ನಿತ್ಯ ಪರಿಸರ ದಿನ ಆಚರಿಸುವ ವಡ್ನಗದ್ದೆ ಗಣಪತಿ

ಇಂದು ವಿಶ್ವ ಪರಿಸರ ದಿನ ಪರಿಸರ,ಅರಣ್ಯ ರಕ್ಷಣೆ ಬಗ್ಗೆ ಇಂದು ವ್ಯಕ್ತವಾಗುವ ಕಾಳಜಿ ಉಳಿದ ದಿಗಳಲ್ಲಿಅಪರೂಪ. ಆದರೆ ನೀವು ಇಲ್ಲೊಬ್ಬ ಅಪರೂಪದ ವ್ಯಕ್ತಿಯ ಬಗ್ಗೆ ಓದುತಿದ್ದೀರಿ ಇವರಿಗೆ ನಿತ್ಯವೂ ಪರಿಸರ ದಿನ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ವಡ್ನಗದ್ದೆಯ  ಗಣಪತಿ ಹೆಗಡೆ ವೃತ್ತಿಯಿಂದ ವಿದ್ಯುತ್‌ ಸಂಬಂಧಿ ಕೆಲಸ ಮಾಡುವ ಕೃಷಿಕ ಆದರೆ ಇವರ ಸಮಯ ಹೆಚ್ಚು ಬಳಕೆಯಾಗುವುದು ಪರಿಸರ ಸಂರಕ್ಷಣೆಗೆ.


ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಕಾಡಿನ ಬೀಜ ಬಿತ್ತುವ ಕೆಲಸ ಮಾಡುವ ಇವರು ಈ ವರೆಗೆ ಲಕ್ಷಾಂತರ ಬೀಜಗಳನ್ನು ಭೂಮಿಯಲ್ಲಿ ನೆಟ್ಟು ಸಾಕಿ,ಸಲಹುತಿದ್ದಾರೆ. ಹಾಗೆಂದು ಇವರು ಬಿತ್ತಿದ ಬೀಜಗಳು ಇವರ ಸ್ವಂತ ಆಸ್ತಿ-ಜಮೀನಿನಲ್ಲಿಲ್ಲ ಯಾಕೆಂದರೆ ಇವರು ಕಾಡಿನಲ್ಲಿ ಅಪರೂಪದ ಕಾಡು ಬೀಜಗಳನ್ನು ಸಂಗ್ರಹಿಸಿ ಅವುಗಳಿಗೆ ಅಗತ್ಯ ಸಂಸ್ಕಾರ ನೀಡಿ ಕಾಡಿನಲ್ಲಿ ಬಿತ್ತುತ್ತಾರೆ.
ಕಳೆದ ೨೦ ವರ್ಷಗಳಿಂದ ಇದನ್ನು ಹವ್ಯಾಸವಾಗಿಸಿಕೊಂಡಿರುವ ಗಣಪತಿ ಹೆಗಡೆ ಕಾಡಿನ ಮತ್ತಿ, ಆಲ, ಅಂಜೂರ, ನೇರಳೆ ಜೊತೆಗೆ ವಿನಾಶದ ಅಂಚಿನಲ್ಲಿರುವ ಸಸ್ಯಪ್ರಭೇದಗಳನ್ನು ರಕ್ಷಿಸುತಿದ್ದಾರೆ. ಸಾರ್ವಜನಿಕರು ಅರಣ್ಯ ಇಲಾಖೆಯ ನೆರವಿನೊಂದಿಗೆ ಬೀಜಬಿತ್ತನೆ, ಸಸಿ ವಿತರಣೆ ಮಾಡುವ ಹವ್ಯಾಸದ ಗಣಪತಿ ಹೆಗಡೆ ಪ್ರತಿವರ್ಷ ವಿಶ್ವಪರಿಸರ ದಿನವನ್ನು ಆಚರಿಸಿ ಬೀಜಬಿತ್ತನೆ ಮಾಡಿ ಸಾರ್ವಜನಿಕರಿಗೆ ಗಿಡ ವಿತರಿಸುತ್ತಾರೆ.


 ಅಪರೂಪದ ಮರಗಳ ಕಷಿ ಗಿಡ ಮಾಡುವ ಅಭ್ಯಾಸದ ಇವರು ಅನೇಕ ಜಾತಿಯ ಕಷಿಗಿಡಗಳನ್ನು ಮಾಡಿ ವಿತರಿಸುತ್ತಾರೆ. ಕೋಲಾರ, ಬೆಂಗಳೂರು, ಚಿಂತಾಮಣಿ ಕಡೆ ಬೆಳೆಯುವ ದೊಡ್ಡ ನೇರಳೆ ಹಣ್ಣುಗಳನ್ನು ತಂದು ಸಸಿ ಬೆಳೆಸಿರುವ ಗಣಪತಿ ಅವುಗಳನ್ನು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆಗೆ ನೀಡಿದ್ದಾರೆ.ಅಪರೂಪದ ಬೀಜ,ಸಸ್ಯಗಳನ್ನು ಕಾಪಾಡಿ ಪೋಶಿಸುವ ಇವರ ಕೆಲಸದಿಂದಾಗಿ ಮಲೆನಾಡಿನ ಕಷಿಮಾವಿನ ಗಿಡಗಳು, ಬಯಲುಸೀಮೆಯ ನೇರಳೆ,ಕರಾವಳಿ ಮಲೆನಾಡಿನ ನೈಸರ್ಗಿಕ ಹಣ್ಣಿನ ಗಿಡಗಳನ್ನು ಸಂರಕ್ಷಿಸಿದ್ದಾರೆ.
ರುದ್ರಾಕ್ಷಿ,ಬರ್ಕಬಾಳೆ,ದೇವದಾರು,ಏಕನಾಯಕ ʼ ದಾರುಹರಿದ್ರ ಸೇರಿದಂತೆ ಅನೇಕ ವನಗಳನ್ನು  ಸೃಷ್ಟಿಸಿರುವ ಗಣಪತಿ ಬೇರೆ,ಬೇರೆ ಕಾಲ, ಪ್ರದೇಶ, ವಾತಾವರಣದಲ್ಲಿ ಹೂ,ಹಣ್ಣುಬಿಡುವ ಮರಗಳು ಉದುರಿಸುವ ಬೀಜ ಬೇರೆ ಬೇರೆ ಕಾಲದಲ್ಲಿ  ಸಸಿಗಳಾಗುತ್ತವೆ. ಕೆಲವು ಪ್ರಭೇದಗಳಿಗೆ ನೀರಿನಲ್ಲಿ ಕೊಳೆಸಿ ನಂತರ ಮೊಳಕೆ ತರಿಸಬೇಕಾಗುತ್ತದೆ. ನೆಲ್ಲಿ ಗಣಪೇಕಾಯಿ ಯಂಥ ಕೆಲವು ಸಸ್ಯಗಳಿಗೆ ಈ ಸಂಸ್ಕಾರವಿಲ್ಲದೆ  ಅವುಗಳ ಸಂತತಿ ಬೆಳೆಯುವುದಿಲ್ಲ. ಇಂಥ ಸಸ್ಯಗಳು ಈಗ ನಾಶವಾಗುತ್ತಿವೆ. ನಮ್ಮ ಬಾಲ್ಯದಲ್ಲಿ ಕಂಡು ತಂದು ತಿಂದ ಹಣ್ಣುಗಳುನಮ್ಮ ಮುಂದಿನ ಪೀಳಿಗೆಗೂ ಸಿಗಬೇಕೆಂಬ ಆಸೆಯಿಂದ ಈ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತೇನೆ ಎನ್ನುತ್ತಾರೆ.

https://samajamukhi.net/2022/05/27/shivrajkumar-memory-recall-sirsi/

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *