ಬಿ.ಜೆ.ಪಿ.ಯ ಕನಿಷ್ಠ ೫ ಜನ ಸಂಸದರಿಗೆ ಈ ಬಾರಿ ಟಿಕೆಟ್‌ ಇಲ್ಲ!ಯಾರು ಆ ಐವರು ಸಂಸದರು?

ರಾಜ್ಯ ಬಿ.ಜೆ.ಪಿ.ಯಲ್ಲಿ ಬಣ ರಾಜಕಾರಣ ಉಲ್ಬಣಿಸಿದ್ದು ಬಿ.ಎಲ್.‌ ಸಂತೋಷ ಬಣದ ಪ್ರತಾಪ್‌ ಸಿಂಹ, ತೇಜಸ್ವಿಸೂರ್ಯ ಸೇರಿದಂತೆ ಕನಿಷ್ಠ ೫ ಜನ ಸಂಸದರಿಗೆ ಬಿ.ಜೆ.ಪಿ. ಟಿಕೆಟ್‌ ನಿರಾಕರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಈಶ್ವರಪ್ಪನವರನ್ನು ಎಳೆದು ಕೂಡ್ರಿಸಿದ ಬಿ.ಜೆ.ಪಿ. ಈ ಬಾರಿ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡರನ್ನು ಸ್ಫರ್ಧಿಸುವುದು ಬೇಡ ಎಂದು ಮೂಲೆಗೆ ತಳ್ಳಿದೆ.

ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದ್ದು ಜಿಲ್ಲೆಯಾದ್ಯಂತ ಬಿ.ಜೆ.ಪಿ. ಕಾರ್ಯಕರ್ತರೆ ಈ ಬಾರಿ ಅನಂತ ಕುಮಾರ ಬೇಡ ಎನ್ನುವ ಅಭಿಯಾನ ಪ್ರಾರಂಭಿಸಿರುವ ಸುದ್ದಿ ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಮತ್ತೆ ಚುನಾವಣೆಗೆ ಕೇಸರಿ ಟವೆಲ್‌ ಕೊಡಗಿದ್ದ ಅನಂತಕುಮಾರ್‌ ಹೆಗಡೆವರಿಗೆ ಕಾಯ್ದುನೋಡಿ ತಯಾರಿ ಬೇಡ ಎನ್ನುವ ಸಂದೇಶ ರವಾನಿಸಿದೆಯಂತೆ.

ಬಿ.ಜೆ.ಪಿ.ಯಲ್ಲಿ ಬಿ.ಎಲ್.‌ ಸಂತೋಷ ಬಣ, ಯಡಿಯೂರಪ್ಪ ಬಣ ಎನ್ನುವ ಎರಡು ಗುಂಪುಗಳಾಗಿವೆ. ಇದರ ಪರಿಣಾಮವಾಗಿ ಬಿ.ಎಲ್.‌ ಸಂತೋಷರಿಂದ ಅನಾಯಾಸವಾಗಿ ಸಂಸದರಾಗಿದ್ದ ತೇಜಸ್ವಿ ಸೂರ್ಯ ಮತ್ತು ಪ್ರತಾಪ ಸಿಂಹರಿಗೆ ಟಿಕೇಟ್‌ ಸಿಗುವುದು ದರ್ಲಭವಾಗಿದೆ.

ಅನ್ಯರು ಬಹುಸಂಖ್ಯಾತರಾಗಿರುವ ಕೆಲವು ಕ್ಷೇತ್ರಗಳಲ್ಲಿ ಹಿಂದುತ್ವದ ಹೆಸರಲ್ಲಿ ಆಯ್ಕೆಯಾಗುತಿದ್ದ ಬ್ರಾಹ್ಮಣರಿಗೆ ಗೇಟ್‌ ಪಾಸ್‌ ನೀಡಲು ಸಿದ್ಧವಾಗಿರುವ ಬಿ.ಜೆ.ಪಿ. ಶೋಕಿಗಾಗಿ ಸಂಸದರಾಗಿದ್ದ ತೇಜಸ್ವಿ ಸೂರ್ಯ ಮತ್ತು ಅನಂತಕುಮಾರ ಹೆಗಡೆಯವರಿಗೆ ಕೋಕ್‌ ನೀಡಿ ಆ ಕ್ಷೇತ್ರಗಳಲ್ಲಿ ಮಹಿಳೆ ಅಥವಾ ಒಬಿ.ಸಿ. ಗೆಲ್ಲಿಸಿ ನಿಮ್ಮ ಹಿಂದುತ್ವ ಸಾಬೀತುಮಾಡಿ ಎಂದು ಬ್ರಾಹ್ಮಣರಿಗೆ ಟಾಸ್ಕ್‌ ನೀಡಿದೆ. ಇದರ ಭಾಗವಾಗಿ ಬಿ.ಜೆ.ಪಿ. ಬೆಂಗಳೂರು ದಕ್ಷಿಣದಲ್ಲಿ ಜೈಶಂಕರ್‌ ಅಥವಾ ತೇಜಸ್ವಿನಿ ಅನಂತ ಕುಮಾರ ರಿಗೆ ಅವಕಾಶ ಕಲ್ಫಿಸಲು ಯೋಚಿಸಿದೆ.

ಸಾರ್ವತ್ರಿಕ ವಿರೋಧಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ ಬದಲು ನಿರ್ಮಲಾ ಸೀತಾರಾಮನ್‌, ರೂಪಾಲಿ ನಾಯ್ಕ ಅಥವಾ ಮಿಥುನ್‌ ಶೇಟ್‌ ರಿಗೆ ಲೋಕಸಭೆಯ ಟಿಕೇಟ್‌ ನೀಡಿ ಬ್ರಾಹ್ಮಣರ ಹಿಂದುತ್ವ, ರಾಷ್ಟ್ರೀಯತೆ ಅಜೆಂಡಾವನ್ನು ನಿಗಷಕ್ಕೆ ಒಡ್ಡುವ ತಯಾರಿ ನಡೆಸಿದ್ದು ಮಾತೆತ್ತಿದರೆ ಮೋದಿ, ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮ ಎನ್ನುವ ಬ್ರಾಹ್ಮಣರು ಈ ಬಾರಿ ನಿಗದಿತ ಸಮೂದಾಯದವರನ್ನು ಬಿಟ್ಟು ಬೇರೆಯವರನ್ನು ಗೆಲ್ಲಿಸುತ್ತಾರೋ ಎನ್ನುವ ಪರೀಕ್ಷೆ ನಡೆಸಲಿದ್ದಾರಂತೆ!

ಬಿ.ಜೆ.ಪಿ.ಯ ಈ ವಿದ್ಯಮಾನದಿಂದ ಕಂಗೆಟ್ಟ ಬ್ರಾಹ್ಮಣ ನಾಯಕರು ಮೋದಿ ಟಾರ್ಗೆಟ್ ಮುಸ್ಲಿಂ ಎಂದುಕೊಂಡಿದ್ದರೆ ಮೋದಿ ಬಳಗ ಈಗ ತಮ್ಮ ಬುಡಕ್ಕೇ ಬಿಸಿನೀರು ಬಿಡಲು ಯೋಚಿಸಿರುವ ಬಗ್ಗೆ ಆಘಾತಕ್ಕೊಳಗಾಗಿದ್ದಾರೆ.

ಚಿಕ್ಕಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಹಿಂದುಳಿದವರಿಗೆ ಬಿ.ಜೆ.ಪಿ.ಯಿಂದ ಅನ್ಯಾಯವಾಗುತಿದ್ದು ಈ ಕಾರಣ ಬಳಸಿ ಚುನಾವಣೆ ಗೆಲ್ಲಲು ಯೋಚಿಸಿರುವ ಕಾಂಗ್ರೆಸ್‌ ಗೆ ಶಾಕ್‌ ನೀಡಲು ಯೋಜಿಸಿರುವ ಬಿ.ಜೆ.ಪಿ. ಅನಂತಕುಮಾರ ಹೆಗಡೆ, ತೇಜಸ್ವಿ ಸೂರ್ಯ ಪಕ್ಷಕ್ಕಾಗಿ ದುಡಿಯಲಿ ಅವರನ್ನು ಗೆಲ್ಲಿಸಿದ ಕಾರ್ಯಕರ್ತರ ಪರವಾಗಿ ಈ ಇಬ್ಬರು ಸಂಸದರು ಪಕ್ಷದ ಅಭ್ಯರ್ಥಿ ಗೆಲ್ಲಿಸಲಿ ಎಂದು ಪ್ರತಿಪಾದಿಸಿದೆಯಂತೆ!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *