
ಮಳೆನಿಂತು ಹೋದ ಮೇಲೆ ಭಾಗ-07
ಬಿರುಕು,ಕುಸಿತಗಳ ಒಳಗಿದೆಯಾ ಸುರಂಗ ಎನ್ನುವ ಅನುಮಾನದ ಸುತ್ತ ಚಿತ್ತ
ಬಿರುಕು ಬಿಟ್ಟ ಇಲ್ಲಿಯ (ಸಿದ್ಧಾಪುರ) ಹೆಗಡೆಮನೆ, ಮದ್ದಿನಕೇರಿ ಮತ್ತು ಭಾನ್ಕುಳಿ ನಡುವೆ ಏನಾದರು ಸಂಬಂಧವಿದೆಯಾ? ಎನ್ನುವ ಪ್ರಶ್ನೆಯೊಂದು ಈಗ ಒಡಮೂಡಿದೆ.
ಸಿದ್ಧಾಪುರದ ಮಹಾಮಳೆ, ಪ್ರವಾಹಕ್ಕೆ ಹೆಮ್ಮನಬೈಲ್, ಅಕ್ಕುಂಜಿ ಮತ್ತು ಕಲ್ಯಾಣಪುರ ಸೇರಿದಂತೆ ಕೆಲವೆಡೆ ಸಾರ್ವಜನಿಕರು ಮನೆ ಬಿಟ್ಟು ಸ್ಥಳಾಂತರವಾಗಬೇಕಾದ ಸ್ಥಿತಿ ಉದ್ಭವಿಸಿತ್ತು. ಇದೇ ವೇಳೆಗೆ ಹೆಗಡೆಮನೆ, ಮದ್ದಿನಕೇರಿ, ಸಾತನಕೇರಿ, ಭಾನ್ಕುಳಿಗಳಲ್ಲಿ ಧರೆ ಕುಸಿದಿತ್ತು. ಭಾನ್ಕುಳಿಯಲ್ಲಂತೂ ಹತ್ತು ಅಡಿಯಷ್ಟು ಕೆಳಕ್ಕೆ ಕುಸಿದ ಭೂಮಿ ಗದ್ದೆಗಳನ್ನು ಮೇಲಕ್ಕೆತ್ತಿತ್ತು. ಈ ವಿದ್ಯಮಾನದ ನಂತರ ಭಾನ್ಕುಳಿಯಲ್ಲಿ ಒಂದು ಮನೆ, ಮದ್ದಿನಕೇರಿಯ 2 ಮನೆಗಳು, ಹೆಗಡೆಮನೆಯ ಒಂದು ಮನೆ ಸ್ಥಳಾಂತರಿಸಬೇಕೆಂದು ತಾಲೂಕಾ ಆಡಳಿತ ನಿರ್ಧೇಶನ ನೀಡಿತ್ತು.
ಮಳೆಯ ನಂತರ ಈ ಗ್ರಾಮಗಳು ಭಾದಿತ ಕುಟುಂಬಗಳೆಲ್ಲಾ ನಿಟ್ಟುಸಿರು ಬಿಟ್ಟಂತಿವೆ.ಆದರೆ ಈ ಭಾಗದಲ್ಲಿ ಬಿಳಗಿ ಅರಸರ ಕಾಲದ ಸುರಂಗ ಒಂದಿದ್ದುಅದು ಬೇಡ್ಕಣಿಯಿಂದ ಉತ್ತರ ಮತ್ತು ದಕ್ಷಿಣಾಭಿಮುಖವಾಗಿದೆ ಎನ್ನಲಾಗುತ್ತಿದೆ.
ಆ ಕಾಲದ ಆ ಸುರಂಗಕ್ಕೂ ಈ ಭಾಗದ ಈಗಿನ ಕುಸಿತಗಳಿಗೂ ಸಂಬಂಧವಿದೆಯಾ ಎನ್ನುವ ಪ್ರಶ್ನೆ ಈಗ ಕೆಲವರ ತಲೆತಿನ್ನತೊಡಗಿದೆ. ಬೇಡ್ಕಣಿಯಿಂದ ಮದ್ದಿನಕೇರಿ,ಸಾತನಕೇರಿ, ಹೆಗಡೆಮನೆ, ಗುಂಜಗೋಡು ಭಾಗದಲ್ಲಿ ಈ ಸುರಂಗದ ವ್ಯಾಪ್ತಿ ಇರಬಹುದಾಗಿದ್ದು ಆ ಭಾಗದಲ್ಲಿ ನಿರಂತರವಾಗಿ ಕುಸಿಯುತ್ತಿರುವ ಭೂಮಿ-ಧರೆಗಳ ಹಿಂದೆ ಈ ಸುರಂಗದ ಹಿನ್ನೆಲೆ ಇರಬಹುದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಬಿಳಗಿಯಿಂದ ಬೇಡ್ಕಣಿಯ ವರೆಗೆ ಕೋಟೆ (ಕೋಟೆ ಹನುಮಂತ) ಇದರ ಒಳಭಾಗದಲ್ಲಿ ಸುರಂಗ ಇತ್ಯಾದಿ ಇರಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದೇ ಭಾಗದಲ್ಲಿ ಮೇಲಿಂದ ಮೇಲೆ ಕುಸಿತಗಳಾಗುತ್ತಿರುವುದು ಇವುಗಳ ಅಸ್ಥಿತ್ವದ ಹಿನ್ನೆಲೆಯ ಕಾರಣಕ್ಕೇ ಎನ್ನುವ ಅನುಮಾನಗಳು ಬಲವಾಗುವಂತೆ ಕೆಲವು ಐತಿಹಾಸಿಕ ಸಾಕ್ಷಗಳೂ ಸಿಗತೊಡಗಿವೆ.
ಈ ಬಗ್ಗೆ ಸಂಶೋಧನೆ ಮಾಡುವವರು, ಇತಿಹಾಸ ತಜ್ಞರು ಈ ಸಾಧ್ಯತೆಗಳ ಬಗ್ಗೆ ಅನ್ವೇಷಣೆ ಮಾಡಿದರೆ ಸತ್ಯಶೋಧನೆಯಾಗಬಹುದೆಂದು ಈಗ ಊಹಿಸಲು ಅವಕಾಶವಿದೆ.
ಬಿಳಗಿ ಸುತ್ತ ಮುತ್ತ ಕೈ ಹಾಕಿದಲ್ಲೆಲ್ಲಾ ಪುರಾತನ ಅವಶೇಶಗಳು, ಪಳಯುಳಿಕೆಗಳು ಸಿಗುತ್ತವೆ.
ಬೇಡ್ಕಣಿ ಸುತ್ತಮುತ್ತ ಒಂದು ಸುರಂಗಮಾರ್ಗವಿದೆ ಎನ್ನುವ ಹಿರಿಯರ ಮಾತು ಸುಳ್ಳಿರಲಿಕ್ಕಿಲ್ಲ. ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಲಕ್ಷ್ಮೀಶ ಹೆಗಡೆ ಸೋಂದಾ, ಇತಿಹಾಸತಜ್ಞ
ನಾಡಿನ ಸಮಸ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು
ಇಂದು ನಮ್ಮ ಭಾಗದ ಮಳೆಹಾನಿ ವೀಕ್ಷಣೆಗೆ ಆಗಮಿಸುತ್ತಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ
ಸ್ವಾಗತ-ಸುಸ್ವಾಗತ
ನಾಗರಾಜ್ ನಾಯ್ಕ ಬೇಡ್ಕಣಿ,
ಜಿ.ಪಂ. ಸದಸ್ಯರು ದೊಡ್ಮನೆಕ್ಷೇತ್ರ ಸಿದ್ಧಾಪುರ (ಉ.ಕ.)
ಗೌರಿ-ಗಣೇಶ ಹಬ್ಬದಿಂದ ಶುಭಾರಂಭ ಮಾಡಿರುವ ಸಿದ್ದಾಪುರದ ಮೊದಲ ಪಿಜ್ಜಾಹೌಸ್ ಐಸ್ ಗ್ಯಾಲಾಕ್ಷಿ ಕಾರ್ನರ್ ನಿಂದ ಸಮಸ್ತರಿಗೆ
ಗಣೇಶ ಚತುರ್ಥಿ ಮತ್ತು ಮೊಹರಂ ಶುಭಾಶಯಗಳು





