Sirsi-bjp-ಶಿರಸಿ ಬಿ.ಜೆ.ಪಿ. ಟಿಕೇಟ್‌ ದೀವರಿಗೆ! ಯಾರು ಅಭ್ಯರ್ಥಿ?

ಕಾಂಗ್ರೆಸ್‌ ಇದೇ ವಾರ ತನ್ನ ೨ನೇ ಪಟ್ಟಿ ಬಿಡುಗಡೆ ಮಾಡಲಿದೆ. ಜೆ.ಡಿ.ಎಸ್‌ ನಲ್ಲಿ ವಿಧಾನಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಬಿ.ಜೆ.ಪಿ. ಕೂಡಾ ಇದೇ ವಾರ ತನ್ನ ಪಟ್ಟಿ ಬಿಡುಗಡೆ ಮಾಡಲಿದೆ.

ಈ ಮಧ್ಯೆ ಉತ್ತರ ಕನ್ನಡದಲ್ಲಿ ಹಿರಿಯ ನಾಯಕರಾದ ಶಿವರಾಮ ಹೆಬ್ಬಾರ್‌ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಯಾರಾದರೂ ಒಬ್ಬರು ತಮ್ಮ ಕ್ಷೇತ್ರ ತ್ಯಾಗ ಮಾಡಿ ಎಂದು ಬಿ.ಜೆ.ಪಿ. ಸೂಚಿಸಿದೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸ್ಫೋಟಕ ಹೇಳಿಕೆ ನೀಡಿದ್ದು ಈ ಬಾರಿ ಟಿಕೇಟ್‌ ಘೋಷಣೆಯಲ್ಲಿ ಅಚ್ಚರಿ ಕಾದಿದೆ ಎಂದಿದ್ದಾರೆ.

ಈ ಬೆಳವಣಿಗೆಗಳನ್ನೆಲ್ಲಾ ಗಮನಿಸಿದರೆ ಬಿ.ಜೆ.ಪಿ.ಯ ದಲಿತ, ಹಿಂದುಳಿದ ವರ್ಗಗಳ ಶಾಸಕರಲ್ಲಿ ಕನಿಷ್ಟ ೨೫ ಜನ ಶಾಸಕರಿಗೆ ಟಿಕೇಟ್‌ ತಪ್ಪಲಿದ್ದು ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಶಾಸಕರು ಸೇರಿದ್ದಾರೆ ಎನ್ನಲಾಗುತ್ತಿದೆ.

ಶಿರಸಿ-ಯಲ್ಲಾಪುರ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಶಾಸಕರು ಸಂಘದ ನೀತಿ-ರೀತಿಗಳಿಗೆ ಬದ್ಧರಿಲ್ಲ ಹಾಗಾಗಿ ಈ ಇಬ್ಬರನ್ನೂ ಬದಲಿಸಬೇಕು ಎಂದು ಸಂಘ ನಿಷ್ಠ ಪತ್ರಕರ್ತರಿಬ್ಬರು ಲಾಬಿ ನಡೆಸಿದ್ದು ಈ ಲಾಬಿಯ ಹಿಂದೆ ತಮ್ಮ ಸಂಬಂಧಿಗಳು ಚುನಾವಣೆಸ್ಫರ್ಧಿಸುವಂತೆ ಮಾಡುವ ತಂತ್ರಗಳಿವೆ ಎನ್ನಲಾಗಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿರಸಿ ಕ್ಷೇತ್ರದಲ್ಲಿ ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ತಮಗೇ ಟಿಕೇಟ್‌ ಬೇಕು ಎಂದು ಬಿ.ಎಲ್.‌ ಸಂತೋಷ್‌ ಮೂಲಕ ಸಂಘಕ್ಕೆ ಒತ್ತಡ ಹೇರಿದ್ದು ಇವರ ಪರಿವಾರ ಯಲ್ಲಾಪುರ, ಶಿರಸಿ,ಕುಮಟಾ ಗಳಲ್ಲಿ ತಮ್ಮ ಸಂಬಂಧಿಗಳಿಗೇ ಟಿಕೇಟ್‌ ನೀಡಬೇಕು ಎಂದು ಒತ್ತಡ ತಂತ್ರ ಅನುಸರಿಸಿದೆಯಂತೆ! ಈ ಸ್ಫರ್ಧೆಯ ಹಿನ್ನೆಲೆಯಲ್ಲಿ ಶಿರಸಿ ಕ್ಷೇತ್ರದಲ್ಲಿ ಕಾಗೇರಿ ವಿಶ್ವೇಶ್ವರ ಹೆಗಡೆಯವರಿಗೆ ಪರ್ಯಾಯವಾಗಿ ಸಿದ್ಧಾಪುರದ ಕೆ.ಜಿ. ನಾಯ್ಕ ಹಣಜಿಬೈಲ್‌, ಶಶಿಭೂಷಣ ಹೆಗಡೆ ಅಥವಾ ಸಚ್ಚಿದಾನಂದ ಹೆಗಡೆ ಹಾಗೂ ಕುಮಟಾ ಯಲ್ಲಾಪುರಗಳಲ್ಲಿ ವಿಶ್ವೇಶ್ವರ ಭಟ್‌, ಶಶಿಭೂಷಣ ಹೆಗಡೆ ಅಥವಾ ಅನಂತಕುಮಾರ ಹೆಗಡೆಗಳನ್ನು ಪರಿಗಣಿಸಬೇಕು ಎಂದು ವರದಿ ಮಾಡಿದೆಯಂತೆ!

ಈ ಬೆಳವಣಿಗೆಗಳ ನಡುವೆ ಬಿ.ಜೆಪಿ.ಯ ಆಂತರಿಕ ಸಮೀಕ್ಷೆಯಲ್ಲಿ ಸಿದ್ಧಾಪುರದ ಕೆ.ಜಿ.ನಾಯ್ಕ ಹಣಜಿಬೈಲ್‌ ಪರವಾಗಿ ಹೆಚ್ಚಿನ ಕಾರ್ಯಕರ್ತರು ಒಲವು ತೋರಿದ್ದು ಬದಲಿಸಲೇಬೇಕಾದ ಶಾಸಕರ ಪಟ್ಟಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ,ಸುನಿಲ್‌ ನಾಯ್ಕ ಹಾಗೂ ರೂಪಾಲಿ ನಾಯ್ಕ ಸೇರಿರುವುದರಿಂದ ಯಾರಿಗೆ ಟಿಕೇಟ್‌ ಇಲ್ಲ ಎನ್ನುವುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

ಅನೇಕ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳು ಮತ್ತು ದಲಿತ ಶಾಸಕರನ್ನು ಬದಲಿಸುವುದರಿಂದ ಈ ಡ್ಯಾಮೇಜ್‌ ತುಂಬಲು ಕೆ.ಜಿ. ನಾಯ್ಕ ಹಣಜಿಬೈಲ್‌ ರಿಗೆ ಟಿಕೇಟ್‌ ನೀಡುವ ಮೂಲಕ ಬಿ.ಜೆ.ಪಿ.ಯ ಹಿರಿಯ ವೈದಿಕಪ್ರಮುಖರನ್ನೇ ಹಿಂದೆ ಸರಿಸಿ ಸಾಮಾಜಿಕ ನ್ಯಾಯ ಪಾಲಿಸುವ ಸೂತ್ರ ಸಿದ್ಧವಾಗಿದೆ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *