ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹೊನಲು ಬೆಳಕಿನ ಕಬ್ಬಡ್ಡಿ

ಕಾನಗೋಡಿನಲ್ಲಿ ಅದ್ಧೂರಿ19 ನೇ ವರ್ಷದ ನವರಾತ್ರಿ ಉತ್ಸವ, ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ
ಹೊನಲು ಬೆಳಕಿನ ಕಬ್ಬಡ್ಡಿ
ಅಕ್ಟೋಬರ್ 5 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದ್ದು ರಾಜ್ಯದ ಯಾವುದೇ ತಾಲೂಕಿನ ತಂಡ ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಬಹುದಾಗಿದೆ.. ಮೊದಲ ಬಹುಮಾನ 18 ಸಾವಿರ ರೂಪಾಯಿ ಎರಡನೇ ಬಹುಮಾನ 10 ಸಾವಿರ ರೂ. ತೃತೀಯ ಬಹುಮಾನ 5 ಸಾವಿರ ರೂಪಾಯಿಗಳು. ಪ್ರತಿತಂಡಕ್ಕೆ ಪ್ರವೇಶ ಶುಲ್ಕ ಒಂದು ಸಾವಿರ ರೂಪಾಯಿಗಳಾಗಿದ್ದು ಅಸಲೀ ಆಧಾರ್ ಕಾರ್ಡ್‍ಗಳೊಂದಿಗೆ ಪಂದ್ಯಾಟದ ಹಿಂದಿನ ದಿನದ ಸಾಯಂಕಾಲ 6 ರೊಳಗೆ ದಾಖಲು ಮಾಡಿಕೊಂಡವರು ಮಾತ್ರ ಈ ಪಂದ್ಯಾಟದಲ್ಲಿ ಭಾಗವಹಿಸಬಹುದಾಗಿದೆ.

ಪ್ರತಿವರ್ಷ ತಾಲೂಕಿನ ಕಾನಗೋಡಿನ ಮಾರಿಕಾಂಬಾ ದೇವಸ್ಥಾನದಲ್ಲಿ ಆಚರಿಸುವ ನವರಾತ್ರಿ ಉತ್ಸವವನ್ನು ಈ ವರ್ಷ ವಿಭಿನ್ನವಾಗಿ ಅದ್ಧೂರಿಯಾಗಿ ನಡೆಸಲು ಆಡಳಿತ ಸಮೀತಿ ತೀರ್ಮಾನಿಸಿದೆ.
ಇಂದು ಇಲ್ಲಿಯ ಕಾನಗೋಡು ಮಾರಿಕಾಂಬಾ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿರುವ ಗ್ರಾಮಸ್ಥರು ಈ ಉತ್ಸವದಲ್ಲಿ
ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದರು.
ಸೆ.29 ರಿಂದ ಪ್ರಾರಂಭವಾಗುವ ಉತ್ಸವ ಅ.9 ರಂದು ಮುಕ್ತಾಯವಾಗಲಿದ್ದು ಈ ಅವಧಿಯ ಪ್ರತಿದಿನ ಸಾಯಂಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು, ಭಜನೆ ನಡೆಯಲಿವೆ. ಕಾನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ಮೂರು ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಸನ್ಮಾನ ನೆರವೇರಲಿವೆ. ಪ್ರತಿದಿನ ಸಾಯಂಕಾಲ ಶಾಲಾ ವಿದ್ಯಾರ್ಥಿಗಳು ಮತ್ತು 19 ವರ್ಷಗಳ ಒಳಗಿನ ಪ್ರತಿಭೆಗಳು ಕಾರ್ಯಕ್ರಮ ನೀಡಬಹುದಾಗಿದೆ. ಹೊನಲುಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸೇರಿದಂತೆ ನವರಾತ್ರಿ ಉತ್ಸವದ ಇತರ ಮಾಹಿತಿಗಳಿಗಾಗಿ 9242494314,(ವಾಸು)
9731209370 (ಶಿವರಾಯ)9483665799 (ರವಿನಾಯ್ಕ) ಸಂಪರ್ಕಿಸಬಹುದು ಎಂದು ದೇವಸ್ಥಾನ ಸಮೀತಿ ಅಧ್ಯಕ್ಷ ಮಾರುತಿ ನಾಯ್ಕ ತಿಳಿಸಿದರು.

ಉಳಿದವರೊಬ್ಬರೇ ಸ್ವಾತಂತ್ರ್ಯ ಸೇನಾನಿ,
ದೇಹ ಸಹಕರಿಸದಿದ್ದರೂ
ಮನಸ್ಸು ಹೋರಾಟದತ್ತ!
ಎನ್ನುವಂತಿರುವ
ಗಡದಬಂಗಾರಪ್ಪ
ಇದು ಒಂದು ರೋಚಕ ಪ್ರಸಂಗ, ಹಿರಿಯ ಸ್ನೇಹಿತ ದಫೇದಾರರೊಂದಿಗೆ ಮನ್ಮನೆಯ ಬಂಗಾರ್ಯ ನಾಯ್ಕರ ಮನೆಯ ಅಂಗಳ ತಲುಪಿದಾಗ ಮನೆಯೊಡೆಯನಿದ್ದಾನೋ? ಮನೆಒಳಗೆ ಎನ್ನುವ ಕುತೂಹಲ.
ನಾನೇ ಕೇಳಿದೆ ಬಂಗಾರಪ್ಪ ಇದ್ದಾರಾ? ಎಂದು.
ಈಗಷ್ಟೇ ಪದವಿ ಮುಗಿಸಿ ಅಧಿಕಾರಿಯಾಗಬೇಕೆಂದು ಓದುತ್ತಾ ಇರುವ ಹುಡುಗಿ ‘ಇದ್ದಾರೆ’,ಎಂದು ಉತ್ತರಿಸಿತು.
ಅಷ್ಟೊತ್ತಿಗೆ ಬಂಗಾರಪ್ಪ ನಾಯ್ಕ ಬಂದರು. ಅದು ಸಣ್ಣ ಮನೆ, ವ್ಯವಸ್ಥಿತವಲ್ಲದ ಸಾದಾ ರೈತ ಕುಟುಂಬದ ಮನೆಯಲ್ಲಿ ಇರುವ ಹಿರಿಯ ಜೀವ ಬಂಗಾರಪ್ಪ ನಾಯ್ಕ ಬಂದರು. ನಾವಿಬ್ಬರೂ ನಮಸ್ಕರಿಸಿದೆವು. ಅವರೂ ಪ್ರತಿನಮಸ್ಕರಿಸಿ, ನಮ್ಮ ಪರಿಚಯ ಮಾಡಿಕೊಂಡರು.
ಕುಗ್ಗದ ಉತ್ಸಾಹ, ಸ್ವಲ್ಫ ಬಳಲಿದಂತೆ ಕಂಡರೂ ಕಣ್ಣು,ಮಾತುಗಳ ಸ್ಫಷ್ಟತೆಯ ಬಂಗಾರಪ್ಪನವರಿಗೆ ಎಷ್ಟು ವಯಸ್ಸು ಕೇಳಿದೆವು. ಗೋಡೆಯ ಮೇಲಿನ ಚಿತ್ರ ತೋರಿಸಿ ಅಲ್ಲಿ ನೋಡಿ ಎಂದರು. ಅಲ್ಲಿ ಕಲಾವಿದ ಬಿಡಿಸಿದಂಥ ಇವರದೇ ಚಿತ್ರದ ಕೆಳಗೆ ಬಂಗಾರಪ್ಪ ನಾಯ್ಕ 1917 ಎಂದು ಬರೆದಿತ್ತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *