
ಸಾವಯವ, ಜೈವಿಕ ಕೃಷಿ ಮಾಡದೆ ನಮ್ಮಅಡಿಕೆ ಮರಗಳು ರೋಗಕ್ಕೆತುತ್ತಾಗುತ್ತಿವೆ. ನಾವು ತಾತ್ಕಾಲಿಕ ಹೆಚ್ಚಿಗೆ ಇಳುವರಿ ತೆಗೆಯುವಕಡೆ ಗಮನ ಹರಿಸದೆ, ಮರಗಳ ಆರೋಗ್ಯ, ಬಾಳಿಕೆಯ ಬಗ್ಗೆ ಯೋಚನೆ ಮಾಡಬೇಕುಎಂದು ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ಸ್ ಸೋಸೈಟಿಯ ಪ್ರಧಾನ ವ್ಯವಸ್ಥಾಪಕ ರವೀಶ ಎ ಹೆಗಡೆ ಹೇಳಿದರು.
ಅವರು ಸಿದ್ಧಾಪುರ ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ಸ್ ಸೋಸೈಟಿಯ ಪ್ರಾಂಗಣದಲ್ಲಿ ನಡೆದ ವಾರ್ಷಿಕ ಸಹಕಾರಿ ಸಭೆಯಲ್ಲಿ ಮಾತನಾಡಿದರು.
ಇಂದು ಕೂಲಿ ಸಮಸ್ಯೆಯಿಂದಲೂ ಇಳುವರಿಯ ಮೇಲೆ ಪ್ರಭಾವಉಂಟಾಗಿದೆ. ಮಳೆ ಪ್ರಾರಂಭದಲ್ಲಿ ಮತ್ತು ಮಳೆಗಾಲದ ನಂತರಗೊಬ್ಬರ ಹಾಕಿದರೆ ಹೆಚ್ಚು ಇಳುವರಿ ಪಡೆಯಬಹುದು. ಸೊಸೈಟಿಯಲ್ಲಿ ಕೃಷಿ ತಜ್ಞರ ಲಭ್ಯತೆಇದೆ.ಸದಸ್ಯರು ಪ್ರಯೋಜನ ಪಡೆದುಕೊಳ್ಳಬೇಕು.ತುತ್ತ ಸುಣ್ಣ ಪ್ರಯೋಗ ಶಾಲೆಗಳಲ್ಲಿ ಪರೀಕ್ಷಿಸಿ ಮಾರಾಟ ಮಾಡುವುದರಿಂದಯಾವುದೆತೊಂದರೆಇಲ್ಲಾ. ಸಂಘದಎಲ್ಲಾ ಸದಸ್ಯರಿಗೆಆರೋಗ್ಯ, ಬೆಳೆ ವಿಮೆಯನ್ನುಕಡ್ಡಾಯ ಮಾಡಲಾಗಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರದಅಡಿಕೆಯನ್ನು ಸ್ಪೇಷಲ್ ಬ್ರಾಂಡ್ ಆಗಿ ಮಾಡಲು ಪ್ರಯತ್ನಗಳು ನಡೆದಿದೆ. ಕೃಷಿ ಪ್ರಯೋಗ ಶಾಲೆ (ಲ್ಯಾಬೊರೇಟರಿ)ಯನ್ನು ಪ್ರಾರಂಭಿಸಲಾಗಿದೆ. ಸದಸ್ಯರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕುಎಂದಅವರು ಈ ವರ್ಷಅತೀವೃಷ್ಠಿಯಿಂದ ಹೆಚ್ಚಿನ ಬೆಳೆ ಹಾನಿಯಾಗಿ ಇಳುವರಿ ಕಡಿಮೆಇರುವುದರಿಂದದೊಡ್ಡದೊಡ್ಡ ವೆಚ್ಚದ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು ಎಂಬ ಕಿವಿಮಾತು ಹೇಳಿದರು.
ಸಂಸ್ಥೆಯಅಧ್ಯಕ್ಷ ಶಾಂತರಾಮ ಹೆಗಡೆ ಶೀಗೇಹಳ್ಳಿ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ಪ್ರಾಮಾಣಿಕವಾಗಿ ವ್ಯವಹಾರ ಮಾಡಿದ ಹಿರಿಯ ಸದಸ್ಯರಾದ ಭೈರಚೌಡ ನಾಯ್ಕ ಬೇಡ್ಕಣಿ, ದಿವಾಕರ ಹೆಗಡೆ ಹೂವಿನಮನೆ, ಗಣಪತಿ ಹೆಗಡೆ ಗೋಳಿಕೈ, ಪರಮೇಶ್ವರ ಹೆಗಡೆ ಮಟ್ಟೇರಮನೆ, ಪ್ರಭಾಕರ ಹೆಗಡೆಕಲ್ಲಾರೆಮನೆ, ಸೀತಾರಾಮ ಭಟ್‍ಅಡವಿತೋಟ, ಗಣೇಶ ಭಟ್ ಹುತ್ಗಾರ, ಪರಮೇಶ್ವರ ಹೆಗಡೆ ಸಣ್ಮನೆ, ಪಾರ್ವತಿ ಹೆಗಡೆಚನ್ನಖಂಡ, ಕೆರೆಸ್ವಾಮಿಗೌಡ ಶಿರಳಗಿ, ಗಣೇಶ ಹೆಗಡೆ ಇಳಿಮನೆ, ಶ್ಯಾಮಯ್ಯ ಹೆಗಡೆತಾರಗೋಡ ರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿಪರಮೇಶ್ವರ ಹೆಗಡೆ ಮಟ್ಟೇರಮನೆ ಸಂಸ್ಥೆಯಒಡನಾಟದಕುರಿತುತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತೇಜಸ್ವಿ ಹೆಗಡೆ ಮತ್ತುಅಕ್ಷತಾ ಹೆಗಡೆ ಪ್ರಾರ್ಥಿಸಿದರು. ಆರ್.ಟಿ.ಹೆಗಡೆ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕರಾಜೀವ್ ಹೆಗಡೆ ವರದಿ ವಾಚಿಸಿದರು. ಶ್ರೀಕಾಂತ ಹೆಗಡೆ ನಿರೂಪಿಸಿದರು.


