

ಶಾಲಾ-ಕಾಲೇಜುಗಳಿಗೆ ರಜೆ
(ಸಿದ್ಧಾಪುರ,ಆ.05-) ನಿರಂತರ ಮಳೆಯ ಹಿನ್ನೆಲೆಯಲ್ಲಿ ಸಿದ್ಧಾಪುರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಆ.6 ರ ಮಂಗಳವಾರ ರಜೆ ಘೋಶಿಸಿರುವುದಾಗಿ ತಹಸಿಲ್ದಾರ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲೂ ನೀರು-
ಸಿದ್ಧಾಪುರ, ಹಾಳದಕಟ್ಟಾ, ಕೊಂಡ್ಲಿ ಭಾಗದಲ್ಲಿ ಅವೈಜ್ಞಾನಿಕ ನಿರ್ಮಾಣಗಳ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ನೀರು ತುಂಬಿ ಜನರು, ವಿದ್ಯಾರ್ಥಿಗಳು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಈ ತೊಂದರೆ ಬಗ್ಗೆ ಪ.ಪಂ. ಆಡಳಿತ ಮತ್ತು ಶಾಸಕರು ಗಮನ(ಹರಿ) ವಹಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಮಳೆ+ಗಾಳಿ=ಹಾನಿ
ಕಳೆದ ಎರಡ್ಮೂರು ದಿವಸಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹಳ್ಳ-ಕೊಳ್ಳ ಗಳೆಲ್ಲಾ ತುಂಬಿ ಹರಿಯುತ್ತಿವೆ. ಜನರು ಕೃಷಿ ಕೆಲಸ ಮಾಡಲು ಹಿಂಜರಿಯುವಂತೆ ಮಳೆ,ಗಾಳಿ ರಭಸ ಹೆಚ್ಚಾಗಿದ್ದು ಜನಜಾನುವಾರುಗಳ ಓಡಾಟಕ್ಕೂ ತೊಂದರೆಯಾಗಿದೆ.
ಶುಕ್ರವಾರ ಶನಿವಾರದ ಅವಧಿಯ ಮಳೆ ಗಾಳಿಗೆ ಕೋಲಶಿರ್ಸಿ ಪಂಚಾಯತ್ ನ ಅವರಗುಪ್ಪಾದ ಈಶ್ವರ ದೇವಾಲಯದ ಕಲ್ಲುಗಳು ಕುಸಿದಿವೆ. ಈ ಈಶ್ವರ ದೇವಾಲಯ ಪುರಾತನ ದೇವಾಲಯವಾಗಿದ್ದು ಗ್ರಾಮಸ್ಥರು ಈ ದೇವಸ್ಥಾನದ ಪುನರ್ ನಿರ್ಮಾಣದ ಬಗ್ಗೆ ಯೋಚಿಸುತ್ತಿದ್ದ ಸಮಯದಲ್ಲೇ ಇದು ಉದುರಿಬೀಳುವಂತೆ ಕಟ್ಟಡದ ಕಲ್ಲು,ಮಣ್ಣು, ಮರಳು ಜರಿಯತೊಡಗಿದೆ.
ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಇಲ್ಲಿಯ ಗ್ರಾಮ ಸಮೀತಿ ಸ್ಥಳಿಯ ಆಡಳಿತವನ್ನು ಆಗ್ರಹಿಸಿದೆ. ರವಿವಾರ ಶಿರಸಿ ರಸ್ತೆಯ 16 ನೇ ಮೈಲ್ಕಲ್ ಬಳಿ ಬುಡಮೇಲಾಗಿ ಬಿದ್ದ ಬಿದಿರಿನ ಹಿಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತ್ತು. ಸೋಮವಾರ ಬೆಳಿಗ್ಗೆ ರಭಸದ ಮಳೆ-ಗಾಳಿ ಪರಿಣಾಮ ಸಿದ್ಧಾಪುರ ಸಿವಿಲ್ ಕೋರ್ಟ್ ಎದುರಿಗೆ ಮೇ ಫ್ಲವರ್ ಮರವೊಂದು ಬುಡಸಹಿತ ಧರೆಗುರುಳಿದ್ದು ಸಂಬಂಧಿಸಿದವರು ರಸ್ತೆ ತೆರವು ಮಾಡಿಕೊಟ್ಟಿದ್ದಾರೆ.
ಇದೊಂಥರಾ ವಿಶಿಷ್ಟ ನಾಗಪಂಚಮಿ
ವಿಶೇಶಚೇತನರಿಗೆ ಹಾಲು,ಸಿಹಿ ಹಂಚಿ ನಾಗರ ಪಂಚಮಿ ಆಚರಣೆ
ನಿರಂತರ ಮಳೆ, ಮಹಾಪೂರಗಳ ನಡುವೆ ನಾಡಿನಾದ್ಯಂತ ಇಂದು ನಾಗರ ಪಂಚಮಿ ಆಚರಿಸಲಾಯಿತು.
ಬಹುತೇಕ ಕಡೆ ಕಲ್ಲುನಾಗರ, ಮೂರ್ತಿನಾಗರ, ಜೀವಂತನಾಗರ ದೇವರ ಆರಾಧನೆ ನಡೆದರೆ, ಕಾರವಾರದಲ್ಲಿ ನಗರದ ಗಣ್ಯರು ವಿಭಿನ್ನವಾಗಿ ನಾಗರಪಂಚಮಿ ಆಚರಿಸಿದರು.
ಇಲ್ಲಿಯ ಖುರಸಾವಾಡಾ ದಲ್ಲಿರುವ ಆಶಾನಿಕೇತನ ವಿಶೇಶಚೇತನ ಮಕ್ಕಳ ಶಾಲೆಗೆ ತರಳಿ ನಾಗಪಂಚಮಿ ಆಚರಿಸಿದ ಜನಶಕ್ತಿ ಸಂಘಟನೆಯ ಮುಖ್ಯಸ್ಥ ಮಾಧನ ನಾಯ್ಕ ನೇತೃತ್ವದ ತಂಡ ಇಲ್ಲಿಯ ಮಕ್ಕಳಿಗೆ ಸಿಹಿ-ಹಾಲು ವಿತರಿಸಿ, ಊಟ ಬಡಿಸುವ ಮೂಲಕ ನಾಗರಪಂಚಮಿ ಆಚರಿಸಿತು.
ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಕಲ್ಲು, ಕಲ್ಲಿನ ನಾಗರ ಮೂರ್ತಿಗೆ ಹಾಲು ಸುರಿದು ಹಾಳು ಮಾಡುವ ಬದಲು ಇಂಥ ಅಸಹಾಯಕ, ದುರ್ಬಲ ಮಕ್ಕಳು,ಹಿರಿಯರಿಗೆ ಹಾಲು,ಹಣ್ಣು- ಸಿಹಿ ವಿತರಿಸುವ ಮೂಲಕ ನಾಗರ ಪಂಚಮಿ ಆಚರಿಸಿದರೆ ಅದರಿಂದಲೂ ಫಲ ದೊರೆಯುತ್ತದೆ ಎಂದರು.



