ತೌಡತ್ತಿ ಸಂತೋ಼ಷನ ಸಾವು, ಚನಮಾವ್ ಹುಡುಗರ ವಿರುದ್ಧ ದೂರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಿ.ಜೆ.ಪಿ. ಒತ್ತಾಯ https://samajamukhi.net/2025/06/12/vasant-enquiry-sucide-followup/

  • ಮಂಗಳವಾರ ಸಾಯಂಕಾಲದ ವೇಳೆಗೆ ಸೊರಬಾ ಚಿಕ್ಕತೌಡತ್ತಿಯ ಗಣಪತಿ ನಾಯ್ಕ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ತನ್ನ ಮಗ ಸಂತೋಷ ಆತ್ಮಹತ್ಯೆಗೆ ಶರಣಾಗಿದ್ದು ಅವನ ಸಾವಿಗೆ ಚನಮಾವಿನ ಏಳು ಜನರು ಕಾರಣ ಎಂದು ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ.
  • * ಶನಿವಾರ ತೌಡತ್ತಿಗೆ ತೆರಳಿದ್ದ ಚನಮಾಂವ ನ ತಂಡ ಸಂತೋಷನನ್ನು ಹೆದರಿಸಿ ಅವರ ತಂದೆ ಗಣಪತಿ ನಾಯ್ಕರಿಗೂ ಅವಾಚ್ಯವಾಗಿ ನಿಂದಿಸಿತ್ತು ಎನ್ನುವುದು ಹಿನ್ನೆಲೆ
  • ಇಂದು ಬುಧವಾರ ಅ ಎನ್ನುವ ಹುಡುಗಿ ಸಂತೋಷ ತನ್ನ ಅಂತರ್ಜಾಲ ಖಾತೆಗಳನ್ನು ಹ್ಯಾಕ್‌ ಮಾಡಿ ಹಣ ಸಂಗ್ರಹಿಸುತಿದ್ದ ಎಂದು ದೂರು ನೀಡಿದ್ದಾಳೆ.
  • * ಇದರ ಮಧ್ಯೆ ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷರು ಈ ಸಾವಿನಲ್ಲಿ ಕೈವಾಡವಿದ್ದು ಕೂಲಂಕುಶ ತನಿಖೆ ನಡೆಸಲು ಆಗ್ರಹಿಸಿದ್ದಾರೆ.
  • * ಈ ಸಾವು, ರಾಜಕೀಯ ಮೇಲಾಟಗಳ ನಡುವೆ ಮೃತ ಸಂತೋಷ ಪೊಸ್ಟ್‌ ಮಾಡಿದ್ದು ಎನ್ನಲಾದ ಡೆತ್‌ ನೋಟ್‌ ವೈರಲ್‌ ಆಗಿದ್ದು ಅದರ ಆಧಾರದಲ್ಲಿ ಬಿ.ಜೆ.ಪಿ. ಕಾಂಗ್ರೆಸ್‌ ಗುರಿ ಮಾಡುತ್ತಿದೆ.

https://www.youtube.com/watch?v=KIay_aBPV9g&t=32s

  • ‌ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸೊರಬಾ ತೌಡತ್ತಿಯ ಸಂತೋಷ ನಾಯ್ಕ ಸಿದ್ಧಾಪುರ ವ್ಯಾಪ್ತಿಯ ಕಾಳೇನಳ್ಳಿ ಧೂಪದ ಕಾನಿನಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಗ್ಗೆ ಅವರ ತಂದೆ ಗಣಪತಿ ನಾಯ್ಕ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ತನ್ನ ಮಗನ ಸಾವಿಗೆ ಚನಮಾಂವನ ಚರಣ, ಮನೋಜ್‌, ಲೋಕೇಶ್‌ ಕಾರಣರಾಗಿದ್ದು ಇವರೊಂದಿಗೆ ಬಂದಿದ್ದ ಇನ್ನೂ ನಾಲ್ಕು ಜನರು ತಮ್ಮ ಮಗನಿಗೆ ಹೆದರಿಸಿ, ಪ್ರೀತಿಸಿದ ಹುಡುಗಿ ಬಿಡಲು ಸಾಧ್ಯವಾಗದಿದ್ದರೆ ಸಾಯಿ ಎಂದು ದು:ಶಪ್ರೇರಣೆ ನೀಡಿದ್ದಾರ ಎಂದು ದೂರಿದ್ದಾರೆ.
  • ಮಗನ ಯಾಂತ್ರಿಕ ಸಾಧನಗಳನ್ನು ಅಪಹರಿಸಿ, ತಮಗೂ ಜೀವ ಬೆದರಿಕೆ ಒಡ್ಡಿದ್ದರಿಂದ ಸಂತೋಷ ಸಾಯುವ ನಿರ್ಧಾರಕ್ಕೆ ಬಂದಿದ್ದರಿಂದ ಮೂವರು ಚನಮಾಂವ ಹುಡುಗರ ಜೊತೆ ಬಂದಿದ್ಧ ನಾಲ್ಕು ಜನರು ಸೇರಿ ಒಟ್ಟೂ ೭ ಜನರ ಮೇಲೆ ದೂರು ದಾಖಲಿಸಿದ್ದಾರೆ.
  • ಈ ಘಟನೆ ನಂತರ ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಜಿಲ್ಲಾ ಬಿ.ಜೆ.ಪಿ. ಸಂತೋಷ ಬರೆದಿದ್ದೆನ್ನಲಾದ ಸಾವಿನ ನೋಟ್‌ ಆಧರಿಸಿ ಕೈ ವಾಡ ಬಯಲು ಮಾಡಿ ಎಂದು ಆಗ್ರಹಿಸಿದೆ.
  • ಈ ಬೆಳವಣಿಗೆ ನಂತರ ಕೋಲಶಿರ್ಸಿಯ ಅ ಎನ್ನುವ ಯುವತಿ ಪೊಲೀಸ್‌ ದೂರು ನೀಡಿ ಸಂತೋಷ ತನ್ನ ಅಂತರ್ಜಾಲಖಾತೆಗಳನ್ನು ಹ್ಯಾಕ್‌ ಮಾಡಿ ಅದರಿಂದ ಹುಡುಗಿಯರ ಪೋಟೊ ಬಳಸಿ ಹಣ ಸಂಗ್ರಹಿಸುತಿದ್ದ ಎಂದು ದೂರಿದ್ದಾಳೆ!
  • ಈ ಪ್ರಕರಣದಲ್ಲಿ ಸಂತೋಷ ಜೀವ ಕಳೆದುಕೊಂಡಿದ್ದಾನೆ. ಸಂತೋಷನ ಪ್ರೇಯಸಿ ಎನ್ನಲಾಗುವ ಅ ಕಾರಣಕ್ಕೆ ಚನಮಾಂವ ಹುಡುಗರ ಮೇಲೆ ದೂರು ದಾಖಲಾಗಿದೆ ಎನ್ನಲಾಗಿದೆ.
  • ಇದರಲ್ಲಿ ರಾಜಕಾರಣಿ ಮತ್ತು ವಕೀಲರೊಬ್ಬರ ಹೆಸರನ್ನು ತಳುಕು ಹಾಕಿದವರ್ಯಾರು? ಚನಮಾಂವನ ತಂಡ ವಕೀಲರು, ಮುಖಂಡರ ಹೆಸರು ಬಳಸಿಕೊಂಡಿತ್ತೆ ಎನ್ನುವುದು ಅನುಮಾನ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

5 Comments

Leave a Reply

Your email address will not be published. Required fields are marked *