ಬಿ.ಜೆ.ಪಿ.ಯಲ್ಲೇಕೆ ಈ ಕಪಟ ನಾಟಕ,ಸುಳ್ಳು-ನಿರ್ಲಜ್ಜತೆ ಇವರ ಲಕ್ಷಣವೆ?

ಪ್ರಧಾನಿ ನರೇಂದ್ರ ಮೋದಿ, ಸಂಸದ ಪ್ರತಾಪಸಿಂಹ,ಶಾಸಕ ಸುನಿಲ್‌ ಕುಮಾರ್‌ ಸೇರಿ ಬಿ.ಜೆ.ಪಿ.ಯ ಹಲವರು ತಮ್ಮ ಜಾತಿ ಮುಚ್ಚಿಡುವ ಮೂಲಕ ಪ್ರಜಾಪ್ರತಿನಿಧಿ ಕಾಯ್ದೆಯ ವಿರುದ್ಧ ನಡೆದುಕೊಳ್ಳತಿದ್ದಾರಾ ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡತೊಡಗಿದೆ.

ಪ್ರಧಾನಿ ಮೋದಿಯವರ ಮೋದಿ ಸಮೂದಾಯ೨೦೦೦ ನೇ ಇಸ್ವಿಗಿಂತ ಮೊದಲು ಬ್ರಾಹ್ಮಣ ಅಥವಾ ಮೇಲ್ವರ್ಗದ ಪಟ್ಟಿಯಲ್ಲಿತ್ತು ನಂತರ ಸ್ವತ: ಮೋದಿ ತಮ್ಮ ಸಮೂದಾಯವನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ತಂದುದಲ್ಲದೆ ಪರಂಪರಾಗತ ಇತರ ಹಿಂದುಳಿದವರ ಮೀಸಲಾತಿ ಬುಟ್ಟಿಗೆ ಕೈ ಹಾಕಿ ದೇಶದ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ದ್ರೋಹ ಎಸಗಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ ತನ್ನ ರಾಜಕೀಯ ಜೀವನದುದ್ದಕ್ಕೂ ವಿಪರ್ಯಾಸಗಳ ಸರಮಾಲೆ ಎದುರಿಸಿದವರು. ಮೋದಿ ಮೊದಲು ತಮ್ಮ ಶಿಕ್ಷಣದ ವಿಚಾರಗಳನ್ನು ರಹಸ್ಯವಾಗಿಟ್ಟಿದ್ದರು. ಯಾರೂ ಕಲಿಯದ, ಸಹಪಾಠಿಗಳೇ ಇಲ್ಲದ ಕಾಲೇಜಿನ ಏಕೈಕ ವ್ಯಕ್ತಿ ನರೇಂದ್ರ ಮೋದಿ ಎನ್ನುವ ಲೇವಡಿ,ಆರೋಪಗಳಿಗೆ ತುತ್ತಾದ ಮೋದಿ, (ರೈಲು ನಿಲ್ಧಾಣವೇ ಇಲ್ಲದ ಅವಧಿಯಲ್ಲಿ ವಡೋದರ ರೇಲ್ವೇ ಸ್ಟೇಶನ್‌ ನಲ್ಲಿ ಚಹಾ ಮಾರಿದ್ದರು!!??) ಎನ್ನುವ ಗುರುತರ ಸುಳ್ಳು ಹೇಳಿದ್ದರು. ಇಂಥ ಸುಳ್ಳುಗಳ ಮುಂದುವರಿಕೆ ಪಿಎಂ ಕೇರ್ಸ್‌, ಚುನಾವಣಾ ಬಾಂಡ್‌ ಗಳ ವಿಚಾರಗಳು ಇಂಥ ತೀರಾ ವೈಯಕ್ತಿಕ ಮತ್ತು ಸಾರ್ವಜನಿಕ ವಿಚಾರಗಳಲ್ಲಿ ಪಾರದರ್ಶಕತೆಗೆ ವಿರುದ್ಧವಾದ ವ್ಯಕ್ತಿ ಭಾರತದ ಪ್ರಧಾನಿ.

ಇವರಿಗೆ ಇಂಥ ಕಪಟತನಗಳನ್ನು ಮುಚ್ಚಿಕೊಂಡು ಸುಳ್ಳುಹೇಳುತ್ತಾ ಕೆಲವರನ್ನಷ್ಟೇ ತೃಪ್ತಿಪಡಿಸುವ ಕಲೆ ಇವರ ಆರೆಸ್ಸೆಸ್‌ ಲಕ್ಷಣ ಎನ್ನುವ ಆಧಾರ ಭರಿತ ನೇರ ಆರೋಪಗಳಲ್ಲಿ ಯಾವುದೂ ತಪ್ಪು ಕಾಣದಿರುವುದು ಮೇಲ್ನೋಟಕ್ಕೆ ಮೋದಿ ಕಪಟ ಎನ್ನುವುದನ್ನು ಸಾಬೀತುಪಡಿಸುವಂತಿದೆ.

ಇದೇ ಮೋದಿ ಬಿ.ಜೆ.ಪಿ.ಯ ಐಕಾನ್‌ ಆಗಿದ್ದು ಅವರು ಹಿಂದುಳಿದವರು ಎಂದುಕೊಳ್ಳುತ್ತಲೇ ಹಿಂದುಳಿದವರ ವಿರುದ್ಧ ಕಾರ್ಯಾಚರಿಸುವ ಸಂಘ, ಸಂಘಟನೆ, ಪಕ್ಷಗಳನ್ನು ಪ್ರತಿನಿಧಿಸಿ ಹಗಲುವೇಷ ಮಾಡುತ್ತಿರುವುದು ವೈಯಕ್ತಿಕವಾಗಿ ಅವರಿಗೆ ಅವರ ಸಂಘ-ಸಂಘಟನೆಗಳಿಗೆ ಶೋಭೆ ತರುವುದೆ?

ನಂ೨- ಪ್ರತಾಪ ಸಿಂಹ-

ಈ ಪ್ರತಾಪ ಸಿಂಹ ಭಟ್ಟರೊಬ್ಬರ ಅಣತಿ ಮೇರೆಗೆ ಅಲ್ಪಸಂಖ್ಯಾತರ ವಿರುದ್ಧದ್ವೇಶ ಕಾರುತ್ತಾ ವೈದಿಕರ ಗುಲಾಮಗಿರಿ ಮಾಡಿ ಪತ್ರಕರ್ತ ನಂತರ ಮೋದಿ ಭಟ್ಟಂಗಿತನದಿಂದ ಜನಪ್ರತಿನಿಧಿಯಾದಾತ. ಹೆಂಡತಿಯನ್ನು ತಂಗಿ ಎಂದು ದಾಖಲೆ ಸೃಷ್ಟಿಸಿ ಸರ್ಕಾರಿ ಸೈಟ್‌ ಹೊಡೆದುಕೊಂಡ ಈ ಕಪಟ ಸಂಸದ ಜಾತಿಯಿಂದ ಹಿಂದುಳಿದ ರಜಪೂತ ಸಮೂದಾಯದ ಮೂಲದವರು ಎನ್ನಲಾಗುತ್ತದೆ.

ಸೂಲೆಬೆಲೆ ಚಕ್ರವರ್ತಿಯಂತೆ ಸಂದರ್ಭಬಂದಾಗ ಬ್ರಾಹ್ಮಣ ಎನ್ನುತ್ತಾ ಲಾಭಕ್ಕೆ ಅವಕಾಶಕ್ಕೆ ಒಕ್ಕಲಿಗ ಕಾರ್ಡ್‌ ಬಳಸುವ ಸಿಂಹ ಸಾರ್ವಜನಿಕವಾಗಿ ತನ್ನ ಜಾತಿ ಮುಚ್ಚಿಟ್ಟು ಧಾರ್ಮಿಕ ಮತಾಂಧತೆ ಪ್ರಚುರ ಪಡಿಸುವ ಇವರಿಗೆ ತಮ್ಮ ಮೂಲ ಮುಚ್ಚಿಟ್ಟು ರಾಜಕೀಯ ಮಾಡುವುದನ್ನು ಇವರ ಶೃದ್ಧೆಯ ಮತಾಂಧ ವೈದಿಕ ಸಂಘ ಕಲಿಸಿದೆಯೆ? ತಮ್ಮ ಮೂಲ ಬಚ್ಚಿಟ್ಟು ಸುಳ್ಳು ಹೇಳುತ್ತಾ ರಾಜಕೀಯ ವ್ಯಭಿಚಾರ ಮಾಡುವ ಇವರ ರಾಜಕಾರಣ ಪ್ರಜಾಪ್ರತಿನಿಧಿ ಕಾಯ್ದೆಯ ಪಾರದರ್ಶಕತೆಯ ವಿರುದ್ಧ ಆಗುವುದಿಲ್ಲವೆ?

ವಿ. ಸುನೀಲ್‌ ಕುಮಾರ್….‌

ವಿ. ಸುನೀಲ್ ಕುಮಾರ್‌ ಮಹೇಂದ್ರ ಕುಮಾರ ಕೊಪ್ಪರಂಥವರನ್ನು ಬಳಸಿಕೊಂಡು ಮೇಲೆ ಬಂದಾತ. ಮಾಜಿ ಸಚಿವ ಪ್ರಸ್ತುತ ಶಾಸಕನಾಗಿರುವ ವಿ. ಸುನೀಲ್‌ ಕುಮಾರ ಬ್ರಾಹ್ಮಣ ಕೋಟಾದಡಿ ಅಖಿಲಭಾರತ ಬ್ರಾಹ್ಮಣ ಮಹಾಸಭಾ ಪ್ರವೇಶಿಸುತ್ತಾರೆ. ಸಮಯ ಸಂದರ್ಭ ನೋಡಿ ಇವರು ಈಡಿಗ ಕೋಟಾದಡಿ ಕಾಣಿಸಿಕೊಳ್ಳತ್ತಾರೆ!. ಅಮ್ಮ ಬಿಲ್ಲವರು, ಹೆಂಡತಿ ದೀವರು ಎನ್ನುವ ಕಾರಣಕ್ಕೆ ಈಡಿಗರ ಕೋಟಾದಡಿ ಸೇರುವ ಈ ಮತಾಂಧ ತನ್ನ ಭಜರಂಗಿ ನೀತಿ- ಆರೆಸ್ಸೆಸ್‌ ಕಪಟ ರೀತಿಯಂತೆ ಉಸರವಳ್ಳಿಯಂತೆ ವರ್ತಿಸುವುದನ್ನು ಸಚ್ಚಾ ಬ್ರಾಹ್ಮಣರು ಅಚ್ಚಾ ಈಡಿಗರು ಒಪ್ಪಲಾರರು. ವಾಸ್ತವದಲ್ಲಿ ವ್ಯಕ್ತಿಯೊಬ್ಬರ ಜಾತಿ ನಿರ್ಧಾರವಾಗುವುದು ಹುಟ್ಟಿನಿಂದಲೇ ಹೊರತು ವಿವಾಹ ಅಥವಾ ವೈವಾಹಿಕ ಸಂಬಂಧದಿಂದಲ್ಲ.

ದೇಶ , ರಾಷ್ಟ್ರೀಯತೆ, ದೇಶಪ್ರೇಮಗಳ ಬಗ್ಗೆ ಸುಳ್ಳು ಹೇಳುತ್ತಾ ರಾಜಕೀಯ ಲಾಭಕ್ಕೆ ಪ್ರಯತ್ನಿಸುವ ಈ ದುಷ್ಟ ಪರಿವಾರಿಗರ ಹಿಪಾಕ್ರಷಿ ಜನಪ್ರತಿನಿಧಿ ಕಾಯ್ದೆ, ಸಾರ್ವಜನಿಕ ಶಿಸ್ತುಗಳ ಹಿನ್ನೆಯಲ್ಲಿ ತಪ್ಪು. ಕಾಸಿಗಾಗಿ ನಾಟಕ ಮಾಡುವ ಮಾಧ್ಯಮಗಳು ಈ ದುಷ್ಟಮುಖವಾಡಗಳ ಬಂಡವಾಳ ಬಯಲು ಮಾಡುವುದು ಬಿಟ್ಟು ಮೋದಿ ಹಿಂದುಳಿದವರು! ಸಿಂಹ ಒಕ್ಕಲಿಗ? ಸುನಿಲ್‌ ಕುಮಾರ್‌ ಈಡಿಗ ಎನ್ನುತ್ತಾ ಈ ನಯವಂಚಕರಿಗೆ ನೆರವಾಗುವ ಉದ್ದೇಶದಿಂದ ಆಯಾ ಜಾತಿ-ಸಮೂದಾಯಗಳ ಅರ್ಹರ ಹಕ್ಕನ್ನು ವಂಚಿಸಲು ನೆರವಾಗುತ್ತಿರುವುದು ವಧೆಗೆ ಅರ್ಹ ಅಪರಾಧವಾಗುವುದಿಲ್ಲವೆ?

ತಮ್ಮ ಸ್ವಂತ: ಜಾತಿ, ಸಮೂದಾಯ, ಗುರುತಿಸಿಕೊಳ್ಳುವಿಕೆ ವಿಚಾರದಲ್ಲಿ ಹಗಲು ಹಾದರ ಮಾಡುವ ಈ ದುಷ್ಟರು ಸಾರ್ವಜನಿಕ ಜೀವನದಲ್ಲಿರುವುದು ದೇಶದ್ರೋಹಿ ನಡೆಯಲ್ಲವೆ? ಇಂತಹ ನಯವಂಚಕ ಕಪಟಿಗಳನ್ನು ಬೆಂಬಲಿಸಿ ಅನ್ಯಾಯ ಮಾಡುವ ಮಾಧ್ಯಮಗಳನ್ನು ಜನ ಬಹಿಷ್ಕರಿಸಬೇಕಲ್ಲವೆ? ಅಷ್ಟಕ್ಕೂ ಪ್ರಧಾನಿ ಮೋದಿ, ಸಂಸದ ಪ್ರತಾಪ ಸಿಂಹ, ಶಾಸಕ ಸುನಿಲ್‌ ಕುಮಾರ ಒಂದೇ ಸಂಘದ ಸದಸ್ಯರಾಗಿ ಇಂಡಿಯಾಕ್ಕೆ ದ್ರೋಹ ಮಾಡುತ್ತಿರುವ ಆಶಾಢಭೂತಿಗಳಲ್ಲವೆ? ಇಂಥವರನ್ನು ದೇಶದ ಕಾನೂನು, ಸರ್ಕಾರ, ಸಂವಿಧಾನ ಶಿಕ್ಷಿಸದಿದ್ದರೆ ಇವರಿಂದಾಗುವ ಅನ್ಯಾಯ,ದ್ರೋಹ,ಅಪಾಯಗಳನ್ನು ತಡೆಯುವುದು ಹೇಗೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *