#ಗಜಲ್# ದೂರಾಗುವ_ಆತಂಕ


ಭೂಮಿ ತೂಕದ ಹೆಣ್ಣೇ ನಾನೇನು ಹೇಳಲಿ ಸಾಕ್ಷಿ ನುಡಿಯುತ್ತಿದೆ ನೋಡಲ್ಲಿ ಅಂಬರ/
ನೀ ಅದೆಷ್ಟು ವಿಶಾಲ ಗಹಗಹಿಸಿ ನಗುತ್ತಿದೆ ಹಂಗಿನರಮನೆಯಲ್ಲಿ ಉಬ್ಬಸದಬ್ಬರ//ವಿರಹದ ಬೇಗೆಗೆ ತತ್ತರಿಸುವ ಬೆವರ ನೆರಿಗೆ ತಾಳದೆ ಒಳ ಒತ್ತಡ ಒತ್ತರಿಸಿ ಸೆಕೆ/
ಮಟಮಟ ಮಧ್ಯಾಹ್ನ ಸಂತೆಯ ಬೀದಿಯಲ್ಲಿ ಒಬ್ಬಂಟಿ ಪ್ರೇಮಿ ಕಣ್ಣಂಚಲ್ಲಿ ದಿಗಂಬರ//ಮಿಂಚುವ ಬೆಳಕಲ್ಲಿ ಹಬ್ಬುವ ಕಾವು ಮಂಕಾಗಿಸಿ ಮಂದ ನಾನು ಪ್ರತಿಫಲಿಸಿ ನಿನ್ನದೇ ಬಿಂಬ/
ಕಿವಿ ಕಿತ್ತೊಗುವ ಚೀರಾಟ ನನ್ನೊಳಗೆ ಆ ಕ್ಷಣದ ನಟ್ಟನಡುವೆಯೂ ನೀನಲ್ಲಿ ಶ್ವೇತಾಂಬರ//ಏಣಿ ಹಾಕಲಾದೀತೆ ಉರುಳಿರುಳಿ ಮತ್ತೆ ತಿರುಗಿ ಬೀಳುವ ಸಂಜೆ ನೀ ಬಲು ಎತ್ತರೆತ್ತರ/
ಬದುಕಿನ ಬಯಕೆ ಬಹು ದೊಡ್ಡ ಆಸರೆಗೆ ತೂತು ಮನದ ಮಾಳಿಗೆಯಲ್ಲಿ ಮಳೆಯಬ್ಬರ//ಬಣ್ಣ ತುಂಬಿದವರಾರೋ ನಿನಗೆ ನೀ ರಂಗು ಪಡೆಯಲು ನಾನೇ ಆಗಬೇಕೇ ಆವಿ/
ಭೋರ್ಗೆರವ ದುಃಖ ರಭಸದಿ ಬಡಿದಪ್ಪಳಿಸಿ ಹಿಮ್ಮೆಟ್ಟುವ ಭಾವಗಳಲ್ಲಿ ಕಡಲುಬ್ಬರ//ನೀ ಬಿಡು ಚೆಲ್ಲಿದರೂ ಬೆಳದಿಂಗಳು ಕೋರೈಸುವೆ ತಾರೆಯರ ಸಂಗಡ ತಂದು ನಗುಮೊಗ/
ಅಲ್ಲೇ ಸುತ್ತ ನಿರ್ಮಿತ ಕಪ್ಪು ಕಗ್ಗತ್ತಲೆ ಜವಾಬಿಗೆ ನಕ್ಕಾನು ಚಂದ್ರ ಕಂಡಲ್ಲಿ ನಮ್ಮಿಬ್ಬರ//ಸಂಧಿಸಿ ಮೋಡಗಳೆರಡು ಮಿಡಿತಗಳ ತಾಗಿ ಘರ್ಷಿಸಿದವು ಆಗದೆ ಒಮ್ಮತದೊಲವು/
ಸಿಕ್ಕಸಿಕ್ಕಲ್ಲಿ ನುಚ್ಚುನೂರಾಗಿ ಅದುರಿ ಆಕ್ರಂದನ ಶೇಷ ನರನಾಡಿಯಲ್ಲಿ ನಿರಾಡಂಬರ//#ಬಸವರಾಜ_ಕಾಸೆReplyForward

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *