
ಕಾನಗೋಡಿನಲ್ಲಿ ಅದ್ಧೂರಿ19 ನೇ ವರ್ಷದ ನವರಾತ್ರಿ ಉತ್ಸವ, ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ
ಹೊನಲು ಬೆಳಕಿನ ಕಬ್ಬಡ್ಡಿ
ಅಕ್ಟೋಬರ್ 5 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದ್ದು ರಾಜ್ಯದ ಯಾವುದೇ ತಾಲೂಕಿನ ತಂಡ ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಬಹುದಾಗಿದೆ.. ಮೊದಲ ಬಹುಮಾನ 18 ಸಾವಿರ ರೂಪಾಯಿ ಎರಡನೇ ಬಹುಮಾನ 10 ಸಾವಿರ ರೂ. ತೃತೀಯ ಬಹುಮಾನ 5 ಸಾವಿರ ರೂಪಾಯಿಗಳು. ಪ್ರತಿತಂಡಕ್ಕೆ ಪ್ರವೇಶ ಶುಲ್ಕ ಒಂದು ಸಾವಿರ ರೂಪಾಯಿಗಳಾಗಿದ್ದು ಅಸಲೀ ಆಧಾರ್ ಕಾರ್ಡ್‍ಗಳೊಂದಿಗೆ ಪಂದ್ಯಾಟದ ಹಿಂದಿನ ದಿನದ ಸಾಯಂಕಾಲ 6 ರೊಳಗೆ ದಾಖಲು ಮಾಡಿಕೊಂಡವರು ಮಾತ್ರ ಈ ಪಂದ್ಯಾಟದಲ್ಲಿ ಭಾಗವಹಿಸಬಹುದಾಗಿದೆ.
ಪ್ರತಿವರ್ಷ ತಾಲೂಕಿನ ಕಾನಗೋಡಿನ ಮಾರಿಕಾಂಬಾ ದೇವಸ್ಥಾನದಲ್ಲಿ ಆಚರಿಸುವ ನವರಾತ್ರಿ ಉತ್ಸವವನ್ನು ಈ ವರ್ಷ ವಿಭಿನ್ನವಾಗಿ ಅದ್ಧೂರಿಯಾಗಿ ನಡೆಸಲು ಆಡಳಿತ ಸಮೀತಿ ತೀರ್ಮಾನಿಸಿದೆ.
ಇಂದು ಇಲ್ಲಿಯ ಕಾನಗೋಡು ಮಾರಿಕಾಂಬಾ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿರುವ ಗ್ರಾಮಸ್ಥರು ಈ ಉತ್ಸವದಲ್ಲಿ
ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದರು.
ಸೆ.29 ರಿಂದ ಪ್ರಾರಂಭವಾಗುವ ಉತ್ಸವ ಅ.9 ರಂದು ಮುಕ್ತಾಯವಾಗಲಿದ್ದು ಈ ಅವಧಿಯ ಪ್ರತಿದಿನ ಸಾಯಂಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು, ಭಜನೆ ನಡೆಯಲಿವೆ. ಕಾನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ಮೂರು ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಸನ್ಮಾನ ನೆರವೇರಲಿವೆ. ಪ್ರತಿದಿನ ಸಾಯಂಕಾಲ ಶಾಲಾ ವಿದ್ಯಾರ್ಥಿಗಳು ಮತ್ತು 19 ವರ್ಷಗಳ ಒಳಗಿನ ಪ್ರತಿಭೆಗಳು ಕಾರ್ಯಕ್ರಮ ನೀಡಬಹುದಾಗಿದೆ. ಹೊನಲುಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸೇರಿದಂತೆ ನವರಾತ್ರಿ ಉತ್ಸವದ ಇತರ ಮಾಹಿತಿಗಳಿಗಾಗಿ 9242494314,(ವಾಸು)
9731209370 (ಶಿವರಾಯ)9483665799 (ರವಿನಾಯ್ಕ) ಸಂಪರ್ಕಿಸಬಹುದು ಎಂದು ದೇವಸ್ಥಾನ ಸಮೀತಿ ಅಧ್ಯಕ್ಷ ಮಾರುತಿ ನಾಯ್ಕ ತಿಳಿಸಿದರು.
ಉಳಿದವರೊಬ್ಬರೇ ಸ್ವಾತಂತ್ರ್ಯ ಸೇನಾನಿ,
ದೇಹ ಸಹಕರಿಸದಿದ್ದರೂ
ಮನಸ್ಸು ಹೋರಾಟದತ್ತ!
ಎನ್ನುವಂತಿರುವ
ಗಡದಬಂಗಾರಪ್ಪ
ಇದು ಒಂದು ರೋಚಕ ಪ್ರಸಂಗ, ಹಿರಿಯ ಸ್ನೇಹಿತ ದಫೇದಾರರೊಂದಿಗೆ ಮನ್ಮನೆಯ ಬಂಗಾರ್ಯ ನಾಯ್ಕರ ಮನೆಯ ಅಂಗಳ ತಲುಪಿದಾಗ ಮನೆಯೊಡೆಯನಿದ್ದಾನೋ? ಮನೆಒಳಗೆ ಎನ್ನುವ ಕುತೂಹಲ.
ನಾನೇ ಕೇಳಿದೆ ಬಂಗಾರಪ್ಪ ಇದ್ದಾರಾ? ಎಂದು.
ಈಗಷ್ಟೇ ಪದವಿ ಮುಗಿಸಿ ಅಧಿಕಾರಿಯಾಗಬೇಕೆಂದು ಓದುತ್ತಾ ಇರುವ ಹುಡುಗಿ ‘ಇದ್ದಾರೆ’,ಎಂದು ಉತ್ತರಿಸಿತು.
ಅಷ್ಟೊತ್ತಿಗೆ ಬಂಗಾರಪ್ಪ ನಾಯ್ಕ ಬಂದರು. ಅದು ಸಣ್ಣ ಮನೆ, ವ್ಯವಸ್ಥಿತವಲ್ಲದ ಸಾದಾ ರೈತ ಕುಟುಂಬದ ಮನೆಯಲ್ಲಿ ಇರುವ ಹಿರಿಯ ಜೀವ ಬಂಗಾರಪ್ಪ ನಾಯ್ಕ ಬಂದರು. ನಾವಿಬ್ಬರೂ ನಮಸ್ಕರಿಸಿದೆವು. ಅವರೂ ಪ್ರತಿನಮಸ್ಕರಿಸಿ, ನಮ್ಮ ಪರಿಚಯ ಮಾಡಿಕೊಂಡರು.
ಕುಗ್ಗದ ಉತ್ಸಾಹ, ಸ್ವಲ್ಫ ಬಳಲಿದಂತೆ ಕಂಡರೂ ಕಣ್ಣು,ಮಾತುಗಳ ಸ್ಫಷ್ಟತೆಯ ಬಂಗಾರಪ್ಪನವರಿಗೆ ಎಷ್ಟು ವಯಸ್ಸು ಕೇಳಿದೆವು. ಗೋಡೆಯ ಮೇಲಿನ ಚಿತ್ರ ತೋರಿಸಿ ಅಲ್ಲಿ ನೋಡಿ ಎಂದರು. ಅಲ್ಲಿ ಕಲಾವಿದ ಬಿಡಿಸಿದಂಥ ಇವರದೇ ಚಿತ್ರದ ಕೆಳಗೆ ಬಂಗಾರಪ್ಪ ನಾಯ್ಕ 1917 ಎಂದು ಬರೆದಿತ್ತು.

