ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ

ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ‌ ವ್ಯಾಪ್ತಿ ವಿಚಾರದಲ್ಲಿ ಎಡವಿದರು ಎನ್ನಲಾದ ಪೊಲೀಸರು ಚುರುಕಾಗಿದ್ದರೆ ಸಂತೋಷ ಆತ್ಮಹತ್ಯೆ ತಪ್ಪಿಸಬಹುದಿತ್ತು! ಆದರೆ ನಿಧಾನವೇ ಪ್ರಧಾನ ಎಂದುಕೊಂಡ ಪೊಲೀಸರ ತಪ್ಪಿಗೆ ಈಗ ತಲೆದಂಡವಾಗಿದೆ. ಸೈಬರ್‌ ವಿಚಾರ ಮತ್ತು ಗುಪ್ತವಾರ್ತೆ ಕಾರ್ಯ ನಿರ್ವಹಿಸುತಿದ್ದ ಪ್ರಶಾಂತ್‌ ಕುಮಾರ ಮತ್ತು ಮೋಹನ ಗಾವಡಿ ಈ ಕೇಸ್‌ ಕಾರಣಕ್ಕೆ ಅಮಾನತ್ತಾಗಿದ್ದಾರೆ.

ಹಿಂದಿನ ಅಧಿಕಾರಿಗಳ ಪ್ರವೇಶದ ಕಾರಣಕ್ಕೆ ನೆಮ್ಮದಿಯಾಗಿದ್ದಾರೆ ಎಂದು ಭಾವಿಸಿದ್ದ ಪ್ರಶಾಂತ್‌ ಮತ್ತು ಮೋಹನ ತಮ್ಮ ಕರ್ತವ್ಯ ದೋಷಕ್ಕೆ ಗುರಿಯಾಗಿ ಅಮಾನತ್ತಾಗಿದ್ದಾರೆ. ಚನಮಾಂವ್‌ ನ ಮೂವರು ನೇರ ಆರೋಪಿಗಳಲ್ಲಿ ಹೇಮಂತ್‌ ಮತ್ತು ಶಿವಕುಮಾರ ಜೈಲು ಪಾಲಾಗಿದ್ದರೆ ಇನ್ನೊಬ್ಬ ಶಾಮೀಲುದಾರ ಹೇಗೆ ತಪ್ಪಿಸಿಕೊಂಡ ಎನ್ನುವ ಜಿದ್ಞಾಸೆ ಈಗ ಪ್ರಾರಂಭವಾಗಿದೆ.

ಚನಮಾಂವನ ಅಡ್ಡಕಸುಬಿ ಹುಡುಗರು ವಯಸ್ಸು ಯೋಗ್ಯತೆಗೆ ಮೀರಿದ ಕೆಲಸ ಮಾಡಿದ್ದರು ಅವರನ್ನು ಪೊಲೀಸರು ವಿಚಾರಿಸಿ ಸಂತೋಷನ ಆತ್ಮಹತ್ಯೆ ತಪ್ಪಿಸಿದ್ದರೆ ಪೊಲೀಸರೂ ಬಚಾವಾಗುತಿದ್ದರು ಆದರೆ ಪೊಲೀಸರು ಆರೋಪಿಗಳನ್ನು ರಾಜಕಾರಣಿಗಳ ಸುಪರ್ಧಿಗೆ ನೀಡಿಬಿಟ್ಟರು. ನೈತಿಕವಾಗಿ, ಸಾಮಾಜಿಕ ಕಾಳಜಿಯ ಕಾರಣಕ್ಕೆ ಪೊಲೀಸರು ತೋರಿದ ಉದಾರತೆ ಈಗ ಅವರಿಗೇ ಕುಣಿಕೆಯಾಗಿದೆ. ಕಾಲೇಜುಹುಡುಗರ ಈ ಬಾನಗಡಿ ಬಗ್ಗೆ ಸಾಮಾಜಿಕ ಕಾಳಜಿಯಿಂದಲೇ ರಾಜಕಾರಣಿಗಳು ಮೂಗು ತೂರಿದ್ದಾರೆ. ಆದರೆ ಆಮೇಲೆ ಸೇರಿಕೊಂಡ ರಾಜಕಾರಣ ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಈಗ ಜೈಲುಪಾಲಾದ ಇಬ್ಬರ ಜೊತೆಗೆ ತಳುಕು ಹಾಕಿಕೊಂಡ ಹೆಸರುಗಳು ಹಲವು ಅದರಲ್ಲಿ ಚರಣ್‌ ಪಾತ್ರ ಮಾತ್ರ ನಿಗೂಢವಾಗಿದೆ!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

3 Comments

Leave a Reply

Your email address will not be published. Required fields are marked *