ಟಿ.ಎಸ್.ಎಸ್.ವಾರ್ಷಿಕ ಸಭೆ ಹಿರಿಯ ಸದಸ್ಯರಿಗೆ ಸನ್ಮಾನ


ಸಾವಯವ, ಜೈವಿಕ ಕೃಷಿ ಮಾಡದೆ ನಮ್ಮಅಡಿಕೆ ಮರಗಳು ರೋಗಕ್ಕೆತುತ್ತಾಗುತ್ತಿವೆ. ನಾವು ತಾತ್ಕಾಲಿಕ ಹೆಚ್ಚಿಗೆ ಇಳುವರಿ ತೆಗೆಯುವಕಡೆ ಗಮನ ಹರಿಸದೆ, ಮರಗಳ ಆರೋಗ್ಯ, ಬಾಳಿಕೆಯ ಬಗ್ಗೆ ಯೋಚನೆ ಮಾಡಬೇಕುಎಂದು ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ಸ್ ಸೋಸೈಟಿಯ ಪ್ರಧಾನ ವ್ಯವಸ್ಥಾಪಕ ರವೀಶ ಎ ಹೆಗಡೆ ಹೇಳಿದರು.
ಅವರು ಸಿದ್ಧಾಪುರ ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ಸ್ ಸೋಸೈಟಿಯ ಪ್ರಾಂಗಣದಲ್ಲಿ ನಡೆದ ವಾರ್ಷಿಕ ಸಹಕಾರಿ ಸಭೆಯಲ್ಲಿ ಮಾತನಾಡಿದರು.
ಇಂದು ಕೂಲಿ ಸಮಸ್ಯೆಯಿಂದಲೂ ಇಳುವರಿಯ ಮೇಲೆ ಪ್ರಭಾವಉಂಟಾಗಿದೆ. ಮಳೆ ಪ್ರಾರಂಭದಲ್ಲಿ ಮತ್ತು ಮಳೆಗಾಲದ ನಂತರಗೊಬ್ಬರ ಹಾಕಿದರೆ ಹೆಚ್ಚು ಇಳುವರಿ ಪಡೆಯಬಹುದು. ಸೊಸೈಟಿಯಲ್ಲಿ ಕೃಷಿ ತಜ್ಞರ ಲಭ್ಯತೆಇದೆ.ಸದಸ್ಯರು ಪ್ರಯೋಜನ ಪಡೆದುಕೊಳ್ಳಬೇಕು.ತುತ್ತ ಸುಣ್ಣ ಪ್ರಯೋಗ ಶಾಲೆಗಳಲ್ಲಿ ಪರೀಕ್ಷಿಸಿ ಮಾರಾಟ ಮಾಡುವುದರಿಂದಯಾವುದೆತೊಂದರೆಇಲ್ಲಾ. ಸಂಘದಎಲ್ಲಾ ಸದಸ್ಯರಿಗೆಆರೋಗ್ಯ, ಬೆಳೆ ವಿಮೆಯನ್ನುಕಡ್ಡಾಯ ಮಾಡಲಾಗಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರದಅಡಿಕೆಯನ್ನು ಸ್ಪೇಷಲ್ ಬ್ರಾಂಡ್ ಆಗಿ ಮಾಡಲು ಪ್ರಯತ್ನಗಳು ನಡೆದಿದೆ. ಕೃಷಿ ಪ್ರಯೋಗ ಶಾಲೆ (ಲ್ಯಾಬೊರೇಟರಿ)ಯನ್ನು ಪ್ರಾರಂಭಿಸಲಾಗಿದೆ. ಸದಸ್ಯರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕುಎಂದಅವರು ಈ ವರ್ಷಅತೀವೃಷ್ಠಿಯಿಂದ ಹೆಚ್ಚಿನ ಬೆಳೆ ಹಾನಿಯಾಗಿ ಇಳುವರಿ ಕಡಿಮೆಇರುವುದರಿಂದದೊಡ್ಡದೊಡ್ಡ ವೆಚ್ಚದ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು ಎಂಬ ಕಿವಿಮಾತು ಹೇಳಿದರು.
ಸಂಸ್ಥೆಯಅಧ್ಯಕ್ಷ ಶಾಂತರಾಮ ಹೆಗಡೆ ಶೀಗೇಹಳ್ಳಿ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ಪ್ರಾಮಾಣಿಕವಾಗಿ ವ್ಯವಹಾರ ಮಾಡಿದ ಹಿರಿಯ ಸದಸ್ಯರಾದ ಭೈರಚೌಡ ನಾಯ್ಕ ಬೇಡ್ಕಣಿ, ದಿವಾಕರ ಹೆಗಡೆ ಹೂವಿನಮನೆ, ಗಣಪತಿ ಹೆಗಡೆ ಗೋಳಿಕೈ, ಪರಮೇಶ್ವರ ಹೆಗಡೆ ಮಟ್ಟೇರಮನೆ, ಪ್ರಭಾಕರ ಹೆಗಡೆಕಲ್ಲಾರೆಮನೆ, ಸೀತಾರಾಮ ಭಟ್‍ಅಡವಿತೋಟ, ಗಣೇಶ ಭಟ್ ಹುತ್ಗಾರ, ಪರಮೇಶ್ವರ ಹೆಗಡೆ ಸಣ್ಮನೆ, ಪಾರ್ವತಿ ಹೆಗಡೆಚನ್ನಖಂಡ, ಕೆರೆಸ್ವಾಮಿಗೌಡ ಶಿರಳಗಿ, ಗಣೇಶ ಹೆಗಡೆ ಇಳಿಮನೆ, ಶ್ಯಾಮಯ್ಯ ಹೆಗಡೆತಾರಗೋಡ ರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿಪರಮೇಶ್ವರ ಹೆಗಡೆ ಮಟ್ಟೇರಮನೆ ಸಂಸ್ಥೆಯಒಡನಾಟದಕುರಿತುತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತೇಜಸ್ವಿ ಹೆಗಡೆ ಮತ್ತುಅಕ್ಷತಾ ಹೆಗಡೆ ಪ್ರಾರ್ಥಿಸಿದರು. ಆರ್.ಟಿ.ಹೆಗಡೆ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕರಾಜೀವ್ ಹೆಗಡೆ ವರದಿ ವಾಚಿಸಿದರು. ಶ್ರೀಕಾಂತ ಹೆಗಡೆ ನಿರೂಪಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *