ದಂಡವೆ ನಿನಗೆ ದಯೆ ಬಾರದೆ…!

(Penalties under Goods and Service Tax Act)

ದಂಡವೇ ನಿನಗೆ ದಯೆ ಬಾರದೇ…! (Penalties under Goods and Service Tax Act)

“ತೆರಿಗೆಯನ್ನು ಶಿಕ್ಷೆಯೆಂದು ಭಾವಿಸಬೇಡಿ” ಮಾನ್ಯ ಹಣಕಾಸು ಮಂತ್ರಿಯವರ ಅಭಿಪ್ರಾಯವನ್ನು ಉಲ್ಲೇಖಿಸುತ್ತಾ ಹೇಳುವುದಾದರೆ ಪ್ರಸ್ತುತ ಭಾರತದಲ್ಲಿ ತೆರಿಗೆಗೂ ನಿಯಮಗಳಿವೆ ಶಿಕ್ಷೆಗೂ ನಿಯಮಗಳಿವೆ. ಆದರೆ ಜನಸಾಮಾನ್ಯರು ತೆರಿಗೆಗೂ ಶಿಕ್ಷೆಗೂ ತೀರ ವ್ಯತ್ಯಾಸವಿದೆಯೆಂದು ಭಾವಿಸುವುದಿಲ್ಲ. ಅವರು ಅಭಿಪ್ರಾಯಪಡುವಂತೆ ತಪ್ಪು ಮಾಡಿದಾಗ ವಿಧಿಸುವ ತೆರಿಗೆಯನ್ನು ದಂಡವೆಂದೂ ತಪ್ಪು ಮಾಡದಿದ್ದರೂ ವಿಧಿಸುವ ದಂಡವನ್ನು ತೆರಿಗೆಯೆಂದು (Fine is a tax for doing something wrong, Tax is a fine for doing something right) ವ್ಯಾಖ್ಯಾನಿಸುತ್ತಾರೆ. ಆದರೆ ಅದು ನಿಜವಲ್ಲ, ಸರಕಾರದ ಆದಾಯದ ಮೂಲ ತೆರಿಗೆಗಳೇ ಆಗಿರುವಾಗ ತೆರಿಗೆಯನ್ನು ವಂಚಿಸುವುದು ಸಹಜವಾಗಿ ಅಪರಾಧವೆನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ತೆರಿಗೆ ಕಾನೂನುಗಳ ಬಗ್ಗೆ ಸರಕಾರ ವಿಶೇಷ ಕಾಳಜಿಯನ್ನು ವಹಿಸಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿರುವುದರಿಂದ ತೆರಿಗೆಯನ್ನು ವಂಚಿಸುವುದು ವ್ಯರ್ಥ ಪ್ರಯತ್ನವೆನಿಸುತ್ತಿದೆ.

ಭಾರತದಲ್ಲಿ ಜಿಎಸ್ಟಿ ಜಾರಿಯಾದ ಮೇಲೆ ತೆರಿಗೆ ಭಾದ್ಯತೆಯಿಂದ ತಪ್ಪಿಸಿಕೊಳ್ಳುವುದಂತೂ ಅಸಾಧ್ಯವೆನಿಸಿದೆ. ತೆರಿಗೆ ಭಾದ್ಯತೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ತೆರಿಗೆಯ ಜೊತೆಗೆ ದಂಡ ಹಿಂಬಾಲಿಸುತ್ತದೆ. ತೆರಿಗೆಯ ಜೊತೆಗೆ ದಂಡವನ್ನೂ ಕಟ್ಟುವುದು ಅನಿವಾರ್ಯವೆನಿಸುತ್ತದೆ. ಜಿಎಸ್ಟಿ ಕಾಯ್ದೆಯ ದಂಡದ ಸ್ವರೂಪಕ್ಕೆ ವ್ಯಾಪಾರಸ್ಥರು ಬೆಚ್ಚಿಬಿದ್ದಿದ್ದಾರೆ. ದಂಡವೂ ಕೂಡ ಸರಕಾರದ ಆದಾಯದ ಮುಖ್ಯ ಭಾಗವಾಗಿ ಬದಲಾಗಿದೆ. ಹೀಗೆ ದಂಡದ ಹೆಸರಿನಲ್ಲಿ ಜನವರಿ 2019ರ ಅಂತ್ಯಕ್ಕೆ ಸರಕಾರದ ಬೊಕ್ಕಸಕ್ಕೆ ಜಮೆಯಾದ ಮೊತ್ತ 4387/- ಕೋಟಿ ರೂಪಾಯಿಗೆ ತಲುಪಿದೆ. ಈ ಕಾರಣಕ್ಕಾಗಿ ಜಿಎಸ್ಟಿ ದುಬಾರಿಯಾಗುತ್ತಿದೆಯೆಂದು ಹಲವರು ಅಭಿಪ್ರಾಯಪಡುತ್ತಾರೆ. ಜಿಎಸ್ಟಿಯಲ್ಲಿ ದಂಡದಿಂದ ಪಾರಾಗಲು ಇರುವ ಒಂದೇ ಒಂದು ದಾರಿಯೆಂದರೆ ತಪ್ಪನ್ನು ಎಸಗದೇ ಇರುವುದು. ಈ ಹಿಂದೆ ಇದ್ದ ಪರೋಕ್ಷ ತೆರಿಗೆ ಕಾಯ್ದೆಗಳಲ್ಲಿ ದಂಡ, ಬಡ್ಡಿ ಇತ್ಯಾದಿಗಳು ಒಂದು ರೀತಿ ಐಚ್ಛಿಕ ಸ್ವರೂಪದಲ್ಲಿ ಇತ್ತು. ಆದರೆ ಇಲ್ಲಿ ಹಾಗಿಲ್ಲ. ಇಲ್ಲಿ ದಂಡ ಕೂಡ ಒಮ್ಮೊಮ್ಮೆ ಸ್ವಯಂ ಚಾಲಿತವಾಗಿ ನಮ್ಮನ್ನು ದಂಡಕ್ಕೆ ಗುರಿಮಾಡುತ್ತದೆ. ಜಿಎಸ್ಟಿ (GST) ಕಾಯ್ದೆಯಲ್ಲಿ ದಂಡಕ್ಕೆ ಗುರಿ ಮಾಡುವ ಅಪರಾಧಗಳು ಯಾವುವು? ಒಂದಿಷ್ಟು ಮಾಹಿತಿ ಇಲ್ಲಿದೆ,

ಅಪರಾಧ ಎಂದರೇನು?

ಜಿಎಸ್ಟಿ (GST) ಕಾಯ್ದೆ ಮತ್ತು ಜಿಎಸ್ಟಿ (GST) ನಿಯಮಗಳಲ್ಲಿ ಯಾವುದೇ ಒಂದನ್ನು ಉಲ್ಲಂಘಿಸಿದರೂ ಅದನ್ನು ಅಪರಾಧವೆಂದೇ ಪರಗಣಿಸಲಾಗುತ್ತದೆ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ,


1. ತೆರಿಗೆದಾರನು ಸಪರ್ಪಕವಾದ ಬಿಲ್/ಮಾರಾಟ ರಸೀದಿ (INVOICE) ಇಲ್ಲದೇ ಸರಕು / ಸೇವೆಗಳನ್ನು ವಿತರಿಸುವುದು.

2. ತೆರಿಗೆದಾರನು ಸರಕು / ಸೇವೆಗಳ ಸರಬರಾಜು ಇಲ್ಲದೆ ಬಿಲ್/ಮಾರಾಟ ರಸೀದಿ (INVOICE) ನೀಡುವುದು.

3. ಬೇರೊಬ್ಬ ತೆರಿಗೆದಾರನ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ಬಿಲ್/ಮಾರಾಟ ರಸೀದಿ (INVOICE) ನೀಡುವುದು.

4. ಜಿಎಸ್ಟಿ ಅಡಿಯಲ್ಲಿ ನೋಂದಾಯಿಸುವಾಗ ಸುಳ್ಳು ಮಾಹಿತಿಯನ್ನು ನೀಡುವುದು.

5. ತೆರಿಗೆಯನ್ನು ತಪ್ಪಿಸಲು ನಕಲಿ ಆರ್ಥಿಕ ದಾಖಲೆಗಳು ಸಲ್ಲಿಸುವುದು.

6. ವಿಚಾರಣೆಯ ಸಮಯದಲ್ಲಿ ಸುಳ್ಳು/ತಪ್ಪು ಮಾಹಿತಿ ನೀಡುವುದು.

7. ಜಿಎಸ್ಟಿ ಸಂಗ್ರಹಿಸಿದ 3 ತಿಂಗಳ ಒಳಗೆ ಸರ್ಕಾರಕ್ಕೆ ಭರಣ ಮಾಡದೇ ಇರುವುದು.ಇದನ್ನೂ ಓದಿ:  ಮನೆ ಬಾಡಿಗೆ ಭತ್ಯೆ ಮತ್ತು ಆದಾಯ ತೆರಿಗೆ ಪ್ರಯೋಜನಗಳು (HOUSE RENT ALLOWANCE AND TAX BENIFITS)

8. ಜಿಎಸ್ಟಿ ಕಾಯ್ದೆಯ ಯಾವುದೇ ನಿಬಂಧನೆಗಳ ಅಡಿಯಲ್ಲಿ ಜಿಎಸ್ಟಿ ತೆರಿಗೆಯನ್ನು ಸಂಗ್ರಹಿಸಿದರೂ ಸಹ ಅದನ್ನು 3 ತಿಂಗಳೊಳಗೆ ಸರ್ಕಾರಕ್ಕೆ ಭರಣ ಮಾಡಬೇಕಾಗುತ್ತದೆ. ಹಾಗೆ ಮಾಡಲು ವಿಫಲವಾದರೆ GST ಯ ಅಡಿಯಲ್ಲಿ ಅಪರಾಧವಾಗುತ್ತದೆ.

9. ವಂಚನೆ ಮೂಲಕ CGST/SGST ಮರುಪಾವತಿ (REFUND)ಯನ್ನು ಪಡೆಯುವುದು.

10. ಸರಕು ಅಥವಾ ಸೇವೆಗಳ ನಿಜವಾದ ಸ್ವೀಕೃತಿ ಇಲ್ಲದೆ ಹುಟ್ಟುವಳಿ (INPUT TAX) ತೆರಿಗೆ ಕ್ರೆಡಿಟ್ ಅನ್ನು ಪಡೆದುಕೊಳ್ಳುವುದು.

11. ತೆರಿಗೆಯನ್ನು ತಪ್ಪಿಸಲು  ಮಾರಾಟವನ್ನು ಉದ್ದೇಶಪೂರ್ವಕವಾಗಿ ನಿಗ್ರಹಿಸುವುದು. (Under Valuation of Sales)

12. ಸರಿಯಾದ ದಾಖಲೆಗಳಿಲ್ಲದೆ ಸರಕುಗಳನ್ನು ಸಾಗಿಸುವುದು.

13. ಜಿಎಸ್ಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಸರಕುಗಳನ್ನು ನಾಶಮಾಡುವುದು.

14. ಜಿಎಸ್ಟಿ ಕಾನೂನಿನ ಪ್ರಕಾರ ನೋಂದಣಿಯನ್ನು ಪಡೆದುಕೊಳ್ಳದೇ ಇರುವುದು.

16. ಜಿಎಸ್ಟಿ ಕಾನೂನಿನ ನಿಯಮಗಳಂತೆ ಟಿಡಿಎಸ್  ಮಾಡದೇ ಇರುವುದು ಅಥವಾ ಕಡಿಮೆ ಪ್ರಮಾಣದಲ್ಲಿ ಟಿಡಿಎಸ್ ಮಾಡುವುದು.

17. ಜಿಎಸ್ಟಿ ಕಾನೂನಿನ ನಿಯಮಗಳಂತೆ ಟಿಸಿಎಸ್ ಸಂಗ್ರಹ ಮಾಡದೇ ಇರುವುದು ಅಥವಾ ಕಡಿಮೆ ಪ್ರಮಾಣದಲ್ಲಿ ಟಿಸಿಎಸ್ ಸಂಗ್ರಹ ಮಾಡುವುದು.

18. ಇನ್ಪುಟ್ ಸೇವೆ ವಿತರಕರಾಗಿ (Input Service Distributor), ನಿಯಮಗಳನ್ನು ಉಲ್ಲಂಘಿಸಿ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಪಡೆದುಕೊಳ್ಳುವುದು ಅಥವಾ ವಿತರಿಸುವುದು.

19 ಜಿಎಸ್ಟಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವುದು.

20. ಕಾನೂನಿನ ಪ್ರಕಾರ ನಿರ್ವಹಿಸಬೇಕಾದ ಅಗತ್ಯ ಪುಸ್ತಕಗಳನ್ನು ನಿರ್ವಹಿಸದೇ ಇರುವುದು.

21. ಯಾವುದೇ ಪುರಾವೆಗಳನ್ನು ನಾಶಪಡಿಸುವುದು.

ಮೇಲೆ ನಮೂದಿಸಿದ 21 ಅಪರಾಧಗಳಿಗೆ 100% ದಂಡ ವಿಧಿಸಲಾಗುವುದು (ಕನಿಷ್ಠ  ದಂಡ ರೂ 10,000)

ಕಂಪೆನಿಗಳು, LLP, ಹಿಂದೂ ಅವಿಭಕ್ತ ಕುಟುಂಬ (HUG), ಪಾಲುದಾರ ಸಂಸ್ಥೆ ಮತ್ತು ಇತರರು ಜಿಎಸ್ಟಿ ಅಡಿಯಲ್ಲಿ ಮಾಡಿದ ಅಪರಾಧಗಳಿಗೆ ಕಂಪನಿಯ ಉಸ್ತುವಾರಿ ಅಧಿಕಾರಿ (ನಿರ್ದೇಶಕ, ವ್ಯವಸ್ಥಾಪಕ, ಕಾರ್ಯದರ್ಶಿ) ಮತ್ತು ಉಳಿದಂತೆ ಪಾಲುದಾರ / ಕರ್ತಾ / ವ್ಯವಸ್ಥಾಪಕ ಟ್ರಸ್ಟಿ ಹೊಣೆಗಾರರಾಗಿರುವರು.


ಜಿಎಸ್ಟಿ ಅಡಿಯಲ್ಲಿ ಇನ್ನಿತರ ದಂಡಗಳ ಸ್ವರೂಪ ನೋಡಿ,


1. GST ರಿಟರ್ನ್ಸ್ ಸಲ್ಲಿಸಲು ವಿಳಂಬ ಮಾಡಿದರೆ ಪ್ರತಿ ದಿನಕ್ಕೆ  ರೂ 50 ದಂಡ ಇದರಲ್ಲಿ SGST 25 CGST 25 ಆಗಿರುತ್ತದೆ. ಗರಿಷ್ಠ ರೂ. 10,000. IGST ನಲ್ಲಿ ವಿಳಂಬ ಶುಲ್ಕವಿಲ್ಲ.

2. GST ರಿಟರ್ನ್ಸ್ ಸಲ್ಲಿಸಲು ತಪ್ಪಿದ್ದಲ್ಲಿ ತೆರಿಗೆಯ ಮೇಲೆ 10% ದಂಡ ಅಥವಾ ರೂ. 10,000/- ಇದರಲ್ಲಿ ಯಾವುದು ಹೆಚ್ಚೋ ಅದು.

 3. . GST ಕಾಯ್ದೆಯ ಅಡಿಯಲ್ಲಿ ವಂಚನೆ (FRAUD) ರುಜುವಾತಾದರೆ 100% ದಂಡ ಅಥವಾ ರೂ. 10,000/- ಇದರಲ್ಲಿ ಯಾವುದು ಹೆಚ್ಚೋ ಅದು. (ಅಧಿಕ ಪ್ರಮಾಣದ ವಂಚನೆ ಪ್ರಕರಣಗಳು ಜೈಲು ಶಿಕ್ಷೆಯನ್ನು ಹೊಂದಿವೆ)

4. ವಂಚನೆ ಮಾಡಲು ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡಿದರೆ ದಂಡ ರೂ. 25,000

5. ಕಲಂ 73 ಮತ್ತು 74 ರ ಬೇಡಿಕೆ ಮತ್ತು ಮರುಪ್ರಾಪ್ತಿ ನಿಬಂಧನೆಗಳ ಪ್ರಕಾರ ತೆರಿಗೆದಾರನು ಅರ್ಹವಾಗಿಲ್ಲದಿದ್ದರೂ ಕೂಡ ಸಂಯೋಜನೆ ಪದ್ದತಿಯನ್ನು (COMPOSITION SCHEME) ಆಯ್ಕೆ ಮಾಡಿಕೊಂಡಲ್ಲಿ ತೆರಿಗೆಯ 100% ಅಥವಾ ರೂ. 10,000 ಇವುಗಳಲ್ಲಿ ಯಾವುದೇ ಹೆಚ್ಚಿನದೋ ಅದು ಮತ್ತು  ವಂಚನೆ ಅಲ್ಲದ ಪ್ರಕರಣಗಳಲ್ಲಿ ತೆರಿಗೆಯ 10% ಅಥವಾ ರೂ. 10,000 ಇವುಗಳಲ್ಲಿ ಯಾವುದೇ ಹೆಚ್ಚಿನದೋ ಅದು.ಇದನ್ನೂ ಓದಿ:  ಜಿಎಸ್ಟಿ (GST) ಕಾಯ್ದೆಯ ಅಡಿಯಲ್ಲಿ ಸಂಯೋಜಿತ ಮತ್ತು ಮಿಶ್ರ ಸರಬರಾಜು (COMPOSITE AND MIXED SUPPLY)

6. ತಪ್ಪಾಗಿ ಜಿಎಸ್ಟಿ ದರವನ್ನು ಹಾಕುವುದು ಅಥವಾ ಹೆಚ್ಚಿನ ದರವನ್ನು ಹಾಕಿ ತೆರಿಗೆಯನ್ನು ಸಂಗ್ರಹಿಸಿದರೆ ತೆರಿಗೆಯ 100% ಅಥವಾ ರೂ. 10,000   ಇವುಗಳಲ್ಲಿ ಯಾವುದೇ ಹೆಚ್ಚಿನದೋ ಅದು.

7. ಮಾರಾಟದ ಬಿಲ್ (INVOICE/BILL) ನೀಡದೇ ಇದ್ದಲ್ಲಿ ತೆರಿಗೆಯ 100% ಅಥವಾ ರೂ. 10,000 ಇವುಗಳಲ್ಲಿ ಯಾವುದೇ ಹೆಚ್ಚಿನದೋ ಅದು.

8. ಜಿಎಸ್ಟಿ ಕಾಯ್ದೆಯ ಅಡಿಯಲ್ಲಿ ನೋಂದಾಯಿಸದೇ ಇದ್ದರೆ ತೆರಿಗೆಯ 100% ಅಥವಾ ರೂ. 10,000 ಇವುಗಳಲ್ಲಿ ಯಾವುದೇ ಹೆಚ್ಚಿನದೋ ಅದು

9. ತಪ್ಪಾದ ಬಿಲ್ (incorrect invoicing ) ನೀಡಿದರೆ ದಂಡ ರೂ. 25,000

ಯಾವುದೇ ದಂಡವನ್ನು ವಿಧಿಸದೇ ಕೇವಲ ಬಡ್ಡಿಯನ್ನು ಮಾತ್ರ ವಿಧಿಸಬಹುದಾದ ಸಂದರ್ಭಗಳು:

 1. ತಪ್ಪಾದ ಜಿಎಸ್ಟಿ ವಿಧವನ್ನು ಸಂಗ್ರಹಿಸುವುದು: CGST ಮತ್ತು SGST ಬದಲಾಗಿ IGST ತೆರಿಗೆಯನ್ನು ಸಂಗ್ರಹಿಸುವುದು- ಸರಿಯಾದ ವಿಧದ ತೆರಿಗೆಯನ್ನು ಪಾವತಿಸಿ ತಪ್ಪಾಗಿ ಪಾವತಿಸಿದ ತೆರಿಗೆಯನ್ನು ಮರಳಿ ಪಡೆಯಬಹುದಾಗಿದೆ.

2. ತಪ್ಪಾಗಿ GST ರಿಟರ್ನ್ಸ್ ಗಳನ್ನು ಸಲ್ಲಿಸುವುದು-  ಇಂಥಹ ಸಂದರ್ಭಗಳಲ್ಲಿ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ ಕೊರತೆಯ ಮೊತ್ತಕ್ಕೆ ಬಡ್ಡಿ @ 18% ರಂತೆ ಪಾವತಿಸಬೇಕಾಗುತ್ತದೆ.

3.  6 ತಿಂಗಳುಗಳಲ್ಲಿ ಇನ್ವಾಯಿಸ್ ಮೊತ್ತವನ್ನು ಪಾವತಿಸದಿದ್ದಲ್ಲಿ ಐಟಿಸಿ (INPUT TAX CREDIT) ಯನ್ನು ಹಿಂತೆಗೆದುಕೊಳ್ಳಲಾಗುವುದು ಮತ್ತು ಯಾವುದೇ ದಂಡವನ್ನು ಪಾವತಿಸಬೇಕಿರುವುದಿಲ್ಲ.

4. ತಪ್ಪಾಗಿ  ಕಡಿಮೆ ಜಿಎಸ್ಟಿ ದರದ ಚಾರ್ಜ್ ಮಾಡಿದರೆ ಎಷ್ಟು ಕಡಿಮೆ ಮಾಡಲಾಗುವುದೋ ಅದರ ಮೇಲೆ  18% ರಂತೆ ಬಡ್ಡಿ ಪಾವತಿಸಬೇಕಾಗುತ್ತದೆ.

ತಿಳಿಯದೇ ಎಸಗಿದ ಅಪರಾಧಕ್ಕೆ ಕಾನೂನಿನಲ್ಲಿ ಕ್ಷಮೆ ಇಲ್ಲ ಹಾಗೂ ದಂಡಕ್ಕೆ ದಯೆಯೂ ಇಲ್ಲ. ಕಾನೂನೂ ಏನು ಹೇಳುವುದೋ ಅಂತೆಯೇ ಪಾಲಿಸುವುದು ಅನಿವಾರ್ಯ. ಜಿಎಸ್ಟಿ ವ್ಯವಸ್ಥೆಯಲ್ಲಿ ಎಲ್ಲವೂ GSTIN ರೂಪಿಸಿರುವ ಆನ್ ಲೈನ್ ತಂತ್ರಾಂಶದ ಮೇಲೆ ಸ್ವಯಂ ಚಾಲಿತವಾಗಿ ನಿಯಂತ್ರಣಕ್ಕೆ ಒಳಪಡುತ್ತವೆ. ಹಾಗಾಗಿ ಅತ್ಯಂತ ಎಚ್ಚರಿಕೆಯಿಂದ ಸಾಗುವುದು ಅಪೇಕ್ಷಣೀಯ.

ಅಡ್ಮಿನ್:  ಲಾ ಛೇಂಬರ್ ಶಿರಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *