mirjan port- ಹಳೆ ವೈಭವ ಸಾರುವ ಹೊಸ ಪ್ರವಾಸಿ ತಾಣ ಕುಮಟಾದ ಮಿರ್ಜಾನ ಕೋಟೆ

ಒಂದು ದೇಶದ ವೈಭವವನ್ನು ಆದೇಶದ ಇತಿಹಾಸ ಚರಿತ್ರೆಗಳ ಮೂಲಕ ಅಳೆಯಲಾಗುತ್ತದೆ. ಅವಿಭಜಿತ ಭಾರತ ಬಹುವಿಶಾಲ ರಾಷ್ಟ್ರವಾಗಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೇರಳದಿಂದ ಗೋದಾವರಿ ನದಿ ತೀರದ ವರೆಗೆ ಕನ್ನಡ ನಾಡೇ ಪಸರಿಸಿತ್ತು ಎಂದು ಹೇಳಲಾಗುತ್ತದೆ. ಆಯಾ ಕಾಲದ ಅರಸರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ನೆರೆ ಹೊರೆಯವರನ್ನು ಮತ್ತಷ್ಟು ಸರಿಸುತ್ತಾ ತಮ್ಮ ವ್ಯಾ ಪ್ತಿಯನ್ನು ವಿಸ್ತರಿಸುತಿದ್ದರು.

ಕನ್ನಡದ ದೊರೆಗಳು, ಕದಂಬ ಸಾಂಮ್ರಾಜ್ಯ, ಮೊಗಲರ ದಾಳಿ ವಿಜಯನಗರದ ಅರಸರು ಅವರ ಸಾಮಂತರಾಗಿದ್ದ ಅನೇಕ ಪಾಳೇಗಾರರು ಹೀಗೆ ಇತಿಹಾಸದ ದಾರಿ ಬಹಳ ಧೀರ್ಘ.

ಪಶ್ಚಿಮ ಕರಾವಳಿಯನ್ನು ರಾಣಿ ಚೆನ್ನಬೈರಾದೇವಿ ೫೦ಕ್ಕೂ ಹೆಚ್ಚು ವರ್ಷಗಳ ಕಾಲ ಆಳಿದ ಇತಿಹಾಸ ಅದರ ಹಿಂದೆ ಮೊಗಲ್‌ ದೊರೆಗಳು, ಬಿಜಾಪುರದ ಸುಲ್ತಾನರು ನಂತರ ಹೈದರ್‌ ಅಲಿ, ಟಿಪ್ಪು ಸುಲ್ತಾನ ಆಳಿದ ಪ್ರದೇಶಗಳು ಇವುಗಳಿಗೆಲ್ಲಾ ಚಾರಿತ್ರಿಕ ದಾಖಲೆಗಳಿವೆ. ಇವರ ನಿರ್ಮಾಣಗಳೂ ಅನೇಕ. ಇಂಥ ವೈಶಿಷ್ಟ್ಯಗಳಲ್ಲಿ ಕನ್ನಡ ಜಿಲ್ಲೆಯ ಮಿರ್ಜಾನ ಕೋಟೆಯೂ ಒಂದು.

ಈಗಿನ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಕೇಂದ್ರದಿಂದ ಕೇವಲ ಹತ್ತು ಕಿ.ಮೀ. ದೂರದಲ್ಲಿರುವ ಮಿರ್ಜಾನ ನಲ್ಲಿರುವ ಐತಿಹಾಸಿಕ ಕೋಟೆ ೧೧-೫ ಎಕರೆಗಳ ವಿಸ್ತಾರ ಪ್ರದೇಶದಲ್ಲಿದೆ. ಅಘನಾಶಿನಿ ನದಿಯ ದಂಡೆಯಮೇಲಿರುವ ಈ ಕೋಟೆಯನ್ನು ಕಾಳುಮೆಣಸಿನ ರಾಣಿ ಗೇರುಸೊಪ್ಪಾದ ರಾಣಿ ಚೆನ್ನಬೈರಾದೇವಿ ಕಟ್ಟಿಸಿದರು ಎನ್ನಲಾಗುತ್ತಿದೆ.೧೭ ನೇ ಶತಮಾನ ಅಂದರೆ ೧೬೦೦ ರಲ್ಲಿ ಆಳಿದ ಚೆನ್ನಾಬೈರಾದೇವಿಯ ಕಾಲಕ್ಕಿಂತ ಮೊದಲು ಬಿಜಾಪುರದ ಸುಲ್ತಾನ ಷರೀಫ ಉಲ್‌ ಮುಲ್ಕ ಕಟ್ಟಿಸಿದ್ದು ಎನ್ನುವ ಜಿದ್ಞಾಸೆಯೂ ದಾಖಲಾಗಿದೆ.೧೨೦೦ ರಲ್ಲಿ ನವಾಯತ ರಾಜ ಇಬ್ನಬತೂಟನಿಂದ ಈ ಕೋಟೆ ನಿರ್ಮಾಣವಾಗಿರಬಹುದು ಎನ್ನುವ ಉಲ್ಲೇಖವೂ ಇದೆ. ಈ ಚರ್ಚೆಯನ್ನು ಕಾಲಕ್ಕೆ ಬಿಟ್ಟರೆ ಈ ಕೋಟೆ ನಿರ್ಮಾಣದ ಶೈಲಿ, ವೈವಿಧ್ಯತೆ, ವೈಶಿಷ್ಟ್ಯತೆ ಆ ಕಾಲದ ನಿರ್ಮಾಣ ತಾಂತ್ರಿಕತೆಗೆಹಿಡಿದ ಕನ್ನಡಿ.

ಮಿರ್ಜಾನ ಕೋಟೆಯ ಬಾವಿಗಳು, ಸುರಂಗಗಳು ಗೋಪುರಗಳು ವಿಸ್ತಾರವಾದ ರಕ್ಷಣಾ ಗೋಡೆ ಜಂಬಿಟ್ಟಿಗೆ ಕಲ್ಲಿನ ಮೂರ್ನಾಲ್ಕು ಅಂತಸ್ತಿನ ನಿರ್ಮಾಣದಕ್ಷತೆ ಎಲ್ಲವೂ ಹಳೆಯ ವೈಭವಗಳಿಗೆ ಸಾಕ್ಷಿ. ಪ್ರವಾಸಿ ದೃಷ್ಟಿ ಜೊತೆ ಐತಿಹಾಸಿಕ ಚಿಕಿತ್ಸತೆ ಇಟ್ಟುಕೊಂಡವರಿಗೆ ಈ ಕೋಟೆ ಚರಿತ್ರೆಯ ಪುಟಗಳನ್ನು ನೆನಪಿಸಬಹುದು. ಹೀಗಿರುವ ಮಿರ್ಜಾನ ಕೋಟೆ ಕನ್ನಡದ ದುನಿಯಾ ಸಿನೆಮಾ ಸೇರಿದಂತೆ ಅನೇಕ ಭಾಷೆಗಳ ಹಲವು ಚಿತ್ರಗಳಲ್ಲಿ ಚಿತ್ರಿತವಾಗಿದೆ.

ಈಗಿನ ಸಾಮಾಜಿಕ ಜಾಲತಾಣಗಳ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚು. ಇತ್ತೀಚಿನ ಫೋಟೋ, ವಿಡಿಯೋ ಶೂಟ್‌,ಪ್ರೀವೆಡ್ಡಿಂಗ್‌ ಶೂಟ್‌ ಸೇರಿದಂತೆ ಬಹುಪಯೋಗಿ ಮಿರ್ಜಾನ ಕೋಟೆ ಹಳೆಯ ವೈಭವ ಸಾರುತ್ತಾ ಹೊಸ ಪ್ರವಾಸಿ ತಾಣವಾಗಿರುವುದು ಈಗಿನ ವಿಶೇಶ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *