ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-01-

ಜಾತಿ,ಸಂಘ,ಪರಿವಾರಗಳ ಬೆಂಬಲದಿಂದ ಬಿ.ಜೆ.ಪಿ.ಯಲ್ಲಿ ಪ್ರಶ್ನಾತೀತ ನಾಯಕರೆಂಬಂತೆ ಪ್ರತಿಷ್ಠಾಪಿತರಾಗಿರುವ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ತವರು ನೆಲ ಉತ್ತರ ಕನ್ನಡದಲ್ಲಿ ಹೆಜ್ಜೆ ಹೆಜ್ಜೆಗೂ ವಿರೋಧ ವ್ಯಕ್ತವಾಗುತ್ತಿದೆ. ಯಾವ ಶ್ರಮವೂ ಇಲ್ಲದೆ ಎ.ಬಿ.ವಿ.ಪಿ.ಯಿಂದ ಬಿ.ಜೆ.ಪಿ.ಗೆ ಎಂಟ್ರಿ ಹೊಡೆದಿದ್ದ ಕಾಗೇರಿ ವಿಶ್ವೇಶ್ವರ ಹೆಗಡೆ ಕಾಗ್ರೆಸ್‌ ವಿಫಲತೆ, ಕಾಂಗ್ರೆಸ್‌ ನ ವೈದಿಕ ಮನುವಾದಿಗಳ ಅಂದರ್‌ ಕಿ ಮಚ್ಚುವಾಳ್ಳಿತನಗಳಿಂದ ಅನಾಯಾಸವಾಗಿ ಆಯ್ಕೆಯಾಗಿದ್ದು ಬರೀ ಒಂದೆರಡು ಬಾರಿಯಲ್ಲ… ಅನಾಮತ್ತು ೬ ಸಾರಿ,

ಆನಂತರ ಏಳನೇ ಬಾರಿ ಭೀಮಣ್ಣರೆದುರು ರೋಚಕ ಸೋಲಿಗೆ ಶರಣಾದ ಕಾಗೇರಿ ಮುಸ್ಲಿಂ ವಿರೋಧದಿಂದಲೇ ಆಯ್ಕೆಯಾಗುತಿದ್ದ ಅನಂತಕುಮಾರ ಹೆಗಡೆಯವರನ್ನು ಹಿಂದೆ ಸರಿಸಿ ಸಂಸದರಾಗಿಬಿಟ್ಟರು. ಹೀಗೆ ಸಂಸದರಾಗಲು ಸಜ್ಜನ ಕಾಗೇರಿ ಬಳಸಿದ್ದು ನೂರಾರು ಕೋಟಿ ಎಂದರೆ… ಬಿ.ಜೆ.ಪಿ., ಸಂಘ, ರಾಷ್ಟ್ರೀಯತೆಯ ಸೋಗಿನಲ್ಲಿ ಕಾಗೇರಿ ಗಳಿಸಿದ ಸಂಪತ್ತು ಎಷ್ಟಿರಬಹುದು ಎಂಬುದೂ ಊಹೆಗೂ ನಿಲುಕದ ವಿಚಾರ. ಹೀಗೆ ರಾಷ್ಟ್ರೀಯತೆ, ಹಿಂದುತ್ವ, ಪ್ರಾಮಾಣಿಕತೆಯ ಸೋಗಿನಲ್ಲಿ ಸಂಘಿಗಳು ಗಳಿಸಿರುವ ಹಣ ಇಡಿಗೆ ಸಿಗುವಂತಾದರೆ ಅದೂ ಭಾರತದ ಬಜೆಟ್ಟನ್ನೂ ಮೀರಿಸಬಹುದು ಆದರೆ ಸಂಘದ ನಯವಂಚಕ ನಂ೧ ಫೇಕು ಮತ್ತವರ ದುಷ್ಟಕೂಟ ಸಿ.ಬಿ.ಐ. ಇಡಿಗಳನ್ನು ದುಷ್ಟಸಂಘಿಗಳ ವಿರುದ್ಧ ಬಳಸಲ್ಲ!

ಇದು ಭಾರತದ ದುರಂತ… ಇಲ್ಲಿ ಮಹಾವಂಚಕ ದೇಶಪ್ರೇಮ, ಹಿಂದುತ್ವ, ರಾಷ್ಟ್ರೀಯತೆಯ ಸೋಗಿನಲ್ಲಿ ಹಗಲುದರೋಡೆ ಮಾಡಬಹುದು! ಸೇನೆ- ಸೈನಿಕರ ಪರವಾದ ಮೊಸಳೆಕಣ್ಣೀರಿನಿಂದ ಚುನಾವಣೆ ಗೆಲ್ಲಬಹುದು!!!! ಈ ವಿಶ್ವ ದುರಂತದೆದುರು ಉತ್ತರ ಕನ್ನಡ ಬಿ.ಜೆ.ಪಿ.ಯಲ್ಲಿ ಕ್ಷೋಭೆ ಭುಗಿಲೆದ್ದಿದೆ. ಕಾಗೇರಿಯವರ ಯಜಮಾನಿಕೆ, ಪಾಳೇಗಾರಿಕೆ, ವಿರೋಧಿಸುವ ಕಾರವಾರದ ರೂಪಾಲಿ ನಾಯ್ಕ ಕಾಗೇರಿಯ ಬ್ರಾಮ್ಹಣ ಲಾಭಿ ವಿರೋಧಿಸಿ ಯಡಿಯೂರಪ್ಪ ಕುಟುಂಬ ಬಳಸಿ ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷೆಯಾಗಿದ್ದಾರೆ. ಸಿದ್ಧಾಪುರದ ಕೆ.ಜಿ.ನಾಯ್ಕ ಕಾಗೇರಿವರು ಸಚಿವ-ಸಭಾಪತಿ ಆಗಿದ್ದಾಗಲೇ ಅವರ ವಿರುದ್ಧ ತೊಡೆ ತಟ್ಟಿ ಸಿದ್ಧಾಪುರದಲ್ಲಿ ನಿಮ್ಮ ಮನುವಾದಿ ಧೂರ್ತತನಕ್ಕೆ ಅವಕಾಶವಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.

ಈ ಕಾಗೇರಿ ವಿರೋಧಿ ಬಿ.ಜೆ.ಪಿ. ಬಣವನ್ನು ಪಳಗಿಸುತ್ತಿರುವ ಶಾಸಕ ಭೀಮಣ್ಣ ನಾಯ್ಕ ಪ್ರತಿನಿತ್ಯ ಅವರ ವಿಶ್ವಾಸ ಗಳಿಸುತ್ತಾ ಬಿ.ಜೆ.ಪಿ. ಕೋಟೆಯ ಕಲ್ಲು ಕೀಳುತಿದ್ದಾರೆ… ಈ ರಾಜಕೀಯ ಮೇಲಾಟಗಳ ನಡುವೆ ಬಿ.ಜೆ.ಪಿ.ಯಲ್ಲಿ ಆಂತರಿಕ ಕಲಹ ಪ್ರಾರಂಭವಾಗಿ ಸಂಸದ ಕಾಗೇರಿಯ ಹಿಂಬಾಲಕರೆಲ್ಲಾ ಒಬ್ಬೊಬ್ಬರಾಗಿ ಕೈ ವಶವಾಗುವ ಲಕ್ಷಣ ನಿಚ್ಚಳವಾಗುತ್ತಿದೆ ಎನ್ನಲಾಗುತ್ತಿದೆ.

ಕಾಗೇರಿ ಶಾಸಕ, ಸಚಿವ, ಸಂಸದರಾಗಿದ್ದಾಗಲೆಲ್ಲಾ ಎಲ್ಲರಿಗೂ ಭಾವನಾಗಿ ಮಾತನಾಡಿಸುತ್ತಾ ಎಲ್ಲರ ಮೂಗಿಗೂ ತುಪ್ಪ ಸವರುತಿದ್ದರು. ಈ ಸಂಘದ ಕುಟಿಲತೆ ಅರ್ಥಮಾಡಿಕೊಳ್ಳುತ್ತಿರುವ ಬಿ.ಜೆ.ಪಿ.ಯ ಅನೇಕರು ಮೂಗಿಗೆ ತುಪ್ಪ ಸವರುವವರಿಗಿಂತ ಮಾಂಸದೂಟ ಬಡಿಸುವವರೇ ಲೇಸು ಎನ್ನುತಿದ್ದಾರೆ ಈಗ.! (conti…….)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

2 Comments

Leave a Reply

Your email address will not be published. Required fields are marked *