

ವಸಂತ ಶಾನಭಾಗ ಕೊಲೆ ಆರೋಪಿಗಳಾದ ಅಪ್ಪ-ಮಗ ಆರೆಸ್ಟ್
ಏಪ್ರಿಲ್ 2019 ರಲ್ಲಿ ನಾಪತ್ತೆಯಾಗಿದ್ದಾರೆಂದು, ನಂತರ ಅಪಹರಣ ಮಾಡಲಾಗಿದೆ ಎಂದು ಸಿದ್ಧಾಪುರ (ಉ.ಕ.) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಂತರ ಕೊಲೆ ಎಂದು ಕಳೆದ ಜೂನ್ ನಲ್ಲಿ ಸಾಬೀತಾಗಿದ್ದ ಇಲ್ಲಿಯ ಗೋಳಗೋಡಿನ ವಸಂತ ಕೊಲೆಯ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಿದೆ.
ಏಫ್ರಿಲ್ 24 ರಂದು ಮನೆಯಿಂದ ಹೊರಹೋಗಿದ್ದ ಕೃಷಿಕ, ಸಾಹಿತಿ ವಸಂತ ಶಾನಭಾಗ ನಾಪತ್ತೆಯಾಗಿದ್ದಾರೆಂದು ಅವರ ಕುಟುಂಬಸ್ಥರು ಏಫ್ರಿಲ್ 28 ರಂದು ನಾಪತ್ತೆ ದೂರು ದಾಖಲಿಸಿದ್ದರು.
ಇದಾಗಿ ಒಂದು ವಾರ ಕಳೆಯುವುದರೊಳಗಾಗಿ ಇದು ನಾಪತ್ತೆ ಪ್ರಕರಣವಲ್ಲ ಅಪಹರಣ ಎಂದು ಹಿಂದಿನ ದೂರುದಾರರಿಂದಲೇ ಮತ್ತೊಂದು ಪ್ರಕರಣ ದಾಖಲಾಗುತ್ತದೆ.
ಈ ದೂರುಗಳನ್ನು ಅನುಸರಿಸಿ, ತನಿಖೆ ನಡೆಸಿದ ಉತ್ತರಕನ್ನಡ ಪೊಲೀಸರಿಗೆ ಒಂದೊಂದೇ ಹೊಸ ವಿಷಯ ಕಲೆಹಾಕಲು ಮೊಬೈಲ್ ಸಿಗ್ನಲ್ ಟ್ರಾಕಿಂಗ್ ನೆರವಾಗುತ್ತದೆ.
ಈ ತನಿಖೆಯನ್ನಾಧರಿಸಿ ಬೆಂಗಳೂರು ಕನಕಪುರದ ಲೋಕಿ ಬಂಧನಕ್ಕೊಳಗಾಗುತ್ತಾನೆ.
ಆತನನ್ನು ಬಾಯಿಬಿಡಿಸಿದ ಪೊಲೀಸರಿಗೆ ವಸಂತ ಶಾನಭಾಗ ಕೊಲೆಯಲ್ಲಿ ವಸಂತರ ಅಣ್ಣ ಮತ್ತು ಅಣ್ಣನ ಮಗನ ಪಾತ್ರ ಸಾಬೀತಾಗುತ್ತದೆ. ಆದರೆ ಕೊಲೆಗೆ ನೆರವಾದ ಲೋಕಿ ಬಂಧನಕ್ಕೊಳಗಾಗುವ ಮೊದಲೇ ವೆಂಕಟೇಶ್ ಮತ್ತು ವಿನಯ್ ತಲೆಮರೆಸಿಕೊಳ್ಳುತ್ತಾರೆ! ಒಂದೊಂದೇ ಸುಳಿವಿನ ಜಾಡು ಹಿಡಿದ ಪೊಲೀಸರಿಗೆ ಕೊಲೆ ಆರೋಪಿಗಳಾದ ಅಪ್ಪ, ಮಗ ಮೊದಲು ಶಿರಸಿಯಲ್ಲಿದ್ದು, ನಂತರ ಅಲ್ಲಿಂದ ಮುಂಬೈಗೆ ಓಡಿಹೋದ ಸುಳಿವಿ ದೊರೆಯುತ್ತದೆ.
ತಿಂಗಳುಗಟ್ಟಲೆ ಕೊಲೆಗಾರರನ್ನು ಚೇಸ್ ಮಾಡಿದ ಪೊಲೀಸರಿಗೆ ಕಳೆದ ಶನಿವಾರ ಅಪ್ಪ-ಮಗ ಸಿಕ್ಕಿಬೀಳುತ್ತಾರೆ.
ಹೀಗೆ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುವಂತೆ ಕಳ್ಳ ಪೊಲೀಸ್ ಆಟ ಆಡಿಸಿದ ಕೊಲೆಗಾರರು ಮೊದಲು ಮುತ್ತಿಗೆ ಗೋಳಗೋಡಿನಿಂದ ವಸಂತರನ್ನು ಅಪಹರಿಸುತ್ತಾರೆ.ಹೀಗೆ ಲೋಕಿ ಅಲಿಯಾಸ್ ಲೋಕನಾಥನ ನೆರವಿನಿಂದ ಸ್ವಂತ: ದಾಯಾದಿ ವಸಂತರನ್ನು ಏಫ್ರಿಲ್ 24 ರ ಮಧ್ಯಾಹ್ನ 3.30 ರ ಸುಮಾರಿಗೆ ವಾಹನದಲ್ಲಿ ಹೊತ್ತೊಯ್ಯುವ ಮೂವರು ದೊಡ್ಮನೆ ಬಳಿಯ ದಟ್ಟಾರಣ್ಯದಲ್ಲಿ ಚಾಕುವಿನಿಂದ ವಸಂತರ ತಲೆಯನ್ನು ಮುಂಡದಿಂದ ಬೇರ್ಪಡಿಸುತ್ತಾರೆ. ಹೀಗೆ ನುರಿತ ಕೊಲೆಗಾರರಂತೆ ಅಪ್ಪಮಗ ವಸಂತರ ಕೊಲೆಮಾಡಿದ ನಂತರ ಮುಂಡವನ್ನು ಒಂದೆಡೆ ಎಸೆದರೆ, ರುಂಡವನ್ನು ಚಾಕುವಿನೊಂದಿಗೆ ಕೈಚೀಲದಲ್ಲಿ ಹಾಕಿ ಬೇರೆ ಜಾಗದಲ್ಲಿ ಎಸೆಯುತ್ತಾರೆ.
ಇಂಥ ಭೀಕರ ಕೊಲೆಮಾಡಿದ ನಂತರ ಲೋಕಿ ಬೆಂಗಳೂರಿಗೆ ತೆರಳಿ ಹಾಯಾಗಿದ್ದರೆ ವೆಂಕಟೇಶ್ ಮತ್ತು ವಿನಯ ಶಿರಸಿಯ ತಮ್ಮ ಬಾಡಿಗೆ ಮನೆಯಿಂದ ರಾತ್ರೊ ರಾತ್ರಿ ಕಾಲ್ಕೀಳುತ್ತಾರೆ. ಇದಾಗಿ ತಿಂಗಳೊಪ್ಪತ್ತು ಕಳೆದರೂ ಈ ಮೂವರೂ ಪರಸ್ಫರ ಸಂದಿಸುವುದಿಲ್ಲ! ನಂತರ ಉತ್ತರಕನ್ನಡ ಪೊಲೀಸ್ ತಂಡ ಕನಕಪುರದ ಲಕ್ಷ್ಮೀಪುರದ ಲೋಕಿಯನ್ನು ಪತ್ತೆ ಮಾಡಿ ರಿಪೇರಿ ಮಾಡಿದರೂ ಪ್ರಮುಖ ಕೊಲೆಗಾರರಾದ ಅಪ್ಪಮಗ ಪೊಲೀಸರಿಗೆ ಸಿಗುವುದಿಲ್ಲ. ಆನಂತರ ಅಂತೂ ಇಂತೂ ಕೊಲೆಗಾರರನ್ನು ಹುಡುಕಿ ದಸ್ತಗಿರಿ ಮಾಡುವ ಪೊಲೀಸರಿಗೆ ಮೂವರು ಸೆರೆ ಸಿಕ್ಕಂತಾಗಿದೆ.
ಈಗ ಈಮೂವರು ಜುಲೈ 14 ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮನೆಯ ಆಸ್ತಿ, ಅದರ ಮಾರಾಟದ ಹಣದ ತಕರಾರು ಕೊಲೆ ನಂತರ ಕೊಲೆಗಾರರ ಬಂಧನದೊಂದಿಗೆ ಬಹುತೇಕ ಮುಗಿದಿದೆ.


