
ಭೂಮಿ ತೂಕದ ಹೆಣ್ಣೇ ನಾನೇನು ಹೇಳಲಿ ಸಾಕ್ಷಿ ನುಡಿಯುತ್ತಿದೆ ನೋಡಲ್ಲಿ ಅಂಬರ/ ನೀ ಅದೆಷ್ಟು ವಿಶಾಲ ಗಹಗಹಿಸಿ ನಗುತ್ತಿದೆ ಹಂಗಿನರಮನೆಯಲ್ಲಿ ಉಬ್ಬಸದಬ್ಬರ//ವಿರಹದ ಬೇಗೆಗೆ ತತ್ತರಿಸುವ ಬೆವರ ನೆರಿಗೆ ತಾಳದೆ ಒಳ ಒತ್ತಡ ಒತ್ತರಿಸಿ ಸೆಕೆ/ ಮಟಮಟ ಮಧ್ಯಾಹ್ನ ಸಂತೆಯ ಬೀದಿಯಲ್ಲಿ ಒಬ್ಬಂಟಿ ಪ್ರೇಮಿ ಕಣ್ಣಂಚಲ್ಲಿ ದಿಗಂಬರ//ಮಿಂಚುವ ಬೆಳಕಲ್ಲಿ ಹಬ್ಬುವ ಕಾವು ಮಂಕಾಗಿಸಿ ಮಂದ ನಾನು ಪ್ರತಿಫಲಿಸಿ ನಿನ್ನದೇ ಬಿಂಬ/ ಕಿವಿ ಕಿತ್ತೊಗುವ ಚೀರಾಟ ನನ್ನೊಳಗೆ ಆ ಕ್ಷಣದ ನಟ್ಟನಡುವೆಯೂ ನೀನಲ್ಲಿ ಶ್ವೇತಾಂಬರ//ಏಣಿ ಹಾಕಲಾದೀತೆ ಉರುಳಿರುಳಿ ಮತ್ತೆ ತಿರುಗಿ ಬೀಳುವ ಸಂಜೆ ನೀ ಬಲು ಎತ್ತರೆತ್ತರ/ ಬದುಕಿನ ಬಯಕೆ ಬಹು ದೊಡ್ಡ ಆಸರೆಗೆ ತೂತು ಮನದ ಮಾಳಿಗೆಯಲ್ಲಿ ಮಳೆಯಬ್ಬರ//ಬಣ್ಣ ತುಂಬಿದವರಾರೋ ನಿನಗೆ ನೀ ರಂಗು ಪಡೆಯಲು ನಾನೇ ಆಗಬೇಕೇ ಆವಿ/ ಭೋರ್ಗೆರವ ದುಃಖ ರಭಸದಿ ಬಡಿದಪ್ಪಳಿಸಿ ಹಿಮ್ಮೆಟ್ಟುವ ಭಾವಗಳಲ್ಲಿ ಕಡಲುಬ್ಬರ//ನೀ ಬಿಡು ಚೆಲ್ಲಿದರೂ ಬೆಳದಿಂಗಳು ಕೋರೈಸುವೆ ತಾರೆಯರ ಸಂಗಡ ತಂದು ನಗುಮೊಗ/ ಅಲ್ಲೇ ಸುತ್ತ ನಿರ್ಮಿತ ಕಪ್ಪು ಕಗ್ಗತ್ತಲೆ ಜವಾಬಿಗೆ ನಕ್ಕಾನು ಚಂದ್ರ ಕಂಡಲ್ಲಿ ನಮ್ಮಿಬ್ಬರ//ಸಂಧಿಸಿ ಮೋಡಗಳೆರಡು ಮಿಡಿತಗಳ ತಾಗಿ ಘರ್ಷಿಸಿದವು ಆಗದೆ ಒಮ್ಮತದೊಲವು/ ಸಿಕ್ಕಸಿಕ್ಕಲ್ಲಿ ನುಚ್ಚುನೂರಾಗಿ ಅದುರಿ ಆಕ್ರಂದನ ಶೇಷ ನರನಾಡಿಯಲ್ಲಿ ನಿರಾಡಂಬರ//#ಬಸವರಾಜ_ಕಾಸೆReplyForward |
