
ಸಿದ್ಧಾಪುರ ತಾಲೂಕಿನ ಸಾರಿಗೆ ತೊಂದರೆ ಬಗೆಹರಿಸಲು ಇದೇ ಸೆ.20 ರ ಶುಕ್ರವಾರ ಸಾರಿಗೆ ಅದಾಲತ್ ನಡೆಸಲು ಸಿದ್ಧಾಪುರ ತಾ.ಪಂ.ಸಾರಿಗೆ ಇಲಾಖೆಗೆ ಆದೇಶಿಸಿದೆ. ತಾಲೂಕಿನ ಸಾರಿಗೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ತಾಲೂಕು ಪಂಚಾಯತ್ ಒತ್ತಡ, ಮನವಿ ದಿಕ್ಕರಿಸಿರುವ ಅಧಿಕಾರಿಗಳು ಈ ಸಮಯಮಿತಿಯಲ್ಲಿ ಸಾರಿಗೆ ಅದಾಲತ್ ನಡೆಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ಮಾಡುವುದಾಗಿ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.
ಸಾರಿಗೆ ಕಾಯಿದೆ ಬದಲಾವಣೆಗೆ ಆಗ್ರಹ
ದುಬಾರಿ ದಂಡದಿಂದ ಜನಸಾಮಾನ್ಯರಿಗೆ ತೊಂದರೆ ಆಗುತಿದ್ದು, ಕೇಂದ್ರದ ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಅಥವಾ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿರುವ ಅವರು ಗೋವಾ, ಗುಜರಾತ್ ಗಳಲ್ಲೇ ಕೇಂದ್ರದ ಅವೈಜ್ಞಾನಿಕ ವಸೂಲಿ ಕಾಯಿದೆ ಧಿಕ್ಕರಿಸಲಾಗಿದೆ. ಇಂಥ ಕಾಯಿದೆ ಜಾರಿ ಮಾಡಿ ಜನಸಾಮಾನ್ಯರನ್ನು ಹಿಂಸಿಸುವ ಬದಲು ಕಾಯಿದೆಗೆ ಬದಲಾವಣೆ ತಂದು ಅನುಷ್ಠಾನ ಮಾಡಬೇಕೆಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.


