

ಸರ್ಕಾರದ ನೀತಿ-ನಿಯಮಗಳು ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳ ನಡುವಿನ ಘರ್ಷಣೆಗೆ ಅವಕಾಶ ಮಾಡುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಇಂದು ಬೇಡ್ಕಣಿ ಗ್ರಾ.ಪಂ.(sಸಿದ್ಧಾಪುರ ಉ.ಕ.) ಸಾಮಾನ್ಯ ಸಭೆಯಲ್ಲಿ ತಾಂತ್ರಿಕ ತೊಂದರೆಗಳ ಕಾರಣಕ್ಕೆ ಗ್ರಾ.ಪಂ. ಉಪಾಧ್ಯಕ್ಷರು ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳ ನಡುವಿನ ಜಟಾಪಟಿಗೆ ಕಾರಣವಾಯಿತು.
ಸಾಮಾನ್ಯ ಸಭೆಯ ಮೊದಲು ಸಹಜ, ಮುಂಚಿತ ಚರ್ಚೆಯ ವೇಳೆ ಮಾಧ್ಯಮಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಬೇಡ್ಕಣಿ ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಾಯ್ಕ ಅಧಿಕಾರಿಗಳ ಅಸಹಕಾರ,ಸರ್ಕಾರದ ಕಠಿಣ ನಿಯಮಗಳಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಠರಾವಿನಲ್ಲಿ ನಮ್ಮ ಆಕ್ಷೇಪ, ಚರ್ಚೆಗಳನ್ನೂ ನಮೂದಿಸುವುದಿಲ್ಲ, ಸಾಮಾನ್ಯ ಸಭೆಯ ಠರಾವುಗಳಲ್ಲಿ ಚರ್ಚೆ, ವಿಷಯ ದಾಖಲಾತಿ ಆಗದಿದ್ದರೆ ಸಭೆಯ ಔಚಿತ್ಯವೇನು ಎಂದು ಪ್ರಶ್ನಿಸಿದರು. ನಂತರ ಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಿದರೆ ಮಾಧ್ಯಮಗಳಲ್ಲಾದರೂ ದಾಖಲಾಗುತ್ತದೆ ಎಂದರು. ಅದಕ್ಕೆ ಸಭೆ ಸರ್ವಾನುಮತದ ಬೆಂಬಲ ವ್ಯಕ್ತಪಡಿಸಲಿಲ್ಲ.
ಸೂಚಿತ ದಾಖಲಾತಿಗಳಿಲ್ಲದಿದ್ದರೂ ಕನಿಷ್ಟ ಲಭ್ಯ ದಾಖಲೆಗಳ ಆಧಾರದಲ್ಲಿ ಮನೆ ಸಂಖ್ಯೆ ಇತ್ಯಾದಿ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ ಉಪಾಧ್ಯಕ್ಷರ ಅನಿಸಿಕೆಗೆ ಗ್ರಾಮೀಣಾಭಿವೃದ್ಧಿ ಅಧಕಾರಿಗಳ ಪೂರಕ ಉತ್ತರ, ಸಹಕಾರ ದೊರೆಯಲಿಲ್ಲ. ಸದಸ್ಯರು, ಅಧಿಕಾರಿಗಳ ಬಹುಮತದ ನಿರ್ಣಯದಂತೆ ಮಾನವೀಯತೆ ಆಧಾರದಲ್ಲಿ ಅನುಕೂಲ ಮಾಡಲು ಅದರಿಂದ ಕಾನೂನು ನೀತಿ- ನಿಯಮಗಳಿಗೆ ಅಪಚಾರವಾಗದಂತೆ ಎಚ್ಚರ ವಹಿಸಲು ಸೂಚಿಸಲಾಯಿತು.
ಇ ಸ್ವತ್ತು ಸೇರಿದ ಕೆಲವು ಸರ್ಕಾರಿ ನಿಯಮಗಳು ಜನಸಾಮಾನ್ಯರಿಗೆ ಅನುಕೂಲಮಾಡಲು ತೊಡಕಾಗಿದ್ದು ಈ ತೊಂದರೆ ತಪ್ಪಿಸಲು ಸರ್ಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ಹೀಗೆ ಬೇಡ್ಕಣಿ ಗ್ರಾ,ಪಂ, ಸೇರಿದಂತೆ ತಾಲೂಕು, ಜಿಲ್ಲೆಯ ಬಹುತೇಕ ಸ್ಥಳಿಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವಿನ ಘರ್ಷಣೆಗೆ ಕಾರಣವಾಗುತ್ತಿರುವ ಸರ್ಕಾರಿ ನೀತಿ-ನಿಯಮಗಳಿಂದ ಬಡಜನರಿಗೇ ತೊಂದರೆ ಆಗುತ್ತಿರುವ ವಾಸ್ತವವನ್ನು ಪ್ರತಿಬಿಂಬಿಸುವಲ್ಲಿ ಇಂದಿನ ಬೇಡ್ಕಣಿ ಗ್ರಾ.ಪಂ. ಘಟನೆ ದೃಷ್ಟಾಂತವಾಯಿತು.
ಸರ್ಕಾರದ ನಿರ್ಧೇಶನದ ಮೇರೆಗೆ ನಾವು ಕೆಲಸ ಮಾಡಬೇಕಾಗುತ್ತದೆ.ಸಭೆಯಲ್ಲಿ ಸರ್ವಾನುಮತದ ನಿರ್ಣಯಗಳ ಬಗ್ಗೆ ಮಾತ್ರ ಠರಾವಿನಲ್ಲಿ ದಾಖಲಿಸಲುಸಾಧ್ಯ
-ಪಿ.ಡಿ.ಓ. ಬೇಡ್ಕಣಿ ಗ್ರಾ.ಪಂ.
ಬಿಸಿಯೂಟದ ಕೋಣೆ ಮೇಲೆ ಬಿದ್ದ ಮರ,ಗಾಯ ಸಿದ್ದಾಪುರ,ಜು.30- ಸಿದ್ಧಾಪುರ ತಾಲೂಕಿನ ಕಾನಗೋಡು
ಹಿ.ಪ್ರಾ.ಶಾಲೆಯ ಬಿಸಿಯೂಟದ ಅಡುಗೆಮನೆ ಮೇಲೆ ಫಲಭರಿತ ಪಪ್ಪಾಯಿ ಮರ ಬಿದ್ದು ಭಾವಣಿಯ ಹೆಂಚು ಮುರಿದು ಹೋಗಿದೆ. ಅಡುಗೆತಯಾರಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿರುವುದರಿಂದ ಬಿಸಿಯೂಟ ತಯಾರಕರಿಗೆ ಸಣ್ಣ ಗಾಯಗಳಾಗಿದ್ದು ಅವರು ಸಿದ್ದಾಪುರ ತಾಲೂಕಾ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
