
ಶಿಕ್ಷಕರ ದಿನಾಚರಣೆ ಅಂಗವಾಗಿ ಸಿದ್ಧಾಪುರದ ರಾಘವೇಂದ್ರಮಠದಲ್ಲಿ ಶಿಕ್ಷಕರ ದಿನೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಪ್ರತಿಭಾವಂತರು, ನಿವೃತ್ತ ಶಿಕ್ಷಕರು, ಪ್ರಶಸ್ತಿ ವಿಜೇತರು ಸೇರಿ ಅನೇಕ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ದಿನಾಚರಣೆಯನ್ನೂ ರಾಷ್ಟ್ರೀಯ ಹಬ್ಬವಾಗಿ ಆಚರಿಸಲು ಸರ್ಕಾರಕ್ಕೆ ನಿರ್ಧೇಶಿಸುವುದಾಗಿ ತಿಳಿಸಿದರು.
ಶಿರಸಿ ಹೃದಯ ಭಾಗದ ಹೋಟೆಲ್ ಒಂದರ ಗೋಡೆ ಕುಸಿದ ಪರಿಣಾಮ 4-5 ಜನರಿಗೆ ಗಾಯಗಳಾದ ಘಟನೆ ನಡೆದಿದೆ. ಮಳೆ ಹಾಗೂ ಹಳೆ ಮಣ್ಣು ಕಲ್ಲುಗಳ ಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ನಡೆದಿದ್ದು ಗಾಯಾಳುಗಳಾದ 4-5 ಜನರೂ ಅಪಾಯದಿಂದ ಪಾರಾಗಿದ್ದಾರೆ.





