ದೇಶಪಾಂಡೆ ಕಿರುಕುಳಗಳಿಂದ ಬೇಸತ್ತ ಕಾಂಗ್ರೆಸ್ ಮುಖಂಡರಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರೊಂದಿಗೆ ಕನಿಷ್ಟ ಅರ್ಧಡಜನ್ ನಾಯಕರು ಉತ್ತರಕನ್ನಡದಲ್ಲಿದ್ದಾರೆ. ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವರು ದೇಶಪಾಂಡೆ ಜೊತೆ ಕಾಂಗ್ರೆಸ್ ನಲ್ಲಿ ಏಗಲಾರದೆ ಮೊದಲೇ ಬಿ.ಜೆ.ಪಿ. ಸೇರಿದ್ದಾರೆ. ಈಗ ಆರ್.ವಿ.ಡಿ. ಬಿ.ಜೆ.ಪಿ. ಸೇರಲಿದ್ದಾರೆ ಎನ್ನುವ ವದಂತಿ ಹಳಿಯಾಳದ ಬಿ.ಜೆ.ಪಿ.ಮುಖಂಡ ಸುನಿಲ್ ಹೆಗಡೆ,ಅನರ್ಹ ಶಾಸಕ ಹೆಬ್ಬಾರ್ ಸೇರಿದಂತೆ ಕೆಲವರ ರಕ್ತದೊತ್ತಡ ಏರಿಸಿದೆ. ಕಾಂಗ್ರೆಸ್ ನಲ್ಲಿ ಮೃಧು ಹಿಂದುತ್ವದ ಅಂದರ್ ಕಿಮಚ್ಚುವಾಳ್ಳಿಗಳ ಪ್ರಮುಖ ಮುಖಂಡ ದೇಶಪಾಂಡೆ ಉಳ್ಳವರ ಬಿ.ಜೆ.ಪಿ. ಒಲವಿನ ಹಿಂದೆ ಅದೆಷ್ಟು ಕಾರಣಗಳಿವೆಯೋ? ದೇಶಪಾಂಡೆ ಬಿ.ಜೆ.ಪಿ. ಸೇರಿದರೆ ಉತ್ತರಕನ್ನಡದ ಬಿ.ಜೆ.ಪಿ. ಒಡೆದ ಮನೆಯಂತಾಗುವುದು ಪಕ್ಕಾ. ಈಗ ಎಲ್ಲರ ಮುಂದಿರುವ ಪ್ರಶ್ನೆ ದೇಶಪಾಂಡೆ ಬಿ.ಜೆ.ಪಿ. ಸೇರುತ್ತಾರಾ? ಸೇರವುದಿದ್ದರೆ ಅವರೊಂದಿಗೆ ಯಾರ್ಯಾರು ಕಮಲ ಮುಡಿಯುತ್ತಾರೆ ಎನ್ನುವ ಕತೂಹಲ ಅನೇಕರಲ್ಲಿದೆ.
ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎನ್ನುವ ಸ್ಥಿತಿಯಲ್ಲಿ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆಯವರಿದ್ದಾರಾ?
ಎನ್ನುವ ಪ್ರಶ್ನೆ ಉದ್ಭವಿಸುವಂತೆ ವರ್ತಿಸುತಿದ್ದಾರೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ.
ಆರ್.ವಿ.ದೇಶಪಾಂಡೆ ಮೊದಲು ರಾಜಕೀಯಕ್ಕೆ ಬಂದಿದ್ದೇ ಕಾಂಗ್ರೆಸ್‍ನಿಂದ ಆಗ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ಜಮೀನ್ಧಾರರ ಕುಟುಂಬದ ವಕೀಲ ದೇಶಪಾಂಡೆ ಅಂದಿನ ಶ್ರೀಮಂತರು,ಜಮೀನ್ಧಾರರ ಆಯ್ಕೆಯಾಗಿದ್ದ ಕಾಂಗ್ರೆಸ್ ಸೇರಿದ್ದು ಸಹಜ.
ನಂತರ ರಾಮಕೃಷ್ಟ ಹೆಗಡೆಯವರೊಂದಿಗೆ ಸೇರಿ ಜನತಾದಳದಲ್ಲಿ ಕೆಲಸ ಮಾಡಿ ಫಲ ಉಂಡು ನಂತರ ಮತ್ತೆ ಕಾಂಗ್ರೆಸ್ ಸೇರಿ ಎರಡು ದಶಕ ಕಳೆದಿಲ್ಲ.ಈ ಅವಧಿಯಲ್ಲಿ ತನ್ನ ಹಣಬಲ, ವ್ಯಾವಹಾರಿಕತೆಯಿಂದ ಜನತಾದಳ, ಕಾಂಗ್ರೆಸ್ ನಾಯಕರನ್ನೇ ಬಲಿತೆಗೆದುಕೊಂಡ ಆರ್.ವಿ.ದೇಶಪಾಂಡೆ ಶ್ರೀಮಂತರ ಕೂಟ ಬಿ.ಜೆ.ಪಿ. ಸೇರದಿದ್ದುದೇ ಆಶ್ಚರ್ಯ ಎನ್ನುತ್ತಿರುವಾಗಲೇ ಬಿ.ಜೆ.ಪಿ. ಕಡೆಯಿಂದ ದೇಶಪಾಂಡೆಯವರಿಗೆ ಬುಲಾವ್ ಬಂದಿತ್ತು ಎನ್ನಲಾಗುತ್ತಿದೆ.
ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯ ಮೊದಲೇ ದೇಶಪಾಂಡೆ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಗುಲ್ಲೆದ್ದಿತ್ತು. ಆದರೆ ದೇಶಪಾಂಡೆ ಕಾಂಗ್ರೆಸ್ ಬಿಡಲಿಲ್ಲ. ಎಲ್ಲಿಹೋದರೂ ಹಣ ಕೊಟ್ಟೇ ಮುಖ್ಯಮಂತ್ರಿಯಾಗಬೇಕು ಹಾಗಾಗಿ ಯಾವ ಪಕ್ಷವಾದರೇನು? ಎನ್ನುತಿದ್ದಾರೆ ಆರ್.ವಿ.ದೇಶಪಾಂಡೆ ಎಂದು ಅವರ ವಿರೋಧಿಗಳು ವದಂತಿ ಹರಡುತಿದ್ದಾಗ ದೇಶಪಾಂಡೆ ಕಾಂಗ್ರೆಸ್ ಬಿಡುವುದನ್ನಾಗಲಿ, ಬಿ.ಜೆ.ಪಿ.ಸೇರುವುದನ್ನಾಗಲಿ ಪ್ರಕಟಿಸಿರಲಿಲ್ಲ.
ಆದರೆ ಗಾಳಿ ಸುದ್ದಿಗಳು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ದಂಗುಬಡಿಸಿದ್ದವು.
ಈಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭ ಕೋರಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಭಟ್ಟಂಗಿಗಳಂತೆ ಸ್ವಾಮಿ ಭಕ್ತಿ ಮೆರೆದಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾಗಿವೆ.
ವಿವಾದ, ರಗಳೆ, ಜಗಳಕ್ಕೆ ಹೋಗದ ದೇಶಪಾಂಡೆ ರಾಜಕೀಯ ವಿರಕ್ತಿಯ ಮಾತುಗಳನ್ನಾಡುತ್ತಲೇ ಕಾಂಗ್ರೆಸ್ ನಲ್ಲಿ ಅತ್ತ್ಯುನ್ನತ ಸ್ಥಾನಕ್ಕೇರಿದವರು.
ಕಾಂಗ್ರೆಸ್ ನ 10 ಜನಪಥ್ ಸದಸ್ಯರ ರಾಜ್ಯ ಸಮೀತಿಯ ಪ್ರಮುಖರಾಗಿರುವ ಆರ್.ವಿ.ದೇಶಪಾಂಡೆ ಕುಸಿಯುತ್ತಿರುವ ಕಾಂಗ್ರೆಸ್ ಮತ್ತು ಹೊಂದಾಣಿಕೆ,ಸೇರ್ಪಡೆಗೆ ವಿರೋಧಿಗಳಾಗಿರುವ ಅನ್ಯಪಕ್ಷಗಳ ನಾಯಕರನ್ನು ಗುರಿಮಾಡುತ್ತಿರುವ ಬಿ.ಜೆ.ಪಿ. ಗುಜರಾತಿಗಳ ತೊಂದರೆ ತಪ್ಪಿಸಿಕೊಳ್ಳುವ ಅಂಗವಾಗಿ ಬಿ.ಜೆ.ಪಿ. ಜೊತೆಗೆ ರಕ್ಷಣಾತ್ಮಕ ಆಟಕ್ಕೆ ಸಿದ್ಧರಾಗಿದ್ದಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ.
ಜಾತಿ ಬಲ, ಸಮೂದಾಯದ ಶಕ್ತಿಗಳಿಲ್ಲದ ದೇಶಪಾಂಡೆ ಎಲ್ಲರನ್ನೂ, ಎಲ್ಲವನ್ನೂ ಹಣದಿಂದಲೇ ಸರಿಮಾಡಬಲ್ಲ ಚಾಣಾಕ್ಷ. ಆದರೆ ಗುಜರಾತಿ ಬಿ.ಜೆ.ಪಿ.ಗಳಿಗೆ ಎಲ್ಲಿ ತಟ್ಟಿದರೆ ಎಲ್ಲಿ ಸಿಡಿಯುತ್ತದೆ ಎಂದು ಗೊತ್ತು. ತಟ್ಟಿ-ಮುಟ್ಟಿ ಸರಿಯಾಗದ ಡಿ.ಕೆ.ಶಿವಕುಮಾರರನ್ನು ಉಪಾಯದಿಂದ ಪಂಜರದೊಳಗೆ ಸೇರಿಸಿ ಕಾಂಗ್ರೆಸ್ ನ ಇತರ ಫೈನಾನ್ಸರ್ ಗಳಿಗೆ ಶಾಕ್ ನೀಡಿರುವ ಕೇಂದ್ರದ ಗುಜರಾತಿ ಬಿ.ಜೆ.ಪಿ.ಗಳು ಆಯ್.ಎಂ.ಎ. ಆರೋಪ,ಇತರ ಹಣಕಾಸಿನ ವ್ಯಹಾರಗಳ ಹಿನ್ನೆಲೆಯಲ್ಲಿ ದೇಶಪಾಂಡೆಯವರ ಬಳಿ ನೆಲಬಾಂಬ್ ಎಸೆದಿದ್ದರಂತೆ!
ಇದರಿಂದ ಕಂಗಾಲಾದ ದೇಶಪಾಂಡೆ ಹೊರಗಿದ್ದು ಆರೋಪಿಯಾಗುವುದು, ಅಪರಾಧಿಯಾಗಿ ಸೆರೆಮನೆ ಸೇರುವುದಕ್ಕಿಂತ ಸಂಘಿಗಳ ಜೊತೆ ಸೇರಿ ಸರಳವಾಗಿ ಬಚಾವಾಗಬಹುದು ಎಂದು ಎಣಿಸಿ ದೇಶಪಾಂಡೆ ಮೋದಿ-ಶಾ ಗಳ ಭಜನಾಮಂಡಳಿ ಸದಸ್ಯರಾಗುವ ತೀರ್ಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಈವರೆಗೆ ಪ್ರತಿಕ್ರೀಯೆ ವ್ಯಕ್ತಪಡಿಸದ ದೇಶಪಾಂಡೆ ಮೌನಕ್ಕೂ ಈಗಾಗಲೇ ದೇಶಪಾಂಡೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿಗಳಿಗೂ ಮೌನಂ ಸಮ್ಮತಿ ಲಕ್ಷಣಂ ಎನ್ನುವ ಮಾತು ತಾಳೆಯಾಗುತ್ತಿದೆ.
ಮೃಧು ಹಿಂದುತ್ವವಾದಿ ಆರ್.ವಿ.ಡಿ. ಬಿ.ಜೆ.ಪಿ. ಸೇರುವ ಬಗ್ಗೆ ಇರುವ ಕುತೂಹಲ, ನಿರೀಕ್ಷೆಗಳಿಗಿಂತ ಅವರು ಕಾಂಗ್ರೆಸ್ ಬಿಡಲಿದ್ದಾರೆ ಎನ್ನುವ ಸುದ್ದಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.