

ಪ್ರಗತಿಪರ ಕೃಷಿಕ
ದೇವರಾಜ ಗೌಡರ್, ನಯನಾ ಗೌಡರ್ ವೈವಾಹಿಕ
ಜೀವನದ 50 ರ ಸಂಭ್ರಮ – ಸನ್ಮಾನ, ಪ್ರತಿಭಾ
ಪುರಸ್ಕಾರ
ಪ್ರಗತಿಪರ ಕೃಷಿಕರು, ವ್ಯಾಪಾರಿಗಳಾದ ದೇವರಾಜ ಗೌಡರ್ ಹಾಗೂ ನಯನಾ ಗೌಡರ್ ಸೂರಗುಪ್ಪೆ, ಹೊಸೂರು ಅವರ ವೈವಾಹಿಕ ಜೀವನದ 50 ರ ಸಂಭ್ರಮ ಮತ್ತು ಗಣ್ಯರುಗಳ ಸನ್ಮಾನ ಪ್ರತಿಭಾ ಪುರಸ್ಕಾರ ಸಮಾರಂಭವು ಇತ್ತೀಚೆಗೆ ಜೆ.ಎಂ.ಆರ್. ಅಂಧರ ಶಾಲಾ ಸಿದ್ದಾಪುರ ದ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯ ಡಾ|| ಎಂ.ಪಿ. ಶೆಟ್ಟಿ ವಹಿಸಿದ್ದರು.
ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಬಿ. ಗೌಡ್ ಕಲ್ಲೂರು ಭಾಗವಹಿಸಿ ಮಾತನಾಡಿ, ಪರಿಶ್ರಮ ಹಾಗೂ ನಿಷ್ಠೆಯಿಂದ ಕೆಲಸ ಮಾಡಿ ಮುಂದಕ್ಕೆ ಬಂದವರು ದೇವರಾಜ ಗೌಡರ್ ಎಂದು ಶ್ಲಾಘಿದರು.
ಮಹಾಲಸಾ ಟ್ರೇಡರ್ಸ್‍ದ ಮಾಲಿಕ ಎಸ್.ಎ. ಭಟ್ಟ ಅತಿಥಿಯಾಗಿ ಮಾತನಾಡಿ, ದೇವರಾಜ ಗೌಡರ್ ಸ್ನೇಹಪರ ವ್ಯಕ್ತಿತ್ವವನ್ನು ಶ್ಲಾಘಿಸಿದರು.
ಖ್ಯಾತ ವೈದ್ಯ ಡಾ|| ಕೆ. ಶ್ರೀಧರ ವೈದ್ಯ ದೇವರಾಜ ಗೌಡರ್ ರ ಸಾಮಾಜಿಕ ಕಳಕಳಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಡಾ|| ಕೆ. ಶ್ರೀಧರ ವೈದ್ಯ, ಡಾ|| ಎಂ.ಪಿ. ಶೆಟ್ಟಿ, ಎಸ್.ಬಿ. ಗೌಡ್ ಕಲ್ಲೂರು ವೇ|| ಪರಮೇಶ್ವರಯ್ಯ ಕಾನಳ್ಳಿಮಠ ಮತ್ತು ಎಸ್.ಎ. ಭಟ್ಟ ರನ್ನು ಸನ್ಮಾನಿಸಲಾಯಿತು.
ದೇವರಾಜ ಗೌಡರ್ ಮತ್ತು ನಯನಾ ಗೌಡರ್ ಅವರನ್ನು ಅವರ ಆತ್ಮೀಯರು ಬಂಧುಗಳು ಸನ್ಮಾನಿಸಿದರು.
ಜೆ.ಎಂ.ಆರ್. ಅಂಧರ ಶಾಲೆಯ ಉಪಾಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ ಸ್ವಾಗತಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು. ಅರುಣ ದೇವರಾಜ ಗೌಡರ್ ಹೊಸೂರು ವಂದಿಸಿದರು.
ಅಕ್ಕುಂಜಿಯಲ್ಲಿ ನಿಲ್ಲದ ಬಸ್ ಗಳಿಂದ ಸ್ಥಳಿಯರಿಗೆ ತೊಂದರೆ ಪ್ರತಿಭಟನೆಯ ಎಚ್ಚರಿಕೆ
ಸಿದ್ಧಾಪುರ ತಾಲೂಕಿನ ಅಕ್ಕುಂಜಿಯಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲುಗಡೆಗೆ ಸ್ಥಳಿಯರು ಆಗ್ರಹಿಸಿದ್ದಾರೆ. ಸಾಗರ,ಶಿರಸಿ ಮಾರ್ಗದ ಸಿದ್ಧಾಪುರ ಕಾವಂಚೂರು ಗ್ರಾಮ ಪಂಚಾಯತ್‍ನ ಅಕ್ಕುಂಜಿ ಗ್ರಾಮಸ್ಥರು ಮತ್ತು ಅಲ್ಲಿಗೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಕಣ್ಣೆದುರೇ ನೂರಾರು ಬಸ್ ಗಳು ಓಡಾಡಿದರೂ ಆ ಬಸ್ ಗಳಲ್ಲಿ ಸಂಚರಿಸುವ ಭಾಗ್ಯವಿಲ್ಲ.
ತಡೆರಹಿತ ಬಸ್ ಗಳು ಸೇರಿದಂತೆ ಸಿಟಿ. ಇಂಟರ್ ಸಿಟಿಬಸ್ ಗಳು ಇಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಈ ಗ್ರಾಮದ ಜನರು ದೂರದ ಕಾಂವಚೂರಿಗೆ ನಡೆದು ತೆರಳಬೇಕು. ಜನಸಾಮಾನ್ಯರೊಂದಿಗೆ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಎದುರಿಗೆ ಬಸ್ ಹೋದರೂ ದೂರದ ಬಸ್ ನಿಲ್ದಾಣಗಳ ವರೆಗೆ ನಡೆದು ಹೋಗಿ ಅಥವಾ ಖಾಸಗಿ ವಾಹನಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಈ ಭಾಗಕ್ಕಿದೆ. ಹಾಗಾಗಿ ಶಿರಸಿ ಮತ್ತು ಸಾಗರ ಡಿಪೊಗಳಿಂದ ಬರುವ ಬಸ್ ಗಳು ಕಡ್ಡಾಯವಾಗಿ ಇಲ್ಲಿ ನಿಲುಗಡೆ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿಯ ಸ್ಥಳಿಯರು ಸಂಬಂಧಿಸಿದವರನ್ನು ಆಗ್ರಹಿಸಿದ್ದಾರೆ.

