
ಸಿದ್ಧಾಪುರ ತಾಲೂಕಿನ ಪ್ರತಿಷ್ಠಿತ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಉದ್ಯಮಿ ಪ್ರಕಾಶ ಹೆಗಡೆ ಗುಂಜಗೋಡು ಮತ್ತು ಉಪಾಧ್ಯಕ್ಷರಾಗಿ ವರ್ತಕ ಎನ್.ಜಿ.ಕಾಮತ್ ಆಯ್ಕೆಯಾಗಿದ್ದಾರೆ.
ಇಂದು ವರ್ತಕರ ಸಂಘದ ಸಭೆಯಲ್ಲಿ ನಡೆದ ಈ ಆಯ್ಕೆಯಲ್ಲಿ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್ ಭಟ್ ಕಲ್ಲಾಳ (ಕಾರ್ಯದರ್ಶಿ)ಸುಬ್ರಮಣ್ಯ ಭಟ್ (ಖಜಾಂಜಿ ಗಳಾಗಿ) ಆಯ್ಕೆಯಾದರು.
ಹಿಂದೆ ಈ ಸಂಘಕ್ಕೆ ಆರ್.ಎಸ್ ಹೆಗಡೆ ಅಧ್ಯಕ್ಷ, ಆರ್.ಎಂ. ಪಾಟೀಲ್ ಕಾರ್ಯದರ್ಶಿಯಾಗಿದ್ದರು. ಹಿಂದಿನ ಅವಧಿಯ ಉಪಾಧ್ಯಕ್ಷ ಪ್ರಕಾಶ ಹೆಗಡೆ ಈಗ ಅಧ್ಯಕ್ಷರಾಗಿದ್ದಾರೆ. ಇವರು ಶಿವಮೊಗ್ಗದ ಅರೆಕಾ ಛೇಂಬರ್ ಆಫ್ ಕಾಮರ್ಸ್‍ನ ಮಾಜಿ ನಿರ್ಧೇಶಕರು. ಹಿಂದೆ ಸಿದ್ಧಾಪುರದ ಪ.ಪಂ. ಅಧ್ಯಕ್ಷರಾಗಿದ್ದ ಪ್ರಕಾಶ ಹೆಗಡೆ ಬಹುವರ್ಷಗಳಿಂದ ಅಡಿಕೆ ವರ್ತಕರ ಸಂಘದಲ್ಲಿದ್ದು ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿಯಾಗಿದ್ದಾರೆ. ಎನ್.ಜಿ.ಕಾಮತ್ ಮತ್ತು ಜಿ.ಎಸ್ ಭಟ್ ಕಲ್ಲಾಳ ಹಾಗೂ ಸುಬ್ರಮಣ್ಯ ಭಟ್ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಮುಖಂಡರಾಗಿಯೂ ಗುರುತಿಸಿಕೊಂಡಿದ್ದಾರೆ.
ಅಭಿನಂದನೆಗಳು
ಸಿದ್ಧಾಪುರ ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ನಮ್ಮೆಲ್ಲ ನೆಚ್ಚಿನ ನಿರ್ಧೇಶಕರಾದ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್. ಭಟ್ ಕಲ್ಲಾಳ (ಕಾರ್ಯದರ್ಶಿ) ಸುಬ್ರಮಣ್ಯ ಭಟ್ (ಖಜಾಂಜಿ)ರಿಗೆ ಹೃತ್ಫೂರ್ವಕ ಅಭಿನಂದನೆಗಳು,
ನಾಡಿನ ಸಮಸ್ತರಿಗೆ ಗೌರಿ-ಗಣೇಶ್ ಹಬ್ಬದ ಶುಭಾಶಯಗಳು
ಆರ್.ಎಸ್.ಹೆಗಡೆ,(ಅ.ಛೇಂ.ಆಫ್ ಕಾಮರ್ಸ್ ಅ.) ಎಂ.ಆರ್.ಹೆಗಡೆ, ಜಯಂತ ಶಾನಭಾಗ (ನಿರ್ಧೇಶಕರು ಎ.ಪಿ.ಎಂ.ಸಿ.) ರವಿಕುಮಾರ .ಎಂ. ಪಾಟೀಲ್,(ಕಾ.ಅ.ಛೇಂ.ಆ.ಕಾ) ನಾಗೇಶ್ ಡಿ.ಹುಲೇಕಲ್, ವಿನಾಯಕ ಪಿ.ಹೆಗಡೆ ಬೈಲಳ್ಳಿ, ಸೂಪಿಯಾನ್ ಸಾಹೇಬ್ ಹೇರೂರು ಹಾಗೂ
ಸರ್ವಸದಸ್ಯರು,
ಅಡಿಕೆ ವರ್ತಕರ ಸಂಘ ಸಿದ್ಧಾಪುರ (ಉ.ಕ.)
ಅಭಿನಂದನೆಗಳು
ಸಿದ್ಧಾಪುರ ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ನಮ್ಮೆಲ್ಲರ ನೆಚ್ಚಿನ ಸ್ನೇಹಿತರಾದ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್. ಭಟ್ ಕಲ್ಲಾಳ (ಕಾರ್ಯದರ್ಶಿ) ಸುಬ್ರಮಣ್ಯ ಭಟ್ (ಖಜಾಂಜಿ)ರಿಗೆ ಹೃತ್ಫೂರ್ವಕ ಅಭಿನಂದನೆಗಳು, ನಾಡಿನ ಸಮಸ್ತರಿಗೆ ಗೌರಿ-ಗಣೇಶ್ ಹಬ್ಬದ ಶುಭಾಶಯಗಳು
ಪ್ರೊ.ಸುರೇಂದ್ರ ದಫೇದಾರ್ (ಹೊಸೂರು)



