ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು ಶತಾಯ ಗತಾಯ ಜಾರಿಮಾಡುತ್ತದೆ. ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮದ ಹೆಸರೇಳುತ್ತಲೇ ಬಿ.ಜೆ.ಪಿ. ಉತ್ತರ ಕನ್ನಡದಲ್ಲಿ ಬೆಳೆಸಿದ್ದು ಸಂಘಿಗಳಾದ ಅನಂತಕುಮಾರ ಹೆಗಡೆ, ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಗಳನ್ನು ಈ ಇಬ್ಬರೂ ಉತ್ತರ ಕನ್ನಡದಲ್ಲಿ ೩೦ ವರ್ಷ ಅನಾಯಾಸವಾಗಿ ಜನಪ್ರತಿನಿಧಿಗಳಾಗಿದ್ದರು ಎಂದರೆ ಬಿ.ಜೆ.ಪಿ.ಸಂಘ ಹೆಣೆದ ಬಲೆಗೆ ಬಿದ್ದು ಮೂರ್ಖರಾದ ಅಹಿಂದ್‌ ಗಳ ಯೋಗ್ಯತೆ, ಮೂರ್ಖತನಕ್ಕೆ ಇದಕ್ಕಿಂತ ಬೇರೆ ದಾಖಲೆ, ಸಾಕ್ಷಿ ಬೇಕಿಲ್ಲ.

ಅಧಿಕಾರ, ಹಣ, ಹುಸಿ ಹಿಂದುತ್ವ, ಸೈನಿಕರು, ಸೇನೆ- ದೇಶದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸುಡೋ ಬಿ.ಜೆ.ಪಿ. ಉತ್ತರ ಕನ್ನಡದಲ್ಲಿ ಬ್ರಾಹ್ಮಣರೆನ್ನುವ ಕಾರಣಕ್ಕೇ ಅಧಿಕಾರ ಕೊಟ್ಟಿದ್ದು ಮಹಾಬ್ರಾಹ್ಮಣ ಶೂದ್ರವಿರೋಧಿ ನಯವಂಚಕರಾದ ಸಚ್ಚಿದಾನಂದ ಹೆಗಡೆ, ಅನಂತ ಹೆಗಡೆ ಆಶೀಸರ, ವಿನೋದ ಪ್ರಭು ಸೇರಿದ ಹಲವು ಬ್ರಾಹ್ಣಣರಿಗೆ ಇದರ ಮಧ್ಯೆ ಪ್ರಚಾರ, ಓಲೈಕೆಗಾಗಿ ಶಾಂತರಾಮ ಸಿದ್ದಿ ಮತ್ತು ಗೋವಿಂದ ನಾಯ್ಕರಂಥ ಹೌದಪ್ಪಗಳಿಗೆ.

ಈ ವಿದ್ಯಮಾನದ ನಡುವೆ ಜನಸಂಖ್ಯೆ ಹಣದ ಕಾರಣಕ್ಕೆ ಗೆದ್ದ ಶಿವರಾಮ ಹೆಬ್ಬಾರ್‌, ‌ಆನಂದ ಅಸ್ನೋಟಿಕರ್, ರೂಪಾಲಿ ನಾಯ್ಕ, ಸುನಿಲ್‌ ನಾಯ್ಕರನ್ನು ಬಿ.ಜೆ.ಪಿ. ಒಪ್ಪಿಲ್ಲ, ಇವರ ನಡುವೆ ಕಾಗೇರಿ ರಾಜ್ಯದಿಂದ ಕೇಂದ್ರದ ವರೆಗೆ ಜಾತಿ-ಸಂಘ ಬಳಸಿ ಕೆ.ಜಿ. ನಾಯ್ಕ ಹಣಜಿಬೈಲ್‌, ನಾಗರಾಜ್‌ ನಾಯಕ, ಮಹಾಬಲ ನಾಯ್ಕ ಸೇರಿದ ಅನೇಕರ ಶೂದ್ರರನ್ನು ಹಣಿದರು. ಈ ಕಾಗೇರಿ, ಅನಂತಕುಮಾರ ಹೆಗಡೆಗಳ‌ ಧರ್ಮ-ಧಾರ್ಮಿಕತೆಯ ಚೀಪ್ ರಾಜಕಾರಣಕ್ಕೆ ಮಾರಿಹೋಗಿ ಹಿಂದುತ್ವದ ಹೆಸರಲ್ಲಿ ಸಂತ್ರಸ್ತರಾದವರ ಸಂಖ್ಯೆ ನೂರಾರು. ಈ ಸಂಘಪ್ರೇರಿತ ಬಿ.ಜೆ.ಪಿ.ಯ ಬಹುಜನವಿರೋಧಿ ರಾಜಕಾರಣಕ್ಕೆ ಸೆಡ್ಡು ಹೊಡೆದವರು ದೀವರ ಭೀಮಣ್ಣ ನಾಯ್ಕ, ನಯವಂಚಕ ಶೋಕಿವಾಲಾಗಳ ವಿರೋಧಿ ಪಡೆ ಕಟ್ಟದೆ ತನ್ನದೇ ತಾಕತ್ತಿನಿಂದ ಬಿ.ಜೆ.ಪಿ. ರಾಜಕಾರಣಕ್ಕೆ ಎದೆಕೊಟ್ಟ ಭೀಮಣ್ಣ ಮೊದಲು ಕಾಗೇರಿ ವಿಶ್ವೇಶ್ವರ ಹೆಗಡೆ ಸೋಲಿಸುವ ಮೂಲಕ ಹುಸಿ ಹಿಂದುತ್ವದ ಸೋಗಲಾಡಿತನದ ಚೆಡ್ಡಿ ಬಿಚ್ಚಿಸಿದರು. ಭೀಮಣ್ಣ ಪ್ರಾರಂಭಿಸಿದ ನಯವಂಚಕ ಸಂಘಿ ಕುಟಿಲತೆಯ ಮೇಲ್ಜಾತಿ ವಿರೋಧಿ ರಾಜಕಾರಣಕ್ಕೆ ಈಗ ಎರಡು ದಶಕ!

ಮೂರ್ನಾಲ್ಕು ದಶಕಗಳಿಂದ ಬಿ.ಜೆ.ಪಿ. ವಿರೋಧಿ ರಾಜಕಾರಣ ಮಾಡುತ್ತಿರುವ ಭೀಮಣ್ಣ ನಾಯ್ಕ ಹರಸಾಹಸದಿಂದ ತಾನು ಗೆದ್ದುಕೊಂಡರು. ಒಣ ಮಾತಿನ ಧ್ವೇಶ ಭಾಷಣ ಮಾಡಿ ಭಾರತೀಯ ಬಹುಸಂಖ್ಯಾತರ ಮತ ಕಸಿದು ಪುಕ್ಕಟ್ಟೆ ರಾಜಕಾರಣ ಮಾಡುತಿದ್ದ ಹೆಗಡೆಗಳ ಮತಾಂಧ ರಾಜಕಾರಣದ ಎದೆಗೆ ಒದ್ದ ಈಗಿನ ಶಿರಸಿ ಶಾಸಕ ಭೀಮಣ್ಣ ನಾಯ್ಕ ಕಾಗೇರಿಯ ಶಿಷ್ಯರನ್ನು ಉಪಾಯದಿಂದ ಒಲಿಸಿಕೊಂಡರು. ಭೀಮಣ್ಣ ನಾಯ್ಕ ರ ನಿಧಾನವೇ ಪ್ರಧಾನ ರಾಜಕಾರಣಕ್ಕೆ ಫಿದಾ ಆಗಿರುವ ಶಿರಸಿ-ಸಿದ್ದಾಪುರದ ಬಿ.ಜೆ.ಪಿ.ಗಳು ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆಗಳ ಸುಳ್ಳಿನ ಕೋಮುವಾದಿ ಸಂಘಿ ಕುತಂತ್ರದ ರಾಜಕಾರಣಕ್ಕಿಂತ ಭೀಮಣ್ಣನವರ ಜನಪರ ರಾಜಕಾರಣ ಶ್ರೇಷ್ಠ ಎನ್ನುತಿದ್ದಾರೆ.

ಇದರ ಪರಿಣಾಮ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಬಿ.ಜೆಪಿಯ ಅವನತಿಯೂ ನಿಧಾನವಾಗಿ ಪ್ರಾರಂಭವಾಗಿದೆ. ಶಿರಸಿ ಕ್ಷೇತ್ರವನ್ನು ಪರಿಶಿಷ್ಟರ ಮೀಸಲು ಕ್ಷೇತ್ರ ಮಾಡಿ ಬಹುಸಂಖ್ಯಾತ ನಾಮಧಾರಿ ದೀವರಿಗೆ ಚೊಂಬು ಹಿಡಿಸಿದ್ದ ಬ್ರಾಮ್ಹಣ ರಾಜಕಾರಣ ನಂತರ ಸಂಘದ ದೇಶಪ್ರೇಮದ ಸೋಗು, ನಾಟಕಗಳಿಂದ ಬಹುಸಂಖ್ಯಾತ ಹಿಂದುಳಿದವರಿಗೆ ನಾಮ ಎಳೆದಿತ್ತು. ಈ ಇತಿಹಾಸ ಅರಿತ ಭೀಮಣ್ಣ ನಯವಂಚಕ ಸಂಘಿ ಬಿ.ಜೆ.ಪಿ. ರಾಜಕಾರಣಕ್ಕೆ ಮೃಧುವಾಗೇ ಔಷಧಿ ಮೆತ್ತುತಿದ್ದಾರೆ. ಇದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿ.ಜೆ.ಪಿ. ಸೊನ್ನೆ ಸುತ್ತುವ ಸಾಧನೆ ಮುಂದುವರಿಯಲಿದೆ. ಈ ಸುಧೀರ್ಘ ಇತಿಹಾಸದ ಪರಿಣಾಮ ಈಗ ಬಿ.ಜೆ.ಪಿ. ಯಾರಿಗೂ ಬೇಡದ ಮತಾಂಧ ಸೋಮಾರಿಗಳ ನೆಲೆಯಾಗಿ ಮುಂದುವರಿಯುತ್ತಿದೆ. ಕಾಂಗ್ರೆಸ್‌ ಲಾಭಬಡುಕರ ಬಣ ರಾಜಕೀಯ ಬದಲಾದರೆ ಬಿ.ಜೆ.ಪಿ. ಉತ್ತರ ಕನ್ನಡದಲ್ಲಂತೂ ಮೂಲೆಗುಂಪಾಗುವುದು ಗ್ಯಾರಂಟಿ. ಉತ್ತರ ಕನ್ನಡ ಒಳಗೊಂಡು ಕರಾವಳಿ, ಮಲೆನಾಡಿನ ಕೋಮುಧೃವೀಕರಣದ ಸಂಘಿ ಬಿ.ಜೆ.ಪಿ. ಸೋಲಿನಲ್ಲಿ ಈ ನೆಲದ ಬಹುಸಂಖ್ಯಾತರ ಗೆಲುವಿದೆ. ಕರಾವಳಿ ಮಲೆನಾಡಿನಲ್ಲಿ ಬಿ.ಜೆ.ಪಿ. ಧೂಳೀಪಟವಾದರೆ ಅದರ ಶ್ರೇಯಸ್ಸು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಯ ಫಲಶೃತಿ ಎಂದರೆ ತಪ್ಪಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *