
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತ, ಸಂವಿಧಾನ ವಿರೋಧಿ ನೀತಿಗಳಿಂದ ಬೇಸತ್ತು ಐ.ಎ.ಎಸ್. ಅಧಿಕಾರಿಗಳು ರಾಜೀನಾಮೆ ನೀಡುತ್ತಿರುವ ವಿದ್ಯಮಾನ ವಿಸ್ತರಿಸತೊಡಗಿದೆ.
ಇಂದು ತಮ್ಮ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಮಂಗಳೂರು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ದೇಶದಲ್ಲಿ ಪ್ರಜಾಪ್ರಭುತ್ವ, ನ್ಯಾಯ, ವಿವಿಧತೆಯಲ್ಲಿ ಏಕತೆ ನಾಶವಾಗುತ್ತಿದೆ. ಈಗಾಗಲೇ ಪ್ರಾರಂಭವಾಗಿರುವ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವದ ವಿರೋಧಿ ನೀತಿಗಳು ವಿಸ್ತರಿಸುವ ಅಪಾಯಗಳು ಹೆಚ್ಚಿವೆ. ಈ ವ್ಯವಸ್ಥೆಯಲ್ಲಿದ್ದು ಈ ಅನಾಹುತಗಳಿಗೆ ಸಾಕ್ಷಿಯಾಗುವುದಕ್ಕಿಂತ ಇಲ್ಲಿಂದ ಹೊರನಡೆದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಒಪ್ಪುವ ರೀತಿಯ ಮೂಲಕ ಹೋರಾಟದಿಂದ ಜನತೆಗೆ ನ್ಯಾಯ ಕೊಡಿಸಬಹುದು. ಇದು ನನ್ನ ವೈಯಕ್ತಿಕ ತೀರ್ಮಾನ ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಜನತೆ ನನಗೆ ಸಹಕಾರ ನೀಡಿದ್ದಾರೆ. ಆದರೆ ಈಗ ದೇಶದಲ್ಲಿ ಸೌಹಾರ್ದತೆ,ಬಹುತ್ವಕ್ಕೆ ವಿರುದ್ಧವಾದ ಆಡಳಿತ ವ್ಯವಸ್ಥೆ ಜಾರಿ ಮಾಡುವ ಗುಪ್ತ ಅಜೆಂಡಾ ವಿವಿಧತೆ, ಸಹಜತೆ, ಸಾಮರಸ್ಯಗಳಿಗೆ ವಿರುದ್ಧವಾಗಿದೆ.
ಸಾಧ್ಯವಾದರೆ ಇಂಥ ಸಂವಿಧಾನವಿರೋಧಿ ಶಕ್ತಿಗಳಿಗೆ ಸೆಡ್ಡು ಹೊಡೆದು ಬದುಕುವುದು ಇಲ್ಲಿದ್ದು ವಿವೇಕಯುತವಲ್ಲದ ವ್ಯವಸ್ಥಗೆ ಒಪ್ಪಿಕೊಂಡು ಜನದ್ರೋಹ ಮಾಡುವುದಕ್ಕಿಂತ ಸೂಕ್ತ ಆಯ್ಕೆ ಎಂದು ಭಾವಿಸಿದ್ದೇನೆ ಎಂದು ಅವರು ಜನತೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಇವರು ಹಿಂದೆ ಶಿವಮೊಗ್ಗದಲ್ಲಿ ಜಿ.ಪಂ. ಮುಖ್ಯ ಕಾರ್ಯದರ್ಶಿಯಾಗಿ, ಈಗ ಮಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದರು.

