

ಧ್ವನಿ, ಅರಿವು ಇಲ್ಲದವರಿಗೆ ನ್ಯಾಯ ಕೊಡಿಸುವುದೇ ಮಾಧ್ಯಮಗಳ ಹೊಣೆ,ಕರ್ತವ್ಯಗಳಾಗಿದ್ದು ಅದು ಯಾವ ಕಾಲದಲ್ಲೂ ಬದಲಾಗದು ಎಂದಿರುವ ಹಿರಿಯ ಪತ್ರಕರ್ತ ಮೋಹನ ಹೆಗಡೆ ಮುದ್ರಣಮಾಧ್ಯಮ ಎಲ್ಲಾ ಸವಾಲುಗಳೊಂದಿಗೆ ಮುನ್ನುಗ್ಗುತ್ತಲೇ ತನ್ನ ವ್ಯಾಪ್ತಿ,ಪ್ರಾಮುಖ್ಯತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದಿದ್ದಾರೆ. ಸಿದ್ಧಾಪುರ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ನಡೆದ ತಾಲೂಕಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಮತ್ತು ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 2.5 ಲಕ್ಷ ಕೋಟಿ ಆರ್ಥಿಕ ವಹಿವಾಟು ಹೊಂದಿರುವ ಮಾಧ್ಯಮ ಕ್ಷೇತ್ರ ಅನೇಕರಿಗೆ ಜೀವನೋಪಾಯ ಒದಗಿಸಿದ್ದು ಅನೇಕರ ಶ್ರಮದಿಂದ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು ಭಾರತದಲ್ಲಿ ಭರವಸೆ ಉಳಿಸಿಕೊಂಡಿದೆ ಎಂದರು. ಮೋಹನ ಹೆಗಡೆಯವರೊಂದಿಗೆ ಸ್ಥಳಿಯ ಪತ್ರಿಕಾ ವಿತರಕರಾದ ಮಾರುತಿ ನಾಯ್ಕ ಮತ್ತು ವಸಂತ ಮಡಿವಾಳರನ್ನು ಸನ್ಮಾನಿಸಿ ಗೌರವಿಸಲಾಯಿತು.

