50 ರ ಮ್ಯಾರೇಜ್ ಇನ್ವರ್‍ಸ್ಸೆರಿ, ಸಾಧಕರಿಗೆ ಸನ್ಮಾನ


ಪ್ರಗತಿಪರ ಕೃಷಿಕ
ದೇವರಾಜ ಗೌಡರ್, ನಯನಾ ಗೌಡರ್ ವೈವಾಹಿಕ
ಜೀವನದ 50 ರ ಸಂಭ್ರಮ – ಸನ್ಮಾನ, ಪ್ರತಿಭಾ
ಪುರಸ್ಕಾರ
ಪ್ರಗತಿಪರ ಕೃಷಿಕರು, ವ್ಯಾಪಾರಿಗಳಾದ ದೇವರಾಜ ಗೌಡರ್ ಹಾಗೂ ನಯನಾ ಗೌಡರ್ ಸೂರಗುಪ್ಪೆ, ಹೊಸೂರು ಅವರ ವೈವಾಹಿಕ ಜೀವನದ 50 ರ ಸಂಭ್ರಮ ಮತ್ತು ಗಣ್ಯರುಗಳ ಸನ್ಮಾನ ಪ್ರತಿಭಾ ಪುರಸ್ಕಾರ ಸಮಾರಂಭವು ಇತ್ತೀಚೆಗೆ ಜೆ.ಎಂ.ಆರ್. ಅಂಧರ ಶಾಲಾ ಸಿದ್ದಾಪುರ ದ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯ ಡಾ|| ಎಂ.ಪಿ. ಶೆಟ್ಟಿ ವಹಿಸಿದ್ದರು.
ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಬಿ. ಗೌಡ್ ಕಲ್ಲೂರು ಭಾಗವಹಿಸಿ ಮಾತನಾಡಿ, ಪರಿಶ್ರಮ ಹಾಗೂ ನಿಷ್ಠೆಯಿಂದ ಕೆಲಸ ಮಾಡಿ ಮುಂದಕ್ಕೆ ಬಂದವರು ದೇವರಾಜ ಗೌಡರ್ ಎಂದು ಶ್ಲಾಘಿದರು.
ಮಹಾಲಸಾ ಟ್ರೇಡರ್ಸ್‍ದ ಮಾಲಿಕ ಎಸ್.ಎ. ಭಟ್ಟ ಅತಿಥಿಯಾಗಿ ಮಾತನಾಡಿ, ದೇವರಾಜ ಗೌಡರ್ ಸ್ನೇಹಪರ ವ್ಯಕ್ತಿತ್ವವನ್ನು ಶ್ಲಾಘಿಸಿದರು.
ಖ್ಯಾತ ವೈದ್ಯ ಡಾ|| ಕೆ. ಶ್ರೀಧರ ವೈದ್ಯ ದೇವರಾಜ ಗೌಡರ್ ರ ಸಾಮಾಜಿಕ ಕಳಕಳಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಡಾ|| ಕೆ. ಶ್ರೀಧರ ವೈದ್ಯ, ಡಾ|| ಎಂ.ಪಿ. ಶೆಟ್ಟಿ, ಎಸ್.ಬಿ. ಗೌಡ್ ಕಲ್ಲೂರು ವೇ|| ಪರಮೇಶ್ವರಯ್ಯ ಕಾನಳ್ಳಿಮಠ ಮತ್ತು ಎಸ್.ಎ. ಭಟ್ಟ ರನ್ನು ಸನ್ಮಾನಿಸಲಾಯಿತು.
ದೇವರಾಜ ಗೌಡರ್ ಮತ್ತು ನಯನಾ ಗೌಡರ್ ಅವರನ್ನು ಅವರ ಆತ್ಮೀಯರು ಬಂಧುಗಳು ಸನ್ಮಾನಿಸಿದರು.
ಜೆ.ಎಂ.ಆರ್. ಅಂಧರ ಶಾಲೆಯ ಉಪಾಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ ಸ್ವಾಗತಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು. ಅರುಣ ದೇವರಾಜ ಗೌಡರ್ ಹೊಸೂರು ವಂದಿಸಿದರು.
ಅಕ್ಕುಂಜಿಯಲ್ಲಿ ನಿಲ್ಲದ ಬಸ್ ಗಳಿಂದ ಸ್ಥಳಿಯರಿಗೆ ತೊಂದರೆ ಪ್ರತಿಭಟನೆಯ ಎಚ್ಚರಿಕೆ
ಸಿದ್ಧಾಪುರ ತಾಲೂಕಿನ ಅಕ್ಕುಂಜಿಯಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲುಗಡೆಗೆ ಸ್ಥಳಿಯರು ಆಗ್ರಹಿಸಿದ್ದಾರೆ. ಸಾಗರ,ಶಿರಸಿ ಮಾರ್ಗದ ಸಿದ್ಧಾಪುರ ಕಾವಂಚೂರು ಗ್ರಾಮ ಪಂಚಾಯತ್‍ನ ಅಕ್ಕುಂಜಿ ಗ್ರಾಮಸ್ಥರು ಮತ್ತು ಅಲ್ಲಿಗೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಕಣ್ಣೆದುರೇ ನೂರಾರು ಬಸ್ ಗಳು ಓಡಾಡಿದರೂ ಆ ಬಸ್ ಗಳಲ್ಲಿ ಸಂಚರಿಸುವ ಭಾಗ್ಯವಿಲ್ಲ.
ತಡೆರಹಿತ ಬಸ್ ಗಳು ಸೇರಿದಂತೆ ಸಿಟಿ. ಇಂಟರ್ ಸಿಟಿಬಸ್ ಗಳು ಇಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಈ ಗ್ರಾಮದ ಜನರು ದೂರದ ಕಾಂವಚೂರಿಗೆ ನಡೆದು ತೆರಳಬೇಕು. ಜನಸಾಮಾನ್ಯರೊಂದಿಗೆ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಎದುರಿಗೆ ಬಸ್ ಹೋದರೂ ದೂರದ ಬಸ್ ನಿಲ್ದಾಣಗಳ ವರೆಗೆ ನಡೆದು ಹೋಗಿ ಅಥವಾ ಖಾಸಗಿ ವಾಹನಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಈ ಭಾಗಕ್ಕಿದೆ. ಹಾಗಾಗಿ ಶಿರಸಿ ಮತ್ತು ಸಾಗರ ಡಿಪೊಗಳಿಂದ ಬರುವ ಬಸ್ ಗಳು ಕಡ್ಡಾಯವಾಗಿ ಇಲ್ಲಿ ನಿಲುಗಡೆ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿಯ ಸ್ಥಳಿಯರು ಸಂಬಂಧಿಸಿದವರನ್ನು ಆಗ್ರಹಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *