ಮೂಕಜ್ಜಿಯ ಕನಸುಗಳು


ಮುನ್ನುಡಿ-
ಮನೋಜೀವಿಯಾದ ಮಾನವ ಕುಲವು ಈ ಭೂಮಿಯ ಮೇಲೆ ನೆಲೆಸಿದ ಅಲ್ಫಾವಧಿಯಲ್ಲಿ ಅಮಿತ ವಿಶ್ವಗಳಿಂದ ಕೂಡಿರುವ, ಬಿಲಿಯಗಟ್ಟಲೆ ವರ್ಷಗಳಿಂದ ಕಾಣಿಸಿಕೊಂಡು ಬಂದ ಮಹಾ ಮಹ ಜಗತ್ತಿನ ಬರಿಯ ಸೆರೆಗೊಂದರ ಸೂಕ್ಷ್ಮ ಎಳೆಯನ್ನು ಕೂಡ ಚೆನ್ನಾಗಿ ಕಂಡಿರಲಾರದು.
ಆದರೆ ಆತ ತನ್ನ ಅಲ್ಪಮತಿಗೆ ಗೋಚರಿಸಿದ ಅದ್ಬುತ, ಆಶ್ಚರ್ಯಗಳಿಂದ ಚಕಿತಗೊಂಡು- ಈ ಜಗತ್ತೇನು ? ಯಾರು ಅದನ್ನು ಸೃಷ್ಟಿಸಿದರು, ಯಾಕೆ,ನಾನು ಎಂಥವ, ಯಾತಕ್ಕಿದ್ದೇನೆ- ಎಂಬ ಪ್ರಶ್ನೆ ಕೇಳತೊಡಗಿದ.
ಬರಿದೆ ಪ್ರಶ್ನೆ ಕೇಳಿದರೆ ಸಾಲದಲ್ಲ : ತನ್ನ ಎಟುಕಿಗೆ ಸಿಗದಂಥ ವಿಷಯವನ್ನು ಸಿಕ್ಕಿದಂತೆಯೇ ನೆನೆದು, ಮನಸ್ಸನ್ನು ಕಲ್ಪನಾಲೋಕಕ್ಕೆ ಹರಿಯಗೊಟ್ಟು, ಅಲ್ಲಿ ಕಂಡ ಕನಸನ್ನು ನಿಜ, ಸತ್ಯ ಎಂದು ಸಾರುತ್ತಲೂ ಬಂಧ !
ಅವರವರ ಕಲ್ಪನೆ ಎಷ್ಟೆಷ್ಟು ಬೆಡಗಿನದೋ, ಭವ್ಯವೋ, ಅದರ ಮೇಲಿಂದ ಅವರು ಹೇಳಿದ್ದೇ ಸತ್ಯವೆನಿಸಿತು.
ಅಷ್ಟೊಂದು ವಿಸ್ತಾರಕ್ಕೆ ಕಲ್ಪನೆಯನ್ನು ಬೆಳೆಯಿಸಲಾರದವರು, ಅಂಥದನ್ನು ಮೂಕ ಮೌನದಿಂದ ಹಿರಿಯರಾಡಿದ ಒಂದೊಂದು ಸೊಲ್ಲೂ ಅಕ್ಷರಶಃ ಸತ್ಯವೆಂದೂ ತಿಳಿದು, ನಂಬಿ ಬಂದರು, ಸಾವಿರ ಜನರು ಸಾವಿರ ಬಗೆಗಳಿಂದ ಹರಿಯಿಸಿದ ಈ ಕಲ್ಪನಾವಿಲಾಸಗಳು ಪರಸ್ಫರ ಘರ್ಷಣೆಗೆ ಕಾರಣವಾದುದೂ ಉಂಟು.
ಭಾರತ ದೇಶ, ಇಲ್ಲಿಯೇ ಇದ್ದ ಜನರು, ಆಮೇಲೆ ಬಂದ ಜನರು ಸಹ ಇದಕ್ಕೆ ಆಕ್ಷೇಪವಲ್ಲ. ಇಲ್ಲಿನ ಜನರು ಪರಂಪರೆಯಿಂದ ಪಡೆದು ಬಂದ ಕಲ್ಪನಾವಿಲಾಸಗಳನ್ನು ಈ ಕಾದಂಬರಿಯ ಮೂಕಜ್ಜಿ ತನ್ನ ಕಲ್ಪನಾವಿಲಾಸದಿಂದ ಕೆದಕಿ ನೋಡುತ್ತಿದ್ದಾಳೆ.
ಈ ಕಾದಂಬರಿಗೆ ಕಥಾನಾಯಕನಿಲ್ಲ: ನಾಯಕಿಯಿಲ್ಲ. ಮೂಕಜ್ಜಿಯೂ ಇಲ್ಲಿ ಕಥಾನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸ್ಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು. ಅಂಥ ಅಜ್ಜಿಯೊಬ್ಬಳು ಇದ್ದಾಳೆಯೆ ಎಂಬ ಸಂಶಯ ಬಂದರೆ, ನಮ್ಮ ಸಂಸ್ಕøತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯಿತು, ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದಿಕಿಕೊಂಡೇ ಇದ್ದಾಳೆ. ಅವಳ ಮೊಮ್ಮಗನಾದ ಸುಬ್ಬರಾಯನಂಥವರು ಹಲವರಿದ್ದಾರೆ.
ಆ ಅಜ್ಜಿ, ಮೊಮ್ಮಗ ಇಬ್ಬರೂ ಸೇರಿ ನಾಲ್ಕೈದು ಸಾವಿರ ವರ್ಷಗಳಿಂದ ಹರಿದು ಬಂದಿರುವ ‘ ಸೃಷ್ಟಿಸಮಸ್ಯೆ’ಯೊಂದನ್ನು ಮಥಿಸಲು ಇಲ್ಲಿ ಯತ್ನಿಸುತ್ತಾರೆ. ಅವಾಸ್ತವಿಕಳೆನಿಸುವ ಅಜ್ಜಿ, ಅನೇಕ ವಾಸ್ತವಿಕ ಇತಿಹಾಸಾಂಶಗಳನ್ನು ತನ್ನ ಒಳದಿಳಿವಿನಿಂದ ನಮ್ಮ ಮುಂದಕ್ಕೆ ಇರಿಸುತ್ತಾಳೆ.
ಕಾದಂಬರಿಯ-ನಾಗಿ, ರಾಮಣ್ಣ, ಜನ್ನ ಮೊದಲಾದವರು ಸೃಷ್ಟಿ ಶಕ್ತಿಯನ್ನು ಅವಹೇಳನ ಮಾಡುವ ಮನೋಧರ್ಮಕ್ಕೆ ವಾದಿಗಳೋ , ಪ್ರವಾದಿಗಳೋ, ಸಾಕ್ಷಿದಾರರೋ ಆಗಿ ಕಾಣಿಸುತ್ತಿದ್ದಾರೆ.
ತಂತಮ್ಮ ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನರ ಕಥೆಯೂ ಇಲ್ಲಿದೆ: ಅದರಿಂದಾಗಿ ಇಂದಿನ ನಮಗೆ ಕೇಳಿಸದೆ ಹೋದ ಕೆಲವು ಯಾತನೆಯ ಧ್ವನಿಗಳನ್ನೂ ಕೇಳುವಿರಂತೆ.
ಅಕ್ಟೋಬರ್ 10, 1968 ಇತಿ
ಪುತ್ತೂರು,ದ.ಕ ಡಾ.ಶಿವರಾಮ ಕಾರಂತ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *