

ಕ್ರಾಂತಿ-ಶಾಂತಿಯ
ಸ್ಫೂರ್ತಿ ಮಂಡೇಲಾ
ಒಬ್ಬ ಮನುಷ್ಯನ ಸರಾಸರಿ ಜೀವಿತಾವಧಿ ಅಂದಾಜು 60 ವರ್ಷಗಳು ಎಂದು ಹೇಳಲಾಗುತ್ತಿದೆ. ಬೊಲಿವಿಯಾದ ವಿಮೋಚನೆಗೆ ಹೋರಾಡಿ ವಿಶ್ವ ಐಕಾನ್ ಎನಿಸಿಕೊಂಡ ‘ಚೆ’(ಛೆ!) 39 ವರ್ಷ ಮಾತ್ರ ಬದುಕಿದ್ದುದು!
ನಮ್ಮ ವಿವೇಕಾನಂದರು ಬದುಕಿದ್ದುದು ಕೇವಲ 45 ವರ್ಷಗಳು.
ಡಿ.ಆರ್.ನಾಗರಾಜ್ ಬದುಕಿದ್ದುದು ಕೇವಲ ನಾಲ್ಕು ದಶಕ.
ಹೀಗೆ, ಸಾಧಕರಲ್ಲಿ ಕೆಲವೇ ಕೆಲವರು ಧೀರ್ಘಾಯುಷಿಗಳಾದರೆ, ಕೆಲವರು ಅಲ್ಫಾಯುಷಿಗಳು.
ಅವರಲ್ಲಿ ಖುಶ್ವಂತ್ ಸಿಂಗ್‍ರಂಥ ಕೆಲವರು ‘ನನ್ನ ನೂರು ವರ್ಷಗಳಲ್ಲಿ ಕೆಲವು ವರ್ಷಗಳನ್ನು ಅನಾವಶ್ಯಕ ಕಳೆದೆ’ ಎಂದು ವಿಷಾದಿಸಿದ್ದಿದೆ.
ಆದರೆ ಕೆಲವರು ತಮ್ಮ ಬದುಕಿನ ಅಮೂಲ್ಯ ವರ್ಷಗಳನ್ನು ಜೈಲಲ್ಲಿ ಕಳೆದಿರುತ್ತಾರಲ್ಲ ಅವರ ಬಗ್ಗೆ ಎನನ್ನೊಣ?
ನೆಹರೂ, ವಾಜಪೇಯಿ, ಅಡ್ವಾನಿ, ಜೆ.ಪಿ., ಲೋಹಿಯಾರಂಥವರು ಜೈಲಲ್ಲಿ ಕೂತು ಬರೆದು ಅಮೂಲ್ಯವೆನ್ನುವಂಥ ಕೃತಿಗಳನ್ನು ಕೊಟ್ಟಿದ್ದಿದೆ. ಈಗ ನೆಲ್ಸನ್ ಮಂಡೇಲಾ ಬಗ್ಗೆ ಯೋಚಿಸಿ,
27 ವರ್ಷಗಳನ್ನು ಜೈಲಿನ ಕಂಬಿಗಳ ಹಿಂದೆ ಕಳೆದ ಮಂಡೇಲಾ ಜೈಲು ಸೇರುವ ಮುನ್ನ ಕ್ರಾಂತಿಕಾರಿ ಹಿಂಸಾತ್ಮಕ ಹೋರಾಟ, ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ಬಿಳಿಯರ ವಿರುದ್ಧ ,ವಾಸ್ತವವಾಗಿ ಅಂದಿನ ಅಸಮಾನತೆಯ ವ್ಯವಸ್ಥೆಯ ವಿರುದ್ಧ ಬಂಡೆದ್ದಿದ್ದರು. ಬ್ರಿಟೀಷರು ರಾಜಕುಮಾರನಾಗಿದ್ದ ಮಂಡೇಲಾರ ಹಿಂಸಾತ್ಮಕ, ಅಹಿಂಸಾತ್ಮಕ ಹೋರಾಟಗಳಿಗೆಲ್ಲಾ ಹಿಂಸಾತ್ಮಕವಾಗಿಯೇ ಪ್ರತಿಕಾರದ ಉತ್ತರ ನೀಡಿದ್ದರು!
ಆದರೆ, ಮಂಡೇಲಾ ತಮ್ಮ ಬುಡಕಟ್ಟು ಸಂಸ್ಕøತಿ ಸಹಜ, ನೈಸರ್ಗಿಕ ಜೀವನ ಬುಡಕಟ್ಟು ವಿಧಿ-ಸಂಸ್ಕಾರಗಳಿಗೆ ಬದ್ಧರಾಗಿದ್ದೇ ಪ್ರತಿಭಟಿಸಿದರು.
ಆಫ್ರಿಕನ್ ಕರಿಯರ ಆಸ್ತಿ, ಸ್ವತ್ತುಗಳಿಗೆ ಲಗ್ಗೆಹಾಕಿ, ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿರುವ ಬ್ರಿಟೀಷರ ಷಡ್ಯಂತ್ರ-ಆಕ್ರಮಣಶೀಲತೆ ಸಮಸ್ತ ಕರಿಯರನ್ನು ತಟ್ಟಿದ್ದರೂ ಮಂಡೇಲಾ ಮಾತ್ರ ಸಿಟ್ಟಿಗೆದ್ದರು. ಪ್ರತಿಭಟಿಸಿದರು, ಆರ್ಭಟಿಸಿದರು.
ಜೈಲಿನಲ್ಲಿದ್ದೇ ಗಟ್ಟಿಯಾದರು. ಈ ವಿದ್ಯಮಾನವನ್ನು ಆಫ್ರಿಕನ್ ಜನರೊಂದಿಗೆ ಗಾಂಧಿ ಕೂಡಾ ವಿರೋಧಿಸಿದರು.
(ಮಂಡೇಲಾ ಪರವಾಗಿ)
ಭಾರತದಲ್ಲಿ ಅರ್ಯರ ವೈದಿಕತೆ ಬಹುಸಂಖ್ಯಾತರನ್ನು ಜೀರ್ಣಿಸಿಕೊಂಡಂತೆ ಬ್ರಿಟೀಷ್ ವಸಾಹತುಶಾಹಿ ಆಫ್ರಿಕನ್ನರನ್ನು ಸಂಪೂರ್ಣ ನಿರ್ವಿರ್ಯರನ್ನಾಗಿ ಮಾಡಲು ಹವಣಿಸುತಿತ್ತು. ಲಕ್ಷಾಂತರ ಮುಗ್ಧರ ನಡುವೆ, ಒಬ್ಬ ‘ಚೆ’ ಟುಟು ನಂತೆ ಮಂಡೇಲಾ ತನ್ನ ನೆಲಜಲ ‘ತನ್ನತನ’ವನ್ನು ಪ್ರತಿಬಿಂಬಿಸುವ ನಿರ್ಣಾಯಕ ಸಮರಕ್ಕಿಳಿದರು.
ಇಂಥ ಆಕ್ರೋಶಿತ ಹೋರಾಟಕ್ಕೆ ಮಂಡೇಲಾರನ್ನು ಸಜ್ಜು ಮಾಡಿದ್ದು ಯಾರು?
ವಾಸ್ತವವಾಗಿ, ‘ಅಲ್ಲಿನ ವಿದ್ಯಮಾನ’.
ಆದರೆ, ಬುಡಕಟ್ಟು ರಾಜಕುಮಾರನಾಗಿದ್ದ ಮಂಡೇಲಾ ಮೊದ ಮೊದಲು ನಮ್ಮೆಲ್ಲರಂತೆ ದನ ಕಾಯ್ದವನು,
ಹಕ್ಕಿ ಹೊಡೆದವನು. ಮರದಿಂದ ಹಣ್ಣು, ನದಿಯಿಂದ ಮೀನು ಹಿಡಿದು ತಿಂದವನು. ಮುಂದುವರಿದು, ವಿಶ್ವವಿದ್ಯಾಲಯದ ಶಿಕ್ಷಣ ಪಡೆದವನು. ವಿದ್ಯೆ-ಜನಸಂಪರ್ಕ, ಓಡಾಟ ಮಂಡೇಲಾರಿಗೆ ಬ್ರಿಟೀಷರ (ಬಿಳಿಯರ) ಆರ್ಥಿಕ, ರಾಜಕೀಯ, ಸಾಂಸ್ಕøತಿಕ ಯಜಮಾನತ್ವದ ‘ಒಗಟ’ನ್ನು ಪರಿಚಯಿಸಿತ್ತು.
ಹಳ್ಳಿಯಲ್ಲಿ ಹುಟ್ಟಿ, ಪರಿಸರ ಅರ್ಥ ಮಾಡಿಕೊಂಡು, ವಿವೇಕಿಯಾದವನಿಗೆ ಲಾಭ, ನೌಕರಿ, ಹುದ್ದೆ, ಲೋಲುಪತನ. ನಿಷ್ಫ್ರಯೋಜಕ ಕೌಟುಂಬಿಕತೆಗಳು ಕಟ್ಟಿ ಹಾಕುವುದಿಲ್ಲ!
ಮಂಡೇಲಾ ಹೋರಾಡುತ್ತಾ ಜೈಲು ಸೇರಿದರು,
ಜೈಲಿನಲ್ಲಿ ಗಟ್ಟಿಯಾದರು. 71 ವರ್ಷದವರಿದ್ದ ಮಂಡೇಲಾ ಜೈಲಿನಿಂದ ಹೊರಬಂದಾಗ ಪರಿಪಕ್ವ ಮನುಷ್ಯನಾದರು.
ಆ ವೇಳೆಗಾಗಲೇ ಮಂಡೇಲಾರಿಗೆ ಎರಡು ಬಾರಿ ಮದುವೆಯಾಗಿತ್ತು!.
ಎರಡೂ ಜನ ದೂರದಲ್ಲಿದ್ದರೂ ಎರಡನೇ ಹೆಂಡತಿ ವಿನ್ನಿಯವರ (ಸಂಬಂಧ!) ಸಂಪರ್ಕವಿತ್ತು. ಸ್ವಾಭಿಮಾನ, ಸ್ವಾತಂತ್ರ್ಯ ಕೊಡಿಸಿ, ರಾಷ್ಟ್ರಕಟ್ಟುತ್ತೇನಿ ಎನ್ನುವ ಛಲ ಹೊತ್ತಿದ್ದ ಮಂಡೇಲಾ ಕೊನೆಗೂ ತನ್ನ ಗುರಿ ಮುಟ್ಟಿದರು.
ಜಗತ್ತು ಕಂಡ ಅಪ್ರತಿಮ ಹೋರಾಟಗಾರ ‘ಚೆ’ ಬಗ್ಗೆ ‘ಈ ಜಗತ್ತಿನ ಯಾವ ಬಂಧಿಖಾನೆಗಳಿಗೂ, ಸೆನ್ಸಾರ್‍ಶಿಪ್‍ಗೂ ಚೆಗೆವಾರನನ್ನು ಅಡಗಿಸಿಡಲು ಸಾಧ್ಯವಿಲ್ಲಾ’ ಎಂದು ಗುಡುಗಿದ್ದ ನೆಲ್ಸನ್ ಮಂಡೇಲಾ, ಚೆಗೆವಾರಾ, ಕಾರ್ಲ್‍ಮಾಕ್ರ್ಸ, ಗಾಧಿಯವರಿಂದ ಪ್ರೇರೇಪಣೆ ಪಡೆದಿದ್ದರು.
ಒಬ್ಬ ರಾಜಕುಮಾರ (ಬುಡಕಟ್ಟು ಸಾಂಪ್ರದಾಯಿಕ ರಾಜಕುಮಾರನಲ್ಲ!) ಪ್ರಸಿದ್ಧನ ಮಗ,
ಶ್ರೀಮಂತನ ಮಗ ಅಪ್ಪನ ಹೆಸರು, ಕೀರ್ತಿಯಿಂದ ದಿಢೀರನೆ ಪ್ರವರ್ಧಮಾನಕ್ಕೆ ಬಂದು ಮರೆಯಾಗಬಹುದು. ಆದರೆ, ನೈಜ ಹೋರಾಟಗಾರನಿಗೆ ತಾಳ್ಮೆ, ಓದು, ಅನುಭವ, ಬದ್ಧತೆ, ಶ್ರಮವಿಲ್ಲದೆ ಎತ್ತರದ ಸ್ಥಾನ-ಮಾನ ದುರ್ಲಭ.
ಅದರಲ್ಲೂ ಆಸೆಬರುಕ, ಅವಕಾಶವಾದಿ ಸ್ಥಾನ-ಮಾನ ಆಕಾಂಕ್ಷಿಗಳು ಯಾವ ಧ್ಯೇಯ, ಉದ್ಧೇಶಗಳಿಲ್ಲದೆ ಶೋಷಕರಿಗೆ, ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ನೆರವಾಗಿ! ನೈಜ ಹೋರಾಟಗಾರನನ್ನು ಒಬ್ಬಂಟಿಯಾಗಿ ಮಾಡುವ ವಿದ್ಯಮಾನ ಚರಿತ್ರೆಯಲ್ಲೂ ಲಾಗಾಯ್ತಿನಿಂದಲೂ ಇದೆ.
ಹಾಗೆಯೇ ಬಿಳಿಯರು, ಪಟ್ಟಭದ್ರರು, ಆಶಾಡಭೂತಿಗಳು ಮಂಡೇಲಾರ ಪ್ರತಿ ನಡೆ, ಸಾಹಸಗಳನ್ನೂ ವಿಮರ್ಶಿಸಿ, ಟೀಕಿಸಿ ಕಾಲೆಳೆಯಲು ಪ್ರಯತ್ನಿಸಿದ್ದಿದೆ. ಪ್ರತಿ ಹಂತದಲ್ಲಿ ಈತ ಈಗ ಸೋಲುತ್ತಾನೆ, ಆಗ ಸೋಲುತ್ತಾನೆ ಎಂದು ನಿರೀಕ್ಷಿಸಿ
‘ಹೊಂಡಕ್ಕೆ ಬಿದ್ದವನಿಗೆ ತಲಾ ಒಂದು ಕಲ್ಲು’ ಎಂದು ಎಸೆಯಲು ಕಾದಿದ್ದಿದೆ. ಆದರೆ ಮಂಡೇಲಾ ಇವನ್ನೆಲ್ಲಾ ಧಿಕ್ಕರಿಸಿ ಗೆದ್ದುಬಿಟ್ಟರು.
ಆಫ್ರಿಕದ ಅಧ್ಯಕ್ಷತೆಗೇರಿದರು!
ದೇವೇಗೌಡ, ಓಬಾಮಾ, ಸಿದ್ಧರಾಮಯ್ಯ, ಬಂಗಾರಪ್ಪ, ಮೊಯಿಲಿ,ಮುಲಾಯಂ, ಮಂಡೇಲಾ ಪ್ರಫುಲ್‍ಕುಮಾರ್, ನಿತೀಶ್, ಲಾಲು, ಮೆಹತಾ ಥರದವರೆಲ್ಲಾ ಉನ್ನತ ಸ್ಥಾನಕ್ಕೇರಿದ ಕೂಡಲೆ ಜನತೆ ಅಗಾಧವಾದುದನ್ನು ನಿರೀಕ್ಷಿಸುತ್ತೆ.
ವಾಸ್ತವವೆಂದರೆ, ಜನಸಾಮಾನ್ಯರ ನಿರೀಕ್ಷೆ, ಭ್ರಮೆ-ಕಲ್ಪನೆ, ಆಸೆ. ಆದರೆ, ಆಡಳಿತ ಅನುಷ್ಠಾನ ವಾಸ್ತವ. ಯಾವೊಬ್ಬ ಕ್ರಾಂತಿಕಾರಿಯೂ ತನ್ನ ಭ್ರಮೆ, ಆಸೆ, ಕಲ್ಪನೆಗಳನ್ನೆಲ್ಲಾ ಜಾರಿಮಾಡಲು ಸಾಧ್ಯವಿಲ್ಲ. ಆದರೆ, ಆತ ಗುರಿ ಧ್ಯೇಯಗಳನ್ನು ಬೆನ್ನಟ್ಟಬಲ್ಲ.
ಆದರೆ ನಿರೀಕ್ಷೆ ಟೀಕೆ ಮಾಡುವುದನ್ನು ಬಿಟ್ಟು ಬೇರೇನನ್ನೂ ಕಲಿಯದ ಜನಸಾಮಾನ್ಯರು, ಸಾಹಸಿಗಳು, ಸಾಧಕರ ನ್ಯೂನ್ಯತೆಗಳನ್ನೇ ಮಾತನಾಡತೊಡಗುತ್ತಾರೆ.
ಇಂಥ ನಿರೀಕ್ಷೆ ಒಲವು ಇಟ್ಟುಕೊಂಡವರೊಂದಿಗೆ ಅಯಾ ಕಾಲದ ಪಲಾನುಭವಿಗಳು ವಾಸ್ತವ, ಚರಿತ್ರೆಗಳನ್ನು ತಿರುಚಿ ಮಾತನಾಡುವುದಿದೆ. ಈ ಎಲ್ಲಾ ಸ್ಥಿತ್ಯಂತರ, ಕಾಲನ ದಾಳಿಗೆ ಮಂಡೇಲಾ ತುತ್ತಾಗಿ, ನುಗ್ಗಾಗಿ ತೆರೆಯ ಮರೆಗೆ ಸರಿದಿದ್ದಾರೆ.
ಮಂಡೇಲಾರ ಜೀವನ, ಜೀವನಾನುಭವ ಎಲ್ಲರಿಗೆ ಕನಿಷ್ಟ ಶೋಶಿತರಿಗೆ ಮಾದರಿಯಾಗಬೇಕು. ‘ಮಂಡೇಲಾ ಮತ್ತೆ ಹುಟ್ಟಿಬಾ ಎಂದು ನಾವೂ ಅಶಿಸಬಹುದಷ್ಟೆ.
ಕಷ್ಟ ಕೆದಕುವ ಅವರಿಗೆ ಅವರ ತ್ಯಾಗ, ಹೋರಾಟಕ್ಕೆ ‘ಸಮಾಜಮುಖಿ’ ಸಲಾಂ.
….ನಿಮ್ಮ, ಕನ್ನೇಶ್ ಕೋಲ್‍ಶಿರ್ಸಿ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
