜಿಸಿದ ಈ ನಡೆಗೆಯಲ್ಲಿ ರಾಯಚೂರು, ಬೆಂಗಳೂರು, ನಂಜನಗೂಡು, ಮೈಸೂರು ಸೇರಿದಂತೆ ವಿವಿಧೆಡೆಯ ಆಸಕ್ತರ ಜೊತೆ ಸಾಹಿತಿ ಸುಬ್ರಾಯ ಮತ್ತೀಹಳ್ಳಿ, ಗ್ರಾ.ಪಂ. ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣವರ್ ಹಾಗೂ ಇತರರು ಜೊತೆಯಾದರು.